two girl marry single boy

ಸಾಮಾನ್ಯವಾಗಿ ಒಂದು ವರ ಒಂದು ವಧು ಮದುವೆ ಆಗೋದು ಸಹಜ ಕೆಲವರು ಎರಡು ಮದುವೆ ಆದರೂ ಬೇರೆ ಬೇರೆ ದಿನ ಹಾಗು ಬೇರೆ ಮಂಟಪದಲ್ಲಿ ಆಗಿರುತ್ತಾರೆ ಆದರೆ ಇಲ್ಲಿ ಒಬ್ಬ ಒಂದೇ ಮಂಟಪದಲ್ಲಿ ಒಂದೇ ಸಮಯದಲ್ಲಿ ಇಬ್ಬರಿಗೆ ತಾಳಿ ಕಟ್ಟಿದ್ದಾನೆ.

ಕೆಲವರು ಎರಡು ಮದುವೆ ಆದರೆ ಆತನಿಗೆ ಜನ ಬಯ್ಯೋದು ಸಾಮಾನ್ಯ ಆದರೆ ಈತ ಯಾಕೆ ಎರಡು ಮದುವೆ ಆದ ಅನ್ನುವ ವಿಷಯ ಗೊತ್ತಾದ್ರೆ ಶಭಾಷ್ ಅನ್ನೋದು ಪಕ್ಕ, ಹೌದು ಸಹೋದರಿಯರಾದ ರಾಜ್‍ಶ್ರೀ ಹಾಗೂ ದುರ್ಪತಾ ಬಾಯಿ, ಸಾಯಿನಾಥ್ ಎಂಬವರನ್ನು ಮದುವೆಯಾಗಿದ್ದಾರೆ.

two girl marry single boy

ಕೋಟಾಗ್ಯಾಲಾ ಗ್ರಾಮದ ಗಂಗಾಧರ್ ಶಿರ್ ಗೆರೆ ಅವರಿಗೆ ಮೂವರು ಹೆಣ್ಣುಮಕ್ಕಳು, ರಾಜ್‍ಶ್ರೀ ಮದುವೆ ಮೊದಲು ನಿಶ್ಚಯವಾಗಿತ್ತು, ಮೊದಲ ಮಗಳಾದ ದುರ್ಪತಾ ಬಾಯಿ ಮಾನಸಿಕ ಅಸ್ವಸ್ಥೆ ಆಗಿದ್ದ ಹಿನ್ನೆಲೆಯಲ್ಲಿ ಮದುವೆ ನಿಶ್ಚಯವಾಗಿರಲಿಲ್ಲ.

ರಾಜ್‍ಶ್ರೀ ಗೆ ತನ್ನ ಸಹೋದರಿ ದುರ್ಪತಾ ಬಾಯಿ ಎಂದರೆ ಬಹಳ ಇಷ್ಟ ಹಾಗೂ ಆಕೆಯನ್ನು ಬಿಟ್ಟಿರಲು ಸಾಧ್ಯವಾಗುತ್ತಿರಲಿಲ್ಲ, ಮದುವೆಯ ದಿನಾಂಕ ಸಮೀಪಿಸುತ್ತಿದ್ದಂತೆ ರಾಜ್‍ಶ್ರೀ ತನ್ನ ಅಕ್ಕನ ಬಗ್ಗೆ ಹೆಚ್ಚು ಚಿಂತಿಸುತ್ತಿದ್ದಳು, ಈಗ ನನ್ನ ಮದುವೆಯಾಗುತ್ತಿದೆ, ಆದರೆ ನನ್ನ ಅಕ್ಕ ಮಾನಸಿಕ ಅಸ್ವಸ್ಥೆ ಆಕೆಯನ್ನು ಯಾರು ಮದುವೆಯಾಗುತ್ತಾರೆಂದು ರಾಜ್‍ಶ್ರೀ ತನ್ನ ಭಾವಿ ಪತಿ ಸಾಯಿನಾಥ್ ಉರೇಕರ್ ಬಳಿ ತಿಳಿಸಿ ನಮ್ಮಿಬ್ಬರನ್ನು ಮದುವೆಯಾಗಬೇಕು ಎಂದು ಹೇಳಿದ್ದಳು.

ಆರಂಭದಲ್ಲಿ ಈ ಷರತ್ತಿಗೆ ಸಾಯಿನಾಥ್ ಒಪ್ಪಿಗೆ ನೀಡಲಿಲ್ಲ, ಆದರೆ ರಾಜ್‍ಶ್ರೀಗೆ ತನ್ನ ಅಕ್ಕನ ಮೇಲಿರುವ ಪ್ರೀತಿ ಕಂಡು ಸಾಯಿನಾಥ್ ಇಬ್ಬರನ್ನು ಮದುವೆಯಾಗಲೂ ಒಪ್ಪಿಕೊಂಡಿದ್ದಾರೆ. ಎರಡು ಕುಟುಂಬಗಳು ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಆಮಂತ್ರಣ ಪತ್ರದಲ್ಲಿ ವರ ಸಾಯಿನಾಥ್ ಹಾಗೂ ವಧು ರಾಜ್‍ಶ್ರೀ, ದುರ್ಪತಾ ಬಾಯಿ ಎಂದು ಪ್ರಿಂಟ್ ಮಾಡಿಸಿದ್ದರು.

two girl marry single boy

ಮೇ 2ರಂದು ಅದ್ಧೂರಿಯಾಗಿ ಈ ವಿಶೇಷ ಮದುವೆ ನಡೆದಿದ್ದು, ಈ ಮದುವೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜನರು ವಿಧವಿಧವಾಗಿ ತಮ್ಮ ಅಭಿಪ್ರಾಯವನ್ನು ಹೊರಹಾಕುತ್ತಿದ್ದಾರೆ, ಮದುವೆಯಾಗಲೂ ನಾನು ರಾಜ್‍ಶ್ರೀಯನ್ನು ಒಪ್ಪಿಗೊಂಡಿದೆ, ನಂತರ ಅಕ್ಕನ ಸ್ಥಿತಿಯನ್ನು ನೋಡಿ ರಾಜ್‍ಶ್ರೀ ಇಬ್ಬರನ್ನೂ ಮದುವೆ ಆಗಲು ಷರತ್ತು ಹಾಕಿದ್ದಳು.

ರಾಜ್‍ಶ್ರೀಗೆ ತನ್ನ ಅಕ್ಕನ ಮೇಲಿರುವ ಪ್ರೀತಿ ಕಂಡು ನನಗೆ ಇಷ್ಟವಾಯಿತು, ಹಾಗಾಗಿ ನಾನು ಈ ಮದುವೆಗೆ ಒಪ್ಪಿಕೊಂಡೆ ಎಂದು ವರ ಸಾಯಿನಾಥ್ ಪ್ರತಿಕ್ರಿಯಿಸಿದ್ದಾರೆ.

ಹಾಗೆ ಈಕೆಗೆ ಅನಾರೋಗ್ಯದ ಸಮಸ್ಯೆಯಿರುವ ಕಾರಣ ಯಾರೂ ಆಕೆಯನ್ನು ಮದುವೆಯಾಗಲು ಒಪ್ಪಿಗೆ ಸೂಚಿಸಲಿಲ್ಲ, ಅದಕ್ಕಾಗಿ ರಾಜ್‍ಶ್ರೀ ಸಾಯಿನಾಥ್ ಗೆ ಷರತ್ತು ಹಾಕಿದ್ದಳು, ಹಾಗಾಗಿ ಸಾಯಿನಾಥ್ ಮದುವೆಯಾಗಲೂ ಒಪ್ಪಿಕೊಂಡರು ಎಂದು ವಧುವಿನ ತಂದೆ ಗಂಗಾಧರ್ ತಿಳಿಸಿದ್ದರು.

two girl marry single boy

ಹಾಗೆ ನಾವು ಅವಿದ್ಯಾವಂತರಾಗಿದ್ದು, ಕಾನೂನಿನ ಬಗ್ಗೆ ಅಷ್ಟು ತಿಳಿದಿಲ್ಲ, ಆದರೆ ಈ ಮದುವೆ ಕಾನೂನಿನಲ್ಲಿ ಯಾವುದೇ ಮಾನ್ಯತೆ ಇರುವುದ್ದಿಲ್ಲ ಎಂದು ಯಾರೋ ತಿಳಿಸಿದ್ದರು.

ಅದಕ್ಕೆ ಮದುವೆ ಮಾಡಿಸಿದ್ದೆವೆ ಆದರೆ ಕೆಲವರು ಭಯ ಪಡಿಸುತ್ತಿದ್ದಾರೆ ಎರಡು ಮದುವೆ ಆಗೋದು ಕಾನೂನು ಬಾಹಿರ ಎಂದು ಅದೇನೇ ಆಗಲಿ ನಾವು ಒಂದು ಒಳ್ಳೆಯಾ ಕೆಲಸ ಮಾಡಿದ್ದಿವಿ ಅನ್ನುವ ತೃಪ್ತಿ ನಮಗಿದೆ ಎಂದಿದ್ದಾರೆ.

Please follow and like us:
0
http://karnatakatoday.in/wp-content/uploads/2018/05/axv-1024x576.jpghttp://karnatakatoday.in/wp-content/uploads/2018/05/axv-150x150.jpgeditorಎಲ್ಲಾ ಸುದ್ದಿಗಳುಸುದ್ದಿಜಾಲಸಾಮಾನ್ಯವಾಗಿ ಒಂದು ವರ ಒಂದು ವಧು ಮದುವೆ ಆಗೋದು ಸಹಜ ಕೆಲವರು ಎರಡು ಮದುವೆ ಆದರೂ ಬೇರೆ ಬೇರೆ ದಿನ ಹಾಗು ಬೇರೆ ಮಂಟಪದಲ್ಲಿ ಆಗಿರುತ್ತಾರೆ ಆದರೆ ಇಲ್ಲಿ ಒಬ್ಬ ಒಂದೇ ಮಂಟಪದಲ್ಲಿ ಒಂದೇ ಸಮಯದಲ್ಲಿ ಇಬ್ಬರಿಗೆ ತಾಳಿ ಕಟ್ಟಿದ್ದಾನೆ. ಕೆಲವರು ಎರಡು ಮದುವೆ ಆದರೆ ಆತನಿಗೆ ಜನ ಬಯ್ಯೋದು ಸಾಮಾನ್ಯ ಆದರೆ ಈತ ಯಾಕೆ ಎರಡು ಮದುವೆ ಆದ ಅನ್ನುವ ವಿಷಯ ಗೊತ್ತಾದ್ರೆ ಶಭಾಷ್ ಅನ್ನೋದು ಪಕ್ಕ, ಹೌದು...Kannada News