ಬ್ಯಾಕಿಂಗ್ ಕ್ಷೇತ್ರದ ವರ್ಷಾಂತ್ಯ ಆಗುತ್ತಿದ್ದಂತೆ ಹಲವಾರು ನಿಯಮಾವಳಿಗಳನ್ನು ಈಗ ತರಲಾಗಿದೆ. ಅದರ ಪ್ರಕಾರ ಇನ್ಮೇಲೆ ನಿಮ್ಮ ಪಾನ್ ಕಾರ್ಡ್ ಮತ್ತಷ್ಟು ಬಲಿಷ್ಠವಾಗಲಿದೆ. ಇನ್ನು ಮುಂದೆ ಪಾನ್ ಕಾರ್ಡ್ ಇಲ್ಲದೆ ನೀವು ಈ ಹತ್ತು ಸೇವೆಗಳನ್ನು ಬಳಸುವುದು ಬಹಳ ಕಷ್ಟವಾಗಲಿದೆ. ಸದ್ಯಕ್ಕಂತೂ ಈ ಕೆಲಸ ಮಾಡಲು ಸಾಧ್ಯವೇ ಇಲ್ಲ ಹಾಗಾದ್ರೆ ಪಾನ್ ಇಲ್ಲದೆಯೇ ನಡೆಯಲಾರದ ಆ ಕೆಲಸಗಳು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ.

ಪ್ಯಾನ್ ಕಾರ್ಡ್ ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. 1961 ರ ಆದಾಯ ತೆರಿಗೆ ಕಾಯಿದೆಯ ವಿಭಾಗ 139 ರ ಪ್ರಕಾರ, ದೇಶದ ಎಲ್ಲ ಪ್ರಜೆಗಳು ತಮ್ಮ ಹಣಕಾಸು ವ್ಯವಹಾರಕ್ಕಾಗಿ ಪ್ಯಾನ್ ಹೊಂದಿರಬೇಕು. ಇದು ಫೋಟೋ ID ಯಂತೆ ಕಾರ್ಯನಿರ್ವಹಿಸುತ್ತದೆ. ಇದಿಲ್ಲದೆ, ಯಾವುದೇ ಹಣಕಾಸಿನ ಕೆಲಸ ಮಾಡುವುದು ಸುಲಭವಲ್ಲ.ಪ್ರಸ್ತುತ ಸಮಯದಲ್ಲಿ, ಅದರ ಪ್ರಾಮುಖ್ಯತೆ ಬಹಳಷ್ಟು ಹೆಚ್ಚಾಗಿದೆ. ಪ್ಯಾನ್ ಕಾರ್ಡ್ ಇಲ್ಲದೆ ಸಾಧ್ಯವಾಗದ ಹಲವಾರು ವಿಷಯಗಳಿವೆ.

ಬ್ಯಾಂಕ್ ಖಾತೆ ತೆರೆಯಲು ಅಥವಾ FD ಇಡಲು ಪ್ಯಾನ್ ಅತ್ಯಗತ್ಯ. ಒಂದು ದಿನದಲ್ಲಿ 50,000 ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ಖಾತೆಗೆ ಜಮಾ ಮಾಡಲು  ಯಾವುದೇ ಆಸ್ತಿ ಖರೀದಿಸಲು ವಾಹನ ಖರೀದಿಸಲು, ವಿದೇಶ ಪ್ರಯಾಣಕ್ಕಾಗಿ ವಿಮಾನ ಟಿಕೆಟ್ ಬುಕ್ಕಿಂಗ್’ಗಾಗಿ ಹೋಟೆಲ್ ಬಿಲ್ ಪೇಮೆಂಟ್ ಮಾಡಬೇಕಾದರೆ, ಶೇರ್, ಬಾಂಡ್, ಮ್ಯೂಚುಯಲ್ ಫಂಡ್ ಅಥವಾ ಡಿಬೆನ್ಚರ್ ಖರೀದಿಗೆ ಪಾನ್ ಬೇಕು.

ಅದರಂತೆ ಕ್ರೆಡಿಟ್, ಡೆಬಿಟ್ ಕಾರ್ಡ್ ಅಥವಾ ಡಿಮೆಟ್ ಕಾರ್ಡುಗಳಿಗೆ ಅರ್ಜಿ  ಯಾವುದೇ ರೀತಿಯ ಆದಾಯವನ್ನು ತೋರಿಸುವಾಗ ಪ್ಯಾನ್ ಕಾರ್ಡ್ ಇಲ್ಲದಿದ್ದರೆ 20 ಪ್ರತಿಶತದಷ್ಟು ಟಿಡಿಎಸ್ ಅನ್ನು ಕಡಿತಗೊಳಿಸಲಾಗುತ್ತದೆ. ಪ್ರಿಪೇಡ್ ಮನಿ ವಾಲೆಟ್ ಅಥವಾ ಗಿಫ್ಟ್ ಕಾರ್ಡ್ ನೊಂದಿಗೆ 50,000 ಅಥವಾ ಅದಕ್ಕಿಂತ ಹೆಚ್ಚಿನ ವ್ಯವಹಾರ ಮಾಡಲು ಪ್ಯಾನ್ ಕಾರ್ಡ್ ಅತಿ ಮುಖ್ಯವಾಗಿದೆ.


ಇನ್ನು ಹೊಸ ಪಾನ್ ಕಾರ್ಡ್ ಪಡೆಯಲು ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ನಂತರ ಅಗತ್ಯ ದಾಖಲೆಗಳನ್ನು ನೀಡಿ ಮತ್ತು ಭಾರತೀಯ ಪ್ರಜೆಗೆ 93 ರೂ ಹಾಗು ವಿದೇಶಿ ಪ್ರಜೆಗೆ 864 ರೂ ಪಾವತಿಸಬೇಕಾಗುತ್ತದೆ. ಇದರಲ್ಲಿ ಜಿಎಸ್ಟಿ ಸೇರಿಸಲಾಗಿಲ್ಲ. ಹೀಗಾಗಿ ಇತ್ತೀಚಿಗಷ್ಟೇ ನಿಮ್ಮ ಪಾನ್ ಗೆ ಆಧಾರ್ ಕೂಡ ಸೇರಿಸಲು ಸರಕಾರ ಅಂತಿಮ ಗಡುವನ್ನು ವಿಸ್ತರಿಸಿದೆ. ಮುಂದಿನ ಆರು ತಿಂಗಳೊಳಗೆ ನೀವು ಪಾನ್ ಜೊತೆ ಆಧಾರ್ ಇರಲೇಬೇಕಾಗುತ್ತದೆ. ಹಾಗೆಯೆ ಮೇಲೆ ತಿಳಿಸಿದ ಎಲ್ಲ ಸೇವೆಗಳನ್ನು ಆರಂಭಿಸಲು ಪಾನ್ ಕಡ್ಡಾಯವಾಗಿದೆ.

Please follow and like us:
0
http://karnatakatoday.in/wp-content/uploads/2019/04/without-pan-card-1024x576.jpghttp://karnatakatoday.in/wp-content/uploads/2019/04/without-pan-card-150x104.jpgKarnataka Today's Newsಅಂಕಣನಗರಬ್ಯಾಕಿಂಗ್ ಕ್ಷೇತ್ರದ ವರ್ಷಾಂತ್ಯ ಆಗುತ್ತಿದ್ದಂತೆ ಹಲವಾರು ನಿಯಮಾವಳಿಗಳನ್ನು ಈಗ ತರಲಾಗಿದೆ. ಅದರ ಪ್ರಕಾರ ಇನ್ಮೇಲೆ ನಿಮ್ಮ ಪಾನ್ ಕಾರ್ಡ್ ಮತ್ತಷ್ಟು ಬಲಿಷ್ಠವಾಗಲಿದೆ. ಇನ್ನು ಮುಂದೆ ಪಾನ್ ಕಾರ್ಡ್ ಇಲ್ಲದೆ ನೀವು ಈ ಹತ್ತು ಸೇವೆಗಳನ್ನು ಬಳಸುವುದು ಬಹಳ ಕಷ್ಟವಾಗಲಿದೆ. ಸದ್ಯಕ್ಕಂತೂ ಈ ಕೆಲಸ ಮಾಡಲು ಸಾಧ್ಯವೇ ಇಲ್ಲ ಹಾಗಾದ್ರೆ ಪಾನ್ ಇಲ್ಲದೆಯೇ ನಡೆಯಲಾರದ ಆ ಕೆಲಸಗಳು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ. ಪ್ಯಾನ್ ಕಾರ್ಡ್ ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. 1961 ರ...Kannada News