ಸದ್ಯಕ್ಕೆ ಭಾರತದಲ್ಲಿ ಮೆಡಿಕಲ್ ಎಮೆರ್ಜೆನ್ಸಿಯನ್ನು ಹೇರಲಾಗಿದೆ, ಜನನಿಬಿಡ ಪ್ರದೇಶಗಳಲ್ಲಿ ಜನ ಸೇರುವುದಕ್ಕೆ ನಿರ್ಬಂಧ ಹೇರಲಾಗಿದೆ ಮತ್ತು 144 ಸೆಕ್ಷನ್ ವಿಧಿಸುವುದರ ಮೂಲಕ ಸರ್ಕಾರ ಕೊರೋನಾ ಸೋಂಕು ಹರಡುವುದನ್ನು ನಿಲ್ಲಿಸಲು ಸಾಕಷ್ಟು ಪ್ರಯತ್ನ ಪಡುತ್ತಿದೆ. ಈ ನಡುವೆ ಚೀನಾದಲ್ಲಿ ಜನ್ಮತಾಳಿದ ಮಾರಣಾಂತಿಕ ಕರೋನಾ ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ ಜಾಗತಿಕವಾರಿ ಬುಧವಾರ 8,000 ದಾಟಿದೆ, ಇದೇ ವೇಳೆ ಜಾಗತಿಕ ಸೋಂಕುಗಳ ಸಂಖ್ಯೆ 200,000 ಕ್ಕೆ ತಲುಪಿದೆ. ಯುರೋಪ್ ಮತ್ತು ಏಷ್ಯಾದಲ್ಲಿ ಹೆಚ್ಚಿನ ಸಾವುಗಳು ದಾಖಲಾಗಿವೆ, ಭಾರತದಲ್ಲಿ ಕೂಡ ಈ ಸೋಂಕಿನ ಸಂಖ್ಯೆ 151 ಕ್ಕೆ ಏರಿದ್ದು ಮೂರು ಜನರು ಸಾವನ್ನಪ್ಪಿದ್ದಾರೆ.

ಇನ್ನು ಕರುನಾಡಲ್ಲಿ ಕೂಡ ಸೋಂಕು ಆವರಿಸಿದೆ ಮತ್ತು ನಾಡಿನ ಮಳೆ ಬೆಳೆ ಹಾಗು ಎಲ್ಲ ವಿಚಾರಗಳ ಬಗ್ಗೆ ತಮ್ಮ ಒಗಟಿನ ಮಾತಿನ ಮೂಲಕವೇ ಎಚ್ಚರಿಸುವ ಕೋಡಿ ಮಠದ ಶ್ರೀಗಳು ಕೊರೋನಾ ಬಗ್ಗೆ ಕೆಲ ಡಿಂಬಗಳ ಹಿಂದೆಯೇ ಮಾತನಾಡಿದ್ದರು. ಕೊರೋನಾ ಬಗ್ಗೆ ಅವರು ಈ ಹಿಂದೆ ಎಚ್ಚರಿಸಿದ್ದ ಮಾತಿನ ಬಗ್ಗೆ ಹೇಳಿದ್ದರು, ಈಗ ಬಂದಿರುವ ಕೊರೋನಾ ವೈರಸ್​ ಇಡೀ ವಿಶ್ವವನ್ನು ಆವರಿಸಲಿದೆ. ಇನ್ನೂ ಸಾವಿರಾರು ಜನ ಈ ಸೋಂಕಿಗೆ ಬಲಿಯಾಗಲಿದ್ದಾರೆ, ನಾನು ಈ ಹಿಂದೆಯೇ ಹೇಳಿದ್ದೆ ಮದ್ದಿಲ್ಲದ ಖಾಯಿಲೆ ಬರುತ್ತೆ ಅಂತ, ಆದರೆ ಆ ಭವಿಷ್ಯ ಈಗ ನಿಜವಾಗಿದೆ. ಈಗ ಬಂದ ಖಾಯಿಲೆ ಭವಿಷ್ಯದಲ್ಲಿ ಜಡತ್ವದಂತಹ ಕಲ್ಲು, ಮಣ್ಣು, ಮರಗಳಿಗೂ ಆವರಿಸಲಿದೆ ಎಂದು ಭವಿಷ್ಯ ನುಡಿದ್ದರು.

wise sage
ಸದ್ಯಕ್ಕೆ ಇಡೀ ಪ್ರಪಂಚವೇ ಕೊರೋನಾಗೆ ಮದ್ದು ಹುಡುಕುವ ತವಕದಲ್ಲಿದೆ, ನಾನಾ ರೀತಿಯ ಪ್ರಯತ್ನ ಮಾಡಿದರೂ ಕೂಡ ಯಾವ ದೇಶವೂ ಇಂದು ತಾನು ಲಸಿಕೆ ತಯಾರಿಸಿದ್ದೇನೆ ಎಂದು ಅಧಿಕೃತವಾಗಿ ಹೇಳಿಕೊಂಡಿಲ್ಲ. ಈ ನಡುವೆ ಕರೋನಾಗೆ ಇರುವ ಲಸಿಕೆ ಹಾಗು ಮದ್ದಿನ ಮೂಲದ ಬಗ್ಗೆ ಕೋಡಿ ಮಠದ ಶ್ರೀಗಳು ರಹಸ್ಯ ಬಿಚ್ಚಿಟ್ಟಿದ್ದಾರೆ. ಕೊರೋನಾಗೆ ಹೆದರುವ ಅವಶ್ಯಕತೆ ಇಲ್ಲ ಈ ಭಾರತದ ಮಣ್ಣಿನಲ್ಲಿ ಸರ್ವ ರೋಗಕ್ಕೂ ಮದ್ದು ಲಭ್ಯವಿದೆ. ಮನುಷ್ಯನಿಗೆ ದೇವರಲ್ಲಿ ನಂಬಿಕೆ ಹಾಗು ಸಂಕಲ್ಪ ಇರಬೇಕು. ಮನುಷ್ಯ ಯಾವುದನ್ನೂ ಎಲ್ಲಿ ಕಳೆದುಕೊಂಡಿದ್ದನೋ ಅಲ್ಲಿಯೇ ಹುಡುಕಬೇಕು ಹಾಗೆಯೆ ಈ ಪ್ರಕಟಿಯಲ್ಲಿ ಕಳೆದುಕೊಂಡಿರುವುದನ್ನು ಅಲ್ಲಿಯೇ ಹುಡುಕಬೇಕು ಎಂದರು. ಅದೇ ರೀತಿ ಋಷಿಗಳ ಗಿಡಮೂಲಿಕೆ ಹಾಗು ಹಳ್ಳಿ ನಾಟಿವೈದ್ಯರ ಬಳಿ ಇದಕ್ಕೆ ಔಷದ ಸಿಗಬಹುದು ಅಂತಹವರನ್ನು ಹುಡುಕಬೇಕು ಎಂದು ತಿಳಿಸಿಕೊಟ್ಟಿದ್ದಾರೆ.

ಈ ಭರತ ಭೂಮಿಯನ್ನು ಶತ ಶತಮಾನಗಳಿಂದ ಋಷಿಗಳು ಮುನಿಗಳು ಯೋಗಿಗಳು ತಮ್ಮ ಜಪತಪದಿಂದ ರಕ್ಷಣೆ ಮಾಡುತ್ತಾ ಬಂದಿದ್ದಾರೆ, ಹೀಗಾಗಿ ಭಾರತ ಯಾವುದೇ ರೋಗಕ್ಕೂ ಹೆದರುವ ಅವಶ್ಯಕತೆ ಇಲ್ಲ ಎನ್ನುವುದನ್ನು ಒತ್ತಿ ಹೇಳಿದರು. ಕೋಡಿ ಮಠದ ಶ್ರೀಗಳು ಹೇಳುವ ಪ್ರತಿ ಮಾತಿಗೂ ಕೂಡ ಒಳಾರ್ಥ ಇರುತ್ತದೆ ಮತ್ತು ಇವರ ಒಗಟಿನ ಮಾತುಗಳು ಅದೆಷ್ಟೋ ಬಾರಿ ನಿಜವಾದ ಉದಾಹರಣೆಗಳಿವೆ. ಈ ಹಿಂದೆ ಕರ್ನಾಟಕದ ಮಳೆ ಬಗ್ಗೆ ಹಾಗೂ ರಾಜಕೀಯದ ಬಗ್ಗೆ ಇವರು ನುಡಿದ ಮಾತುಗಳು ಇದಕ್ಕೆ ಸ್ಪಷ್ಟ ಉದಾಹರಣೆ. ಅದೇನೇ ಇರಲಿ ಲೋಕ ಕಲ್ಯಾಣಕ್ಕಾಗಿ ಜನರಿಗೆ ತಮ್ಮ ಮಾತಿನ ಮೂಲಕ ಎಚ್ಚರಿಸುವ ಕೋಡಿ ಮಠದ ಶ್ರೀಗಳಿಗೆ ನಮನಗಳು.

wise sage

 

 

Please follow and like us:
error0
http://karnatakatoday.in/wp-content/uploads/2020/03/kodi-mutt-1024x576.jpghttp://karnatakatoday.in/wp-content/uploads/2020/03/kodi-mutt-150x104.jpgKarnataka Trendingಆರೋಗ್ಯಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಸದ್ಯಕ್ಕೆ ಭಾರತದಲ್ಲಿ ಮೆಡಿಕಲ್ ಎಮೆರ್ಜೆನ್ಸಿಯನ್ನು ಹೇರಲಾಗಿದೆ, ಜನನಿಬಿಡ ಪ್ರದೇಶಗಳಲ್ಲಿ ಜನ ಸೇರುವುದಕ್ಕೆ ನಿರ್ಬಂಧ ಹೇರಲಾಗಿದೆ ಮತ್ತು 144 ಸೆಕ್ಷನ್ ವಿಧಿಸುವುದರ ಮೂಲಕ ಸರ್ಕಾರ ಕೊರೋನಾ ಸೋಂಕು ಹರಡುವುದನ್ನು ನಿಲ್ಲಿಸಲು ಸಾಕಷ್ಟು ಪ್ರಯತ್ನ ಪಡುತ್ತಿದೆ. ಈ ನಡುವೆ ಚೀನಾದಲ್ಲಿ ಜನ್ಮತಾಳಿದ ಮಾರಣಾಂತಿಕ ಕರೋನಾ ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ ಜಾಗತಿಕವಾರಿ ಬುಧವಾರ 8,000 ದಾಟಿದೆ, ಇದೇ ವೇಳೆ ಜಾಗತಿಕ ಸೋಂಕುಗಳ ಸಂಖ್ಯೆ 200,000 ಕ್ಕೆ ತಲುಪಿದೆ. ಯುರೋಪ್ ಮತ್ತು ಏಷ್ಯಾದಲ್ಲಿ ಹೆಚ್ಚಿನ...Film | Devotional | Cricket | Health | India