Vaishani movie

ಸೀರಿಯಲ್ ನಟಿಸಿ ಮಿಂಚಿದ ನಟಿಯರನ್ನ ಹಾಕಿ ಸಿನಿಮಾ ಮಾಡುವುದು ತುಂಬಾ ಹಿಂದಿನಿಂದಲೂ ಕನ್ನಡ ಸೇರಿ ಇನ್ನು ಅನೇಕ ಭಾಷೆಯ ಚಿತ್ರರಂಗದಲ್ಲಿ ನಡೆಯುತ್ತಾ ಇದೆ.

ಇತ್ತೀಚಿಗೆ ನಮ್ಮ ಕನ್ನಡ ಕಿರುತೆರೆಯಲ್ಲಿ ಇಂಚಿದ ಅಶ್ವಿನಿ ನಕ್ಷತ್ರದ ಮಯ್ಯುರಿ, ಪುಟ್ಟ ಗೌರಿ ಮದುವೆಯ ರಂಜನಿ ರಾಘವನ್, ಲಕ್ಷ್ಮಿ ಬಾರಮ್ಮ ದ ಕವಿತಾ ಗೌಡ ಹೀಗೆ ಸಾಕಷ್ಟು ಕಿರುತೆರೆಯ ನಟಿಯರು ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.

Vaishani movie

ಇನ್ನು ಅದೇ ಖಾತೆಗೆ ಗುಳಿಕೆನ್ನೆ ಚಲುವೆ, ಮುಗುತ್ತಿ ಸುಂದರಿ ಅಗ್ನಿಸಾಕ್ಷಿ ಸೀರಿಯಲ್ ಖ್ಯಾತಿಯ ಸನ್ನಿದಿ ಅಲಿಯಾಸ್ ವೈಷ್ಣವಿ ಸೇರಿಕೊಂಡಿದ್ದಾರೆ, ಅಗ್ನಿಸಾಕ್ಷಿ ಯಲ್ಲಿ ನಟನೆ ಮಾಡಿ ಅಭಿಮಾನಿಗಳನ್ನ ಸಂಪಾದಿಸಿದ ಸನ್ನಿದಿ ದಾರಾವಾಹಿಯನ್ನ ಹೊರತುಪಡಿಸಿ ಒಂದೆರಡು ರಿಯಾಲಿಟಿ ಶೋ ಗಳನ್ನ ಮಾಡಿ ಭೇಷ್ ಎನಿಸಿಕೊಂಡಿದ್ದರು.

ರಿಯಾಲಿಟಿ ಶೋ ಮತ್ತು ಧಾರಾವಾಹಿ ಎರಡನ್ನ ಬ್ಯಾಲೆನ್ಸ್ ಮಾಡಿಕೊಂಡು ಬರುತ್ತಿರುವ ವೈಷ್ಣವಿ ಇದೀಗ ಸಿನಿಮಾದ ನಾಯಕಿಯಾಗಿ ಪ್ರೊಮೋಷನ್, ಹೌದು ಶೂಟಿಂಗ್ ಹಂತದಲ್ಲಿರುವ ಗಿರಿಗಿಟ್ಟಲೆ ಎನ್ನುವ ಹೊಸಬರೇ ಸೇರಿಕೊಂಡು ಮಾಡಿದ ಸಿನಿಮಾದಲ್ಲಿ ವೈಷ್ಣವಿ ನಾಯಕಿಯಾಗಿ ಪಾತ್ರವನ್ನ ಮಾಡುತ್ತಾ ಇದ್ದಾರೆ.

Vaishani movie

ಈ ಸಿನಿಮಾದಲ್ಲಿ ಮಾಡ್ರನ್ ಹುಡುಗಿಯ ಪಾತ್ರದಲ್ಲಿ ವೈಷ್ಣವಿ ಮಿಂಚಲಿದ್ದಾರೆ, ಇದರ ಬಗ್ಗೆ ಮಾತನಾಡಿರುವ ವೈಷ್ಣವಿ ಈ ಸಿನಿಮಾದಲ್ಲಿ ನಾನು ಈಗಿನ ಟ್ರೆಂಡ್ ಗೆ ತಕ್ಕಂತ ಹುಡುಗಿಯ ಪಾತ್ರವನ್ನ ಮಾಡಿದ್ದೇನೆ, ಈ ಪಾತ್ರದಲ್ಲಿ ಅವಳಿಗೆ ಏನು ಸರಿ ಎನ್ನಿಸುತ್ತದೆಯೋ ಅದನ್ನೇ ಮಾಡುತ್ತಾಳೆ, ಯಾರಿಗೂ ಕೇರ್ ಮಾಡ ವ್ಯಕ್ತಿತ್ವ ಅವಳದ್ದು ಎಂದು ತನ್ನ ಪಾತ್ರದ ಬಗ್ಗೆ ಹೇಳಿದ್ದಾರೆ ವೈಷ್ಣವಿ.

Vaishani movie

ಈ ಸಿನಿಮಾದಲ್ಲಿ ರಂಗಾಯಣ ರಘು ತಂದೆಯ ಪಾತ್ರವನ್ನ ಮಾಡುತ್ತಾ ಇದ್ದಾರೆ, ಈ ಚಿತ್ರವನ್ನ ರವಿಕಿರಣ್ ನಿರ್ದೇಶನ ಮಾಡುತ್ತಾ ಇದ್ದಾರೆ, ಚಂದ್ರಶೇಖರ್, ಗುರುರಾಜ್ ಮತ್ತು ಪ್ರದೀಪ್ ರಾಜ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಲಿದ್ದಾರೆ.

ಈಗಾಗಲೇ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯದ ಹಂತದಲ್ಲಿ ಇದೆ, ಗಿರೀಶ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ, ಆದಷ್ಟು ಬೇಗ ಈ ಸಿನಿಮಾ ತೆರೆಗೆ ಅಪ್ಪಳಿಸಲಿದೆ.

Please follow and like us:
0
http://karnatakatoday.in/wp-content/uploads/2018/06/sannnn-1024x576.pnghttp://karnatakatoday.in/wp-content/uploads/2018/06/sannnn-150x150.pngeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಹಣಸೀರಿಯಲ್ ನಟಿಸಿ ಮಿಂಚಿದ ನಟಿಯರನ್ನ ಹಾಕಿ ಸಿನಿಮಾ ಮಾಡುವುದು ತುಂಬಾ ಹಿಂದಿನಿಂದಲೂ ಕನ್ನಡ ಸೇರಿ ಇನ್ನು ಅನೇಕ ಭಾಷೆಯ ಚಿತ್ರರಂಗದಲ್ಲಿ ನಡೆಯುತ್ತಾ ಇದೆ. ಇತ್ತೀಚಿಗೆ ನಮ್ಮ ಕನ್ನಡ ಕಿರುತೆರೆಯಲ್ಲಿ ಇಂಚಿದ ಅಶ್ವಿನಿ ನಕ್ಷತ್ರದ ಮಯ್ಯುರಿ, ಪುಟ್ಟ ಗೌರಿ ಮದುವೆಯ ರಂಜನಿ ರಾಘವನ್, ಲಕ್ಷ್ಮಿ ಬಾರಮ್ಮ ದ ಕವಿತಾ ಗೌಡ ಹೀಗೆ ಸಾಕಷ್ಟು ಕಿರುತೆರೆಯ ನಟಿಯರು ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನು ಅದೇ ಖಾತೆಗೆ ಗುಳಿಕೆನ್ನೆ ಚಲುವೆ, ಮುಗುತ್ತಿ ಸುಂದರಿ ಅಗ್ನಿಸಾಕ್ಷಿ ಸೀರಿಯಲ್ ಖ್ಯಾತಿಯ...Kannada News