ತಿರುಪತಿ ತಿಮ್ಮಪ್ಪ ಶ್ರೀಮಂತನಾ ಅಥವಾ ಬಡವನಾ, ತಿರುಪತಿ ತಿಮ್ಮಪ್ಪನಿಗೆ ಎಷ್ಟೇ ದುಡ್ಡು ಮತ್ತು ಚಿನ್ನ ಹರಿದು ಬಂದರೂ ಕೂಡ ತಿಮ್ಮಪ್ಪನ ಸಾಲ ಮಾತ್ರ ಯಾಕೆ ತಿರುತ್ತಿಲ್ಲ, ಹಾಗಾದರೆ ತಿರುಪತಿ ತಿಮ್ಮಪ್ಪ ಅಷ್ಟೊಂದು ಸಾಲ ಮಾಡಿದ್ದು ಯಾಕೆ ಮತ್ತು ಅಷ್ಟು ಸಾಲ ಮಾಡುವ ಅನಿವಾರ್ಯತೆ ತಿಮ್ಮಪ್ಪನಿಗೆ ಯಾಕೆ ಬಂತು ಗೊತ್ತಾ. ಸ್ನೇಹಿತರೆ ತಂದೆ ವೆಂಕಟೇಶ್ವರನ ಸಾಲದ ಕಥೆಯನ್ನ ನಾವು ಈಗ ನಿಮಗೆ ಹೇಳುತ್ತೀವಿ ಪೂರ್ತಿಯಾಗಿ ಓದಿ ಮತ್ತು ತಿರುಪತಿ ವೆಂಟಕರಮಣ ಸಾಲದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ನಮ್ಮ ಭಾರತದಲ್ಲಿ ಅದೆಷ್ಟೋ ದೇವಾಲಯಗಳು ಇವೆ ಮತ್ತು ಭಾರತವನ್ನ ದೇವಾಲಯಗಳ ದೇಶ ಎಂದು ಕೂಡ ಕರೆಯುತ್ತಾರೆ, ಇನ್ನು ತಿರುಪತಿ ವೆಂಕಟರಮಣ ದೇವಸ್ಥಾನ ಜಗತ್ತಿನ ಅತ್ಯಂತ ಶ್ರೀಮಂತ ದೇವಸ್ತಾನವಾಗಿದೆ.

ಇನ್ನು ತಿರುಪತಿ ತಿಮ್ಮಪ್ಪನ ದೇವಸ್ಥಾನದ ಟ್ರಸ್ಟಿನ ಖಾತೆಯಲ್ಲಿ ಬರೋಬ್ಬರಿ 50 ಸಾವಿರ ಕೋಟಿ ಹಾಗೆ ಇದೆ, ಆದರೆ ತಿರುಪತಿ ತಿಮ್ಮಪ್ಪ ಮಾತ್ರ ಇನ್ನು ಸಾಲದ ಸುಳಿಯಲ್ಲಿ ಇದ್ದಾನೆ ಮತ್ತು ಅದೂ ಅಂತಿಂತ ಸಾಲ ಅಲ್ಲ ಇಡೀ ಕಲಿಯುಗ ಮುಗಿದರು ಕೂಡ ತೀರಿಸಲಾಗದ ಸಾಲ ಅದಾಗಿದೆ. ತನ್ನ ಭಕ್ತರ ಬಯಕೆಯನ್ನ ಈಡೇರಿಯುವ ತಿಮ್ಮಪ್ಪ ಇನ್ನು ತನ್ನ ಸಾಲವನ್ನ ಯಾಕೆ ತೀರಿಸಿಲ್ಲ ಅಂತ ನೀವು ಅಂದುಕೊಳ್ಳಬಹುದು, ಇನ್ನು ತಿಮ್ಮಪ್ಪನ ಸಾಲದ ಬಗ್ಗೆ ಒಂದು ಪೌರಾಣಿಕ ಮತ್ತು ಧಾರ್ಮಿಕ ಆಧಾರ ಕೂಡ ಇದೆ.

Tirupathi Thimmappa

ಇನ್ನು ಪುರಾಣದ ಪ್ರಕಾರ ತಿಮ್ಮಪ್ಪ ಕುಬೇರನ ಸಾಲಗಾರನಾಗಿದ್ದಾನೆ ಮತ್ತು ಕಲಿಯುಗದ ಅಂತ್ಯದ ತನಕ ತಿಮ್ಮಪ್ಪ ಆ ಕುಬೇರನ ಸಾಲವನ್ನ ತೀರಿಸಬೇಕಾಗಿದೆ ಎಂದು ಪುರಾಣ ಹೇಳುತ್ತಿದೆ. ಪುರಾಣದ ಪ್ರಕಾರ ಒಂದು ದಿನ ವಿಷ್ಣುದೇವ ತನ್ನ ಪತ್ನಿ ಲಕ್ಷ್ಮಿ ದೇವಿ ಜೊತೆ ವೈಕುಂಠದಲ್ಲಿ ನಿದ್ರೆ ಮಾಡುತ್ತಿರುತ್ತಾರೆ, ಇನ್ನು ಆ ಸಮಯದಲ್ಲಿ ಅಲ್ಲಿಗೆ ಬಂದ ಭ್ರಿಗೂ ಋಷಿಯನ್ನ ವಿಷ್ಣುದೇವ ಗಮನಿಸುವುದಿಲ್ಲ, ಇನ್ನು ಇದರಿಂದ ಕೋಪಗೊಂಡ ಋಷಿ ವಿಷ್ಣುವಿನ ಎದೆಗೆ ಒದೆಯುತ್ತಾರೆ. ಇನ್ನು ಋಷಿಗಳು ಕಾಲಿನಿಂದ ಒದ್ದರೂ ಕೂಡ ವಿಷ್ಣು ಸುಮ್ಮನಿರುತ್ತಾನೆ ಮತ್ತು ಇದನ್ನ ನೋಡಿದ ಲಕ್ಷ್ಮಿ ದೇವಿಗೆ ತುಂಬಾ ಕೋಪ ಬರುತ್ತದೆ ಮತ್ತು ಇದರಿಂದ ಲಕ್ಷ್ಮಿ ದೇವಿ ವೈಕುಂಠದಿಂದ ಹೊರಟು ಭೂಮಿಗೆ ಬರುತ್ತಾರೆ ಮತ್ತು ರಾಜನ ಮಗನಾಗಿ ಜನಿಸುತ್ತಾರೆ.

ಇನ್ನು ಲಕ್ಷ್ಮಿಯನ್ನ ಹುಡುಕುತ್ತ ವಿಷ್ಣು ವೆಂಕಟೇಶ್ವರನ ರೂಪದಲ್ಲಿ ಭೂಮಿಗೆ ಬರುತ್ತಾನೆ ಮತ್ತು ಆ ರಾಜನ ಬಳಿ ಹೋಗಿ ಮದುವೆಯ ಪ್ರಸ್ತಾಪವನ್ನ ಕೂಡ ಇಡುತ್ತಾನೆ. ಇನ್ನು ಭೂಮಿಯ ಮೇಲೆ ಓರ್ವ ರಾಜ ಮಗಳನ್ನ ಮದುವೆಯಾಗಲು ವಿಷ್ಣುವಿಗೆ ತುಂಬಾ ದುಡ್ಡಿಯ ಅಗತ್ಯ ಇದ್ದಿತ್ತು ಮತ್ತು ಈ ಕಾರಣಕ್ಕೆ ಬ್ರಹ್ಮ ಮತ್ತು ಶಿವನ ಸಾಕ್ಷಿಯಾಗಿ ಕುಬೇರನ ಬಳಿ ಅಪಾರ ಪ್ರಮಾಣದ ಸಲಾನ್ನ ಪಡೆಯುತ್ತಾನೆ ಮತ್ತು ಇದನ್ನ ಈಗಲೂ ಕೂಡ ಶ್ರೀನಿವಾಸ ಕಲ್ಯಾಣ ಎಂದು ಕೆರೆಯಲಾಗುತ್ತದೆ. ಇನ್ನು ಕುಬೇರನ ಬಳಿ ನಾನು ಕಲಿಯುಗದ ಅಂತ್ಯದ ತನಕ ನಿನ್ನ ಸಾಲವನ್ನ ಬಡ್ಡಿ ಸಮೇತವಾಗಿ ತೀರಿಸುತ್ತೇನೆ ಎಂದು ಹೇಳುತ್ತಾನೆ ವಿಷ್ಣುದೇವ ಮತ್ತು ಆ ಮಾತಿನ ಸಲುವಾಗಿ ಇಂದು ಕೂಡ ಸಾಲವನ್ನ ತೀರಿಸುತ್ತಿದ್ದಾನೆ ವೆಂಕಟರಮಣ. ಈ ಕಾರಣಕ್ಕೆ ಸಾಲಗಾರ ತಿಮ್ಮಪ್ಪ ಎಷ್ಟೇ ಹಣ ಇದ್ದರೂ ಇಂದಿಗೂ ಬಡವನಾಗೆ ಇದ್ದಾನೆ ಅನ್ನುವ ನಂಬಿಕೆ ಇದೆ, ಸ್ನೇಹಿತರೆ ತಿಮ್ಮಪ್ಪನ ಈ ಸಾಲದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Tirupathi Thimmappa

Please follow and like us:
error0
http://karnatakatoday.in/wp-content/uploads/2019/11/Thirupathi-Thimmappa-1024x576.jpghttp://karnatakatoday.in/wp-content/uploads/2019/11/Thirupathi-Thimmappa-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯನಗರಬೆಂಗಳೂರುಮಂಗಳೂರುಸುದ್ದಿಜಾಲತಿರುಪತಿ ತಿಮ್ಮಪ್ಪ ಶ್ರೀಮಂತನಾ ಅಥವಾ ಬಡವನಾ, ತಿರುಪತಿ ತಿಮ್ಮಪ್ಪನಿಗೆ ಎಷ್ಟೇ ದುಡ್ಡು ಮತ್ತು ಚಿನ್ನ ಹರಿದು ಬಂದರೂ ಕೂಡ ತಿಮ್ಮಪ್ಪನ ಸಾಲ ಮಾತ್ರ ಯಾಕೆ ತಿರುತ್ತಿಲ್ಲ, ಹಾಗಾದರೆ ತಿರುಪತಿ ತಿಮ್ಮಪ್ಪ ಅಷ್ಟೊಂದು ಸಾಲ ಮಾಡಿದ್ದು ಯಾಕೆ ಮತ್ತು ಅಷ್ಟು ಸಾಲ ಮಾಡುವ ಅನಿವಾರ್ಯತೆ ತಿಮ್ಮಪ್ಪನಿಗೆ ಯಾಕೆ ಬಂತು ಗೊತ್ತಾ. ಸ್ನೇಹಿತರೆ ತಂದೆ ವೆಂಕಟೇಶ್ವರನ ಸಾಲದ ಕಥೆಯನ್ನ ನಾವು ಈಗ ನಿಮಗೆ ಹೇಳುತ್ತೀವಿ ಪೂರ್ತಿಯಾಗಿ ಓದಿ ಮತ್ತು ತಿರುಪತಿ ವೆಂಟಕರಮಣ...Film | Devotional | Cricket | Health | India