Varamahalakshmi Festival

ಸ್ನೇಹಿತರೆ ಇಂದು ವರಮಹಾಲಕ್ಷ್ಮಿ ಹಬ್ಬ, ಇಂದು ನೀವು ಕಳಸದಲ್ಲಿ ಈ ವಸ್ತುವನ್ನ ಹಾಕಿ ಪೂಜೆಯನ್ನ ಮಾಡಿದರೆ ಸಾಕ್ಷಾತ್ ಲಕ್ಷ್ಮಿ ದೇವಿಯ ಆಶೀರ್ವಾದ ನಿಮ್ಮ ಮತ್ತು ಮನೆಯವರ ಮೇಲೆ ಇರುತ್ತದೆ. ಹಾಗಾದರೆ ಯಾವ ವಸ್ತುವನ್ನ ಹಾಕಬೇಕು ಮತ್ತು ಪೂಜೆಯನ್ನ ಹೇಗೆ ಮಾಡಬೇಕು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಸ್ನೇಹಿತರೆ ಲಕ್ಷ್ಮಿ ಪೂಜೆಯನ್ನ ಯಾರು ಬೇಕಾದರೂ ಮಾಡಬಾರದು ಆದರೆ ತುಂಬಾ ಆಡಂಬರವಾಗಿ ಪೂಜೆಯನ್ನ ಮಾಡಬೇಡಿ, ಯಾಕೆ ಅಂದರೆ ಒಂದು ಭಾರಿ ಲಕ್ಷ್ಮಿ ದೇವಿಗೆ ಪೂಜೆಗೆ ಬಂದವರ ದೃಷ್ಟಿ ತಗುಲಿದರೆ ಮುಂದೆ ಯಾವತ್ತೂ ನೀವು ಆಡಂಬರವಾಗಿ ಪೂಜೆಯನ್ನ ಮಾಡಲು ಸಾಧ್ಯವಾಗುವುದಿಲ್ಲ.

Varamahalakshmi Festival

ಇನ್ನು ಕೆಲವರು ತುಂಬಾ ಒಡವೆ ಮತ್ತು ಹಣವನ್ನ ಲಕ್ಷ್ಮಿ ದೇವಿಯ ಮುಂದೆ ಇಟ್ಟು ಪೂಜೆಯನ್ನ ಮಾಡುತ್ತಾರೆ ಆದರೆ ಹಾಗೆ ಮಾಡುವುದು ತಪ್ಪು, ಹೌದು ಲಕ್ಷ್ಮಿ ದೇವಿಗೆ ಎಷ್ಟು ಆಭರಣವನ್ನ ತೊಡಿಸಬೇಕೋ ಅಷ್ಟನ್ನ ಮಾತ್ರ ತೊಡಿಸಿ, ಇನ್ನು ಲಕ್ಷ್ಮಿ ದೇವಿಗೆ ಎಷ್ಟು ಒಡವೆಯನ್ನ ಹಾಕುತ್ತಿರೋ ಅಷ್ಟೇ ಒಡವೆಯನ್ನ ಪೂಜೆ ಮಾಡುವ ಹೆಣ್ಣು ಮಕ್ಕಳು ಹಾಕಿಕೊಳ್ಳಬೇಕು.

ಇನ್ನು ಲಕ್ಷ್ಮಿ ದೇವಿಯನ್ನ ಶುದ್ಧ ಮನಸ್ಸಿನಿಂದ ಮತ್ತು ಮಡಿಯಿಂದ ಮಾಡಬೇಕು ಯಾಕೆ ಅಂದರೆ ಲಕ್ಷ್ಮಿ ದೇವಿ ಚಂಚಲೆ, ಇನ್ನು ಲಕ್ಷ್ಮಿ ದೇವಿಗೆ ಮುಖವಾಡವನ್ನ ಹಾಕುವವರು ಕಳಶವನ್ನ ಇಟ್ಟು ಪೂಜೆ ಮಾಡಬೇಕು ಮತ್ತು ಮುಖವಾಡ ಇಲ್ಲದವರು ಕಳಸದ ಮೇಲೆ ತೆಂಗಿನ ಕಾಯಿ ಇಟ್ಟು ಆ ಕಾಯಿಯ ಮೇಲೆ ಲಕ್ಷ್ಮಿ ದೇವಿಯ ಕಣ್ಣು, ಮೂಗು ತುಟಿಯನ್ನ ಬರೆದು ತೆಂಗಿನ ಕಾಯಿಗೆ ಶೃಂಗಾರವನ್ನ ಮಾಡಿ ಸೀರೆಯನ್ನ ಉಡಿಸಿ ಪೂಜೆಯನ್ನ ಮಾಡಬೇಕು.

Varamahalakshmi Festival

ಇನ್ನು ಅಕ್ಕಿಯ ಮೇಲೆ ಕಳಸವನ್ನ ಇಡಬೇಕು, ಇನ್ನು ಕಳಸ ಅಂದರೆ ತಾಮ್ರದ ಬಿಂದಿಗೆ, ಇನ್ನು ಈ ಬಿಂದಿಗೆಗೆ ನೀರನ್ನ ಹಾಕಿ ಮತ್ತು ಅದರ ಅರ್ಧ ಭಾಗದಷ್ಟು ಅಕ್ಕಿಯನ್ನ ಹಾಕಿ ಕಳಸವನ್ನ ಇಡಬೇಕು, ನಂತರ ಆ ಬಿಂದಿಗೆಗೆ ಆರು ಗೋಡಂಬಿ, ಆರು ಕವಡೆ, ಆರು ಗೋಮತಿ ಚಕ್ರ, ಆರು ಬಾದಾಮಿ ಮತ್ತು ಒಂದು ಬೆಳ್ಳಿಯ ನಾಣ್ಯವನ್ನ ಹಾಕಬೇಕು, ಇನ್ನು ಈ ವಸ್ತುಗಳನ್ನ ಹಾಕುವುದರಿಂದ ಅದೃಷ್ಟ ಬರುತ್ತದೆ.

ಇನ್ನು ಆರನ್ನ ಮಾತ್ರ ಯಾಕೆ ಹಾಕಬೇಕು ಅಂದರೆ, ಆರು ಅಂದರೆ ಶುಕ್ರ ಮತ್ತು ಶುಕ್ರ ಅಂದರೆ ಲಕ್ಷ್ಮಿ ದೇವಿ, ಇನ್ನು ಆ ಕಳಸದಲ್ಲಿ ನಿಮ್ಮ ಮನೆಯ ಒಂದು ಚಿಕ್ಕ ಚಿನ್ನದ ಚೂರನ್ನ ಆ ಕಳಸದ ಒಳಗೆ ಹಾಕಬೇಕು, ಮುಗುತ್ತಿ ಆದರೂ ಪರವಾಗಿಲ್ಲ.

ಇನ್ನು ಲಕ್ಷ್ಮಿ ದೇವಿಯ ಪೂಜೆಯನ್ನ ಮಾಡುವಾಗ ಕಡ್ಡಾಯವಾಗಿ ಒಂದು ತಾಳಿಯನ್ನ ಲಕ್ಷ್ಮಿ ದೇವಿಗೆ ಹಾಕಲೇಬೇಕು, ಇನ್ನು ಲಕ್ಷ್ಮಿ ದೇವಿಯ ಪೂಜೆಯನ್ನ ಮಾಡುವ ಮುನ್ನ ಗಣೇಶನ ಪೂಜೆಯನ್ನ ಕಡ್ಡಾಯವಾಗಿ ಮಾಡಲೇಬೇಕು, ಈ ರೀತಿಯಾಗಿ ಪೂಜೆಯನ್ನ ಮಾಡಿದರೆ ಲಕ್ಷ್ಮಿ ದೇವಿ ಸದಾ ನಿಮ್ಮ ಮನೆಯಲ್ಲಿಯೇ ಇರುತ್ತಾಳೆ.

Varamahalakshmi Festival

Please follow and like us:
0
http://karnatakatoday.in/wp-content/uploads/2019/08/Varamahalakhmi-Festival-1024x576.jpghttp://karnatakatoday.in/wp-content/uploads/2019/08/Varamahalakhmi-Festival-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಸ್ನೇಹಿತರೆ ಇಂದು ವರಮಹಾಲಕ್ಷ್ಮಿ ಹಬ್ಬ, ಇಂದು ನೀವು ಕಳಸದಲ್ಲಿ ಈ ವಸ್ತುವನ್ನ ಹಾಕಿ ಪೂಜೆಯನ್ನ ಮಾಡಿದರೆ ಸಾಕ್ಷಾತ್ ಲಕ್ಷ್ಮಿ ದೇವಿಯ ಆಶೀರ್ವಾದ ನಿಮ್ಮ ಮತ್ತು ಮನೆಯವರ ಮೇಲೆ ಇರುತ್ತದೆ. ಹಾಗಾದರೆ ಯಾವ ವಸ್ತುವನ್ನ ಹಾಕಬೇಕು ಮತ್ತು ಪೂಜೆಯನ್ನ ಹೇಗೆ ಮಾಡಬೇಕು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಲಕ್ಷ್ಮಿ ಪೂಜೆಯನ್ನ ಯಾರು...Kannada News