ಕೆಲವೊಮ್ಮೆ ಸಮಾಜದಲ್ಲಿ ನಡೆಯುವ ಅದ್ಭುತಗಳು ವಿಜ್ಞಾನ ಲೋಕವನ್ನು ಕೂಡ ಆಶ್ಚರ್ಯಗೊಳಿಸುತ್ತದೆ ಎನ್ನುವುದಕ್ಕೆ ಉಡುಪಿಯ ಸಮೀಪ ನಡೆದ ಈ ನೈಜ ಘಟನೆಯೇ ಸಾಕ್ಷಿಯಾಗಿದೆ. ಹೌದು ನಮ್ಮ ಸಂಸ್ಕ್ರತಿಯಲ್ಲಿ ನಾಗದೇವರನ್ನು ಪೂಜ್ಯನೀಯವಾಗಿ ಕಾಣುತ್ತೇವೆ ಆತನಿಗೆ ಹಾಲೇರುವುದು ಅಭಿಷೇಕ ಮಾಡಿಸುವುದು, ಮತ್ತು ದೋಷ ನಿವಾರಣೆಗೆ ಎಲ್ಲ ರೀತಿಯಲ್ಲಿ ನಾಗದೇವನನ್ನು ಸ್ಮರಿಸುತ್ತೇವೆ. ಇಲ್ಲಿ ನಾಗಪಾತ್ರಿಗಳು ಸೂಚಿಸಿದಂತೆ ಮನೆಯ ಹಾಲ್ ಅಗೆದು ನೋಡಿದಾಗ ಅಲ್ಲಿ ಸಿಕ್ಕಿದ್ದೇನು ಗೊತ್ತಾ ನಿಮಗೂ ಕೂಡ ಇದು ಶಾಕಿಂಗ್ ಎನ್ನಿಸಬಹುದು. ಹೊಸ ಮನೆಯನ್ನು ನಿರ್ಮಿಸಿ ವಾಸಿಸುತ್ತಿದ್ದ ಉಡುಪಿಯ ಕುಟುಂಬವೊಂದಕ್ಕೆ ಮನೆಯಲ್ಲಿ ಅಶಾಂತಿ, ನೆಮ್ಮದಿ ರಹಿತ ವಾತಾವರಣ ಇದನ್ನು ತಡೆಯಲಾಗದೆ ಸಮೀಪದ ನಾಗಪಾತ್ರಿ ತೀರ್ಥಹಳ್ಳಿಯ ಆರಗ ಅಗ್ರಹಾರ ನಾಗರಾಜ್ ಭಟ್ಟರಲ್ಲಿ ಪ್ರಶ್ನೆ ಕೇಳಿದ್ದರು.

ಅವರು ಸೂಚಿಸಿದಂತೆ ನಾಗದೇವನ ಜಾಗದಲ್ಲಿ ನೀವು ಮನೆ ನಿರ್ಮಿಸಿದ್ದಾರೆ ಅಲ್ಲಿ ನಾಗನ ಕಲ್ಲಿದೆ ಅದನ್ನು ತಗೆದು ಪೂಜಿಸಬೇಕು ಎಂದು ತಿಳಿಸಿದಾಗ ಅವರ ಸೂಚನೆಯಂತೆ ಮನೆಯ ನಿರ್ದಿಷ್ಟ ಜಾಗದಲ್ಲಿ ಅಗೆಯಲಾಯಿತು. ಅಗೆದು ನೋಡಿದಾಗ, ಅಲ್ಲಿ ಜೈನರ ಕಾಲದಲ್ಲಿ ಆರಾಧಿಸಲ್ಪಡುತ್ತಿದ್ದ ನಾಗದೇವರ ಮೂರ್ತಿ ಪತ್ತೆಯಾಗಿದೆ.

 

ನಾಗಪಾತ್ರಿಯವರ ಭವಿಷ್ಯ ನಿಜವಾಗಿದ್ದು, ಮನೆಯವರ ಜತೆಗೆ ಊರಿನವರೂ ಅಚ್ಚರಿಗೊಳಗಾಗಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಪಾತ್ರಿಗಳು ತೋರಿಸಿದ ಜಾಗ ಮತ್ತು ಪತ್ತೆಯಾದ ಮೂರ್ತಿ ಇದೀಗ ಫೋಟೋ ಹಾಗೂ ವಿಡಿಯೋಗಳು ಭಾರಿ ಚರ್ಚೆಗೆ ಆಸ್ಪದ ಮಾಡುತ್ತಿದೆ.

 

ಈ ಘಟನೆ ವಿಜ್ಞಾನಕ್ಕೆ ದೊಡ್ಡ ಸವಾಲು ಎನ್ನಬಹುದು.ನಾಗಪಾತ್ರಿಯವರ ನಿಖರ ನಿರ್ದೇಶನದ ಕುರಿತು ಸಾಮಾಜಿಕ ತಾಣದಲ್ಲೂ ಚರ್ಚೆಯಾಗುತ್ತಿದ್ದು, ಮನೆಯ ಹಾಲ್‌ನಲ್ಲಿ ನಿಗದಿತ ಜಾಗದಲ್ಲಿ 6 ಅಡಿ ಗುಂಡಿ ತೋಡಿ ನಾಗನಮೂರ್ತಿ ಹೊರತೆಗೆದ ವಿಚಾರ ಅಚ್ಚರಿ ಮೂಡಿಸಿದೆ. ಈ ಬಗ್ಗೆ ವಿಜ್ಞಾನ ಲೋಕಕ್ಕೆ ಇದು ಸವಾಲಾಗಿದೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Please follow and like us:
0
http://karnatakatoday.in/wp-content/uploads/2018/11/nagapatri-1024x576.jpghttp://karnatakatoday.in/wp-content/uploads/2018/11/nagapatri-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುಜ್ಯೋತಿಷ್ಯಕೆಲವೊಮ್ಮೆ ಸಮಾಜದಲ್ಲಿ ನಡೆಯುವ ಅದ್ಭುತಗಳು ವಿಜ್ಞಾನ ಲೋಕವನ್ನು ಕೂಡ ಆಶ್ಚರ್ಯಗೊಳಿಸುತ್ತದೆ ಎನ್ನುವುದಕ್ಕೆ ಉಡುಪಿಯ ಸಮೀಪ ನಡೆದ ಈ ನೈಜ ಘಟನೆಯೇ ಸಾಕ್ಷಿಯಾಗಿದೆ. ಹೌದು ನಮ್ಮ ಸಂಸ್ಕ್ರತಿಯಲ್ಲಿ ನಾಗದೇವರನ್ನು ಪೂಜ್ಯನೀಯವಾಗಿ ಕಾಣುತ್ತೇವೆ ಆತನಿಗೆ ಹಾಲೇರುವುದು ಅಭಿಷೇಕ ಮಾಡಿಸುವುದು, ಮತ್ತು ದೋಷ ನಿವಾರಣೆಗೆ ಎಲ್ಲ ರೀತಿಯಲ್ಲಿ ನಾಗದೇವನನ್ನು ಸ್ಮರಿಸುತ್ತೇವೆ. ಇಲ್ಲಿ ನಾಗಪಾತ್ರಿಗಳು ಸೂಚಿಸಿದಂತೆ ಮನೆಯ ಹಾಲ್ ಅಗೆದು ನೋಡಿದಾಗ ಅಲ್ಲಿ ಸಿಕ್ಕಿದ್ದೇನು ಗೊತ್ತಾ ನಿಮಗೂ ಕೂಡ ಇದು ಶಾಕಿಂಗ್ ಎನ್ನಿಸಬಹುದು. ಹೊಸ...Kannada News