Updates Of Traffic rules

ಎಲ್ಲಾ ವಾಹನ ಮಾಲೀಕರಿಗೆ ಮತ್ತು ವಾಹನ ಸವಾರರಿಗೆ ಸಿಡಿ ಸುದ್ದಿ ಕೊಟ್ಟಿದೆ ಸರ್ಕಾರ, ಸೆಪ್ಟೆಂಬರ್ ನಲ್ಲಿ ಇಡೀ ದೇಶಾದ್ಯಂತ ಹೊಸ ಮೋಟಾರು ವಾಹನ ಕಾಯಿದೆ ತಿದ್ದುಪಡಿಯನ್ನ ಜಾರಿಗೆ ತರಲಾಗಿದ್ದು ಇಲ್ಲಿಯತನಕ ಅನೇಕ ವಾಹನ ಸವಾರರು ಸಾವಿರಾರು ರೂಪಾಯಿಯ ದಂಡವನ್ನ ಕೊಟ್ಟಿದ್ದಾರೆ.

ಇನ್ನು ಈಗ ವಾಹನ ಸವಾರರಿಗೆ ಒಂದು ದೊಡ್ಡ ಸಿಹಿ ಸುದ್ದಿ ಬಂದಿದೆ, ಹೌದು ದಂಡದ ಮೊತ್ತದಲ್ಲಿ ಭಾರಿ ಪ್ರಮಾಣದ ಇಳಿಕೆಯನ್ನ ಮಾಡಲಾಗಿದೆ, ಹಾಗಾದರೆ ಎಷ್ಟು ಇಳಿಕೆ ಮಾಡಲಾಗಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Updates Of Traffic rules

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮೋಟಾರು ವಾಹನ ಕಾಯಿದೆ ತಿದ್ದುಪಡಿಯಲ್ಲಿ ವಾಹನ ಸವಾರರು ಸಂಚಾರಿ ನಿಯಮವನ್ನ ಉಲ್ಲಂಘನೆ ಮಾಡಿದರೆ ಭಾರಿ ದಂಡವನ್ನ ಹಾಕಲಾಗುತ್ತಿತ್ತು, ಟ್ರಾಫಿಕ್ ಪೊಲೀಸರು ಹಾಕುವ ದಂಡದಿಂದ ಬೇಸೆತ್ತ ಜನರಿಗೆ ಈಗ ಸರ್ಕಾರವು ಸಿಹಿ ಸುದ್ದಿಯನ್ನ ನೀಡಿದೆ.

ಕೇಂದ್ರ ಸರ್ಕಾರ ವಿಧಿಸಿದ ದಂಡದ ಮೊತ್ತದಲ್ಲಿ ರಾಜ್ಯ ಸರ್ಕಾರ ಭಾರಿ ಪ್ರಮಾಣದ ಇಳಿಕೆಯನ್ನ ಮಾಡಿದೆ, ವಾಹನದ ಮೊತ್ತಕ್ಕಿಂತ ದಂಡದ ಮೊತ್ತವೇ ಹೆಚ್ಚಾದ ಕಾರಣ ಹಲವು ವಾಹನ ಸವಾರರು ವಾಹನವನ್ನ ಪೊಲೀಸರಿಗೆ ಮನೆಗೆ ಬಂದ ಉದಾಹರಣೆಯನ್ನ ನಾವು ನೋಡಿದ್ದೇವೆ.

Updates Of Traffic rules

ಹೆಲ್ಮೆಟ್ ಇಲ್ಲದೆ ಇಲ್ಲದೆ ವಾಹನ ಚಲಾಯಿಸಿದರೆ ಹಾಕಲಾಗುತ್ತಿದ್ದ 1 ಸಾವಿರ ರೂಪಾಯಿಯ ದಂಡವನ್ನ 500 ರೂಪಾಯಿಯ ವರೆಗೆ ಇಳಿಕೆ ಮಾಡಲಾಗಿದೆ, ಇನ್ನು ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸಿದರೆ ಹಾಕಲಾಗುತ್ತಿದ್ದ 5 ಸಾವಿರ ರೂಪಾಯಿ ದಂಡದಲ್ಲಿ ಬೈಕ್ ಚಾಲಕರಿಗೆ 2 ಸಾವಿರ ಮತ್ತು ನಾಲ್ಕು ಚಕ್ರದ ವಾಹನ ಓಡಿಸುವವರಿಗೆ 3 ಸಾವಿರಕ್ಕೆ ಇಳಿಕೆ ಮಾಡಲಾಗಿದೆ.

ಇನ್ನು ಸೀಟ್ ಬೆಲ್ಟ್ ಇಲ್ಲದೆ ವಾಹನ ಚಲಾಯಿಸುವಾಗ ಹಾಕಲಾಗುತ್ತಿದ್ದ ದಂಡದಲ್ಲಿ 500 ಋಓಪೆಯಿ ಇಳಿಕೆ ಮಾಡಲಾಗಿದೆ, ಸಾಮಾನ್ಯವಾಗಿ ಹೇಳಬೇಕು ಅಂದರೆ ದಂಡದ ಮೊತ್ತದಲ್ಲಿ ಭಾರಿ ಪ್ರಮಾಣದ ಇಳಿಕೆಯನ್ನ ಮಾಡಲಾಗಿದ್ದು ವಾಹನ ಸವಾರರಿಗೆ ಸ್ವಲ್ಪ ಸಂತೋಷವಾಗಿದೆ.

ಸ್ನೇಹಿತರೆ ನೀವು ಇನ್ನೊಂದು ವಿಷಯ ತಿಳಿಯಲೇಬೇಕು, ಹೌದು ದಂಡದಲ್ಲಿ ಭಾರಿ ಇಳಿಕೆ ಮಾಡಿರುವುದು ನಮ್ಮ ಕರ್ನಾಟಕ ಸರ್ಕಾರ ಅಲ್ಲ, ಹೌದು ಸ್ನೇಹಿತರೆ ದಂಡದಲ್ಲಿ ಭಾರಿ ಇಳಿಕೆ ಮಾಡಿರುವುದು ಗುಜರಾತ್ ಸರ್ಕಾರ, ಸ್ನೇಹಿತರೆ ಕರ್ನಾಟಕದಲ್ಲಿ ಕೂಡ ದಂಡದ ಮೊತ್ತ ಇಳಿಕೆ ಆಗಬೇಕಾ ಅಥವಾ ಬೇಡವಾ ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Updates Of Traffic rules

Please follow and like us:
error0
http://karnatakatoday.in/wp-content/uploads/2019/09/Updates-Of-Taffic-rules-1024x576.jpghttp://karnatakatoday.in/wp-content/uploads/2019/09/Updates-Of-Taffic-rules-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಮಂಗಳೂರುಸುದ್ದಿಜಾಲಎಲ್ಲಾ ವಾಹನ ಮಾಲೀಕರಿಗೆ ಮತ್ತು ವಾಹನ ಸವಾರರಿಗೆ ಸಿಡಿ ಸುದ್ದಿ ಕೊಟ್ಟಿದೆ ಸರ್ಕಾರ, ಸೆಪ್ಟೆಂಬರ್ ನಲ್ಲಿ ಇಡೀ ದೇಶಾದ್ಯಂತ ಹೊಸ ಮೋಟಾರು ವಾಹನ ಕಾಯಿದೆ ತಿದ್ದುಪಡಿಯನ್ನ ಜಾರಿಗೆ ತರಲಾಗಿದ್ದು ಇಲ್ಲಿಯತನಕ ಅನೇಕ ವಾಹನ ಸವಾರರು ಸಾವಿರಾರು ರೂಪಾಯಿಯ ದಂಡವನ್ನ ಕೊಟ್ಟಿದ್ದಾರೆ. ಇನ್ನು ಈಗ ವಾಹನ ಸವಾರರಿಗೆ ಒಂದು ದೊಡ್ಡ ಸಿಹಿ ಸುದ್ದಿ ಬಂದಿದೆ, ಹೌದು ದಂಡದ ಮೊತ್ತದಲ್ಲಿ ಭಾರಿ ಪ್ರಮಾಣದ ಇಳಿಕೆಯನ್ನ ಮಾಡಲಾಗಿದೆ, ಹಾಗಾದರೆ ಎಷ್ಟು ಇಳಿಕೆ ಮಾಡಲಾಗಿದೆ ಅನ್ನುವುದರ...Film | Devotional | Cricket | Health | India