ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅದ್ಬುತ ಕಲೆಕ್ಷನ್ ಮಾಡುವ ಮೂಲಕ ಕೆಜಿಎಫ್ ಚಿತ್ರ ವಿನೂತನ ದಾಖಲೆ ಬರೆಯುತ್ತಿದ್ದರೆ, ಇತ್ತ ಬಾಲಿವುಡ್ ಮಂದಿ ಕೂಡ ಚಿತ್ರಕ್ಕೆ ಫಿದಾ ಆಗಿದ್ದಾರೆ. ಶಾರುಖ್ ಅಭಿನಯದ ಜೀರೋ ಚಿತ್ರ ಬಹಳಷ್ಟು ಟ್ರೆಂಡ್ ಮಾಡಿದ್ದರೂ ಯಶ್ ಚಿತ್ರದ ಎದುರು ಮಕಾಡೆ ಮಲಗಿದೆ. ಹೌದು ಪ್ರಪ್ರಥಮ ಬಾರಿಗೆ ಐದು ಭಾಷೆಗಳಿಗೆ ಕನ್ನಡ ಚಿತ್ರ ಪೈಪೋಟಿ ನೀಡಿ ಎಲ್ಲರ ಗಮನಸೆಳೆದಿದ್ದು ಇದೀಗ ಚಿತ್ರ ಬಾಕ್ಸ್ ಓಫೀಸ್ ನಲ್ಲಿ ಸದ್ದು ಮಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಜೀರೋ ಚಿತ್ರಕ್ಕೆ ಕಾಮೆಂಟ್ ಗಳು ವ್ಯತಿರಿಕ್ತವಾಗಿ ಬರುತ್ತಿದ್ದರೆ ಕೆಜಿಎಫ್ ಚಿತ್ರಕ್ಕೆ ಭರಪೂರ ವಿಶ್ ಗಳು ಬರುತ್ತಿವೆ, ಇಷ್ಟೇ ಅಲ್ಲದೆ ಶಾರುಖ್ ಖಾನ್ ಕಳಪೆ ಸಿನೆಮಾಗಳಿಗೆ ಹಲವಾರು ಮಂದಿ ಟ್ರೋಲ್ ಮಾಡುತ್ತಿದ್ದಾರೆ ಮತ್ತು ಕನ್ನಡ ಚಿತ್ರವನ್ನು ಹಾಡಿ ಹೊಗಳುತ್ತಿದ್ದಾರೆ.

 

ಇದನ್ನೆಲ್ಲಾ ಗಮನಿಸಿದರೆ ಜೀರೋ ಚಿತ್ರ ಸದ್ದಿಲ್ಲದೇ ಮೂಲೆಗುಂಪಾಗುವುದು ಖಚಿತವಾಗಿದೆ. ಈ ಇಬ್ಬರ ಕಾಳಗದಲ್ಲಿ ಕೆಜಿಎಫ್ ವಿಜಯವಾಗಿದೆ ಎನ್ನಬಹುದು. ಕೆಜಿಎಫ್ ಚಿತ್ರ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ರ ಜೀರೋ ಚಿತ್ರಕ್ಕೂ ಠಕ್ಕರ್ ನೀಡಿದ್ದು, ಜೀರೋವನ್ನು ಹಿಂದಿಕ್ಕಿದೆ ಕೆಜಿಎಫ್.

KGF ಗೆ ಠಕ್ಕರ್ ಕೊಡುವಲ್ಲಿ ಜೀರೋ ವಿಫಲವಾಗಿದ್ದು ಇನ್ನು ಜೀರೋ ಚಿತ್ರ ದೇಶ-ವಿದೇಶಗಳೂ ಸೇರಿದಂತೆ ಒಟ್ಟು 5965 ಸ್ಕ್ರೀನ್ ಗಳಲ್ಲಿ ತೆರೆ ಕಂಡಿತ್ತು. ಈ ಪೈಕಿ ಭಾರತದಲ್ಲಿ 4380 ಸ್ಕ್ರೀನ್ ಗಳು ಮತ್ತು ವಿದೇಶಗಳಲ್ಲಿ 1585 ಸ್ಕ್ರೀನ್ ಗಳಲ್ಲಿ ಜೀರೋ ತೆರೆಕಂಡಿತ್ತು. ಕೆಜಿಎಫ್ ತೆರೆಕಂಡ ಸ್ಕ್ರೀನ್ ಗಳನ್ನು ಜೀರೋ ತೆರೆಕಂಡ ಸ್ಕ್ರೀನ್ ಗಳಿಗೆ ಹೋಲಿಕೆ ಮಾಡಿದರೆ ಅರ್ಧಕ್ಕರ್ಧ ಕಡಿಮೆ ಸ್ಕ್ರೀನ್ ಗಳಲ್ಲಿ ಕೆಜಿಎಫ್ ತೆರೆ ಕಂಡಿತ್ತು.

ಇದಾಗ್ಯೂ ಕೆಜಿಎಫ್ ಚಿತ್ರಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಿದ್ದ ಪರಿಣಾಮ ಬಾಕ್ಸ್ ಆಫೀಸ್ ಗಳಿಕೆ ಹೆಚ್ಚಾಗಿದೆ. ಮೊದಲ ದಿನದ ಗಳಿಕೆಯ ಸಂಪೂರ್ಣ ಮಾಹಿತಿ ಲಭ್ಯವಾಗಿದ್ದು, ಚಿತ್ರ ಮೊದಲ ದಿನ ಒಟ್ಟು 24  ಕೋಟಿ ರೂಗಳನ್ನು ಗಳಿಕೆ ಮಾಡಿದೆ. ಈ ಪೈಕಿ ಕರ್ನಾಟಕವೊಂದರಲ್ಲೇ ಚಿತ್ರ 18 ಕೋಟಿ ಗಳಿಸಿದ್ದು, ವಿದೇಶಗಳಲ್ಲಿ ಒಂದು ದಿನಕ್ಕೆ 40 ಲಕ್ಷ ರೂ ಗಳಿಸಿದೆ.

Please follow and like us:
0
http://karnatakatoday.in/wp-content/uploads/2018/12/kgf-total-1024x576.jpghttp://karnatakatoday.in/wp-content/uploads/2018/12/kgf-total-150x104.jpgKarnataka Today's Newsನಗರಮಂಗಳೂರುಸುದ್ದಿಜಾಲಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅದ್ಬುತ ಕಲೆಕ್ಷನ್ ಮಾಡುವ ಮೂಲಕ ಕೆಜಿಎಫ್ ಚಿತ್ರ ವಿನೂತನ ದಾಖಲೆ ಬರೆಯುತ್ತಿದ್ದರೆ, ಇತ್ತ ಬಾಲಿವುಡ್ ಮಂದಿ ಕೂಡ ಚಿತ್ರಕ್ಕೆ ಫಿದಾ ಆಗಿದ್ದಾರೆ. ಶಾರುಖ್ ಅಭಿನಯದ ಜೀರೋ ಚಿತ್ರ ಬಹಳಷ್ಟು ಟ್ರೆಂಡ್ ಮಾಡಿದ್ದರೂ ಯಶ್ ಚಿತ್ರದ ಎದುರು ಮಕಾಡೆ ಮಲಗಿದೆ. ಹೌದು ಪ್ರಪ್ರಥಮ ಬಾರಿಗೆ ಐದು ಭಾಷೆಗಳಿಗೆ ಕನ್ನಡ ಚಿತ್ರ ಪೈಪೋಟಿ ನೀಡಿ ಎಲ್ಲರ ಗಮನಸೆಳೆದಿದ್ದು ಇದೀಗ ಚಿತ್ರ ಬಾಕ್ಸ್ ಓಫೀಸ್ ನಲ್ಲಿ ಸದ್ದು ಮಾಡುತ್ತಿದೆ....Kannada News