ಸ್ನೇಹಿತರೆ ಬಿಗ್ ಬಾಸ್ ಮನೆಯ ವಾಸ ಮುಗಿದಿದೆ ಮತ್ತು ಇನ್ನೇನಿದ್ದರೂ ಬಿಗ್ ಬಾಸ್ ಮನೆಯಲ್ಲಿ ಪಡೆದುಕೊಂಡ ಹೆಸರನ್ನ ಸಮರ್ಥವಾಗಿ ಬಳಸಿಕೊಂಡು ತಮ್ಮ ಜೀವನದ ಪಯಣವನ್ನ ಆರಂಭ ಮಾಡಬೇಕಾಗಿದೆ ಬಿಗ್ ಬಾಸ್ ಸ್ಪರ್ಧಿಗಳು. ಇನ್ನು ಈ ಭಾರಿಯ ಬಿಗ್ ಬಾಸ್ ನಲ್ಲಿ ಪ್ರತಿಯೊಬ್ಬ ಸ್ಪರ್ಧಿ ಕೂಡ ಒಂದೊಂದು ರೀತಿಯಲ್ಲಿ ಜನರ ಮೆಚ್ಚುಗೆಗೆ ಪಾತ್ರರಾದರು, ಇನ್ನು ಬಿಗ್ ಬಾಸ್ ನಲ್ಲಿ ಕೊನೆಯದಾಗಿ ಶೈನ್ ಶೆಟ್ಟಿ ಅವರು ಗೆಲುವಿನ ಪಟ್ಟವನ್ನ ಪಡೆದುಕೊಂಡರೆ ಕುರಿ ಪ್ರತಾಪ್ ಅವರು ರನ್ನರ್ ಅಪ್ ಪಟ್ಟವನ್ನ ಪಡೆದುಕೊಂಡರು. ಇನ್ನು ಈ ಭಾರಿಯ ಬಿಗ್ ಬಾಸ್ ಗೆಲ್ಲಲೇಬೇಕು ಎಂದು ಸಾಕಷ್ಟು ಶ್ರಮಪಟ್ಟಿದ್ದ ವಾಸುಕಿ ವೈಭವ್ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಬಿಗ್ ಬಾಸ್ ಎಲ್ಲಾ ಟಾಸ್ಕ್ ಗಳಲ್ಲಿ ಯಾವಾಗಲೂ ನಂಬರ್ ಒನ್ ಆಗಿದ್ದ ವಾಸುಕಿ ವೈಭವ್ ಅವರಿಗೆ ಜನರಿಂದ ಜಾಸ್ತಿ ವೋಟ್ ಸಿಗದ ಕಾರಣ ಅವರು ಮೂರನೇ ಸ್ಥಾನವನ್ನ ಪಡೆದುಕೊಳ್ಳಬೇಕಾಯಿತು. ಇನ್ನು ಜನರ ಮೆಚ್ಚುಗೆಯನ್ನ ಗಳಿಸಿಕೊಂಡು ಮೂರನೇ ಸ್ಥಾನವನ್ನ ತನ್ನ ಹೆಗಲಿಗೆ ಏರಿಸಿಕೊಂಡ ವಾಸುಕಿ ವೈಭವ್ ಅವರಿಗೆ ಬಿಗ್ ಬಾಸ್ ಕಡೆಯಿಂದ ಎಷ್ಟು ಸಂಭಾವನೆ ಸಿಕ್ಕಿದೆ ಎಂದು ತಿಳಿದರೆ ನೀವು ಕೂಡ ಆಶ್ಚರ್ಯ ಪಡುತ್ತೀರಾ. ಹಾಗಾದರೆ ಬಿಗ್ ಬಾಸ್ ಕಡೆಯಿಂದ ವಾಸುಕಿ ವೈಭವ್ ಅವರಿಗೆ ಎಷ್ಟು ಸಂಭಾವನೆ ಸಿಕ್ಕಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ ನಮಗೆ ತಿಳಿಸಿ.

Vsuki Vaibhav Salary in Bigg Boss

ಸ್ನೇಹಿತರೆ ಈ ಭಾರಿಯ ಬಿಗ್ ಬಾಸ್ ಶೈನ್ ಶೆಟ್ಟಿ ಗೆದ್ದಿರಬಹುದು ಮತ್ತು ಕುರಿ ಪ್ರತಾಪ್ ಅವರು ರನ್ನಪ್ ಅಪ್ ಆಗಿರಬಹುದು, ಆದರೆ ಟಾಸ್ಕ್ ಗಳ ವಿಚಾರದಲ್ಲಿ ನೋಡುವುದಾದರೆ ಎಲ್ಲಾ ಟಾಸ್ಕ್ ಗಳಲ್ಲಿ ವಾಸುಕಿ ವೈಭವ್ ಅವರು ನಂಬರ್ ಒನ್ ಆಗಿದ್ದರು ಮತ್ತು ಟಾಸ್ಕ್ ಮಾತ್ರವಲ್ಲದೆ ಮನರಂಜನೆ ಕೊಡುವುದರಲ್ಲಿ ಕೂಡ ವಾಸುಕಿ ವೈಭವ್ ನಂಬರ್ ಒನ್ ಆಗಿದ್ದರು. ಇನ್ನು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಸದಾ ಒಂದೊಂದು ವಿಭಿನ್ನವಾದ ಹಾಡುಗಳನ್ನ ಕಂಪೋಸ್ ಮಾಡಿ ಜನರಿಗೆ ಮನರಂಜನೆ ಕೊಡುತ್ತಿದ್ದರು ವಾಸುಕಿ ವೈಭವ್ ಅವರು, ಇನ್ನು ವಾಸುಕಿ ವೈಭವ್ ಅವರ ಎಲ್ಲಾ ಹಾಡುಗಳು ಹೊರಗಡೆ ಭಾರಿ ವೈರಲ್ ಆಗಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ವಾಸುಕಿ ವೈಭವ್ ಅವರ ಹಾಡು ಕಿಚ್ಚ ಸುದೀಪ್ ಅವರಿಗೂ ತುಂಬಾ ಇಷ್ಟ ಆಗಿದ್ದು ನನ್ನ ಮುಂದಿನ ಯಾವುದಾದರೂ ಚಿತ್ರದಲ್ಲಿ ನಿಮ್ಮನ್ನ ಸಂಗೀತ ನಿರ್ದೇಶಕರನ್ನಾಗಿ ಮಾಡಿಕೊಳ್ಳುತ್ತೇವೆ ಎಂದು ವಾಸುಕಿ ವೈಭವ್ ಅವರಿಗೆ ದೊಡ್ಡ ಆಫರ್ ಕೂಡ ಕೊಟ್ಟರು.

ಇನ್ನು 16 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದ ವಾಸುಕಿ ವೈಭವ್ ಅವರಿಗೆ ವಾರಕ್ಕೆ 30 ಸಾವಿರ ರೂಪಾಯಿಯಂತೆ 16 ವಾರಕ್ಕೆ 480000 ಸಾವಿರ ರೂಪಾಯಿ ಸಂಭಾವನೆಯನ್ನ ಕೂಡ ನೀಡಲಾಗಿದೆ ಮತ್ತು ಇದರ ಜೊತೆಗೆ ಫೈನಲ್ ಪ್ರವೇಶ ಪಡೆದಿದ್ದಕ್ಕೆ 1 ಲಕ್ಷ ರೂಪಾಯಿಯಂತೆ ಒಟ್ಟು 580000 ಸಾವಿರ ರೂಪಾಯಿಯನ್ನ ವಾಸುಕಿ ವೈಭವ್ ಅವರಿಗೆ ಸಂಭಾವನೆಯ ರೂಪದಲ್ಲಿ ನೀಡಲಾಗಿದೆ. ಬಿಗ್ ಬಾಸ್ ನಿಂದ ವಾಸುಕಿ ವೈಭವ್ ಅವರಿಗೆ ಅಷ್ಟಾಗಿ ಸಂಭಾವನೆ ಸಿಗದೇ ಇದ್ದರೂ ಕೂಡ ವಾಸುಕಿ ವೈಭವ್ ಅವರ ಟ್ಯಾಲೆಂಟ್ ಇಡೀ ಕರ್ನಾಟಕಕ್ಕೆ ತಿಳಿದಿದ್ದು ಇದು ಅವರ ಮುಂದಿನ ಜೀವನಕ್ಕೆ ಸಹಾಯ ಮಾಡಲಿದೆ ಅನ್ನುವುದು ನಮ್ಮ ಅಭಿಪ್ರಾಯ, ಸ್ನೇಹಿತರೆ ಈ ಭಾರಿಯ ಬಿಗ್ ಬಾಸ್ ಯಾರು ವಿನ್ ಆಗಬೇಕಿತ್ತು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Vsuki Vaibhav Salary in Bigg Boss

Please follow and like us:
error0
http://karnatakatoday.in/wp-content/uploads/2020/02/Vsuki-Vaibhav-Salary-in-Bigg-Boss-1024x576.jpghttp://karnatakatoday.in/wp-content/uploads/2020/02/Vsuki-Vaibhav-Salary-in-Bigg-Boss-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಸ್ನೇಹಿತರೆ ಬಿಗ್ ಬಾಸ್ ಮನೆಯ ವಾಸ ಮುಗಿದಿದೆ ಮತ್ತು ಇನ್ನೇನಿದ್ದರೂ ಬಿಗ್ ಬಾಸ್ ಮನೆಯಲ್ಲಿ ಪಡೆದುಕೊಂಡ ಹೆಸರನ್ನ ಸಮರ್ಥವಾಗಿ ಬಳಸಿಕೊಂಡು ತಮ್ಮ ಜೀವನದ ಪಯಣವನ್ನ ಆರಂಭ ಮಾಡಬೇಕಾಗಿದೆ ಬಿಗ್ ಬಾಸ್ ಸ್ಪರ್ಧಿಗಳು. ಇನ್ನು ಈ ಭಾರಿಯ ಬಿಗ್ ಬಾಸ್ ನಲ್ಲಿ ಪ್ರತಿಯೊಬ್ಬ ಸ್ಪರ್ಧಿ ಕೂಡ ಒಂದೊಂದು ರೀತಿಯಲ್ಲಿ ಜನರ ಮೆಚ್ಚುಗೆಗೆ ಪಾತ್ರರಾದರು, ಇನ್ನು ಬಿಗ್ ಬಾಸ್ ನಲ್ಲಿ ಕೊನೆಯದಾಗಿ ಶೈನ್ ಶೆಟ್ಟಿ ಅವರು ಗೆಲುವಿನ ಪಟ್ಟವನ್ನ ಪಡೆದುಕೊಂಡರೆ ಕುರಿ...Film | Devotional | Cricket | Health | India