ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೇರುತ್ತಿರುವ ನರೇಂದ್ರ ಮೋದಿ ಅವರು ಗುರುವಾರ ಸತತ ಎರಡನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.  ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಎನ್ ಡಿಎ ಸಂಸದೀಯ ಮಂಡಳಿಯ ನಾಯಕ ನರೇಂದ್ರ ಮೋದಿ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಕಳೆದ ಬಾರಿ ಈಶ್ವರನ ಹೆಸರನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ನರೇಂದ್ರ ಮೋದಿ ಅವರು ಈ ಬಾರಿಯೂ ಈಶ್ವರನ ಹೆಸರಿನಲ್ಲಿ ಹಿಂದಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಇನ್ನು ಈ ಬಾರಿ ಮಹಿಳೆಯರಿಗೆ ವಿಶೇಷ ಆಫ಼ರ್ ನೀಡಿದ್ದಾರೆ ಮೋದಿ ಅದೇನು ಗೊತ್ತಾ. ಪ್ರಧಾನ ಮಂತ್ರಿ ಉಜ್ವಲ್ ಯೋಜನಾ ನಿಮಗೆಲ್ಲ ಗೊತ್ತೇ ಇದೆ ಪ್ರತಿ ಮನೆಗೂ ಗ್ಯಾಸ್ ವ್ಯವಸ್ಥೆ ಮಾಡುವ ಕೆಲಸ. ಇಲ್ಲಿ ಉಚಿತ ಸಿಲಿಂಡರ್ ನಿಮಗೆ ದೊರೆಯುತ್ತದೆ ಮೊದಲ ಹಂತದಲ್ಲಿ ಎಲ್ಲರಿಗು ಈ ಸೇವೆ ಸಿಗದ ಕಾರಣ ಈಗ ಮತ್ತೆ ಸರ್ಕಾರ ಕಾರ್ಯೋನ್ಮುಖವಾಗಿದೆ.

ಈಗಾಗಲೇ ಹೊಸ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡವರಿಗೆ ಮತ್ತು ಹಳೆಯ ಕಾರ್ಡ್ ಇದ್ದವರಿಗೂ ಕೂಡ ಎಂಟು ಕೋಟಿ ಹೊಸ ಗ್ಯಾಸ್ ಕನೆಕ್ಷನ್ ನೀಡಲು ಸರ್ಕಾರ ನಿರ್ಧರಿಸಿದೆ. ಆದರೆ ಈ ಬಾರಿ ಯೋಜನೆಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಈ ಮೊದಲು ಉಚಿತ ಕನೆಕ್ಷನ್ ಪಡೆದವರಿಗೆ 14 ಕೆಜಿಯ ಸಿಲಿಂಡರ್ ನೀಡಲಾಗಿತ್ತು ಆದರೆ ಈ ಬಾರಿ ಕೇವಲ ಐದು ಕೆಜಿಯ ಸಿಲಿಂಡರ್ ನೀಡಲಾಗುತ್ತಿದೆ. ದೇಶದ ಅಷ್ಟು ಕೋಟಿ ಜನತೆಗೆ ಹದಿನಾಲ್ಕು ಕೆಜಿ ಸಿಲಿಂಡರ್ ತಲುಪಿಸಿವುದು ಕಷ್ಟವಾಗಿತ್ತು ಮತ್ತು ಬೇಡಿಕೆ ಕೂಡ ಹೆಚ್ಚಿರುವುದರಿಂದ ಈ ಬಾರಿ ಸಿಲಿಂಡರ್ ತೂಕ ಕಮ್ಮಿ ಮಾಡಲಾಗಿದೆ.

ಈ ವರ್ಷದಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಸರ್ಕಾರದಿಂದ ಹೊಸ ಗ್ಯಾಸ್ ಸಂಪರ್ಕವನ್ನು ಉಚಿತವಾಗಿ ಪಡೆದುಕೊಳ್ಳುವವರಿಗೆ ಅಲ್ಪ ಪ್ರಮಾಣದ ಬದಲಾವಣೆಯನ್ನು ಮಾಡಲಾಗಿದೆ ದೇಶದ ಎಲ್ಲಾ ಬಿಪಿಎಲ್ ಕಾರ್ಡ್ ಹೊಂದಿರುವ ಬಡ ಕುಟುಂಬದವರಿಗೆ ಉಚಿತ ಗ್ಯಾಸ್ ಸಂಪರ್ಕವನ್ನು ಹೊಂದಬೇಕೆನ್ನುವ ಉದ್ದೇಶದಿಂದ ಈ ಬಾರಿ ನೀಡಲಾಗುವ ಹೊಸ ಗ್ಯಾಸ್ ಸಂಪರ್ಕ ಕೇವಲ 5 ಕೆಜಿಯ ಗ್ಯಾಸ್ ಸಿಲೆಂಡರ್ ಮಾತ್ರ ನೀಡಲಾಗುತ್ತದೆ.

ಉಚಿತವಾಗಿ ಒಂದು ಗ್ಯಾಸ್ ಸ್ಟೋವ್ ಮತ್ತು ಒಂದು ರೆಗುಲೇಟರ್ ಹಾಗೂ ಒಂದು ಲೈಟರ್ ಮತ್ತು ಇತರೆ ಪರೀಕ ವಸ್ತುಗಳನ್ನು ನೀಡಲಾಗುತ್ತದೆ. ಇದಕ್ಕೆ ಅರ್ಜಿ ಸಲ್ಲಿಸಲು ನೀವು ಈ ಕೂಡಲೇ ಹತ್ತಿರದ ಯಾವುದೇ ಗ್ಯಾಸ್ ಏಜೆನ್ಸಿ ಬಳಿ ಹೋಗಿ ಸಂಪರ್ಕಿಸಬಹುದು ಅಥವಾ ನ್ಯಾಯಬೆಲೆ ಅಂಗಡಿ ಮತ್ತು ಪಂಚಾಯಿತಿಗಳಲ್ಲಿಯೂ ಕೂಡ ಅರ್ಜಿ ಕೋರಬಹುದು.

ಯೋಜನೆಯಡಿಯಲ್ಲಿ, ಹೊಸ 8 ದಶಲಕ್ಷ ಅನಿಲ ಸಂಪರ್ಕಗಳ ಗುರಿಯು ಸರ್ಕಾರದ ಮೊದಲ 100 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇಲ್ಲಿಯವರೆಗೆ 7 ಮಿಲಿಯನ್ 19 ಲಕ್ಷ ಸಂಪರ್ಕಗಳನ್ನು ನೀಡಲಾಗಿದೆ. ಅಂದರೆ, ಮೇ 30 ರ ನಂತರ 100 ದಿನಗಳಲ್ಲಿ 81 ದಶಲಕ್ಷ ಅನಿಲ ಸಂಪರ್ಕಗಳನ್ನು ವಿತರಿಸಲಾಗುವುದು.

Please follow and like us:
error0
http://karnatakatoday.in/wp-content/uploads/2019/05/MODI-OATH-TAKING-1024x576.jpghttp://karnatakatoday.in/wp-content/uploads/2019/05/MODI-OATH-TAKING-150x104.jpgKarnataka Trendingಎಲ್ಲಾ ಸುದ್ದಿಗಳುಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೇರುತ್ತಿರುವ ನರೇಂದ್ರ ಮೋದಿ ಅವರು ಗುರುವಾರ ಸತತ ಎರಡನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.  ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಎನ್ ಡಿಎ ಸಂಸದೀಯ ಮಂಡಳಿಯ ನಾಯಕ ನರೇಂದ್ರ ಮೋದಿ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಕಳೆದ ಬಾರಿ ಈಶ್ವರನ ಹೆಸರನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ನರೇಂದ್ರ ಮೋದಿ ಅವರು ಈ ಬಾರಿಯೂ ಈಶ್ವರನ...Film | Devotional | Cricket | Health | India