ಪ್ರಪಂಚದ ಅತಿ ದೊಡ್ಡ ರೈಲ್ವೆ ನೆಟ್ವರ್ಕ್ ಹೊಂದಿರುವ ದೇಶ ನಮ್ಮದು. ಬೇರೆ ಯಾವ ದೇಶದಲ್ಲೂ ಇರದ ವಿಸ್ತಾರವಾದ ರೈಲ್ವೆ ಸೇವೆ ನಮ್ಮ ದೇಶದಲ್ಲಿದೆ. ದೇಶದ ಪ್ರತಿಯೊಂದು ಹಳ್ಳಿ ಹಳ್ಳಿಯನ್ನು ತಲುಪಿಸುವ ರೈಲ್ವೆ ಮಾರ್ಗವಿದೆ. ಹೀಗಾಗಿ ನಮ್ಮ ದೇಶವನ್ನು ಸುತ್ತಲು ರಾಲೆವೆ ಮಾರ್ಗ ತುಂಬಾ ಕಡಿಮೆ ಖರ್ಚಿನಲ್ಲಿ ಉತ್ಕ್ರಷ್ಟ ಮಟ್ಟದ ಪ್ರಯಾಣ ಬೆಳೆಸಬಹುದಾಗಿದೆ. ಇನ್ನು ಜೀವನದಲ್ಲಿ ಸರಕಾರಿ ಕೆಲಸ ಸಿಕ್ಕು ಅದರಲ್ಲೂ ಕೇಂದ್ರ ಸರ್ಕಾರದ ಕೆಲಸ ಪಡೆಯಬೇಕೆಂಬ ಇಚ್ಛೆ ಇದ್ದವರಿಗೆ ಇದೀಗ ಭಾರತೀಯ ರೈಲ್ವೆ ಭರ್ಜರಿ ಸುದ್ದಿ ನೀಡಿದೆ. ಕೇಂದ್ರ ಸರ್ಕಾರ ಬರೋಬ್ಬರಿ ಒಂದು ಲಕ್ಷದ ಮೂವತ್ತು ಸಾವಿರ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಬಗ್ಗೆ ರೈಲ್ವೆ ನೇಮಕಾತಿ ಮಂಡಳಿ ಅಧಿಕೃತ ಮಾಹಿತಿ ನೀಡಿದ್ದು, ಆರ್‌ಆರ್‌ಬಿ ಎನ್‌ಟಿಪಿಸಿ, ಲೆವೆಲ್‌ 1 ಮತ್ತು ರೈಲ್ವೆ ಸಚಿವಾಲಯದಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ನೀಡಲಾಗಿದೆ. ಈ ಕೆಲಸಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಆರ್‌ಆರ್‌ಬಿ ಎನ್‌ಟಿಸಿ ಹುದ್ದೆಗಳಿಗೆ ಆನ್‌ಲೈನ್‌ ಅರ್ಜಿಗಳು ಫೆಬ್ರವರಿ 28ರಿಂದ ಲಭ್ಯವಾಗಲಿವೆ. ಸಹಾಯಕ ಸಿಬ್ಬಂದಿ ಹುದ್ದೆಗಳಿಗೆ ಮಾರ್ಚ್‌ 4ರಂದು, ಸಚಿವಾಲಯದ ಕಚೇರಿಯಲ್ಲಿರುವ ಖಾಲಿ ಹುದ್ದೆಗಳಿಗೆ ಮಾರ್ಚ್‌ 8ರಂದು ಮತ್ತು ಲೆವೆಲ್‌ 1 ಹುದ್ದೆಗಳಿಗೆ ಮಾರ್ಚ್‌ 12ರಂದು ಆನ್‌ಲೈನ್‌ ಅರ್ಜಿಗಳು ಸಿಗಲಿವೆ.ಆಸಕ್ತ ಅಭ್ಯರ್ಥಿಗಳು ಅಧಿಕೃತ ಮಾಹಿತಿಗಾಗಿ ಆರ್‌ಆರ್‌ಬಿ ಮುಂಬಯಿ, ಅಲಹಾಬಾದ್‌, ಪಟನಾ, ಅಜ್ಮೀರ್‌, ಬೆಂಗಳೂರು, ಚೆನ್ನೈ ಇತ್ಯಾದಿ ಕೇಂದ್ರಗಳ ವೆಬ್‌ಸೈಟ್‌ಗಳನ್ನು ಸಂಪರ್ಕಿಸಬಹುದು.

ಶಿಕ್ಷಣದ ಅರ್ಹತೆ, ವಯೋಮಿತಿ ಇತ್ಯಾದಿ ಮಾಹಿತಿ ಲಭ್ಯವಿವೆ. ಆರ್‌ಆರ್‌ಬಿ ಬೆಂಗಳೂರು ವೆಬ್‌ಸೈಟ್‌ಗೆ ಭೇಟಿ ನೀಡಿ ಇನ್ನೂ ವಿಸ್ತೃತ ಮಾಹಿತಿ ಸಿಕ್ಕಿಲ್ಲ. ಮುಂದಿನ ವಾರದಲ್ಲಿ ಆರ್‌ಆರ್‌ಬಿ ವೆಬ್‌ಸೈಟ್‌ನಲ್ಲಿ ಮಾಹಿತಿ ಸಿಗಲಿವೆ.ರೈಲ್ವೆ ವೆಬ್‌ಸೈಟ್‌ನಲ್ಲಿ ಸಿಇಎನ್‌ 01/2019, ಸಿಇಎನ್‌ 02/2019 ಮತ್ತು ಸಿಇಎನ್‌ 03/2019 ಪ್ರಕಟನೆಗಳು ಕ್ರಮವಾಗಿ ಫೆಬ್ರವರಿ 28, ಮಾರ್ಚ್‌ 4 ಮತ್ತು ಮಾರ್ಚ್‌ 12ರಂದು ಸಿಗಲಿವೆ. ರೈಲ್ವೇನ್ಲಲಿ ಇತ್ತೀಚಿಗೆ ಸಂಬಳದ ಪರಿಷ್ಕರಣೆ ಕೂಡ ಆಗಿದ್ದು ಆಕರ್ಷಕ ಸಂಬಳ ಕೂಡ ದೊರೆಯಲಿದೆ.

ಎನ್‌ಟಿಪಿಸಿ ಅಥವಾ ನಾನ್‌ ಟೆಕ್ನಿಕಲ್‌ ಪಾಪುಲರ್‌ ಕೆಟಗರಿಯಲ್ಲಿ 30,000 ಖಾಲಿ ಹುದ್ದೆಗಳಿವೆ. ಇದರಲ್ಲಿ ಜೂನಿಯರ್‌ ಕ್ಲರ್ಕ್‌ ಅಥವಾ ಟೈಪಿಸ್ಟ್‌, ಅಕೌಂಟ್ಸ್‌ ಕ್ಲರ್ಕ್‌, ಟ್ರೈನಿ ಕ್ಲರ್ಕ್‌, ಟಿಕೆಟ್‌ ಕ್ಲರ್ಕ್‌, ಟ್ರಾಫಿಕ್‌ ಅಸಿಸ್ಟೆಂಟ್‌, ಗೂಡ್ಸ್‌ ಗಾರ್ಡ್‌, ಸೀನಿಯರ್‌ ಕ್ಲರ್ಕ್‌ ಇತ್ಯಾದಿ ಪೋಸ್ಟ್‌ಗಳು ಇವೆ. ಆರ್‌ಆರ್‌ಬಿ ಲೆವೆಲ್‌ 1 ವಿಭಾಗದಲ್ಲಿ 1 ಲಕ್ಷ ಖಾಲಿ ಹುದ್ದೆಗಳಿವೆ. ಈ ಮಾಹಿತಿಯನ್ನು ಬಡ ವಿದ್ಯಾರ್ಥಿಗಳಿಗೆ ತಲುಪಿಸುವ ಜವಾಬ್ದಾರಿ ನಿಮ್ಮದು.

Please follow and like us:
error0
http://karnatakatoday.in/wp-content/uploads/2019/02/indian-railway-1-1024x576.jpghttp://karnatakatoday.in/wp-content/uploads/2019/02/indian-railway-1-150x104.jpgKarnataka Trendingಅಂಕಣಎಲ್ಲಾ ಸುದ್ದಿಗಳುಗ್ಯಾಡ್ಜೆಟ್ಸ್ಪ್ರಪಂಚದ ಅತಿ ದೊಡ್ಡ ರೈಲ್ವೆ ನೆಟ್ವರ್ಕ್ ಹೊಂದಿರುವ ದೇಶ ನಮ್ಮದು. ಬೇರೆ ಯಾವ ದೇಶದಲ್ಲೂ ಇರದ ವಿಸ್ತಾರವಾದ ರೈಲ್ವೆ ಸೇವೆ ನಮ್ಮ ದೇಶದಲ್ಲಿದೆ. ದೇಶದ ಪ್ರತಿಯೊಂದು ಹಳ್ಳಿ ಹಳ್ಳಿಯನ್ನು ತಲುಪಿಸುವ ರೈಲ್ವೆ ಮಾರ್ಗವಿದೆ. ಹೀಗಾಗಿ ನಮ್ಮ ದೇಶವನ್ನು ಸುತ್ತಲು ರಾಲೆವೆ ಮಾರ್ಗ ತುಂಬಾ ಕಡಿಮೆ ಖರ್ಚಿನಲ್ಲಿ ಉತ್ಕ್ರಷ್ಟ ಮಟ್ಟದ ಪ್ರಯಾಣ ಬೆಳೆಸಬಹುದಾಗಿದೆ. ಇನ್ನು ಜೀವನದಲ್ಲಿ ಸರಕಾರಿ ಕೆಲಸ ಸಿಕ್ಕು ಅದರಲ್ಲೂ ಕೇಂದ್ರ ಸರ್ಕಾರದ ಕೆಲಸ ಪಡೆಯಬೇಕೆಂಬ ಇಚ್ಛೆ ಇದ್ದವರಿಗೆ...Film | Devotional | Cricket | Health | India