ಟಯರ್ ಯಾರಿಗೆ ತಾನೇ ತಿಳಿದಿಲ್ಲ ಹೇಳಿ, ಹೌದು ಚಿಕ್ಕ ಸೈಕಲ್ ನಿಂದ ಹಿಡಿದು ದೊಡ್ಡ ವಿಮಾನದ ವರೆಗೂ ಟಯರ್ ಗಳನ್ನ ಬಳಕೆ ಮಾಡೇ ಮಾಡುತ್ತಾರೆ, ಇನ್ನು ಟಯರ್ ನೋಡದ ಮನುಷ್ಯ ಬೇರೊಬ್ಬ ಇಲ್ಲ ಎಂದು ಹೇಳಿದರೆ ತಪ್ಪಾಗಲ್ಲ. ವಾಹನಗಳು ಬೇರೆ ಬೇರೆ ಬಣ್ಣದಲ್ಲಿ ಇರುತ್ತದೆ, ಆದರೆ ವಾಹನ ಯಾವುದೇ ಬಣ್ಣದಲ್ಲಿ ಇದ್ದರೂ ಕೂಡ ಅದರ ಟಯರ್ ಮಾತ್ರ ಕಪ್ಪು ಬಣ್ಣದಲ್ಲೇ ಇರುತ್ತದೆ. ಇನ್ನು ಟಯರ್ ಯಾಕೆ ಕಪ್ಪು ಬಣ್ಣದಲ್ಲಿ ಇರುತ್ತದೆ ಎಂದು ನಾವು ಯಾವತ್ತೂ ಕೂಡ ಯೋಚನೆ ಮಾಡಿರಲ್ಲ ಮತ್ತು ಅದೂ ನಮ್ಮ ತಲೆಗೂ ಕೂಡ ಬಂದಿರಲ್ಲ, ಹಾಗಾದರೆ ಟಯರ್ ಯಾಕೆ ಕಪ್ಪು ಬಣ್ಣದಲ್ಲಿ ಇರುತ್ತದೆ ಮತ್ತು ಏಕೆ ಟಯರ್ ಗಳನ್ನ ಬೇರೆ ಬಣ್ಣದಲ್ಲಿ ತಯಾರು ಮಾಡುವುದಿಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ವಾಹನಗಳ ಟಯರ್ ತಯಾರಿಸುವ ಕಂಪನಿಗಳು ತುಂಬಾ ಇದೆ, ಆದರೆ ಎಲ್ಲಾ ಕಂಪನಿಗಳು ಕೂಡ ಕಪ್ಪು ಬಣ್ಣದ ಟಯರ್ ಗಳನ್ನ ಮಾತ್ರ ತಯಾರು ಮಾಡುತ್ತದೆ, ಸ್ನೇಹಿತರೆ 1888 ರಲ್ಲಿ ಮೊದಲ ಭಾರಿಗೆ ವಿಶ್ವದಲ್ಲಿ ಮೊದಲ ಭಾರಿಗೆ ರಬ್ಬರ್ ಟಯರ್ ಗಳನ್ನ ತಯಾರು ಮಾಡಲಾಯಿತು ಮತ್ತು ಆಗಿನ ಕಾಲದಲ್ಲಿ ಟಯರ್ ಬಳಿ ಬಣ್ಣದಲ್ಲಿ ಇದ್ದವು. ಹೌದು ಆಗಿನ ಕಾಲದಲ್ಲಿ ಟಯರ್ ಗಳು ಬಿಳಿ ಬಣ್ಣದಲ್ಲಿ ಇರುವುದಕ್ಕೆ ಕಾರಣ ಏನು ಅಂದರೆ ಟಯರ್ ಗಳನ್ನ ತಯಾರು ಮಾಡುವಾಗ ರಬ್ಬರ್ ಮರದ ಹಾಲನ್ನ ಬಳಕೆ ಮಾಡಲಾಗುತ್ತದೆ ಮತ್ತು ರಬ್ಬರ್ ಮರದ ಹಾಲುಗಳು ಬಿಳಿ ಬಣ್ಣದ್ದು ಆದಕಾರಣ ಈ ರಬ್ಬರ್ ನಿಂದ ತಯಾರು ಮಾಡಲಾಗುತ್ತಿದ್ದ ಟಯರ್ ಗಳ ಬಣ್ಣ ಕೂಡ ಬಿಳಿ ಬಣ್ಣದಲ್ಲಿ ಇರುತ್ತಿದ್ದವು.

tyres Colour

ಇನ್ನು ಈ ರಬ್ಬರ್ ಮರದ ಹಾಲಿನಿಂದ ತಯಾರು ಮಾಡಲಾಗುತ್ತಿದ್ದ ಬಿಳಿ ಬಣ್ಣದ ಟಯರ್ ಗಳು ಹೆಚ್ಚು ದಿನ ಬಾಳಿಕೆ ಬರುತ್ತಿರಲಿಲ್ಲ ಮತ್ತು ಅದೂ ವಾಹನಕ್ಕೆ ಜೋಡಣೆ ಮಾಡಿದ ಕೆಲವೇ ದಿನಗಳಲ್ಲಿ ಸವೆದು ಹೋಗುತ್ತಿತ್ತು ಮತ್ತು ಜನರು ಆಗಾಗ್ಗೆ ಟಯರ್ ಗಳನ್ನ ಬದಲಾವಣೆ ಮಾಡಬೇಕಾಗಿತ್ತು ಹಾಗೆ ಈ ರೀತಿಯ ಟಯರ್ ಗಳ ತಯಾರಿಗೆ ಕೂಡ ಬಹಳ ವೆಚ್ಚದಾಯಕವಾಗಿತ್ತು. ಇನ್ನು ಬೇಸಿಗೆಯ ಸಮಯದಲ್ಲಿ ರಸ್ತೆಗಳು ಬಹಳ ಬಿಸಿಯಾಗಿರುತ್ತಿದ್ದವು ಮತ್ತು ಈ ಸಮಯದಲ್ಲಿ ರಬ್ಬರ್ ಮರದ ಹಾಲಿನಿಂದ ತಯಾರಿಸಲ್ಪಟ್ಟ ಈ ಟಯರ್ ತುಂಬಾ ಬಿಸಿಯಾಗಿ ಒಡೆಯುತ್ತಿದ್ದವು ಮತ್ತು ಇದರಿಂದ ತುಂಬಾ ಪ್ರಾಣಹಾನಿ ಕೂಡ ಆಗುತ್ತಿತ್ತು. ಇನ್ನು ಸಮಸ್ಯೆಯನ್ನ ನಿವಾರಣೆ ಮಾಡುವ ಸಲುವಾಗಲಿ ವಿಜ್ಞಾನಿಗಳು ಸಂಶೋಧನೆಯನ್ನ ನಡೆಸುತ್ತಾರೆ ಮತ್ತು ರಬ್ಬರ್ ಜೊತೆ ಬ್ಲ್ಯಾಕ್ ಕಾರ್ಬನ್ ಮಿಶ್ರಣ ಮಾಡಿ ಟಯರ್ ಗಳನ್ನ ತಯಾರು ಮಾಡಿದರೆ ಹೆಚ್ಚು ಬಾಳಿಕೆ ಬರುತ್ತದೆ ಅನ್ನುವುದು ವಿಜ್ಞಾನಿಗಳಿಗೆ ತಿಳಿಯುತ್ತದೆ.

ಇನ್ನು ರಬ್ಬರ್ ಜೊತೆ ಬ್ಲ್ಯಾಕ್ ಕಾರ್ಬನ್ ಮಿಶ್ರಣ ಮಾಡಿ ಟಯರ್ ಗಳನ್ನ ತಯಾರು ಮಾಡಿದರೆ ಟಯರ್ ಗಳ ಬಣ್ಣ ಕೂಡ ಕಪ್ಪು ಬಣ್ಣವಾಗಿ ಮಾರ್ಪಾಡು ಆಯಿತು. ರಬ್ಬರ್ ಜೊತೆ ಬ್ಲ್ಯಾಕ್ ಕರ್ಬರ್ ಗಳನ್ನ ಸೇರಿಸಿದ ನಂತರ ಟಯರ್ ಗಳು ತುಂಬಾ ಕಾಲ ಬಾಳಿಕೆ ಬರಲು ಶುರು ಆದವು ಮತ್ತು ಈ ಟಯರ್ ಗಳು ಬೇಸಿಗೆಯ ಸಮಯದಲ್ಲಿ ಹೆಚ್ಚು ಬಿಸಿ ಕೂಡ ಆಗುತ್ತಿರಲಿಲ್ಲ, ಈ ಎಲ್ಲಾ ಅಂಶಗಳನ್ನ ಗಮನದಲ್ಲಿ ಇಟ್ಟುಕೊಂಡು ಎಲ್ಲಾ ಟಯರ್ ಕಂಪನಿಗಳು ರಬ್ಬರ್ ಜೊತೆ ಬ್ಲ್ಯಾಕ್ ಕಾರ್ಬನ್ ಸೇರಿಸಿ ಟಯರ್ ಗಳನ್ನ ತಯಾರು ಮಾಡಿದರು ಮತ್ತು ಈಗಲೂ ಕೂಡ ತಯಾರು ಮಾಡುತ್ತಿದ್ದಾರೆ. ಈಗ ತಯಾರಾಗುವ ಟಯರ್ ಗಳು ವರ್ಷಗಟ್ಟಲೆ ಬಾಳಿಕೆ ಬರುತ್ತಿದೆ, ಸ್ನೇಹಿತರೆ ಟಯರ್ ಗಳ ಬಗೆಗಿನ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

tyres Colour

Please follow and like us:
error0
http://karnatakatoday.in/wp-content/uploads/2020/02/tyres-colour-1-1024x576.jpghttp://karnatakatoday.in/wp-content/uploads/2020/02/tyres-colour-1-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಟಯರ್ ಯಾರಿಗೆ ತಾನೇ ತಿಳಿದಿಲ್ಲ ಹೇಳಿ, ಹೌದು ಚಿಕ್ಕ ಸೈಕಲ್ ನಿಂದ ಹಿಡಿದು ದೊಡ್ಡ ವಿಮಾನದ ವರೆಗೂ ಟಯರ್ ಗಳನ್ನ ಬಳಕೆ ಮಾಡೇ ಮಾಡುತ್ತಾರೆ, ಇನ್ನು ಟಯರ್ ನೋಡದ ಮನುಷ್ಯ ಬೇರೊಬ್ಬ ಇಲ್ಲ ಎಂದು ಹೇಳಿದರೆ ತಪ್ಪಾಗಲ್ಲ. ವಾಹನಗಳು ಬೇರೆ ಬೇರೆ ಬಣ್ಣದಲ್ಲಿ ಇರುತ್ತದೆ, ಆದರೆ ವಾಹನ ಯಾವುದೇ ಬಣ್ಣದಲ್ಲಿ ಇದ್ದರೂ ಕೂಡ ಅದರ ಟಯರ್ ಮಾತ್ರ ಕಪ್ಪು ಬಣ್ಣದಲ್ಲೇ ಇರುತ್ತದೆ. ಇನ್ನು ಟಯರ್ ಯಾಕೆ ಕಪ್ಪು ಬಣ್ಣದಲ್ಲಿ...Film | Devotional | Cricket | Health | India