ಒಂದೆಡೆ ಇಡೀ ಭಾರತದಾದ್ಯಂತ ಯಶ್ ಅಭಿನಯದ ಕೆಜಿಎಫ್ ಸದ್ಧು ಮಾಡುತ್ತಿದ್ದರೆ ಇತ್ತ ಬಾಲಿವುಡ್ ನಟಿಯೊಬ್ಬರು ಯಶ್ ಬಗ್ಗೆ ಮಾತನಾಡಿದ್ದಾರೆ. ಹೌದು ಕೆಜಿಎಫ್ ಕನ್ನಡ ಚಿತ್ರರಂಗದಲ್ಲೇ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಹೊಸ ಇತಿಹಾಸ ನಿರ್ಮಿಸಿದ್ದು, ಪಾಕಿಸ್ತಾನದಲ್ಲಿ ಬಿಡುಗಡೆಯಾಗುವ ಮೂಲಕ ಪಾಕಿಸ್ತಾನದಲ್ಲಿ ಬಿಡುಗಡೆಯಾದ ಮೊಟ್ಟ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಪಂಚದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಕೆಜಿಎಫ್​ ಸಿನಿಮಾ, ಈಗ ಪಾಕಿಸ್ತಾನದಲ್ಲೂ ತನ್ನ ಹವಾ ಎಬ್ಬಿಸಿದೆ. ಈ ಮೂಲಕ ಪಾಕಿಸ್ತಾನದಲ್ಲಿ ರಿಲೀಸ್​ ಆದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಕೆಜಿಎಫ್​ ಪಾತ್ರವಾಗ್ತಿದೆ.

ಪಾಕಿಸ್ತಾನದಲ್ಲಿ ಟಿಕೆಟ್​ ಬುಕ್ಕಿಂಗ್​ ಆರಂಭವಾಗಿದ್ದು, ಇಸ್ಲಾಮಾಬಾದ್ ಕ್ಲಬ್ ಟಿಕೆಟ್ ಬುಕ್ಕಿಂಗ್ ಸೈಟ್ ನಲ್ಲಿ ಇಂದಿನಿಂದ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಎಂಟಿಆರ್ ಜೀವಂಧರಿತ ಸಿನೆಮಾದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ಯಶ್ ಇಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್ ಗೆ ನೀವು ಕೂಡ ಕನ್ನಡದಲ್ಲಿ ಚಿತ್ರ ಮಾಡಿ ಎಂದರು ಇದಕ್ಕೆ ತಕ್ಷಣವೇ ಉತ್ತರ ಕೊಟ್ಟ ವಿದ್ಯಾ ಯಶ್ ನೀವು ಆಫ಼ರ್ ಕೊಟ್ಟರೆ ಖಂಡಿತವಾಗಿ ಬರುತ್ತೇನೆ ಎಂದರು, ಹಾಗೆ ಮುಗುಳ್ನಕ್ಕರು.

ಟಾಲಿವುಡ್ ನಟ ಬಾಲಕೃಷ್ಣ ಅಭಿನಯದ ಎನ್​ಟಿಆರ್ ಕಥಾನಾಯಕುಡು ಚಿತ್ರದಲ್ಲಿ ಎನ್​ಟಿಆರ್ ಪತ್ನಿ ಪಾತ್ರದಲ್ಲಿ ವಿದ್ಯಾಬಾಲನ್ ಅಭಿನಯಿಸಿದ್ದರು. ಇನ್ನು ಚಿತ್ರದ ಪ್ರಮೋಷನ್ ಗಾಗಿ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಟ ಬಾಲಕೃಷ್ಣ, ವಿದ್ಯಾಬಾಲನ್, ಯಶ್ ಹಾಗೂ ಪುನೀತ್ ರಾಜಕುಮಾರ್ ಭಾಗವಹಿಸಿದ್ದರು.

ಕೆಜಿಎಫ್ ಚಿತ್ರದ ಭರ್ಜರಿ ಯಶಸ್ಸು ಭಾರತೀಯ ಚಿತ್ರರಂಗ ಇದೀಗ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದೆ. ಇನ್ನು ಬಾಲಿವುಡ್ ನಟಿ ವಿದ್ಯಾಬಾಲನ್ ಸಹ ಯಶ್ ನೀವು ಅವಕಾಶ ನೀಡಿದರೆ ಖಂಡಿತವಾಗಿಯೂ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತೇನೆ ಎಂದು ಹೇಳಿದ್ದಾರೆ.

Please follow and like us:
0
http://karnatakatoday.in/wp-content/uploads/2019/01/YASH-VIDYA-BALAN-1024x576.pnghttp://karnatakatoday.in/wp-content/uploads/2019/01/YASH-VIDYA-BALAN-150x104.pngKarnataka Today's Newsಎಲ್ಲಾ ಸುದ್ದಿಗಳುಒಂದೆಡೆ ಇಡೀ ಭಾರತದಾದ್ಯಂತ ಯಶ್ ಅಭಿನಯದ ಕೆಜಿಎಫ್ ಸದ್ಧು ಮಾಡುತ್ತಿದ್ದರೆ ಇತ್ತ ಬಾಲಿವುಡ್ ನಟಿಯೊಬ್ಬರು ಯಶ್ ಬಗ್ಗೆ ಮಾತನಾಡಿದ್ದಾರೆ. ಹೌದು ಕೆಜಿಎಫ್ ಕನ್ನಡ ಚಿತ್ರರಂಗದಲ್ಲೇ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಹೊಸ ಇತಿಹಾಸ ನಿರ್ಮಿಸಿದ್ದು, ಪಾಕಿಸ್ತಾನದಲ್ಲಿ ಬಿಡುಗಡೆಯಾಗುವ ಮೂಲಕ ಪಾಕಿಸ್ತಾನದಲ್ಲಿ ಬಿಡುಗಡೆಯಾದ ಮೊಟ್ಟ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಪಂಚದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಕೆಜಿಎಫ್​ ಸಿನಿಮಾ, ಈಗ ಪಾಕಿಸ್ತಾನದಲ್ಲೂ ತನ್ನ ಹವಾ...Kannada News