ಈ ಮಂಗಳವಾರದಿಂದ ರಾಮನ ಪರಮಭಕ್ತ ಭಜರಂಗಿಯ ದಿವ್ಯಕೃಪೆ ಈ ರಾಶಿಗಳ ಜಾತಕದ ಮೇಲಾಗುವ ಸಾಧ್ಯತೆಗಳಿವೆ. ಆದ್ದರಿಂದ ಇಂದು ಹನುಮನಿಗೆ ಕೆಲವು ಪೂಜೆಗಳನ್ನು ಕೈಗೊಂಡರೆ ನಿಮ್ಮ ರಾಶಿಫಲದಲ್ಲಿ ಸಾಕಷ್ಟು ಬದಲಾವಣೆ ಕಂಡುಕೊಳ್ಳಬಹುದು. ಹನುಮಂತ, ಬಜರಂಗಬಲಿ, ಅಂಜನಿ ಪುತ್ರ, ಮಾರುತಿ ಎಂಬ ಹೆಸರುಗಳಿಂದ ಕರೆಯಲ್ಪಡುವ ಹನುಮದೇವರಿಗೆ ಮೀಸಲಾದ ದಿನವೆಂದರೆ ಮಂಗಳವಾರ. ದುಷ್ಟರನ್ನು ನಿವಾರಿಸುವ ದೇವರು ಎಂದೂ ಆತನನ್ನು ಕರೆಯಲಾಗುತ್ತದೆ. ಹನುಮದೇವರ ಅನುಗ್ರಹವನ್ನು ಪಡೆಯಲು ಭಕ್ತರು ಮಂಗಳವಾರದಂದು ಉಪವಾಸ ಆಚರಿಸುತ್ತಾರೆ. ಈ ಉಪವಾಸದ ಅವಧಿ ಸೂರ್ಯೋದಯ ದಿಂದ ಸೂರ್ಯಾಸ್ತದವರೆಗೆ ಇರುತ್ತದೆ. ಸೂರ್ಯೋದಯಕ್ಕೂ ಮುನ್ನ ಎದ್ದು ತಣ್ಣೀರಿನಲ್ಲಿ ಮಿಂದು ಗಣೇಶನನ್ನು ಪೂಜಿಸಿದ ಬಳಿಕ ಹನುಮದೇವರನ್ನೂ ಪೂಜಿಸಬೇಕು. ಈ ದಿನದಂದು ಕೆಂಪು ಬಣ್ಣದ ದಿರಿಸನ್ನು ತೊಡಬೇಕು ಹಾಗೂ ದಿನದ ಎಲ್ಲಾ ಪೂಜೆಗಳಲ್ಲಿ ದೇವರಿಗೆ ಕೆಂಪು ಹೂವುಗಳನ್ನು ಅರ್ಪಿಸಬೇಕು.

ಇಷ್ಟೇ ಅಲ್ಲದೆ ಮಂಗಳವಾರದ ದಿನ ಹನುಮನನ್ನು ಧ್ಯಾನಿಸಿದರೆ, ಅದರಲ್ಲೂ ಮುಂಜಾನೆ ಹನುಮನ ಪೂಜೆ ಮಾಡಿದರೆ ಫಲ ನೀಡುತ್ತದೆ ಎನ್ನಲಾಗುತ್ತದೆ. ಮಂಗಳವಾರ ಉಪವಾಸ ಮಾಡುವುದರಿಂದಲೂ ಧೈರ್ಯ, ಎಲ್ಲವನ್ನೂ ಎದುರಿಸುವ ಸಾಮರ್ಥ್ಯ ಬೆಳೆಯುವುದಲ್ಲದೇ ಇತರರಿಗೆ ನಿಮ್ಮ ಮೇಲೆ ಗೌರವ ಹೆಚ್ಚಾಗುವುದು. ಶೀಘ್ರಕೋಪಿಗಳು ಹಾಗೂ ಕ್ರೂರ ಮನೋಸ್ವಭಾವವುಳ್ಳವರು ಮಂಗಳವಾರದ ದಿನ ಈ ಪೂಜೆ ಮಾಡಿದರೆ ವ್ಯಕ್ತಿತ್ವದಲ್ಲಿ ಬದಲಾವಣೆಯಾಗಿ ಜೀವನದಲ್ಲಿ ಶಾಂತಿ, ನೆಮ್ಮದಿ ದೊರೆಯುವುದು.

ಈ ದಿನ ಹನುಮನ ಕೃಪೆಯಾಗಲಿರುವ ಆ ರಾಶಿಗಳ ದಿನಭವಿಷ್ಯದ ಬಗ್ಗೆ ತಿಳಿಯೋಣ. ಮಕರ ರಾಶಿಗೆ ನಿಮ್ಮ ದೈಹಿಕ ರಚನೆಯನ್ನು ಕಾಯ್ದುಕೊಳ್ಳಲು ನೆರವಾಗುವ ಕೆಲವು ಕ್ರೀಡಾ ಚಟುವಟಿಕೆಗಳನ್ನು ನೀವು ಇಂದು ಆನಂದಿಸಬಹುದು. ಹಣದ ಲಾಭ ನಿಮ್ಮ ನಿರೀಕ್ಷೆಯಂತಿರುವುದಿಲ್ಲ. ಒಂದು ಮಂಕು ಕವಿದ ಮತ್ತು ಒತ್ತಡದ ದಿನದಲ್ಲಿ ಸ್ನೇಹಿತರು ಮತ್ತು ಸಂಗಾತಿ ನಿಮಗೆ ಆರಾಮ ಮತ್ತು ಸಂತೋಷ ತರುತ್ತಾರೆ. ಸಂತೋಷಕ್ಕಾಗಿ ಹೊಸ ಸಂಬಂಧವನ್ನು ಎದುರುನೋಡಬಹುದು ನೀವು ಇಂದು ಪಡೆದ ಹೆಚ್ಚುವರಿ ಜ್ಞಾನವು ಸಮಕಾಲೀನರೊಂದಿಗೆ ವ್ಯವಹರಿಸುವಾಗ ನಿಮಗೆ ಸಹಾಯ ಮಾಡುತ್ತದೆ.

ತುಲಾ ರಾಶಿಗೆ ಕೆಲಸದಲ್ಲಿ ಅಡಚಣೆಗಳು ಉದ್ಭವಿಸುವ ಸಾಧ್ಯತೆ ಇರಬಹುದು. ಆದ್ದರಿಂದ, ನೀವು ಯಾವುದೇ ಕೆಲಸವನ್ನು ಬುದ್ಧಿವಂತಿಕೆಯಿಂದ ಮಾಡುವುದು ಉತ್ತಮ. ಈ ತಿಂಗಳಲ್ಲಿ ಕುಟುಂಬದ ಸಂಬಂಧವು ಉತ್ತಮ ಸ್ಥಾನದಲ್ಲಿ ಇರಲಿವೆ. ಪರಸ್ಪರ ಸಾಮರಸ್ಯದಿಂದ ಯಾವುದೇ ಕ್ಷೇತ್ರದಲ್ಲಿ ಉತ್ತಮ ಯಶಸ್ಸನ್ನು ಸಾಧಿಸಬಹುದು. ಪ್ರೀತಿಯ ಸಂಬಂಧದ ಮೇಲೆ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ.

ಸಿಂಹ ರಾಶಿಯವರು ಪರರ ಕೆಲಸ ನಿಮಿತ್ತವಾಗಿ ನಿಮ್ಮ ವೈಯಕ್ತಿಕ ಕೆಲಸಗಳನ್ನು ಅಲಕ್ಷಿಸಬೇಡಿರಿ. ಹೊಸ ಯೋಜನೆಗಳಿಗೆ ಮಾತುಕತೆ ನಡೆಸಲು ಅಡ್ಡಿಯಿಲ್ಲ. ಸವಿ ಮಾತುಗಳಿಂದ ಮಾತ್ರ ಬೇರೆಯವರು ನಿಮಗೆ ಸಹಾಯ ಮಾಡಬಹುದು. ಮನೆಯಲ್ಲಿ ಆರೋಗ್ಯಕರ ವಾತಾವರಣ ಮೂಡಲಿದ್ದು ತುಸು ನೆಮ್ಮದಿ ತರಲಿದೆ. ಸಂಗಾತಿಯೊಂದಿಗೆ ಸಂಯಮದಿಂದ ವರ್ತಿಸುವುದು ಅತ್ಯುತ್ತಮ. ಇಲ್ಲವಾದಲ್ಲಿ ಭಾರಿ ಬೆಲೆ ತೆರಬೇಕಾಗುವುದು. ವ್ಯವಹಾರದಲ್ಲಿ ಅಪರಿಚಿತರ ಪ್ರವೇಶ ಬೇಡ. ಋುಣ ಪರಿಹಾರವಾಗುವ ಲಕ್ಷ ಣಗಳು ಇವೆ. ಜೀವನದಲ್ಲಿ ಉತ್ಸಾಹ ಮೂಡುವುದು.

Please follow and like us:
error0
http://karnatakatoday.in/wp-content/uploads/2019/11/hanuman-mangal-1024x576.jpghttp://karnatakatoday.in/wp-content/uploads/2019/11/hanuman-mangal-150x104.jpgKarnataka Trendingಎಲ್ಲಾ ಸುದ್ದಿಗಳುಈ ಮಂಗಳವಾರದಿಂದ ರಾಮನ ಪರಮಭಕ್ತ ಭಜರಂಗಿಯ ದಿವ್ಯಕೃಪೆ ಈ ರಾಶಿಗಳ ಜಾತಕದ ಮೇಲಾಗುವ ಸಾಧ್ಯತೆಗಳಿವೆ. ಆದ್ದರಿಂದ ಇಂದು ಹನುಮನಿಗೆ ಕೆಲವು ಪೂಜೆಗಳನ್ನು ಕೈಗೊಂಡರೆ ನಿಮ್ಮ ರಾಶಿಫಲದಲ್ಲಿ ಸಾಕಷ್ಟು ಬದಲಾವಣೆ ಕಂಡುಕೊಳ್ಳಬಹುದು. ಹನುಮಂತ, ಬಜರಂಗಬಲಿ, ಅಂಜನಿ ಪುತ್ರ, ಮಾರುತಿ ಎಂಬ ಹೆಸರುಗಳಿಂದ ಕರೆಯಲ್ಪಡುವ ಹನುಮದೇವರಿಗೆ ಮೀಸಲಾದ ದಿನವೆಂದರೆ ಮಂಗಳವಾರ. ದುಷ್ಟರನ್ನು ನಿವಾರಿಸುವ ದೇವರು ಎಂದೂ ಆತನನ್ನು ಕರೆಯಲಾಗುತ್ತದೆ. ಹನುಮದೇವರ ಅನುಗ್ರಹವನ್ನು ಪಡೆಯಲು ಭಕ್ತರು ಮಂಗಳವಾರದಂದು ಉಪವಾಸ ಆಚರಿಸುತ್ತಾರೆ. ಈ ಉಪವಾಸದ...Film | Devotional | Cricket | Health | India