ಯಾವ ದೇಶದ ಜನರು ಆದಾಯದ ಒಂದು ಭಾಗವನ್ನು ಉಳಿತಾಯ ರೂಪದಲ್ಲಿ ಕಾಪಾಡಿಕೊಳ್ಳುವರೋ, ಆ ದೇಶ ಅಭಿವದ್ಧಿ ಪಥದತ್ತ ವೇಗವಾಗಿ ಸಾಗುತ್ತದೆ. ಉಳಿತಾಯದ ಹಣ ಬೇರೆಬೇರೆ ರೂಪದಲ್ಲಿ ಬಂಡವಾಳವಾಗಿ ಪರಿವರ್ತನೆಗೊಂಡು ಆರ್ಥಿಕ ಅಭಿವೃದ್ಧಿ ವೇಗ ವದ್ಧಿಸುತ್ತದೆ. ಬಂಡವಾಳ ಸಂಚಯನದ ವೇಗ ಹೆಚ್ಚಿದಷ್ಟು ಅಭಿವದ್ಧಿ ವೇಗ ಹೆಚ್ಚುತ್ತದೆ. ಬಂಡವಾಳ ಸಂಚಯನ ದಿಂದ ಮಾತ್ರ ದೇಶದ ಆರ್ಥಿಕತೆ ಬೆಳೆಯಲು ಸಾಧ್ಯ.

 

ಸಮಗ್ರ ಆರ್ಥಿಕಾಭಿವೃದ್ದಿಯಲ್ಲಿ ಬಂಡವಾಳ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಯಾವುದೇ ಉದ್ಯೋಗ ಆರಂಭಿಸುವ ಮೊದಲು ಅತಿ ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ಎಲ್ಲಿ ಸಿಗುತ್ತದೆಯೋ ಏನು ಯೋಚಿಸಬೇಕಾಗುತ್ತದೆ. ಹೀಗಾಗಿ ಇದೀಗ ಸರಕಾರಗಳು ಯಾರಿಗೆ ಬಂಡವಾಳದ ಕೊರತೆ ಇದೆ ಮತ್ತು ಕೌಶಲ್ಯ ಇದೆ ಅಂತಹವರಿಗೆ ಮುದ್ರಾ ಯೋಜನೆ ಮೂಲಕ ಲೋನ್ ನೀಡುತ್ತದೆ. ಮತ್ತು ಸ್ವಲ್ಪ ಸಹಾಯಧನ ಕೂಡ ಇದರಲ್ಲಿ ನಿಮಗಿದೆ.

ಹೀಗಾಗಿ ಇಂದು ನಾವು ನಿಮಗೆ ಸರಕಾರದಿಂದ ಮುದ್ರಾ ಯೋಜನೆಯ ಲೋನ್ ಮೂಲಕ ತಿಂಗಳಿಗೆ 40 ಸಾವಿರ ಸಂಪಾದಿಸುವ ಒಂದು ವ್ಯವಸ್ಥಿತ ಉದ್ಯೋಗ ಬಗ್ಗೆ ತಿಳಿಸಿಕೊಡುತ್ತೇವೆ ಕೇಳಿ. ಸಾಮಾನ್ಯವಾಗಿ ಇಂದು ದೇಶದಲ್ಲಿ ಟಿಶ್ಯೂ ಪೇಪರ್ ಪ್ಲಾಂಟ್ ಗಳು ಹೆಚ್ಚಾಗಿ ತಲೆ ಎತ್ತುತ್ತಿವೆ. ಎಲ್ಲ ಕಡೆ ಇದರ ಅಗತ್ಯ ಹೆಚ್ಚಿದೆ. ಹೋಟೆಲ್ ಉದ್ಯಮ, ಆಸ್ಪತ್ರೆಗಳು, ಸಣ್ಣ ಪುಟ್ಟ ಅಂಗಡಿಗಳು, ಲಾಡ್ಜ್, ಕಾರುಗಳಿಗೆ, ಅಲಂಕಾರಿಕ ಮಳಿಗೆಗೆ ಎಲ್ಲ ರೀತಿಯ ಅಂಗಡಿಗಳಿಗೂ ಈ ಪೇಪರ್ ಬೇಕೇ ಬೇಕು.

ಹೀಗಾಗಿ ಮುದ್ರಾ ಯೋಜನೆಯ ಮೂಲಕ ನೀವು ಈ ಪ್ಲಾಂಟ್ ತೆರೆದರೆ ಖಂಡಿತವಾಗಿ ಇದರಲ್ಲಿ ಲಾಭ ಗಳಿಸಬಹುದಾಗಿದೆ. ವರ್ಷದ 365 ದಿನಗಳಲ್ಲಿ 300 ದಿನಕ್ಕೆ ದಿನವೊಂದಕ್ಕೆ ಎಂಟು ಗಂಟೆ ಕೆಲಸ ಆರಂಭಿಸಿದರೆ ಒಂದೂವರೆ ಲಕ್ಷ ಟನ್  ಉತ್ಪನ್ನ ಮಾಡಬಹುದಾಗಿದೆ. ಮಾರ್ಕೆಟ್ ದರದ ಪ್ರಕಾರ ಇದರ ವ್ಯಾಲ್ಯೂ 97 ಲಕ್ಷದವರೆಗೆ ಇರುತ್ತದೆ. ಎಲ್ಲ ವೆಚ್ಚಗಳನ್ನು ತೆಗೆದು ಲೆಕ್ಕ ಹಾಕಿದರೆ 8 ಪರ್ಸೆಂಟ್ ಲಾಭ ಇದರಲ್ಲಿದೆ.

 

ಪ್ಲಾಂಟ್ ಆರಂಭಿಸಲು ನಿಮ್ಮದೇ ಆದ ಸ್ವಂತ ಜಾಗ ಅಥವಾ ಬಾಡಿಗೆಗೆ ತಗೆದುಕೊಂಡು ಉತ್ತಮ ಲಾಭ ಗಳಿಸಬಹುದಾಗಿದೆ. ಇದಕ್ಕಾಗಿ ನೀವು ಸರಿಯಾದ ಪ್ಲಾನ್ ಮಾಡಿಕೊಂಡು ಲೋನ್ ಗಾಗಿ ಮುದ್ರಾ ಯೋಜನೆ ಅಡಿಯಲ್ಲಿ ಯಾವುದೇ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸ ಬಹುದಾಗಿದೆ. ಪ್ಲಾಂಟ್ ಆರಂಭಿಸುವ ಮುನ್ನ ಒಮ್ಮೆ ನೀವು ಮಾರ್ಕೆಟ್ ಅರ್ಥ ಮಾಡಿಕೊಂಡು ಯಾವ ಯಾವ ಭಾಗದಲ್ಲಿ ಅಗತ್ಯವಿದೆ ಎಂದು ಯೋಚಿಸಿಕೊಂಡು ತೆರೆಯುವುದು ಉತ್ತಮವಾಗಿದೆ. ಯಾವುದೇ ಕೆಲಸ ಇರಲಿ ಕಷ್ಟಪಟ್ಟು ಮನಸ್ಸಿಟ್ಟು ಸರಿಯಾದ ರೀತಿಯಲ್ಲಿ ಮಾಡಿದರೆ ಖಂಡಿತ ಲಾಭಂಶ ತೆಗೆಯಬಹುದಾಗಿದೆ. ಇದರ ಬಗ್ಗೆ ನಿಮ್ಮ ಗೆಳೆಯರಿಗೂ ತಲುಪಿಸಿ.

Please follow and like us:
0
http://karnatakatoday.in/wp-content/uploads/2019/04/mudra-loan-for-plant-1024x576.jpghttp://karnatakatoday.in/wp-content/uploads/2019/04/mudra-loan-for-plant-150x104.jpgKarnataka Today's Newsಅಂಕಣಯಾವ ದೇಶದ ಜನರು ಆದಾಯದ ಒಂದು ಭಾಗವನ್ನು ಉಳಿತಾಯ ರೂಪದಲ್ಲಿ ಕಾಪಾಡಿಕೊಳ್ಳುವರೋ, ಆ ದೇಶ ಅಭಿವದ್ಧಿ ಪಥದತ್ತ ವೇಗವಾಗಿ ಸಾಗುತ್ತದೆ. ಉಳಿತಾಯದ ಹಣ ಬೇರೆಬೇರೆ ರೂಪದಲ್ಲಿ ಬಂಡವಾಳವಾಗಿ ಪರಿವರ್ತನೆಗೊಂಡು ಆರ್ಥಿಕ ಅಭಿವೃದ್ಧಿ ವೇಗ ವದ್ಧಿಸುತ್ತದೆ. ಬಂಡವಾಳ ಸಂಚಯನದ ವೇಗ ಹೆಚ್ಚಿದಷ್ಟು ಅಭಿವದ್ಧಿ ವೇಗ ಹೆಚ್ಚುತ್ತದೆ. ಬಂಡವಾಳ ಸಂಚಯನ ದಿಂದ ಮಾತ್ರ ದೇಶದ ಆರ್ಥಿಕತೆ ಬೆಳೆಯಲು ಸಾಧ್ಯ.   ಸಮಗ್ರ ಆರ್ಥಿಕಾಭಿವೃದ್ದಿಯಲ್ಲಿ ಬಂಡವಾಳ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಯಾವುದೇ ಉದ್ಯೋಗ ಆರಂಭಿಸುವ...Kannada News