Upendra Statement of Rachitha Ram acting

ಇದೆ ಮೊದಲ ಭಾರಿಗೆ ಇಷ್ಟು ಬೋಲ್ಡ್ ಆಗಿ ನಟನೆ ಮಾಡಿ ವೈರಲ್ ಆಗಿರುವ ರಚಿತಾ ರಾಮ್ ಮತ್ತು ಉಪೇಂದ್ರ ಅವರ ವಿಷಯ ಈಗ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಕೆಲವು ದಿನಗಳ ಹಿಂದೆ ನನ್ನ ತಂದೆ ತಾಯಿಗೆ ನಾನಿನ್ನು ಪುಟ್ಟ ಮಗುವಿನಂತೆ ಕಾಣುತ್ತಿದ್ದೇನೆ ಮತ್ತು ನಾನು ಆರೀತಿ ಬೋಲ್ಡ್ ಆಗಿ ನಟನೆ ಮಾಡಬಾರದಿತ್ತು ಮತ್ತು ಇದರಿಂದ ನನ್ನ ತಂದೆಗೆ ತುಂಬಾ ಬೇಸರಾಗಿದೆ ಎಂದು ತನ್ನ ತಂದೆಗೆ ಕ್ಷಮೆ ಕೇಳಿದ್ದರು ರಚಿತಾ ರಾಮ್.

ಇನ್ನು ಇದೆ ವಿಷಯಕ್ಕೆ ಸಂಬಂಧಿಸಿದಂತೆ ಉಪೇಂದ್ರ ಪತ್ನಿ ಪ್ರಿಯಾಂಕಾ ಅವರು ಕೂಡ ರಚಿತಾ ರಾಮ್ ಅವರ ಮೇಲೆ ಗರಂ ಆಗಿದ್ದರು, ಇನ್ನು ಈಗ ಸ್ವತಃ ಉಪೇಂದ್ರ ಅವರೇ ಇದಕ್ಕೆ ಒಂದು ಟಾಂಗ್ ಕೊಟ್ಟಿದ್ದಾರೆ.

Upendra Statement of Rachitha Ram acting

ಹಾಗಾದರೆ ಉಪೇಂದ್ರ ಏನು ಹೇಳಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಉಪೇಂದ್ರ ಅವರ ಜೊತೆ ತುಂಬಾ ಬೋಲ್ಡ್ ನಟನೆ ಮಾಡಿದ ರಚಿತಾ ರಾಮ್ ಅವರು ಬಹುಶ ಸಿನಿಮಾ ಬಿಡುಗಡೆಯಾದಮೇಲೆ ಅದೂ ಇಷ್ಟು ಸುದ್ದಿಯಾಗುತ್ತದೆ ಎಂದು ಅಂದುಕೊಂಡಿರಲಿಲ್ಲವೇನೋ. ರಚಿತಾ ರಾಮ್ ಅವರ ಅಭಿಮಾನಿಗಳು ಮತ್ತು ಕುಟುಂಬದವರು ಸೇರಿದಂತೆ ಎಲ್ಲರೂ ಕೂಡ ನೀವು ಆ ರೀತಿಯಾಗಿ ನಟನೆ ಮಾಡಬಾರದಿತ್ತು ಎಂದು ರಚಿತಾ ರಾಮ್ ಗೆ ತಮ್ಮ ಅಭಿಪ್ರಾಯವನ್ನ ಹೇಳಿದ್ದರು.

ಇನ್ನು ಇದಕ್ಕೆ ಸಂಬಂಧಿಸಿದಂತೆ ರಚಿತಾ ರಾಮ್ ಅವರು ಕೂಡ, ತನ್ನ ತಂದೆಗೆ ಬೇಜಾರಾಗಿದೆ ಎಂದು ಮಾಧ್ಯಮಗಳ ಮುಂದೆ ಕಣ್ಣೀರು ಹಾಕುತ್ತ ತನ್ನ ತಂದೆಗೆ ಕ್ಷಮೆ ಕೇಳಿದ್ದರು.

Upendra Statement of Rachitha Ram acting

ಇನ್ನು ಈಗ ಇದಕ್ಕೆ ಖಡಕ್ ಆಗಿ ಉತ್ತರ ಕೊಟ್ಟಿರುವ ರಿಯಲ್ ಸ್ಟಾರ್ ಉಪೇಂದ್ರ ಅವರು ಏನು ಹೇಳಿದ್ದಾರೆ ಅಂದರೆ, ರಚಿತಾ ರಾಮ್ ಅವರಿಗೆ ಆ ಪಾತ್ರ ಇಷ್ಟ ಇರಲಿಲ್ಲ ಅಂದರೆ ಮೊದಲೇ ಹೇಳಬೇಕಿತ್ತು ಎಂದು ಹೇಳಿದ್ದಾರೆ. ಇನ್ನು ಒತ್ತಾಯಪೂರ್ವಕವಾಗಿ ಯಾರನ್ನು ಅಭಿನಯ ಮಾಡಿ ಎಂದು ಹೇಳಲು ಆಗುವುದಿಲ್ಲ, ಇನ್ನು ಆ ಪಾತ್ರವನ್ನ ಅವರೇ ಬಹಳ ಇಷ್ಟ ಪಟ್ಟು ಮಾಡಿರುವುದರಿಂದ ಸಿನಿಮಾ ಅಷ್ಟು ಚನ್ನಾಗಿ ಬಂದಿದೆ ಎಂದು ಹೇಳಿದ್ದಾರೆ ಉಪೇಂದ್ರ.

ಇನ್ನು ಸಿನಿಮಾ ಇಷ್ಟು ಯಶಸ್ಸು ಕಂಡಮೇಲೆ ಹೀಗೆ ಮಾತನಾಡುವುದು ಸರಿ ಅಲ್ಲ ಮತ್ತು ಇದರಿಂದ ಸಿನೆಮಾಗೆ ತುಂಬಾ ತೊಂದರೆಯಾಗುತ್ತದೆ, ಇಷ್ಟ ಇಲ್ಲ ಅಂದಮೇಲೆ ಆ ಪಾತ್ರ ಮಾಡಬಾರದಿತ್ತು ಎಂದು ಖಡಕ್ ಹೇಳಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ ಅವರು. ಸೇಹಿತರೇ ನಿಮ್ಮ ಪ್ರಕಾರ ಉಪೇಂದ್ರ ಅವರು ಹೇಳಿದ್ದು ಸರಿನಾ ಅಥವಾ ರಚಿತಾ ರಾಮ್ ಹೇಳಿದ್ದು ಸರಿನಾ ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Upendra Statement of Rachitha Ram acting

Please follow and like us:
0
http://karnatakatoday.in/wp-content/uploads/2019/06/Upendra-Statement-of-Rachitha-Ram-acting-1-1024x576.jpghttp://karnatakatoday.in/wp-content/uploads/2019/06/Upendra-Statement-of-Rachitha-Ram-acting-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಇದೆ ಮೊದಲ ಭಾರಿಗೆ ಇಷ್ಟು ಬೋಲ್ಡ್ ಆಗಿ ನಟನೆ ಮಾಡಿ ವೈರಲ್ ಆಗಿರುವ ರಚಿತಾ ರಾಮ್ ಮತ್ತು ಉಪೇಂದ್ರ ಅವರ ವಿಷಯ ಈಗ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಕೆಲವು ದಿನಗಳ ಹಿಂದೆ ನನ್ನ ತಂದೆ ತಾಯಿಗೆ ನಾನಿನ್ನು ಪುಟ್ಟ ಮಗುವಿನಂತೆ ಕಾಣುತ್ತಿದ್ದೇನೆ ಮತ್ತು ನಾನು ಆರೀತಿ ಬೋಲ್ಡ್ ಆಗಿ ನಟನೆ ಮಾಡಬಾರದಿತ್ತು ಮತ್ತು ಇದರಿಂದ ನನ್ನ ತಂದೆಗೆ ತುಂಬಾ ಬೇಸರಾಗಿದೆ ಎಂದು ತನ್ನ ತಂದೆಗೆ ಕ್ಷಮೆ ಕೇಳಿದ್ದರು ರಚಿತಾ...Kannada News