ಸಾಮಾನ್ಯವಾಗಿ ಸಂಸಾರ ಜೀವನದಲ್ಲಿ ಗಂಡ ಮತ್ತು ಹೆಂಡತಿ ಇಬ್ಬರೂ ಕೂಡ ಸುಖ ದುಃಖಕ್ಕೆ ಸಂಬಂದಿಸಿದ ಎಲ್ಲಾ ವಿಷಯಗಳನ್ನ ಹಂಚಿಕೊಳ್ಳಬೇಕು ಎಂದು ನಮ್ಮ ಹಿರಿಯರು ಹೇಳುತ್ತಾರೆ ಮತ್ತು ಇದು ಬಹಳ ಒಳ್ಳೆಯ ಪದ್ಧತಿ ಕೂಡ ಹೌದು, ಹೀಗೆ ಮಾಡುವುದರಿಂದ ಸಂಸಾರ ಜೀವನ ಬಹಳ ಸಂತೋಷಮಯವಾಗಿ ಸಾಗುತ್ತದೆ. ಇನ್ನು ಪ್ರತಿಯೊಬ್ಬರೂ ಕೂಡ ಕೆಲವು ವಿಷಯಗಳನ್ನ ಯಾರ ಬಳಿ ಕೂಡ ಹಂಚಿಕೊಳ್ಳಲು ಇಷ್ಟ ಪಡುವುದಿಲ್ಲ ಮತ್ತು ಅರ್ಧಂಗಿಯ ಜೊತೆ ಕೂಡ ಹಂಚಿಕೊಳ್ಳಲು ಇಷ್ಟ ಪಡುವುದಿಲ್ಲ. ಇನ್ನು ಹೆಚ್ಚಾಗಿ ಹೆಂಗಸರು ಕೆಲವು ವಿಷಯಗಳನ್ನ ಯಾರ ಬಳಿ ಹೇಳಿಕೊಳ್ಳಲು ಇಷ್ಟ ಪಡುವುದಿಲ್ಲ ಮತ್ತು ಅವರು ಆ ವಿಷಯಗಳನ್ನ ರಹಸ್ಯವಾಗಿ ಇಟ್ಟುಕೊಳ್ಳುವುದರ ಹಿಂದೆ ದೊಡ್ಡ ದೊಡ್ಡ ಕಾರಣಗಳು ಕೂಡ ಇರುತ್ತದೆ. ಇನ್ನು ಹೆಂಡತಿಯರು ಕೆಲವು ವಿಷಯಗಳನ್ನ ಗಂಡನ ಜೊತೆ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ, ಸ್ನೇಹಿತರೆ ಹೆಂಗಸರು ತಮ್ಮ ಗಂಡನ ಜೊತೆ ಹೇಳಿಕೊಳ್ಳಲು ಇಷ್ಟಪಡದ ಐದು ವಿಷಯಗಳ ಬಗ್ಗೆ ನಾವು ಈಗ ನಿಮಗೆ ಹೇಳುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಮೊದಲ ಪ್ರೀತಿ, ಹೌದು ಸ್ನೇಹಿತರೆ ಪ್ರತಿಯೊಬ್ಬ ಹೆಣ್ಣು ಕೂಡ ತನ್ನ ಮಕ್ಕಳು ಮತ್ತು ಕುಟುಂಬದ ಜೊತೆ ಎಷ್ಟೇ ಸಂತೋಷವಾಗಿ ಇದ್ದರೂ ಕೂಡ ಅವರ ಮನಸ್ಸಿನಲ್ಲಿ ಇರುವ ಮೊದಲ ಪ್ರೀತಿಯನ್ನ ಯಾರ ಬಳಿ ಕೂಡ ಹೇಳಿಕೊಳ್ಳುವುದಿಲ್ಲ ಮತ್ತು ಅದನ್ನ ಮನಸ್ಸಿನಲ್ಲಿ ಹಾಗೆ ಇಟ್ಟುಕೊಂಡಿರುತ್ತಾಳೆ ಹೆಣ್ಣು. ಸಂಸಾರದಲ್ಲಿ ಈ ವಿಷಯ ಮುಳುವಾಗಬಹುದು ಅನ್ನುವ ಕಾರಣಕ್ಕೆ ಯಾವುದೇ ಹೆಣ್ಣು ಕೂಡ ತನ್ನ ಮೊದಲ ಪ್ರೀತಿಯ ವಿಷಯವನ್ನ ತನ್ನ ಗಂಡ ಮತ್ತು ಯಾರ ಬಳಿ ಕೂಡ ಹೇಳಿಕೊಳ್ಳುವುದಿಲ್ಲ, ತನ್ನ ಗಂಡನ ಮೇಲೆ ಇಟ್ಟುಕೊಂಡಿರುವ ಪ್ರೀತಿ ಅವಳನ್ನ ಹೇಳದಂತೆ ತಡೆಯುತ್ತದೆ. ಇನ್ನು ಎರಡನೆಯದಾಗಿ ಗಂಡ ಹೆಂಡತಿಯರ ಬಳಿ ಅಲ್ಪ ಸ್ವಲ್ಪ ಗಲಾಟೆಗಳು ನಡೆಯುತ್ತಲೇ ಇರುತ್ತದೆ ಮತ್ತು ಆ ಗಲಾಟೆಗಳು ಭೇದ ಭಾವಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ.

Wife secret husband

ಇನ್ನು ಇಂತಹ ಪರಿಸ್ಥಿತಿಯಲ್ಲಿ ಯಾರಾದರೂ ಒಬ್ಬರು ಸೋತರೆ ಒಳ್ಳೆಯದು. ಇನ್ನು ಇಂತಹ ಸಮಯದಲ್ಲಿ ಹೆಂಡತಿಯರು ತನಗೆ ಇಷ್ಟ ಇಲ್ಲದೆ ಇದ್ದರೂ ಕೂಡ ಗಂಡನ ಜೊತೆ ಜಗಳ ಬೇಡ ಎಂದು ಗಂಡನ ಮಾತಿಗೆ ಬೆಲೆಯನ್ನ ಕೊಡುತ್ತಾರೆ, ಆದರೆ ಅದೂ ಅವಳಿಗೆ ಇಷ್ಟ ಇರುವುದಿಲ್ಲ ಮತ್ತು ಗಂಡು ಮಕ್ಕಳಾದ ನಾವೇ ಅದನ್ನ ಅರ್ಥ ಮಾಡಿಕೊಳ್ಳಬೇಕು. ಇನ್ನು ಮೂರನೆಯದಾಗಿ ಹೆಂಗಸರು ಅವರಿಗಿರುವ ಅನಾರೋಗ್ಯವನ್ನ ಗಂಡಸರ ಬಳಿ ಹೇಳಿಕೊಳ್ಳುವುದಿಲ್ಲ ಮತ್ತು ಹೀಗೆ ಮಾಡುವುದಕ್ಕೆ ಅವರ ಬಳಿ ಬಲವಾದ ಕಾರಣ ಕೂಡ ಇರುತ್ತದೆ. ಚಿಕ್ಕ ಚಿಕ್ಕ ವಿಷಯಗಳಿಗೆ ಗಂಡನಿಗೆ ಒತ್ತಡವನ್ನ ಕೊಡಬಾರದು ಅನ್ನುವ ಉದ್ದೇಶದಿಂದ ಮತ್ತು ತನಗೆ ಇರುವ ಸಮಸ್ಯೆಯಿಂದ ಗಂಡ ಗಾಬರಿಯಾಗುತ್ತಾನೆ ಅನ್ನುವ ಉದ್ದೇಶದಿಂದ ಗಂಡನ ಬಳಿ ಯಾವುದೇ ವಿಷಯವನ್ನ ಹೇಳಿಕೊಳ್ಳುವುದಿಲ್ಲ.

ಇನ್ನು ನಾಲ್ಕನೆಯದಾಗಿ, ಪ್ರತಿಯೊಬ್ಬ ಹೆಣ್ಣಿಗೂ ಒಂದು ಚಿಕ್ಕ ಅಭ್ಯಾಸ ಇದ್ದೆ ಇರುತ್ತದೆ, ಹೌದು ಗಂಡನಿಗೆ ತಿಳಿಯದ ಹಾಗೆ ಹಣವನ್ನ ಸಂಗ್ರಹ ಮಾಡುವುದು ಮತ್ತು ಹಣವನ್ನ ಕೂಡಿಡುವುದು. ಇನ್ನು ಈ ವಿಷಯವನ್ನ ಯಾವುದೇ ಹೆಣ್ಣು ಕೂಡ ತನ್ನ ಗಂಡನಿಗೆ ಹೇಳುವುದಿಲ್ಲ, ಭವಿಷಯದಲ್ಲಿ ಈ ಹಣದಿಂದ ಯಾವುದಾರೂ ಒಂದು ಸಮಸ್ಯೆಯನ್ನ ಎದುರಿಸಬಹುದು ಅನ್ನುವುದು ಅವರ ಭಾವನೆ ಆಗಿರುತ್ತದೆ, ಆ ಸಮಸ್ಯೆ ಬಂದಾಗ ಗಂಡನಿಗೆ ಆ ಹಣವನ್ನ ಕೊಡುದಕ್ಕಾಗಿ ಹಣವನ್ನ ಗಂಡನಿಗೆ ಹೇಳದೆ ಕೂಡಿಡುತ್ತಾಳೆ ಹೆಣ್ಣು. ಇನ್ನು ಕೊನೆಯದಾಗಿ ಸ್ನೇಹಿತರೆಯರಿಗೆ ಹೇಳುವ ರಹಸ್ಯ, ಹೆಂಗಸರು ಅವರ ಸ್ನೇಹಿತೆಯರ ಬಳಿ ಎಲ್ಲಾ ವಿಷಯವನ್ನ ಹೇಳಿಕೊಳ್ಳುತ್ತಾರೆ, ಆದರೆ ಗಂಡನ ಬಳಿ ಯಾರಿಗೂ ಹೇಳಲಿಲ್ಲ ಎಂದು ನಾಟಕವನ್ನ ಮಾಡುತ್ತಾರೆ. ಸ್ನೇಹಿತರೆ ಇವೆಲ್ಲವೂ ಕೂಡ ತುಂಬಾ ಚಿಕ್ಕ ವಿಷಯಗಳೇ ಆದ್ದರಿಂದ ಮನೆಯಲ್ಲಿ ಹೆಂಡತಿಯನ್ನ ಅರ್ಥ ಮಾಡಿಕೊಳ್ಳುವುದು ಗಂಡನ ಕರ್ತವ್ಯವಾಗಿದೆ.

Wife secret husband

Please follow and like us:
error0
http://karnatakatoday.in/wp-content/uploads/2019/12/Wife-secret-husband-1-1024x576.jpghttp://karnatakatoday.in/wp-content/uploads/2019/12/Wife-secret-husband-1-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಲೈಫ್ ಸ್ಟೈಲ್ಸುದ್ದಿಜಾಲಸಾಮಾನ್ಯವಾಗಿ ಸಂಸಾರ ಜೀವನದಲ್ಲಿ ಗಂಡ ಮತ್ತು ಹೆಂಡತಿ ಇಬ್ಬರೂ ಕೂಡ ಸುಖ ದುಃಖಕ್ಕೆ ಸಂಬಂದಿಸಿದ ಎಲ್ಲಾ ವಿಷಯಗಳನ್ನ ಹಂಚಿಕೊಳ್ಳಬೇಕು ಎಂದು ನಮ್ಮ ಹಿರಿಯರು ಹೇಳುತ್ತಾರೆ ಮತ್ತು ಇದು ಬಹಳ ಒಳ್ಳೆಯ ಪದ್ಧತಿ ಕೂಡ ಹೌದು, ಹೀಗೆ ಮಾಡುವುದರಿಂದ ಸಂಸಾರ ಜೀವನ ಬಹಳ ಸಂತೋಷಮಯವಾಗಿ ಸಾಗುತ್ತದೆ. ಇನ್ನು ಪ್ರತಿಯೊಬ್ಬರೂ ಕೂಡ ಕೆಲವು ವಿಷಯಗಳನ್ನ ಯಾರ ಬಳಿ ಕೂಡ ಹಂಚಿಕೊಳ್ಳಲು ಇಷ್ಟ ಪಡುವುದಿಲ್ಲ ಮತ್ತು ಅರ್ಧಂಗಿಯ ಜೊತೆ ಕೂಡ ಹಂಚಿಕೊಳ್ಳಲು ಇಷ್ಟ...Film | Devotional | Cricket | Health | India