ಸ್ನೇಹಿತರೆ ನಿಮಗೆಲ್ಲ ಗೊತ್ತಿರುವ ಈಗಿನ ಕಾಲದಲ್ಲಿ ಡಿಗ್ರಿ ಮತ್ತು ಮಾಸ್ಟರ್ ಡಿಗ್ರಿ ಮಾಡಿದವರಿಗೆ ಕೆಲಸ ಸಿಗಲ್ಲ ಅದರಲ್ಲೂ ಕೇವಲ 10 ನೇ ತರಗತಿ ಓದಿದವರ ಗತಿ ಏನಾಗಬಹುದು ನೀವೇ ಯೋಚನೆ ಮಾಡಿ. ಇನ್ನು ಕಡಿಮೆ ವಿದ್ಯಾಭ್ಯಾಸ ಮಾಡಿದ ಯುವಕ ಯುವತಿಯರು ವಿಧಿಯಿಲ್ಲದೆ ಯಾವುದೋ ಕೆಲಸವನ್ನ ಮಾಡಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ, ಆದರೆ ನಾವು ಹೇಳುವ ಈ ಮಹಿಳೆ ಓದಿರುವುದು ಕೇವಲ 10 ನೇ ತರಗತಿ ಮಾತ್ರ ಆದರೆ ಆಕೆಯ ಸಂಬಳ ತಿಂಗಳಿಗೆ 2 ಲಕ್ಷ ರೂಪಾಯಿ. ಹಾಗಾದರೆ ಆ ಮಹಿಳೆ ಯಾರು ಮತ್ತು ಆಕೆ ಹೇಗೆ ಇಷ್ಟು ಹಣವನ್ನ ಸಂಪಾದನೆ ಮಾಡುತ್ತಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ನಾವು ಹೇಳುತ್ತಿರುವ ಈ ಮಹಿಳೆಯ ಹೆಸರು ನಂದಿನಿ, ಈಕೆಯ ವಯಸ್ಸು 33 ವರ್ಷ ಮತ್ತು ಈಕೆ ಹುಟ್ಟಿದ್ದು ಬೆಂಗಳೂರಿಗೆ ಸಮೀಪದಲ್ಲಿ ಇರುವ ಒಂದು ಚಿಕ್ಕ ಹಳ್ಳಿಯಲ್ಲಿ.

ಇನ್ನು ನಂದಿನಿ ಅವರಿಗೆ ಚಿಕ್ಕ ವಯಸ್ಸಿನಿಂದಲೇ ನಾನೊಬ್ಬ ವೈದ್ಯೆ ಆಗಬೇಕು ಅನ್ನುವ ಆಸೆ ತುಂಬಾ ಇರುತ್ತದೆ, ನಂದಿನಿ ಅವರ ತಂದೆ ದೇವಸ್ಥಾನದಲ್ಲಿ ಕೆಲಸ ಮಾಡುವ ಪೂಜಾರಿ ಮತ್ತು ನಂದಿನಿ ಕುಟುಂಬದಲ್ಲಿ ತುಂಬಾ ಬಡತನ ಇರುವ ಕಾರಣ ಆಕೆ ಹತ್ತನೇ ತರಗತಿಯ ತನಕ ಮಾತ್ರ ಓದುತ್ತಾಳೆ ಹಾಗೆ ತನ್ನ ವಿದ್ಯಾಭ್ಯಾಸವನ್ನ ಅಲ್ಲಿಗೆ ನಿಲ್ಲಿಸುತ್ತಾಳೆ. ಹೀಗೆ ಓದು ಮುಗಿಸಿದ ಕೆಲವು ವರ್ಷಗಳ ನಂತರ ನಂದಿನಿಗೆ ಶ್ರೀಕಾಂತ್ ಅನ್ನುವವರ ಜೊತೆ ಮದುವೆಯನ್ನ ಮಾಡಲಾಗುತ್ತದೆ, ಹೀಗೆ ಕೆಲವು ಸಮಯಗಳ ನಂತರ ನಂದಿನಿ ಅವರ ತಂದೆ ಇಹಲೋಕವನ್ನ ತ್ಯಜಿಸುತ್ತಾರೆ ಆದ್ದರಿಂದ ತಂಗಿಯ ಜವಾಬ್ದಾರಿ ಕೂಡ ನಂದಿನಿ ಅವರ ಹೆಗಲ ಮೇಲೆ ಬರುತ್ತದೆ.

UBER agent Nandhini

ಹೀಗೆ ಒಂದಾದ ನಂತರ ಒಂದು ಕಷ್ಟಗಳು ನಂದಿನಿ ಅವರಿಗೆ ಬರುತ್ತಲೇ ಇರುತ್ತದೆ, ತನ್ನ ಕುಟುಂಬವನ್ನ ನಿಭಾಯಿಸುವ ಸಲುವಾಗಿ ನಂದಿನಿ ಅವರು ಕೂಡ ತನ್ನ ಗಂಡನ ಜೊತೆ ಅಲ್ಪ ಸ್ವಲ್ಪ ಸಂಪಾದನೆಯನ್ನ ಮಾಡುತ್ತಾರೆ, ಆದರೆ ಅವರ ಯಾವ ಕಷ್ಟಗಳು ನಿವಾರಣೆ ಆಗುವುದಿಲ್ಲ. ಒಮ್ಮೆ ನಂದಿನಿ ಅವರ ಮನೆಯ ಹತ್ತಿರದವರು UBER ಸಂಸ್ಥೆಯ ಬಗ್ಗೆ ಹೇಳುತ್ತಾರೆ ಮತ್ತು ಇದರಲ್ಲಿ ತಮ್ಮ ಕಾರ್ ಸೇರಿದರೆ ಒಳ್ಳೆಯ ಲಾಭ ಇದೆ ಎಂದು ನಂದಿನಿ ಅವರಿಗೆ ತಿಳಿಯುತ್ತದೆ, ಆದ್ದರಿಂದ ನಂದಿನಿ ಅವರು ತಮ್ಮ ಬಳಿ ಇರುವ ಎಲ್ಲಾ ಒಡವೆಗಳನ್ನ ಅಡವಿಟ್ಟು ಓನು ಕಾರ್ ನ್ನ ಖರೀದಿ ಮಾಡುತ್ತಾರೆ.

ಇನ್ನು UBER ನಲ್ಲಿ ತಮ್ಮ ಕಾರಿನ ಜೊತೆಗೆ ಬೇರೆಯವರ ಕಾರ್ ನ್ನ ಕೂಡ ಸೇರಿದರೆ ಅವರಿಗೆ ಪೆರ್ಸೆಂಟೇಜ್ ಲೆಕ್ಕದಲ್ಲಿ ಹಣ ಸಿಗುತ್ತದೆ. ಇನ್ನು ಇದೆಲ್ಲದರ ಕುರಿತು ಯೋಚನೆ ಮಾಡಿದ ನಂದಿನಿ ಅವರು ಒಂದು ಚಿಕ್ಕ ಆಫೀಸ್ ನ್ನ ಓಪನ್ ಮಾಡುತ್ತಾರೆ ಮತ್ತು ನಾಲ್ಕು ಜನ ಕೆಲಸದವರನ್ನ ಕೂಡ ಇಟ್ಟುಕೊಳ್ಳುತ್ತಾರೆ ಮತ್ತು ಕೆಲವು ಕಾರ್ ಗಳನ್ನ UBER ಗೆ ಸೇರಿಸುವ ಕೆಲಸವನ್ನ ಮಾಡುತ್ತಾರೆ ಮತ್ತು ಇಲ್ಲಿಯ ತನಕ ಸುಮಾರು 6000 ಕಾರ್ ಗಳನ್ನ UBER ಗೆ ಸೇರಿಸಿದ್ದಾರೆ ನಂದಿನಿ ಅವರು. ಇನ್ನು ನಂದಿನಿ ಅವರ ಈ ಕೆಲಸದಿಂದ ಅವರ ಸಂಪಾದನೆ ಕೂಡ ಜಾಸ್ತಿ ಆಗುತ್ತಾ ಹೋಗುತ್ತದೆ ಮತ್ತು ಈಗ ತಿಂಗಳಿಗೆ ಸುಮಾರು 2 ಲಕ್ಷ ಹಣವನ್ನ ಸಂಪಾದನೆ ಮಾಡುತ್ತಾರೆ. ಸ್ನೇಹಿತರೆ ದುಡಿಮೆ ಮಾಡಲು ವಿದ್ಯೆ ಅವಶ್ಯಕ ಅಲ್ಲ ಬದಲು ನಿಮ್ಮ ಬಳಿ ಕೆಲಸ ಮಾಡುವ ಚಾಣಾಕ್ಷತೆ ಇದ್ದರೆ ಸಾಕು, ಸ್ನೇಹಿತರೆ ನಂದಿನಿ ಅವರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

UBER agent Nandhini

Please follow and like us:
error0
http://karnatakatoday.in/wp-content/uploads/2019/10/UBER-Agent-Nandhini-1024x576.jpghttp://karnatakatoday.in/wp-content/uploads/2019/10/UBER-Agent-Nandhini-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಮಂಗಳೂರುಸುದ್ದಿಜಾಲಹಣಸ್ನೇಹಿತರೆ ನಿಮಗೆಲ್ಲ ಗೊತ್ತಿರುವ ಈಗಿನ ಕಾಲದಲ್ಲಿ ಡಿಗ್ರಿ ಮತ್ತು ಮಾಸ್ಟರ್ ಡಿಗ್ರಿ ಮಾಡಿದವರಿಗೆ ಕೆಲಸ ಸಿಗಲ್ಲ ಅದರಲ್ಲೂ ಕೇವಲ 10 ನೇ ತರಗತಿ ಓದಿದವರ ಗತಿ ಏನಾಗಬಹುದು ನೀವೇ ಯೋಚನೆ ಮಾಡಿ. ಇನ್ನು ಕಡಿಮೆ ವಿದ್ಯಾಭ್ಯಾಸ ಮಾಡಿದ ಯುವಕ ಯುವತಿಯರು ವಿಧಿಯಿಲ್ಲದೆ ಯಾವುದೋ ಕೆಲಸವನ್ನ ಮಾಡಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ, ಆದರೆ ನಾವು ಹೇಳುವ ಈ ಮಹಿಳೆ ಓದಿರುವುದು ಕೇವಲ 10 ನೇ ತರಗತಿ ಮಾತ್ರ ಆದರೆ ಆಕೆಯ...Film | Devotional | Cricket | Health | India