ಪ್ರಪಂಚದ ಶ್ರೀಮಂತ ಹಿಂದೂ ದೇವಾಲಯ ಎಂದಾಗ ನೆನಪಾಗುವುದು ತಿರುಪತಿ ತಿಮ್ಮಪ್ಪ. ಹೌದು ಈ ಏಳು ಬೆಟ್ಟದ ಒಡೆಯನನ್ನು ನೋಡಲು ಆತನ ಅನುಗ್ರಹ ಪಡೆಯಲು ಲಕ್ಷ ಲಕ್ಷ ಮಂದಿ ದಿನವೊಂದಕ್ಕೆ ದರ್ಶನ ಪಡೆಯುತ್ತಾರೆ. ಇನ್ನು ಆತನ ಭಕ್ತರು ಆ ಮಹಾಪ್ರಭುವಿಗೆ ನೀಡಿದ ದೇಣಿಗೆ ರೂಪದ ಹಣ ಒಡವೆ ವಜ್ರ ವೈಡೂರ್ಯಗಳ ಲೆಕ್ಕವೇ ಇಲ್ಲ. ಅಷ್ಟೊಂದು ಶ್ರೀಮಂತ ದೇಗುಲಗಳಲ್ಲಿ ಒಂದಾದ ಈ ತಿರುಪತಿ ತಿಮ್ಮಪ್ಪ ಜಗತ್ತಿನಲ್ಲೇ ಒಂದು ಶ್ರೀಮಂತ ಹಾಗು ಭಕ್ತರನ್ನು ಕಾಯುವ ದೇವನಾಗಿದ್ದಾನೆ ಎನ್ನಬಹದು. ಸಂಕಟ ಬಂದಾಗ ವೆಂಕಟರಮಣ ಎಂಬುದು ಬಹು ಜನಪ್ರಿಯ ಮಾತು. ಯಾರಿಗೇ ಕಷ್ಟ ಎದುರಾದರೂ ಮೊದಲು ವೆಂಕಟರಮಣನ ಮೊರೆ ಹೋಗುತ್ತಾರೆ. ವೆಂಕಟರಮಣ ಎಂದೊಡನೆ ನೆನಪಿಗೆ ಬರುವುದು ಭೂವೈಕುಂಠ ತಿರುಪತಿ.

ಭೂವೈಕುಂಠ ಎಂದೇ ಕರೆಯಲಾಗುವ ತಿರುಮಲೆಯಲ್ಲಿ ಲಕ್ಷ್ಮೀ, ಪದ್ಮಾವತಿ ಸಹಿತ ನೆಲೆಸಿರುವ ಶ್ರೀನಿವಾಸ ತನ್ನ ದರ್ಶನಕ್ಕೆ ಬರುವ ಸಕಲ ಭಕ್ತರ ಸಂಕಷ್ಟಗಳನ್ನೂ ನಿವಾರಿಸಿ, ಸುಖ, ಸೌಭಾಗ್ಯ ಕರುಣಿಸುತ್ತಿದ್ದಾನೆ. ಹೀಗಾಗಿಯೇ ಎಲ್ಲ ದೇವಾಲಯಗಳಲ್ಲಿ ವರ್ಷಕ್ಕೊಮ್ಮೆ ಜಾತ್ರೆ ನಡೆದರೆ ಇಲ್ಲಿ ನಿತ್ಯಜಾತ್ರೆ ಸೇರುತ್ತದೆ. ದಿನವೂ ದೇಶದ ನಾನಾ ಭಾಗಗಳಿಂದ ಭಕ್ತಸಾಗರವೇ ಹರಿದುಬರುತ್ತದೆ. ಸಾವಿರಾರು ಭಕ್ತರು ನಿತ್ಯ ಭಗವಂತನ ದರ್ಶನ ಪಡೆಯುತ್ತಾರೆ. ರಜಾದಿನಗಳಲ್ಲಿ, ಶನಿವಾರ ಭಾನುವಾರ ಅದರಲ್ಲೂ ಹೊಸವರ್ಷದ ದಿನ, ಶ್ರಾವಣ ಮಾಸದಲ್ಲಿ ಮತ್ತು ವೈಕುಂಠ ಏಕಾದಶಿಯಂದು ತಿರುಪತಿ ಭಕ್ತರಿಂದ ತುಂಬಿ ತುಳುಕುತ್ತದೆ. ಎಲ್ಲೆಡೆ ಗೋವಿಂದನ ನಾಮ ಸ್ಮರಣೆ, ಗೋವಿಂದ ಗೋವಿಂದ ಎಂಬ ನಾಮ ಮೊಳಗುತ್ತದೆ.

tirupati Laddu prasada
ಇನ್ನು ಇಲ್ಲಿನ ಆ ಜಗತ್ಪ್ರಸಿದ್ದ ಪ್ರಸಾದ ಎಂದರೆ ಅದು ತಿರುಪತಿ ಲಡ್ಡು. ಹೌದು ಬಹುಶ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ, ಕೇವಲ ಲಾಡುವಿನ ಮೂಲಕವೇ ತಿಮ್ಮಪ್ಪನ ಆದಾಯ ವರ್ಷಕ್ಕೆ ಕೋಟಿ ಕೋಟಿ ದಾಟುತ್ತಿದೆ. ತಿಮ್ಮಪ್ಪನ ಲಡ್ಡು ಪ್ರಸಾದ ಸೇವಿಸದೇ ಇಲ್ಲಿನ ದರ್ಶನ ಪೂರ್ಣಗೊಳ್ಳುವುದಿಲ್ಲ ಎನ್ನುವ ಸಂಪ್ರದಾಯ ಇದೆ. ಹೀಗೆ ಇಲ್ಲಿ ಬರುವ ಭಕ್ತರಿಗೆ ಒಂದು ಲಾಡನ್ನು ಉಚಿತವಾಗಿ ನೀಡಲಾಗುತ್ತದೆ. ಹೆಚ್ಚಿನ ಲಾಡನ್ನು ಹಣ ಕೊಟ್ಟು ಖರೀದಿ ಮಾಡಬೇಕು. ಇನ್ನು ಈ ಲಾಡನ್ನು ಮಾಡಲು ವಿಶೇಷ ಗೋ ಮಾತೆಯ ಹಾಲನ್ನು ತಿಮ್ಮಪ್ಪ ದೇಗುಲದ ಟ್ರಸ್ಟ್ ಬಳಸಿಕೊಳ್ಳುತ್ತಿದೆ. ಇಷ್ಟಕ್ಕೂ ಈ ಗೋ ಮಾತೆ ಯಾವುದು ಮತ್ತು ಅದರ ವಿಶೇಷತೆ ಏನು ಎನ್ನುವುದನ್ನು ನೀವು ಇಂದು ತಿಳಿಯಲೇ ಬೇಕು. ಸುರಭಿ ಎಂದೂ ಕರೆಯಲ್ಪಡುವ ಕಾಮಧೇನುವನ್ನು ವೇದ ಗ್ರಂಥದಲ್ಲಿ ಎಲ್ಲಾ ಹಸುಗಳ ತಾಯಿ ಎಂದು ವರ್ಣಿಸಲಾಗಿದೆ. ಎಲ್ಲಾ ಹಸುಗಳನ್ನು ಹಿಂದೂ ಧರ್ಮದಲ್ಲಿ ಕಾಮಧೇನುನ ಐಹಿಕ ಸಾಕಾರವಾಗಿ ಪೂಜಿಸಲಾಗುತ್ತದೆ.

ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ತನ್ನ ಜಾನುವಾರು ಅಂಗಳದಲ್ಲಿ ಸುಮಾರು 200 ಪುಂಗನೂರು ಹಸುಗಳನ್ನು ಹೊಂದಿದೆ. ಈ ಹಸುಗಳ ಹಾಲಿನಿಂದ ತಯಾರಿಸಿದ ತುಪ್ಪವನ್ನು ವೆಂಕಟೇಶ್ವರ ಭಗವಂತನಿಗೆ ‘ಅರ್ಚನಾ’ (ಅರ್ಪಣೆ) ಯಲ್ಲಿ ಬಳಸಲಾಗುತ್ತಿದೆ. ವಿಶ್ವದ ಅತಿ ಚಿಕ್ಕ ತಳಿಗಳೆಂದು ಪರಿಗಣಿಸಲ್ಪಟ್ಟ ಪುಂಗನೂರ್ ತಳಿಯ ಹಾಲು ಹೆಚ್ಚಿನ ಕೊಬ್ಬಿನಂಶ ಮತ್ತು ಸಮೃದ್ಧ ಔಷಧೀಯ ಗುಣಗಳನ್ನು ಹೊಂದಿದೆ. ಎಲ್ಲಾ ಹಸುವಿನ ಹಾಲಿನಲ್ಲಿ ಸಾಮಾನ್ಯವಾಗಿ ಶೇಕಡಾ 3 ರಿಂದ 3.5 ರಷ್ಟು ಕೊಬ್ಬಿನಂಶವಿದ್ದರೆ, ಪುಂಗನೂರ್ ತಳಿಯ ಹಾಲಿನಲ್ಲಿ ಎಮ್ಮೆಯ ಹಾಲಿನಂತೆಯೇ ಶೇ 8 ರಷ್ಟು ಇರುತ್ತದೆ ಎಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಪುಂಗನೂರು ಹಸುವಿನ ಹಾಲನ್ನು ತಿರುಪತಿಯಲ್ಲಿ ಕ್ಷೀರ ಅಭಿಷೇಕಂಗೆ ವೆಂಕಟೇಶ್ವರ ಸ್ವಾಮಿಗೆ ಬಳಸಲಾಗುತ್ತದೆ. ಪುಂಗನೂರು ಹಸುಗಳ ತುಪ್ಪವನ್ನು ಅತ್ಯಂತ ಪ್ರಸಿದ್ಧವಾದ ತಿರುಪತಿ ದೇವಾಲಯದ ಲಡ್ಡು ತಯಾರಿಸಲು ಬಳಸಲಾಗುತ್ತದೆ. ಈ ಹಸುವಿನ ದರ್ಶನ ಬಹಳ ಪವಿತ್ರ.

tirupati Laddu prasada

Please follow and like us:
error0
http://karnatakatoday.in/wp-content/uploads/2020/02/tiruPATHI-LADDU-1024x576.jpghttp://karnatakatoday.in/wp-content/uploads/2020/02/tiruPATHI-LADDU-150x104.jpgKarnataka Trendingಅಂಕಣಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಪ್ರಪಂಚದ ಶ್ರೀಮಂತ ಹಿಂದೂ ದೇವಾಲಯ ಎಂದಾಗ ನೆನಪಾಗುವುದು ತಿರುಪತಿ ತಿಮ್ಮಪ್ಪ. ಹೌದು ಈ ಏಳು ಬೆಟ್ಟದ ಒಡೆಯನನ್ನು ನೋಡಲು ಆತನ ಅನುಗ್ರಹ ಪಡೆಯಲು ಲಕ್ಷ ಲಕ್ಷ ಮಂದಿ ದಿನವೊಂದಕ್ಕೆ ದರ್ಶನ ಪಡೆಯುತ್ತಾರೆ. ಇನ್ನು ಆತನ ಭಕ್ತರು ಆ ಮಹಾಪ್ರಭುವಿಗೆ ನೀಡಿದ ದೇಣಿಗೆ ರೂಪದ ಹಣ ಒಡವೆ ವಜ್ರ ವೈಡೂರ್ಯಗಳ ಲೆಕ್ಕವೇ ಇಲ್ಲ. ಅಷ್ಟೊಂದು ಶ್ರೀಮಂತ ದೇಗುಲಗಳಲ್ಲಿ ಒಂದಾದ ಈ ತಿರುಪತಿ ತಿಮ್ಮಪ್ಪ ಜಗತ್ತಿನಲ್ಲೇ ಒಂದು ಶ್ರೀಮಂತ ಹಾಗು ಭಕ್ತರನ್ನು...Film | Devotional | Cricket | Health | India