ಭಾರತ ತಂಡದ ಕಪ್ತಾನ ವಿರಾಟ್ ಕೊಹ್ಲಿ ಇದೀಗ ಮತ್ತೆ ಭಾರಿ ಸುದ್ದಿಯಲ್ಲಿದ್ದಾರೆ , ಹೌದು ಕೇಂದ್ರ ಸರ್ಕಾರದ ಯೋಜನೆಯೊಂದಕ್ಕೆ ಕೊಹ್ಲಿಗೆ ಕೇಂದ್ರದ ಮಂತ್ರಿಯೊಬ್ಬರು ಟ್ವೀಟ್ ಮಾಡಿ ಸಪ್ಪೋರ್ಟ್ ಮಾಡುವಂತೆ ಕೇಳಿದ್ದರು.

ಇದಕ್ಕೆ ಒಪ್ಪಿಗೆ ಸಮ್ಮತಿಸಿದ ಕೊಹ್ಲಿ   ಯುವಕರ ಆರೋಗ್ಯ , ವ್ಯಾಯಾಮ , ಮತ್ತು ಶಾರೀರಿಕ ಬಲವರ್ಧನೆಗೆ ಸಾಥ್ ನೀಡುವ ಯೋಜನೆಗೆ ತನ್ನದೇ ಆದ ವ್ಯಾಯಾಮದ ಒಂದು ವಿಡಿಯೋ ಮಾಡಿ ಟ್ವೀಟ್ ಮಾಡಿದ್ದಾರೆ. ಆಶ್ಚರ್ಯ ಏನೆಂದರೆ ಈ ವಿಡಿಯೋದಲ್ಲಿ ಅವರು ಪ್ರಧಾನಿ ಮೋದಿಗೆ ನೀವು ಕೂಡ  ವ್ಯಾಯಾಮ ಮಾಡುವ ವಿಡಿಯೋ ಶೀಘ್ರದಲ್ಲೇ ಕಳುಹಿಸಿ ಎಂದಿದ್ದಾರೆ.

ಪ್ರಧಾನಿ ಅಷ್ಟೇ ಅಲ್ಲದೆ ಮಹೇಂದ್ರ ಸಿಂಗ್ ಧೋನಿ ಮತ್ತು ತನ್ನ ಹೆಂಡತಿ ಅನುಷ್ಕಳಿಗೂ ಕೂಡ ಟ್ಯಾಗ್ ಮಾಡುವ ಮೂಲಕ ಚಾಲೆಂಜ್ ಸ್ವೀಕರಿಸುವಂತೆ ತಿಳಿಸಿದ್ದಾರೆ.

ಇನ್ನು ನಮ್ಮ ಪ್ರಧಾನಿ ಕೂಡ ಮರಳಿ ಟ್ವೀಟ್ ಮಾಡುವ ಮೂಲಕ ನಿಮ್ಮ ಚಾಲೆಂಜ್ ಸ್ವೀಕರಿಸಿದ್ದೇನೆ ಕೊಹ್ಲಿ ಶೀಘ್ರದಲ್ಲೇ ನನ್ನ ಫಿಟ್ನೆಸ್ ವಿಡಿಯೋ ಕಳುಹಿಸುತ್ತೇನೆ ಎಂದಿದ್ದಾರೆ. ಮಹಿ ಮತ್ತು ಅನುಷ್ಕಾಳ ಉತ್ತರ ಇನ್ನು ಬಂದಿಲ್ಲ. ಅದೇನೇ ಇರಲಿ ಕೇಂದ್ರದ ಯುವ ಸಬಲೀಕರಣ ಯೋಜನೆಗೆ ಕೊಹ್ಲಿ ಸ್ಪಂದಿಸಿದ್ದು ಖುಷಿ ತಂದಿದೆ.

Please follow and like us:
0
http://karnatakatoday.in/wp-content/uploads/2018/05/kohli-1024x576.pnghttp://karnatakatoday.in/wp-content/uploads/2018/05/kohli-150x150.pngeditorಅಂಕಣಆರೋಗ್ಯಎಲ್ಲಾ ಸುದ್ದಿಗಳುಕ್ರಿಕೆಟ್ಭಾರತ ತಂಡದ ಕಪ್ತಾನ ವಿರಾಟ್ ಕೊಹ್ಲಿ ಇದೀಗ ಮತ್ತೆ ಭಾರಿ ಸುದ್ದಿಯಲ್ಲಿದ್ದಾರೆ , ಹೌದು ಕೇಂದ್ರ ಸರ್ಕಾರದ ಯೋಜನೆಯೊಂದಕ್ಕೆ ಕೊಹ್ಲಿಗೆ ಕೇಂದ್ರದ ಮಂತ್ರಿಯೊಬ್ಬರು ಟ್ವೀಟ್ ಮಾಡಿ ಸಪ್ಪೋರ್ಟ್ ಮಾಡುವಂತೆ ಕೇಳಿದ್ದರು. ಇದಕ್ಕೆ ಒಪ್ಪಿಗೆ ಸಮ್ಮತಿಸಿದ ಕೊಹ್ಲಿ   ಯುವಕರ ಆರೋಗ್ಯ , ವ್ಯಾಯಾಮ , ಮತ್ತು ಶಾರೀರಿಕ ಬಲವರ್ಧನೆಗೆ ಸಾಥ್ ನೀಡುವ ಯೋಜನೆಗೆ ತನ್ನದೇ ಆದ ವ್ಯಾಯಾಮದ ಒಂದು ವಿಡಿಯೋ ಮಾಡಿ ಟ್ವೀಟ್ ಮಾಡಿದ್ದಾರೆ. ಆಶ್ಚರ್ಯ ಏನೆಂದರೆ ಈ ವಿಡಿಯೋದಲ್ಲಿ ಅವರು ಪ್ರಧಾನಿ...Kannada News