ಓದಿದವರಿಗೆ ಒಂದೇ ಕೆಲಸ ಓದದೇ ಇರುವವರಿಗೆ  ಮಾಡಿದ್ದೆಲ್ಲ ಕೆಲಸ ಎನ್ನುವ ಅದ್ಬುತ ಸಂದೇಶ ವನ್ನು ನಟ ಪುನೀತ್ ತನ್ನ ಚಿತ್ರದಲ್ಲಿ ಹೇಳಿದ್ದರು. ಈಗ ಮಹಿಳೆಯೊಬ್ಬಳು ಅದೇ ರೀತಿಯಲ್ಲಿ ಮುಂದೆ ಬಂದು ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ ಇಷ್ಟಕ್ಕೂ ಈಕೆಗೆ ಓದಿದ್ದು ಕೇವಲ ಹತ್ತನೇ ತರಗತಿ ಆದರೆ ಈಕೆಯ ಸಂಪಾದನೆ ಮಾತ್ರ ಲಕ್ಷಗಟ್ಟಲೆ.

ಹೌದು ಇಂದು ನಾವು  ಹೇಳುತ್ತಿರುವ ಯಶೋಗಾಥೆ ಬೇರೆ ಯಾರದ್ದು ಅಲ್ಲ ಬೆಂಗಳೂರಿನ ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆದ ನಂದಿನಿ ಎನ್ನುವ ಛಲಗಾರ್ತಿ ಮಹಿಳೆಯ ಬಗ್ಗೆ . ಹಣ ಸಂತೋಷ ತರಲಾರದು ಎನ್ನುವ ಆಂಗ್ಲ ಗಾದೆಯಿದೆ ಆದರೆ ನಂದಿನಿಯವರ ವಿಷಯದಲ್ಲಿ ಈ ಮಾತು ತಪ್ಪಾಗತ್ತೆ ಯಾಕೆಂದರೆ ಈಕೆ ಪಟ್ಟ ಸತತ ಶ್ರಮ ,ಪ್ರಯತ್ನಕ್ಕೆ ಆಕೆಗೆ ಸಂದ ಜಯವಿದು ಎನ್ನಬಹುದು.

ನಂದಿನಿ ಓದಿದ್ದು ಬಹಳ ಕಡಿಮೆ ಆರ್ಥಿಕ ಸಮಸ್ಯೆಯಿಂದ ಆಕೆಗೆ ಉನ್ನತ ಶಿಕ್ಷಣ ತಪ್ಪಿತ್ತು. ಇಷ್ಟಕ್ಕೂ ನಂದಿನಿಯವರು ಮಾಡುತ್ತಿರುವ ಕೆಲಸವೇನು ಗೊತ್ತಾ ನೋಡೋಣ ಬನ್ನಿ .ಒಂದು ಕ್ಷಣದಲ್ಲಿ ನಂದಿನಿ ಜೀವನದಲ್ಲಿ ಇನ್ನೇನು ಇಲ್ಲ ಎನ್ನುವ ಮಟ್ಟಕ್ಕೆ ಬಂದಾಗ ಸಂಬಂದಿಕರಿಂದ ಉಬರ್ ಟ್ಯಾಕ್ಸಿ  ಸೇವೆಯ ಬಗ್ಗೆ ತಿಳಿದುಕೊಂಡಳು. ತನ್ನಲ್ಲಿದ್ದ ಅಲ್ಪಸ್ವಲ್ಪ ಚಿನ್ನವನ್ನು ಅಡವಿಟ್ಟು ಹೊಸ ಟೊಯೊಟಾ ಕಾರು ಖರೀದಿಸಿ ಉಬರ್ ಸಂಸ್ಥೆ ಯೊಂದಿಗೆ  ಕೈ ಜೋಡಿಸುತ್ತಾಳೆ.

 

ಅಷ್ಟೇ ಅಲ್ಲದೆ ಉಬರ್ ದೋಸ್ತ್ ಅನ್ನುವ ಚಾಲಕರನ್ನು ರೆಫರ್ ಮಾಡುವ ಕಾರ್ಯಕ್ರಮಕ್ಕೂ ಸೇರುತ್ತಾಳೆ.ಉಬರ್ ದೋಸ್ತ್ ಮೂಲಕ ನೀವು ಸಂಸ್ಥೆಗೆ ಚಾಲಕರನ್ನು ರೆಫರ್ ಮಾಡಿದರೆ ನಿಮಗೆ ಕಮಿಷನ್ ರೂಪದಲ್ಲಿ ಹಣ ದೊರೆಯುತ್ತದೆ.ಇಲ್ಲಿಯವರೆಗೂ ಈಕೆ 6000 ಕ್ಕೂ ಹೆಚ್ಚು ಚಾಲಕರನ್ನು ಸೇರಿಸಿದ್ದಾಳೆ ಅಲ್ಲದೆ  ತನ್ನದೇ ಆದ ಕಂಪನಿ ತೆರೆದು ಸಣ್ಣ ಟೀಮ್ ಮಾಡಿಕೊಂಡು ಈಗ ಸಂಪಾದನೆ ಮಾಡುತ್ತಿದ್ದಾರೆ.ಗ ನಂದಿನಿ ತನ್ನ ಹಳೆಯ ಸಾಲ ಎಲ್ಲವನ್ನು ತೀರಿಸಿ ಹೊಸ  ಮನೆಯನ್ನು ಕಟ್ಟಿಕೊಂಡು ತನ್ನ ಮಗಳಿಗೂ ಕೂಡ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ನಂದಿನಿಯ ಈ ಯಶೋಗಾಥೆ ಇಷ್ಟವಾದರೆ ದಯವಿಟ್ಟು ಶೇರ್ ಮಾಡಿರಿ

Please follow and like us:
0
http://karnatakatoday.in/wp-content/uploads/2018/06/UBER-NANDINI-1024x576.pnghttp://karnatakatoday.in/wp-content/uploads/2018/06/UBER-NANDINI-150x150.pngeditorಅಂಕಣಎಲ್ಲಾ ಸುದ್ದಿಗಳುಓದಿದವರಿಗೆ ಒಂದೇ ಕೆಲಸ ಓದದೇ ಇರುವವರಿಗೆ  ಮಾಡಿದ್ದೆಲ್ಲ ಕೆಲಸ ಎನ್ನುವ ಅದ್ಬುತ ಸಂದೇಶ ವನ್ನು ನಟ ಪುನೀತ್ ತನ್ನ ಚಿತ್ರದಲ್ಲಿ ಹೇಳಿದ್ದರು. ಈಗ ಮಹಿಳೆಯೊಬ್ಬಳು ಅದೇ ರೀತಿಯಲ್ಲಿ ಮುಂದೆ ಬಂದು ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ ಇಷ್ಟಕ್ಕೂ ಈಕೆಗೆ ಓದಿದ್ದು ಕೇವಲ ಹತ್ತನೇ ತರಗತಿ ಆದರೆ ಈಕೆಯ ಸಂಪಾದನೆ ಮಾತ್ರ ಲಕ್ಷಗಟ್ಟಲೆ. ಹೌದು ಇಂದು ನಾವು  ಹೇಳುತ್ತಿರುವ ಯಶೋಗಾಥೆ ಬೇರೆ ಯಾರದ್ದು ಅಲ್ಲ ಬೆಂಗಳೂರಿನ ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆದ ನಂದಿನಿ...Kannada News