Uttara Karnataka

ಭಾರಿ ಪ್ರವಾಹದಿಂದ ನಲುಗಿ ಹೋಗಿರುವ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಇಡೀ ಕರ್ನಾಟಕವೇ ಸಹಾಯ ಹಸ್ತವನ್ನ ಚಾಚಿದ್ದು ತಮ್ಮ ಕೈಯಲ್ಲಿ ಆದಷ್ಟು ಸಹಾಯವನ್ನ ಮಾಡುತ್ತಿದ್ದಾರೆ. ಇನ್ನು ಕರ್ನಾಟಕದ ಶ್ರೇಷ್ಠ ವ್ಯಕ್ತಿಗಳು ನೆರೆ ಸಂತ್ರಸ್ತರಿಗೆ ಹಣದ ಸಹಾಯ, ವಸತಿ ಮತ್ತು ಆಹಾರದ ವ್ಯವಸ್ಥೆಯನ್ನ ಮಾಡುತ್ತಿದ್ದಾರೆ.

ಇನ್ನು ಉತ್ತರ ಕರ್ನಾಟಕ ಮತ್ತು ಮಲೆನಾಡು ನೆರೆ ಸಂತ್ರಸ್ತರಿಗೆ ಯಾರು ಯಾರು ಎಷ್ಟು ಕೋಟಿ ಹಣವನ್ನ ಮಂಜೂರು ಮಾಡಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಆಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಉತ್ತರ ಕರ್ನಾಟಕ ಭಾರಿ ಮಳೆಯಿಂದ ತತ್ತರಿಯಿಸಿ ಹೋಗಿದ್ದು ಜನಜೀವನವೇ ಅಸ್ತವೆಸ್ತವಾಗಿದೆ ಮತ್ತು ಮೂಲಭೂತ ಸೌಕರ್ಯ ಇಲ್ಲದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ, ಇನ್ನು ಇಂತಹ ಸಮಯದಲ್ಲಿ ನಮ್ಮ ಕನ್ನಡಿಗರು ನೆರೆ ಸಂತ್ರಸ್ತರ ರಕ್ಷಣೆ ಮತ್ತು ಸಹಾಯಕ್ಕೆ ಮುಂದಾಗಿದ್ದು ತಮ್ಮ ಕೈಯಲ್ಲಿ ಆದಷ್ಟು ಸಹಾಯವನ್ನ ಮಾಡುತ್ತಿದ್ದಾರೆ.

Uttara Karnataka

ಕನ್ನಡಿಗರಿಗೆ ಕಷ್ಟ ಎಂದರೆ ಸದಾ ಮುಂದೆ ಬಂದು ಸಹಾಯ ಮಾಡುವವರು ಅಂದರೆ ಅದೂ ಸುಧಾಮೂರ್ತಿ ಅವರು, ಹೌದು ಇನ್ಫೋಸಿಸ್ ನ ಸುಧಾಮೂರ್ತಿ ಅವರು ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಜನರಿಗೆ ಬರೋಬ್ಬರಿ 10 ಕೋಟಿ ರೂಪಾಯಿಗಳ ನೆರವನ್ನ ನೀಡುವುದರ ಜೊತೆಗೆ ತಮ್ಮ ಕೈಯಲ್ಲಿ ಆದಷ್ಟು ಆಹಾರ ಸಾಮಗ್ರಿಗಳು ಮತ್ತು ಇನ್ನಿತರ ವಸ್ತುಗಳನ್ನ ದೊಡ್ಡ ದೊಡ್ಡ ಲಾರಿಗಳಲ್ಲಿ ಸ್ವತಃ ತಾವೇ ಖುದ್ದಾಗಿ ನಿಂತು ಕಳುಹಿಸಿ ಕೊಡುತ್ತಿದ್ದಾರೆ.

ಇನ್ನು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕುರುಕ್ಷೇತ್ರ ಚಿತ್ರ ಬಿಡುಗಡೆಯಾಗಿದ್ದರು ಕೂಡ ತಮ್ಮ ಪ್ರೀತಿ ಪಾತ್ರರು ಮತ್ತು ಸ್ನೇಹಿತರ ಜೊತೆಗೆ ಉತ್ತರ ಕರ್ನಾಟಕ ಜನರ ರಕ್ಷಣೆಗೆ ಮುಂದಾಗಿದ್ದು ಉತ್ತರ ಕರ್ನಾಟಕದ ಜನರಿಗೆ ಅಗತ್ಯ ವಸ್ತುಗಳನ್ನ ಕಳುಹಿಸಿಕೊಡುತ್ತಿದ್ದಾರೆ.

Uttara Karnataka

ಇನ್ನು ಕಿಚ್ಚ ಸುದೀಪ್ ಅಭಿಮಾನಿಗಳು ಮತ್ತು ಪ್ರೀತಿ ಪಾತ್ರರು ಕೂಡ ಉತ್ತರ ಕರ್ನಾಟಕದ ಜನರ ರಕ್ಷಣೆ ಮತ್ತು ಅವರಿಗೆ ಬೇಕಾದ ಅಗತ್ಯ ವಸ್ತುಗಳನ್ನ ಕಳುಹಿಸಿಕೊಡುತ್ತಿದ್ದಾರೆ, ಇನ್ನು ನರೇಂದ್ರ ಮೋದಿ ಕೇಂದ್ರ ಸರ್ಕಾರರು ಕರ್ನಾಟಕ ನೆರೆ ಸಂತ್ರಸ್ತರಿಗಾಗಿ ತಕ್ಷಣಕ್ಕೆ 204 ಕೋಟಿ ರೂಪಾಯಿಗಳನ್ನ ಬಿಡುಗಡೆ ಮಾಡಿದ್ದಾರೆ.

ಇನ್ನು ಮುಖ್ಯ ಮಂತ್ರಿಯಾದ ಯಡಿಯೂರಪ್ಪನವರು ರಾಜ್ಯ ಸರ್ಕಾರದ ವತಿಯಿಂದ 100 ಕೋಟಿ ರೂಪಾಯಿಯನ್ನ ನೆರೆ ಸಂತ್ರಸ್ತರಿಗೆ ಬಿಡುಗಡೆ ಮಾಡಿಲಾಗಿದೆ. ಇನ್ನು ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ತಮ್ಮ ಯಶೋಮಾರ್ಗ ಫೌಂಡೇಶನ್ ನ ಮೂಲಕ ದೊಡ್ಡ ದೊಡ್ಡ ಲಾರಿಗಳಲ್ಲಿ ಆಹಾರ ಪದಾರ್ಥಗಳನ್ನ ಉತ್ತರ ಕರ್ನಾಟಕದ ಜನರಿಗೆ ಕಳುಹಿಸುವ ಕೆಲಸವನ್ನ ಮಾಡುತ್ತಿದ್ದಾರೆ, ಸ್ನೇಹಿತರೆ ನೀವು ಕೂಡ ನೆರೆ ಸಂತ್ರಸ್ತರಿಗೆ ನಿಮ್ಮ ಕೈಯಲ್ಲಿ ಆದಷ್ಟು ಸಹಾಯವನ್ನ ಮಾಡಿ.

Uttara Karnataka

Please follow and like us:
0
http://karnatakatoday.in/wp-content/uploads/2019/08/Uttara-Karnataka-1-1024x576.jpghttp://karnatakatoday.in/wp-content/uploads/2019/08/Uttara-Karnataka-1-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಮಂಗಳೂರುಸುದ್ದಿಜಾಲಭಾರಿ ಪ್ರವಾಹದಿಂದ ನಲುಗಿ ಹೋಗಿರುವ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಇಡೀ ಕರ್ನಾಟಕವೇ ಸಹಾಯ ಹಸ್ತವನ್ನ ಚಾಚಿದ್ದು ತಮ್ಮ ಕೈಯಲ್ಲಿ ಆದಷ್ಟು ಸಹಾಯವನ್ನ ಮಾಡುತ್ತಿದ್ದಾರೆ. ಇನ್ನು ಕರ್ನಾಟಕದ ಶ್ರೇಷ್ಠ ವ್ಯಕ್ತಿಗಳು ನೆರೆ ಸಂತ್ರಸ್ತರಿಗೆ ಹಣದ ಸಹಾಯ, ವಸತಿ ಮತ್ತು ಆಹಾರದ ವ್ಯವಸ್ಥೆಯನ್ನ ಮಾಡುತ್ತಿದ್ದಾರೆ. ಇನ್ನು ಉತ್ತರ ಕರ್ನಾಟಕ ಮತ್ತು ಮಲೆನಾಡು ನೆರೆ ಸಂತ್ರಸ್ತರಿಗೆ ಯಾರು ಯಾರು ಎಷ್ಟು ಕೋಟಿ ಹಣವನ್ನ ಮಂಜೂರು ಮಾಡಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು...Kannada News