ರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ಜನರಿಗೆ ಬಂಪರ್ ಕೊಡುಗೆಯನ್ನ ನೀಡಿದೆ, ಇನ್ನುಮುಂದೆ ಯಾವುದೇ ಭಾಗದ ಜನರು ಯಾವುದೇ ಪ್ರಮಾಣಪತ್ರಕ್ಕಾಗಿ ಅಲ್ಲಿ ಇಲ್ಲಿ ಅಲಿಯುವ ಅಗತ್ಯ ಇಲ್ಲ ಮತ್ತು ಇದರ ಸಲುವಾಗಿ ರಾಜ್ಯ ಸರ್ಕಾರ ಈಗ ಒಂದು ಮಹತ್ವದ ಕಾರ್ಯಕ್ಕೆ ಸಿದ್ಧವಾಗಿದೆ. ಗ್ರಾಮೀಣ ಭಾಗದ ಜನರು ತಮ್ಮ ಒಂದು ದಿನದ ದುಡಿಮೆಯನ್ನ ಬಿಟ್ಟು ಅಗತ್ಯ ಪತ್ರಗಳಿಗಾಗಿ ಹಲವು ಕಚೇರಿಗಳಿಗೆ ಅಲೆಯಬಾರದು ಅನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಮಹತ್ವದ ತೀರ್ಮಾನವನ್ನ ಕೈಗೊಂಡಿದೆ. ಹಾಗಾದರೆ ಏನದು ಮಹತ್ವದ ತೀರ್ಮಾನ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ರಾಜ್ಯ ಸರ್ಕಾರ ಈ ಮಹತ್ವದ ತೀರ್ಮಾನದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಇತ್ತೀಚಿನ ದಿನಗಳಲ್ಲಿ ಕೆಲವು ಸರ್ಕಾರೀ ಕಚೇರಿಗಳಲ್ಲಿ ಎಲ್ಲಾ ಕೆಲಸಗಳಿಗೆ ಕೂಡ ಹಲವು ಕಾಗದ ಪಾತ್ರಗಳನ್ನ ಕೇಳುತ್ತಿದ್ದಾರೆ ಮತ್ತು ಜನರನ್ನ ಅಲೆದಾಡಿಸುತ್ತಿದ್ದಾರೆ, ಇನ್ನು ಹಳ್ಳಿಗಳಲ್ಲಿ ವಾಸವಿರುವ ಜನರಿಗೆ ಯಾವ ಯಾವ ಪ್ರಮಾಣಪತ್ರಗಳಿಗೆ ಯಾವ ಯಾವ ದಾಖಲೆಗಳನ್ನ ಸಲ್ಲಿಸಬೇಕು ಅನ್ನುವುದರ ಬಗ್ಗೆ ಸಮರ್ಪಕವಾಗಿ ತಿಳಿದಿರುವುದಿಲ್ಲ. ಇನ್ನು ಅದೆಷ್ಟೇ ಜನರು ತಮ್ಮ ಹಳ್ಳಿಯಿಂದ ತುಂಬಾ ದೂರ ಇರುವ ಸರ್ಕಾರೀ ಕಚೇರಿಗಳಿಗೆ ಹೋಗಿ ಅಲ್ಲಿ ಅಗತ್ಯ ದಾಖಲೆಗಳು ಇಲ್ಲದ ಕಾರಣ ಪುನಃ ಮನೆಗೆ ವಾಪಾಸ್ ಬಂದಿರುವುದನ್ನ ನಾವು ಅದೆಷ್ಟೋ ಭಾರಿ ನೋಡಿದ್ದೇವೆ ಮತ್ತು ಇದರಿಂದ ಆ ಜನರ ದಿನಪೂರ್ತಿ ಕೆಲಸಕಾರ್ಯಗಳು ಕೂಡ ಹಾಳಾಗುತ್ತಿದೆ.

Village one scheme

ಇನ್ನು ಈ ಸಮಸ್ಯೆಯನ್ನ ಅರಿತ ರಾಜ್ಯ ಸರ್ಕಾರ ಈಗ ದೊಡ್ಡ ನಿರ್ಧಾರವನ್ನ ಮಾಡಿದೆ, ಹೌದು ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪ್ರಮಾಣಪತ್ರಗಳನ್ನ ಇನ್ನುಮುಂದೆ ಹಳ್ಳಿಗಳಲ್ಲೇ ವಿತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಇನ್ನು ಕರ್ನಾಟಕ ರಾಜ್ಯಾದ್ಯಂತ ಇರುವ ಸೇವೆಗಳಾದ ಕರ್ನಾಟಕದ ಒನ್, ಬೆಂಗಳೂರು ಒನ್, ಗುಲಬರ್ಗಾ ಒನ್ ಸೇವೆಗಳನ್ನ ವಿಲೇಜ್ ಒನ್ ಸೇವೆಯನ್ನಾಗಿ ಆರಂಭಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಇನ್ನು ಇದರ ಮೂಲಕ ಹಳ್ಳಿಯ ಪ್ರತಿಯೊಬ್ಬರಿಗೂ ಕೂಡ ಸರ್ಕಾರದ ಎಲ್ಲಾ ಸೌಲಭ್ಯಗಳನ್ನ ಪಡೆದುಕೊಳ್ಳಲು ಇದು ತುಂಬಾ ಸಹಾಯಕಾರಿ ಆಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಸರ್ಕಾರದ ಈ ನಿರ್ಧಾರದಿಂದ ಜನಸಾಮಾನ್ಯರಿಗೆ ಜಮೀನಿನ ಪಹಣಿ, ಆಧಾರ್ ಕಾರ್ಡ್ ಅಪ್ಡೇಟ್, ರೇಷನ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಸಣ್ಣ ರೈತ ಪ್ರಮಾಣಪತ್ರ, ವಿದ್ಯುತ್ ಬಿಲ್ ಪಾವತಿ ಹೀಗೆ ಅನೇಕ ರೀತಿಯ ಸೇವೆ ಮತ್ತು ಸೌಲಭ್ಯಗಳು ಈ ವಿಲೇಜ್ ಒನ್ ಸೌಲಭ್ಯದ ಮೂಲಕ ಎಲ್ಲಾ ಜನರಿಗೆ ಸಿಗಲಿದೆ. ಸರ್ಕಾರದ ಈ ಕ್ರಮದಿಂದ ಗ್ರಾಮೀಣ ಭಾಗದ ಜನರಿಗೆ ತುಂಬಾ ಸಹಾಯವಾಗಲಿದೆ, ಸ್ನೇಹಿತರೆ ಸರ್ಕಾರ ಈ ನಿಯಮದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬ ಬಡವನಿಗೆ ತಲುಪಿಸಿ.

Village one scheme

Please follow and like us:
error0
http://karnatakatoday.in/wp-content/uploads/2019/11/Village-one-Scheme-1024x576.jpghttp://karnatakatoday.in/wp-content/uploads/2019/11/Village-one-Scheme-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಮಂಗಳೂರುಸುದ್ದಿಜಾಲರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ಜನರಿಗೆ ಬಂಪರ್ ಕೊಡುಗೆಯನ್ನ ನೀಡಿದೆ, ಇನ್ನುಮುಂದೆ ಯಾವುದೇ ಭಾಗದ ಜನರು ಯಾವುದೇ ಪ್ರಮಾಣಪತ್ರಕ್ಕಾಗಿ ಅಲ್ಲಿ ಇಲ್ಲಿ ಅಲಿಯುವ ಅಗತ್ಯ ಇಲ್ಲ ಮತ್ತು ಇದರ ಸಲುವಾಗಿ ರಾಜ್ಯ ಸರ್ಕಾರ ಈಗ ಒಂದು ಮಹತ್ವದ ಕಾರ್ಯಕ್ಕೆ ಸಿದ್ಧವಾಗಿದೆ. ಗ್ರಾಮೀಣ ಭಾಗದ ಜನರು ತಮ್ಮ ಒಂದು ದಿನದ ದುಡಿಮೆಯನ್ನ ಬಿಟ್ಟು ಅಗತ್ಯ ಪತ್ರಗಳಿಗಾಗಿ ಹಲವು ಕಚೇರಿಗಳಿಗೆ ಅಲೆಯಬಾರದು ಅನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಮಹತ್ವದ ತೀರ್ಮಾನವನ್ನ...Film | Devotional | Cricket | Health | India