Vinod Raj and Lilavathi

ಕನ್ನಡ ಸಿನಿಮಾ ಪ್ರೇಕ್ಷಕರು ಕೆಲವು ಹೆಸರುಗಳನ್ನ ಎಂದು ಕೂಡ ಮರೆಯೋದಿಲ್ಲ, ಈ ಸಾಲಿಗೆ ಇಬ್ಬರ ಹೆಸರು ಕೂಡ ಸೇರುತ್ತದೆ ಸ್ನೇಹಿತರೆ, ಅವರು ಬೇರೆ ಯಾರು ಅಲ್ಲ ಅವರೇ ಹಿರಿಯ ನಟಿ ಲೀಲಾವತಿ ಮತ್ತು ಅವರ ಮಗ ವಿನೋದ್ ರಾಜ್.

ವಿನೋದ್ ರಾಜ್ ಅವರು ತಾಯಿ ಲೀಲಾವತಿ ಅವರ ಜೊತೆ ನೆಲಮಂಗಲದಲ್ಲಿ ತೋಟಗಳನ್ನ ನೋಡಿಕೊಂಡು ರೈತರಾಗಿ ಹಲವು ಬೆಳೆಗಳನ್ನ ಬೆಳೆಯುತ್ತ ತಮ್ಮ ಜೀವನವನ್ನ ಸಾಗಿಸುತ್ತಿದ್ದಾರೆ.

Vinod Raj and Lilavathi

ಸದ್ಯ ವಿನೋದ್ ರಾಜ್ ಯಾವ ಚಿತ್ರಗಳಲ್ಲೂ ಕೂಡ ಅಭಿನಯ ಮಾಡುತ್ತಿಲ್ಲ, ವಿನೋದ್ ರಾಜ್ ಅವರ ಜೋವನದಲ್ಲಿ ಮೊನ್ನೆ ನಡೆಯಬಾರದಾದ ಒಂದು ಘಟನೆ ನಡೆದಿದೆ, ಹೌದು ಕಳೆದ ಶುಕ್ರವಾರ ವಿನೋದ್ ರಾಜ್ ತಮ್ಮ ತೋಟದಲ್ಲಿ ಕೆಲಸ ಮಾಡುವ ಕೂಲಿ ಆಳುಗಳಿಗೆ ಸಂಬಳ ನೀಡುವ ಸಲುವಾಗಿ ಬ್ಯಾಂಕ್ ಗೆ ಹೋಗಿ ಒಂದು ಲಕ್ಷ ರೂಪಾಯಿ ಹಣವನ್ನ ಡ್ರಾ ಮಾಡಿಕೊಂಡು ಮನೆಗೆ ವಾಪಾಸ್ ಆಗುತ್ತಿದ್ದರು.

ಹೀಗೆ ಹಣವನ್ನ ತಗೆದುಕೊಂಡು ಬರುವಾಗ ರಸ್ತೆ ಮದ್ಯದಲ್ಲಿ ವಿನೋದ್ ರಾಜ್ ಅವರ ಕಾರ್ ಟೈಯರ್ ಪಂಚರ್ ಆಗಿದೆ, ಆ ಸಮಯದಲ್ಲಿ ಅಲ್ಲಿಗೆ ಬಂದ ಇಬ್ಬರು ಹುಡುಗರು ಬಂದಿದ್ದಾರೆ, ಅದರಲ್ಲಿ ಒಬ್ಬ ಹುಡುಗ ವಿನೋದ್ ರಾಜ್ ಅವರೇ ನಾನು ನಿಮ್ಮ ಅಭಿಮಾನಿ ಎಂದು ಪರಿಚಯ ಮಾಡಿಕೊಂಡು ವಿನೋದ್ ರಾಜ್ ಅವರ ಬಳಿ ಚನ್ನಾಗಿ ಮಾತನಾಡತೊಡಗಿದ್ದಾನೆ.

Vinod Raj and Lilavathi

ಈ ಸಮಯದಲ್ಲಿ ವಿನೋದ್ ರಾಜ್ ಕೂಡ ಆತನ ಬಳಿ ಮಾತನಾಡುತ್ತ ತನ್ನ ಕಾರಿನ ಕಡೆ ಗಮನ ಕೊಡುವುದನ್ನ ಮರೆತಿದ್ದಾರೆ, ಇದೆ ಸಮಯವನ್ನ ಉಪಯೋಗಿಸಿಕೊಂಡ ಇನ್ನೊಬ್ಬ ಹುಡುಗ ಕಾರಿನಲ್ಲಿ ಇದ್ದ ಒಂದು ಲಕ್ಷ ರೂಪಾಯಿಯನ್ನ ಕಳ್ಳತನ ಮಾಡಿಕೊಡನು ಓಡಿಹೋಗಿದ್ದಾನೆ.

ಸ್ವಲ್ಪ ಸಮಯದ ನಂತರ ವಿನೋದ್ ರಾಜ್ ತನ್ನ ಕಾರಿನಲ್ಲಿ ಇಟ್ಟಿದ್ದ ಹಣವನ್ನ ನೋಡಲು ಹೋದಾಗ ಹಣ ಕಳ್ಳತನವಾಗಿರುವುದು ತಿಳಿದಿದೆ, ತುಂಬಾ ಕಷ್ಟದಿಂದ ಕೆಲಸದವರಿಗೆ ಎಂದು ಕೂಡಿ ಹಾಕಿದ್ದ ಹಣವನ್ನ ಕಳೆದುಕೊಂಡು ವಿನೋದ್ ರಾಜ್ ಗೆ ತುಂಬಾ ಬೇಸರವಾಗಿದೆ.

ಕೂಡಲೇ ನೆಲಮಂಗಲ ಠಾಣೆಗೆ ಹೋಗಿ ವಿನೋದ್ ರಾಜ್ ಕಳ್ಳರ ವಿರುದ್ಧ ದೂರನ್ನ ನೀಡಿದ್ದಾರೆ, ಏನೇ ಆಗಲಿ ವಿನೋದ್ ರಾಜ್ ಅವರಿಗೆ ಹೀಗೆ ಆಗಬಾರದಿತ್ತು ಎಂದು ಹೇಳುತ್ತಾ ಆದಷ್ಟು ಬೇಗ ಕಳೆದುಕೊಂಡಿರುವ ಹಣ ಸಿಗಲಿ ಎಂದು ನಾವೆಲ್ಲ ಆಶಿಸೋಣ, ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

 

Vinod Raj and Lilavathi

Please follow and like us:
0
http://karnatakatoday.in/wp-content/uploads/2018/10/vinod-raj-and-lilavathi-1-1024x576.jpghttp://karnatakatoday.in/wp-content/uploads/2018/10/vinod-raj-and-lilavathi-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಹಣಕನ್ನಡ ಸಿನಿಮಾ ಪ್ರೇಕ್ಷಕರು ಕೆಲವು ಹೆಸರುಗಳನ್ನ ಎಂದು ಕೂಡ ಮರೆಯೋದಿಲ್ಲ, ಈ ಸಾಲಿಗೆ ಇಬ್ಬರ ಹೆಸರು ಕೂಡ ಸೇರುತ್ತದೆ ಸ್ನೇಹಿತರೆ, ಅವರು ಬೇರೆ ಯಾರು ಅಲ್ಲ ಅವರೇ ಹಿರಿಯ ನಟಿ ಲೀಲಾವತಿ ಮತ್ತು ಅವರ ಮಗ ವಿನೋದ್ ರಾಜ್. ವಿನೋದ್ ರಾಜ್ ಅವರು ತಾಯಿ ಲೀಲಾವತಿ ಅವರ ಜೊತೆ ನೆಲಮಂಗಲದಲ್ಲಿ ತೋಟಗಳನ್ನ ನೋಡಿಕೊಂಡು ರೈತರಾಗಿ ಹಲವು ಬೆಳೆಗಳನ್ನ ಬೆಳೆಯುತ್ತ ತಮ್ಮ ಜೀವನವನ್ನ ಸಾಗಿಸುತ್ತಿದ್ದಾರೆ. ಸದ್ಯ ವಿನೋದ್ ರಾಜ್ ಯಾವ ಚಿತ್ರಗಳಲ್ಲೂ ಕೂಡ...Kannada News