ನಾವು ರೈಲನ್ನ ನೋಡಿರುತ್ತೇವೆ ಮತ್ತು ರೈಲಿನಲ್ಲಿ ಪ್ರಯಾಣ ಮಾಡಿರುತ್ತೇವೆ, ಇನ್ನು ರೈಲಿನ ಪ್ರಯಾಣವನ್ನ ಬಹಳಷ್ಟು ಜನರು ತುಂಬಾ ಇಷ್ಟಪಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ರೈಲಿನಲ್ಲಿ ಟಿಕೆಟ್ ಗಾಲ ವೆಚ್ಚ ಕೂಡ ಕಡಿಮೆ ಮತ್ತು ರೈಲಿನಲ್ಲಿ ಪ್ರಯಾಣ ಮಾಡಿದರೆ ನಮಗೆ ಆಯಾಸ ಕೂಡ ಜಾಸ್ತಿ ಆಗುವುದಿಲ್ಲ. ಇನ್ನು ನಾವು ರೈಲಿನಲ್ಲಿ ಪ್ರಯಾಣವನ್ನ ಮಾಡಿರುತ್ತೇವೆಯೇ ಹೊರತು ನಮಗೆ ಆ ರೈಲಿನ ಬಗೆಗಿನ ಕೆಲವು ಮಾಹಿತಿಯ ಬಗ್ಗೆ ಇನ್ನು ಸ್ಪಷ್ಟವಾಗಿ ಇನ್ನು ತಿಳಿದಿಲ್ಲ, ಹೌದು ನಾವು ಪ್ರಯಾಣ ಮಾಡುವ ರೈಲಿನ ಕೊನೆಯ ಬೋಗಿಯ ಹಿಂದೆ X ಅನ್ನುವ ಗುರುತು ಇರುತ್ತದೆ, ಹೌದು ಈ ಗುರುತನ್ನ ನಾವು ಎಲ್ಲಾ ರೈಲುಗಳಲ್ಲಿ ನೋಡುತ್ತೇವೆ. ಹಾಗಾದರೆ ರೈಲಿನ ಕೊನೆಯ ಭೋಗಿಯನ್ನ ಆ X ಗುರುತು ಯಾಕೆ ಇರುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಪ್ರತಿದಿನ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣವನ್ನ ಮಾಡುತ್ತಾರೆ ಆದರೆ ಕೊನೆಯ ಬೋಗಿಯಲ್ಲಿ ಬರೆಯಲಾದ X ಗುರುತಿನ ಅರ್ಥ ಬಹುತೇಕ ಜನರಿಗೆ ತಿಳಿದಿಲ್ಲ, ಇನ್ನು ನೀವು ಈ X ಗುರುತಿಯ ಅರ್ಥವನ್ನ ತಿಳಿದುಕೊಂಡರೆ ಇದೇನಾ ಅದರ ಅರ್ಥ ಎಂದು ನೀವು ಬೆರಗಾಗುವುದು ಗ್ಯಾರೆಂಟಿ. ಹೌದು ಸ್ನೇಹಿತರೆ ಕೊನೆಯ ಭೋಗಿಯನ್ನ ಬರೆಯದ X ಅರ್ಥ ಏನು ಅಂದರೆ ಈ ರೈಲಿನಲ್ಲಿನ ಕೊನೆಯ ಭೋಗಿ ಇದು ಮತ್ತು ಇದರ ನಂತರ ಯಾವುದೇ ಭೋಗಿಗಳು ಇಲ್ಲ ಎಂದು ಅರ್ಥವಾಗಿದೆ. ಇನ್ನು ಕೊನೆಯ ಬೋಗಿಯಲ್ಲಿ LV ಅನ್ನುವ ಅಕ್ಷರ ಇರುವ ಚಿಕ್ಕ ಬೋರ್ಡ್ ನ್ನು ಕೂಡ ಹಾಕಿರಲಾಗುತ್ತದೆ, ಇನ್ನು ಈ ಅಕ್ಷರದ ಅರ್ಥ ಕೂಡ ಇದು ಕೊನೆಯ ಭೋಗಿ ಅನ್ನುವ ಅರ್ಥವನ್ನ ಸೂಚಿಸುತ್ತದೆ.

X simbol in train bhogie

ಇನ್ನು ಈ X ಗುರುತನ್ನ ಕೊನೆಯ ಬೋಗಿಯ ಹಿಂಭಾಗದಲ್ಲಿ ಹಳದಿ ಬಣ್ಣದಲ್ಲಿ ಬರೆದಿರಲಾಗುತ್ತದೆ ಮತ್ತು ಇದರ ಜೊತೆಗೆ ರೈಲಿನ ಕೊನೆಯ ಭೋಗಿಯನ್ನ ಕೆಂಪು ವಿದ್ಯುತ್ ದೀಪವನ್ನ ಕೂಡ ಅಳವಡಿಕೆ ಮಾಡಲಾಗಿರುತ್ತದೆ ಮತ್ತು ಈ ದೀಪ ಪ್ರತಿ 5 ಸೆಕೆಂಡ್ ಗೆ ಒಮ್ಮೆ ಹೊಳೆಯುತ್ತದೆ ಮತ್ತು ಇದು ಹೊಳೆಯಲು ಕಾರಣ ಏನು ಅಂದರೆ ಅಂದರೆ ಇದು ಕೊನೆಯ ಭೋಗಿ ಮತ್ತು ಇದರ ಹಿಂದೆ ಯಾವುದೇ ಭೋಗಿಗಳು ಇಲ್ಲ ಅನ್ನುವುದರ ಸಂಕೇತ ಇದಾಗಿದೆ. ಇನ್ನು ರಾತ್ರಿಯ ಸಮಯದಲ್ಲಿ ಮತ್ತು ಹಗಲಿನ ಸಮಯದಲ್ಲಿ ಈ ಅಕ್ಷರ ಜನರಿಗೆ ಕಣ್ಣಿಗೆ ಗೋಚರ ಆಗಲಿ ಅನ್ನುವ ಉದ್ದೇಶದಿಂದ ಈ X ಅಕ್ಷರವನ್ನ ದೊಡ್ಡದಾಗಿ ಹಳದಿ ಬಣ್ಣದಲ್ಲಿ ಬರೆದಿರಲಾಗುತ್ತದೆ ಮತ್ತು ಈ ಹಳದಿ ಬಣ್ಣವು ರೇಡಿಯಂ ಆಗಿರುವುದರಿಂದ ಇದು ರಾತ್ರಿಯ ಸಮಯದಲ್ಲಿ ಬೆಳಕಿಗೆ ಹೊಳೆಯುತ್ತದೆ.

ಇನ್ನು ಈ ಅಕ್ಷರದ ಜೊತೆಗೆ LV ಅನ್ನುವ ಅಕ್ಷರವನ್ನ ಚಿಕ್ಕ ಬೋರ್ಡ್ ಕೂಡ ಇರುತ್ತದೆ, ಇನ್ನು LV ಅಕ್ಷರದ ಅರ್ಥ ಲಾಸ್ಟ ವೆಹಿಕಲ್ ಆಗಿದೆ, ಇನ್ನು ರೈಲಿನ ಹಿಂಭಾಗದಲ್ಲಿ X ಗುರುತು ಮತ್ತು LV ಅಕ್ಷರಗಳು ಇಲ್ಲ ಅಂದರೆ ಆ ರೈಲಿನ ಎಲ್ಲಾ ಭೋಗಿಗಳು ಬಂದಿಲ್ಲ ಅನ್ನುವ ಅರ್ಥವನ್ನ ಸೂಚಿಸುತ್ತದೆ ಮತ್ತು ತುರ್ತು ಪರಿಸ್ಥಿತಿಗೆ ಆ ಭೋಗಿಯನ್ನ ತಗೆಯಲಾಗಿದೆ ಅನ್ನುವುದರ ಅರ್ಥ ಅದಾಗಿರುತ್ತದೆ. ಇನ್ನು ಈ ಅಕ್ಷರಗಳನ್ನ ಸಾಮಾನ್ಯವಾಗಿ ಎಲ್ಲರೂ ಕೂಡ ರೈಲಿನ ಹಿಂಭಾಗದಲ್ಲಿ ನೋಡೇ ಇರುತ್ತಾರೆ, ಆದರೆ ಅದರ ಅರ್ಥ ಮಾತ್ರ ಅವರಿಗೆ ಇನ್ನು ತಿಳಿದಿರಲು ಸಾಧ್ಯವಿಲ್ಲ, ಸ್ನೇಹಿತರೆ ರೈಲುಗಳ ಬಗೆಗಿನ ಈ ಸಾಮಾನ್ಯವಾದ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

X simbol in train bhogie

Please follow and like us:
error0
http://karnatakatoday.in/wp-content/uploads/2020/02/X-Simbol-in-Train-last-bhogie-1024x576.jpghttp://karnatakatoday.in/wp-content/uploads/2020/02/X-Simbol-in-Train-last-bhogie-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲನಾವು ರೈಲನ್ನ ನೋಡಿರುತ್ತೇವೆ ಮತ್ತು ರೈಲಿನಲ್ಲಿ ಪ್ರಯಾಣ ಮಾಡಿರುತ್ತೇವೆ, ಇನ್ನು ರೈಲಿನ ಪ್ರಯಾಣವನ್ನ ಬಹಳಷ್ಟು ಜನರು ತುಂಬಾ ಇಷ್ಟಪಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ರೈಲಿನಲ್ಲಿ ಟಿಕೆಟ್ ಗಾಲ ವೆಚ್ಚ ಕೂಡ ಕಡಿಮೆ ಮತ್ತು ರೈಲಿನಲ್ಲಿ ಪ್ರಯಾಣ ಮಾಡಿದರೆ ನಮಗೆ ಆಯಾಸ ಕೂಡ ಜಾಸ್ತಿ ಆಗುವುದಿಲ್ಲ. ಇನ್ನು ನಾವು ರೈಲಿನಲ್ಲಿ ಪ್ರಯಾಣವನ್ನ ಮಾಡಿರುತ್ತೇವೆಯೇ ಹೊರತು ನಮಗೆ ಆ ರೈಲಿನ ಬಗೆಗಿನ ಕೆಲವು ಮಾಹಿತಿಯ ಬಗ್ಗೆ ಇನ್ನು ಸ್ಪಷ್ಟವಾಗಿ ಇನ್ನು...Film | Devotional | Cricket | Health | India