ದೇಶದಲ್ಲಿ ಈಗ ಟ್ರಾಫಿಕ್ ರೂಲ್ ಗಳು ಕಡ್ಡಾಯವಾಗಿ ಅನುಸರಿಸಲಾಗುತ್ತಿದೆ, ಮತ್ತು ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ಬರುವಂತೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಭದ್ರತೆಗೆ ಹೆಚ್ಚು ಆದ್ಯತೆ ನೀಡುತ್ತಿರುವುದರಿಂದ ದೇಶದಲ್ಲಿ ಎಲ್ಲವು ಬಹಳ ಶಿಸ್ತಿನಲ್ಲಿ ನಡೆಯುತ್ತಿದೆ ಎನ್ನಬಹುದು. ಅದರಂತೆ ಇನ್ನು ಮುಂದೆ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರು ದೊಡ್ಡ ಶಾಕ್ ನೀಡಲಿದ್ದಾರೆ, ಈಗಾಗಲೇ ಹೇಳಿದಂತೆ ವಾಹನಗಳ ನಂಬರ್ ಪ್ಲೇಟ್ ಗೆ ಮನಬಂದಂತೆ ಡಿಸೈನ್ ಮಾಡಿರುವ ನಂಬರ್ ಪ್ಲೇಟ್ ಹಾಕುವಂತಿಲ್ಲ ಎಂದು ಹೇಳಿತ್ತು. ಆದಾಗ್ಯೂ ಕೂಡ ಇಂತಹ ಪ್ರಕರಣ ಹೆಚ್ಚುತ್ತಿದೆ.

ಬಾಸ್ ಎನ್ನುವ ನಂಬರ್ ಪ್ಲೇಟ್ ಕೂಡ ಈ ಕಾನೂನಿನ ಅಡಿಯಲ್ಲೇ ಬರುತ್ತದೆ. ಆದ್ದರಿಂದ ಇನ್ನು ಮುಂದೆ ಈ ರೀತಿ ಮಾಡುವಂತಿಲ್ಲ ಕಳೆದ ವರ್ಷ ಒಂದೇ ತಿಂಗಳಿನಲ್ಲಿ 726 ಪ್ರಕರಣಗಳನ್ನು ದಾಖಲಿಸಲಾಗಿದೆ.ದೋಷಪೂರಿತ ನಂಬರ್‌ ಪ್ಲೇಟ್‌ ಅಳವಡಿಸುವ ಮೂಲಕ ಸಂಚಾರ ನಿಯಮ ಉಲ್ಲಂಘನೆ ಮಾಡುವವರಲ್ಲಿ ಯುವಕರೇ ಹೆಚ್ಚಾಗಿದ್ದು, ಅಂತಹ ವಾಹನಗಳನ್ನು ಹಿಡಿದು ದಂಡ ವಿಧಿಸಲಾಗುತ್ತಿದೆ.

ಜತೆಗೆ ಮೋಟಾರು ವಾಹನ ಕಾಯಿದೆಯಡಿ ವಾಹನಗಳಿಗೆ ಯಾವ ಮಾದರಿಯಲ್ಲಿ ನಂಬರ್‌ ಪ್ಲೇಟ್‌ ಇರಬೇಕೆಂದು ಅಂಗಡಿ ಮಾಲೀಕರಿಗೆ ಗೊತ್ತಿದ್ದರೂ ಹಣದಾಸೆಗಾಗಿ ದೋಷಪೂರಿತ ನಂಬರ್‌ ಪ್ಲೇಟ್‌ ಅಳವಡಿಸಲಾಗುತ್ತಿದ್ದು, ಅಂತಹ ಅಂಗಡಿ ಮಾಲೀಕರಿಗೆ ನೋಟಿಸ್‌ ನೀಡುವ ಮೂಲಕ ಎಚ್ಚರಿಕೆ ನೀಡಲಾಗುವುದು. ಸಾಮಾನ್ಯವಾಗಿ ಹೊಸ ದ್ವಿಚಕ್ರ ಮತ್ತು ನಾಲ್ಕು ವಾಹನಗಳನ್ನು ಖರೀದಿ ಮಾಡುವವರಲ್ಲಿ ಅತಿ ಹೆಚ್ಚು ಯುವಕರೇ ತಮಗಿಷ್ಟ ಬಂದಂತೆ ತಮ್ಮ ವಾಹನಗಳಿಗೆ ದೋಷಪೂರಿತ ನಂಬರ್‌ ಅಳವಡಿಕೆ ಮಾಡಿಸಿಕೊಳ್ಳುತ್ತಿದ್ದಾರೆ.

 

ಅಲ್ಲದೇ ತರಹೇವಾರಿ ಚಿತ್ರಗಳನ್ನು ಅಂಟಿಸುವುದರೊಂದಿಗೆ ನಾನಾ ಸಂದೇಶಗಳನ್ನು ಪ್ಲೇಟ್‌ ಮೇಲೆಯೇ ಬರೆಸುತ್ತಿದ್ದಾರೆ. ಹೊಸದಾಗಿ ವಾಹನ ಖರೀದಿಸುವವರು, ಅದರ ಮೇಲೆ ಹಲವು ವಿಧದ ಸ್ಟಿಕ್ಕರ್‌ ಅಂಟಿಸುವುದರೊಂದಿಗೆ ನಂಬರ್‌ ಪ್ಲೇಟ್‌ನ ಮೇಲೂ ತಮಗಿಷ್ಟವಾದ ಹೆಸರು, ಮನೆ ದೇವರ ಚಿತ್ರದೊಂದಿಗೆ ವಾಹನದ ನೋಂದಣಿ ಸಂಖ್ಯೆ ಹಾಕಿಸುತ್ತಿದ್ದರು.

ಆದರೆ, ಇದು ಮೋಟಾರು ವಾಹನ ಕಾಯಿದೆಯಡಿ ಸಂಚಾರ ನಿಯಮ ಉಲ್ಲಂಘನೆ ಎಂಬುದು ಅರಿವಿದ್ದರೂ ನಂಬರ್‌ ಪ್ಲೇಟ್‌ ಹಾಕುವ ಅಂಗಡಿ ಮಾಲೀಕರು ಹಣದಾಸೆಗೆ ಸವಾರರು ಹೇಳುವಂತೆ ನಂಬರ್‌ ಪ್ಲೇಟ್‌ ಅಳವಡಿಸುತ್ತಿದ್ದರು. ಅಂತಹ ವಾಹನಗಳ ಸಂಚಾರ ನಿಯಮ ಉಲ್ಲಂಘನೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸರಿಯಾಗಿ ಸಿಗದ ಕಾರಣ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತ್ತು. ಈ ಹಿನ್ನೆಲೆಯಲ್ಲಿ ದೋಷ ಪೂರಿತ ವಾಹನಗಳ ನಂಬರ್‌ ಪ್ಲೇಟ್‌ ಅಳವಡಿಕೆ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.

Please follow and like us:
0
http://karnatakatoday.in/wp-content/uploads/2019/04/traffic-new-rules-1024x576.jpghttp://karnatakatoday.in/wp-content/uploads/2019/04/traffic-new-rules-150x104.jpgKarnataka Today's Newsಅಂಕಣಆಟೋದೇಶದಲ್ಲಿ ಈಗ ಟ್ರಾಫಿಕ್ ರೂಲ್ ಗಳು ಕಡ್ಡಾಯವಾಗಿ ಅನುಸರಿಸಲಾಗುತ್ತಿದೆ, ಮತ್ತು ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ಬರುವಂತೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಭದ್ರತೆಗೆ ಹೆಚ್ಚು ಆದ್ಯತೆ ನೀಡುತ್ತಿರುವುದರಿಂದ ದೇಶದಲ್ಲಿ ಎಲ್ಲವು ಬಹಳ ಶಿಸ್ತಿನಲ್ಲಿ ನಡೆಯುತ್ತಿದೆ ಎನ್ನಬಹುದು. ಅದರಂತೆ ಇನ್ನು ಮುಂದೆ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರು ದೊಡ್ಡ ಶಾಕ್ ನೀಡಲಿದ್ದಾರೆ, ಈಗಾಗಲೇ ಹೇಳಿದಂತೆ ವಾಹನಗಳ ನಂಬರ್ ಪ್ಲೇಟ್ ಗೆ ಮನಬಂದಂತೆ ಡಿಸೈನ್ ಮಾಡಿರುವ ನಂಬರ್ ಪ್ಲೇಟ್ ಹಾಕುವಂತಿಲ್ಲ ಎಂದು...Kannada News