Yuvaraj Sing retirement

ಭಾರತ ಕ್ರಿಕೆಟ್ ತಂಡದ ಸರ್ವಸ್ರೇಷ್ಟ ಫೀಲ್ಡರ್, ವಿಭಿನ್ನ ದಾಂಡಿಗ, ಆಪತ್ಕಾಲಿಕ ಬೋಳಾರ್ ಆಗಿ ಭಾರತಕ್ಕೆ ಅದೆಷ್ಟೋ ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿತ್ತು ಮಾತ್ರವಲ್ಲದೆ ಅಂತಾರಾಷ್ಟ್ರೀಯ ಪ್ರಮುಖ ಪಂದ್ಯಗಳಲ್ಲಿ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವನ್ನ ವಹಿಸಿ ಸರಣಿ ಗೆಲ್ಲಿಸಿಕೊಟ್ಟ ಆಟಗಾರ ಯುವರಾಜ್ ಸಿಂಗ್ ಎಂದು ಹೇಳಿದರೆ ತಪ್ಪಾಗಲ್ಲ.

ಭಾರತ ಮಾತ್ರವಲ್ಲದೆ ಜಗತ್ತಿನ ಎಲ್ಲಾ ಕಡೆಗಳಲ್ಲಿ ಅಭಿಮಾನಿ ಬಳಗವನ್ನ ಹೊಂದಿರುವ ಕ್ರಿಕೆಟ್ ಜಗತ್ತಿನ ಯುವರಾಜನಾಗಿ ಮೇರೆದ ಯುವರಾಜ್ ಸಿಂಗ್ ತಮ್ಮ ಕ್ರಿಕೆಟ್ ಬದುಕಿಗೆ ವಿದಾಯವನ್ನ ಹೇಳಿದ್ದಾರೆ.

ಇನ್ನು ಯುವರ ಸಿಂಗ್ ಸಿಂಗ್ ಯಾವುದೇ ಪಂದ್ಯಗಳನ್ನ ಆಡುವುದಿಲ್ಲ, ಆದರೆ ಯುವರಾಜ್ ಸಿಂಗ್ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ಕ್ರಿಕೆಟ್ ಇರುವ ತನಕ ನೆಲೆಸಿರುತ್ತಾರೆ. ಇನ್ನು ಇತ್ತಕಡೆ ಕ್ರಿಕೆಟ್ ಬದುಕಿಗೆ ಯುವರಾಜ್ ವಿದಾಯವನ್ನ ಹೇಳಿದರೆ ಅಭಿಮಾನಿಗಳ ಕಣ್ಣುಗಳಲ್ಲಿ ನೀರು ತುಂಬಿಕೊಂಡಿದ್ದವು, ಇನ್ನು ಇನ್ನೊಂದು ಕಡೆ ಯುವರಾಜ್ ಸಿಂಗ್ ಅವರ ವಿದಾಯಕ್ಕೆ ಕ್ರಿಕೆಟ್ ಜಗತ್ತು ಯಾವ ರೀತಿ ಹೇಳಿದೆ ಎಂದು ಕೇಳಿದರೆ ನಿಜಕೂ ನಿಮ್ಮ ಮನ ಕಲಕುತ್ತದೆ.

Yuvaraj Sing retirement

ಹಾಗಾದರೆ ಕ್ರಿಕೆಟ್ ಜಗತ್ತು ಏನು ಹೇಳಿದರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಕ್ರಿಕೆಟ್ ದಿಗ್ಗಜ ಮತ್ತು ಸ್ಪೋಟಕ ಆಟಗಾರ ವೀರೇಂದ್ರ ಸೆಹವಾಗ್ ಅವರು ಏನು ಹೇಳಿದ್ದಾರೆ ಅಂದರೆ, ಕ್ರಿಕೆಟ್ ಜಗತ್ತಿಗೆ ಅದೆಷ್ಟೋ ಜನರ ಆಟಗಾರರು ಬಂದು ಹೋಗುತ್ತಾರೆ ಆದರೆ ಯುವರಾಜ್ ಸಿಂಗ್ ಅವರಂತ ಆಟಗಾರನನ್ನ ಹುಡುಕುವುದು ತುಂಬಾ ಕಷ್ಟ ಎಂದು ಹೇಳಿದ್ದಾರೆ.

ಅದೆಷ್ಟೋ ಕಷ್ಟದ ಪಂದ್ಯಗಳಲ್ಲಿ ಸ್ಪೋಟಕ ಆಟವನ್ನ ಆಡಿ ಭಾರತ ತಂಡಕ್ಕೆ ಗೆಲುವು ತಂದುಕೊಟ್ಟ ಗೆಳೆಯ ಯುವರಾಜ್ ಸಿಂಗ್ ಅವರ ಮುಂದಿನ ಜೀವನ ಚೆನ್ನಾಗಿರಲಿ ಎಂದು ಯುವರಾಜ್ ಸಿಂಗ್ ಅವರ ಬಗ್ಗೆ ತಮ್ಮ ಅನಿಸಿಕೆಯನ್ನ ಹೇಳಿದ್ದಾರೆ ಸಹವಾಗ್ ಅವರು.

Yuvaraj Sing retirement

ಇನ್ನು ವಿರಾಟ್ ಕೊಹ್ಲಿ ಏನು ಹೇಳಿದ್ದಾರೆ ಅಂದರೆ, ಭಾರತ ತಂಡಕ್ಕಾಗಿ ಅತ್ಯದ್ಭುತ ಕ್ರಿಕೆಟ್ ಬದುಕನ್ನ ಬದುಕಿದ ತನ್ನ ನೆಚ್ಚಿನ ಗೆಳೆಯನಿಗೆ ಶುಭಾಶಯವನ್ನ ಕೋರುತ್ತೇನೆ, ನಿಮ್ಮ ಜೊತೆಗಿನ ಅಮೂಲ್ಯವಾದ ಕ್ಷಣಗಳು ಎಂದು ಸಹ ನಮ್ಮ ನೆನಪಿನಲ್ಲಿ ಇರುತ್ತದೆ, ನಿಮ್ಮ ಮುಂದಿನ ಜೀವನಕೆ ಶುಭ ಕೋರುತ್ತೇನೆ ಎಂದು ಹೇಳಿದ್ದಾರೆ ನಾಯಕ ವಿರಾಟ್ ಕೊಹ್ಲಿ.

ಇನ್ನು ಕನ್ನಡದ ಹುಡುಗ ರಾಹುಲ್ ಅವರು, ಕ್ರಿಕೆಟ್ ನ ಬಗ್ಗೆ ನೀವು ನಮಗೆ ಹೇಳಿ ಕೊಟ್ಟದ್ದಕ್ಕೆ ನಿಮಗೆ ಧನ್ಯವಾದಗಳು, ನಿಮ್ಮ ತರಹ ಬದುಕಲು ಯಾರಿಂದಲೂ ಸಾಧ್ಯವಿಲ್ಲ, ನಿಮ್ಮ ಮುಂದಿನ ಜೀವನಕ್ಕೆ ಶುಭವಾಗಲಿ ಎಂದು ಹೇಳಿದ್ದಾರೆ ಕೆ ಎಲ್ ರಾಹುಲ್ ಅವರು.

ಇನ್ನು ಕುಲದೀಪ್ ಯಾದವ್ ಅವರು, ಅಣ್ಣ ನೀವು ನನಗೆ ಕ್ಯಾಪ್ ನೀಡುವ ಮೂಲಕ ನಾನು ಕ್ರಿಕೆಟ್ ಬದುಕಿಗೆ ಕಾಲಿಟ್ಟೆ, ನಾನು ಆ ಕ್ಷಣವನ್ನ ಇಂದಿಗೂ ಸಹ ಮರೆಯುವುದಿಲ್ಲ ಎಂದು ಭಾವುಕರಾಗಿ ಹೇಳಿದ್ದಾರೆ ಕುಲದೀಪ್ ಯಾದವ್ ಅವರು.

Yuvaraj Sing retirement

ಇನ್ನು ಕ್ರಿಕೆಟ್ ದೇವರಾದ ಸಚಿನ್ ಕೂಡ ಯುವರಾಜ್ ಸಿಂಗ್ ಅವರ ಬಗ್ಗೆ ಮಾತನಾಡಿದ್ದು, ನಿಮ್ಮದು ಇಂತಹ ಕ್ರಿಕೆಟ್ ಜರ್ನಿ ಯುವಿ, ತಂಡಕ್ಕೆ ನಿಮ್ಮ ಅವಶ್ಯಕತೆ ಇದ್ದಾಗ ಬಂದು ಆಟವನ್ನ ಆಡಿ ಅದೆಷ್ಟೋ ಪಂದ್ಯಗಳನ್ನ ಗೆಲ್ಲಿಸಿ ಕೊಟ್ಟಿದ್ದೀರಿ, ಕ್ರಿಕೆಟ್ ಜಗತ್ತು ನಿಮ್ಮ ಕೊಡುಗೆಯನ್ನ ಮರೆಯುವುದಿಲ್ಲ, ನಿಮ್ಮ ಎರಡನೆಯ ಇನ್ನಿಂಗ್ಸ್ ಶುಭವಾಗಲಿ ಎಂದು ಶುಭಾಶಯ ಕೋರಿದ್ದಾರೆ ಸಚಿನ್ ತೆಂಡೂಲ್ಕರ್ ಅವರು.

ಸ್ನೇಹಿತರೆ ಭಾರತ ತಂಡದ ಆಟಗಾರರು ಯುವರಾಜ್ ಸಿಂಗ್ ಅವರ ಬಗ್ಗೆ ಹೇಳಿರುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಯುವರಾಜ್ ಸಿಂಗ್ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Yuvaraj Sing retirement

Please follow and like us:
0
http://karnatakatoday.in/wp-content/uploads/2019/06/Yuvaraj-sing-retairment-1024x576.jpghttp://karnatakatoday.in/wp-content/uploads/2019/06/Yuvaraj-sing-retairment-150x104.jpgeditorಎಲ್ಲಾ ಸುದ್ದಿಗಳುಕ್ರಿಕೆಟ್ನಗರಬೆಂಗಳೂರುಸುದ್ದಿಜಾಲಭಾರತ ಕ್ರಿಕೆಟ್ ತಂಡದ ಸರ್ವಸ್ರೇಷ್ಟ ಫೀಲ್ಡರ್, ವಿಭಿನ್ನ ದಾಂಡಿಗ, ಆಪತ್ಕಾಲಿಕ ಬೋಳಾರ್ ಆಗಿ ಭಾರತಕ್ಕೆ ಅದೆಷ್ಟೋ ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿತ್ತು ಮಾತ್ರವಲ್ಲದೆ ಅಂತಾರಾಷ್ಟ್ರೀಯ ಪ್ರಮುಖ ಪಂದ್ಯಗಳಲ್ಲಿ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವನ್ನ ವಹಿಸಿ ಸರಣಿ ಗೆಲ್ಲಿಸಿಕೊಟ್ಟ ಆಟಗಾರ ಯುವರಾಜ್ ಸಿಂಗ್ ಎಂದು ಹೇಳಿದರೆ ತಪ್ಪಾಗಲ್ಲ. ಭಾರತ ಮಾತ್ರವಲ್ಲದೆ ಜಗತ್ತಿನ ಎಲ್ಲಾ ಕಡೆಗಳಲ್ಲಿ ಅಭಿಮಾನಿ ಬಳಗವನ್ನ ಹೊಂದಿರುವ ಕ್ರಿಕೆಟ್ ಜಗತ್ತಿನ ಯುವರಾಜನಾಗಿ ಮೇರೆದ ಯುವರಾಜ್ ಸಿಂಗ್ ತಮ್ಮ ಕ್ರಿಕೆಟ್ ಬದುಕಿಗೆ ವಿದಾಯವನ್ನ ಹೇಳಿದ್ದಾರೆ. ಇನ್ನು ಯುವರ...Kannada News