1000 RS: 1000 ರೂ ನೋಟುಗಳ ಮೇಲೆ ರಾತ್ರೋರಾತ್ರಿ ಇನ್ನೊಂದು ಘೋಷಣೆ ಮಾಡಿದ RBI, ಸಿಕ್ಕಿತು ಸ್ಪಷ್ಟನೆ.
2000 ಸಾವಿರ ರೂಪಾಯಿ ನೋಟುಗಳ ರದ್ದತಿ ನಂತರ, 1000 ಸಾವಿರ ರೂಪಾಯಿ ನೋಟಿನ ಕುರಿತು ಮಹತ್ವದ ಮಾಹಿತಿ ನೀಡಿದ RBI.
1000 RS Note Latest Update: ಭಾರತೀಯ ರಿಸರ್ವ್ ಬ್ಯಾಂಕ್ (RBI) 2000 ರೂಪಾಯಿ ನೋಟುಗಳ ಚಲಾವಣೆಯನ್ನು ಕೆಳೆದ ತಿಂಗಳಿನಿಂದ ರದ್ದು ಪಡಿಸಿದೆ.2000 ರೂಪಾಯಿ ನೋಟುಗಳ ನಂತರ ಆರ್‌ಬಿಐ ಈಗ 1000 ರೂಪಾಯಿ ನೋಟುಗಳನ್ನು ಹೊರತರಲಿದೆ ಎಂಬ ಊಹಾಪೋಹಗಳು ನಡೆಯುತ್ತಿವೆ.
ANI ಸುದ್ದಿ ಸಂಸ್ಥೆಯ ಪ್ರಕಾರ, ಕೇಂದ್ರ ಬ್ಯಾಂಕ್ ಶೀಘ್ರದಲ್ಲೇ ಈ ನಿಟ್ಟಿನಲ್ಲಿ ಮಾಹಿತಿಯನ್ನು ಹಂಚಿಕೊಳ್ಳಬಹುದು. ಇನ್ನು ಕೆಲವು ಮಾಹಿತಿ ಪ್ರಕಾರ RBI 1000 ರೂಪಾಯಿ ನೋಟುಗಳನ್ನು ಮರು-ವಿತರಣೆ ಮಾಡುವುದಿಲ್ಲ ಎಂಬ ವಿಚಾರ ಕೂಡ ಹರಿದಾಡುತ್ತಿದೆ.

2000 ಸಾವಿರ ರೂಪಾಯಿ ನೋಟುಗಳ ರದ್ದತಿ
ಕಳೆದ ತಿಂಗಳಿನಿಂದ 2000 ಸಾವಿರ ರೂಪಾಯಿ ನೋಟುಗಳು ರದ್ದಾಗಿದ್ದು RBI ಕೆಲವು ನಿರ್ದಿಷ್ಟ ಕಾಲ ಮಿತಿಯನ್ನು ನೀಡಿ 2000 ಸಾವಿರ ನೋಟುಗಳನ್ನು ಹೊಂದಿರುವ ಜನರು ತನ್ನ ಬ್ಯಾಂಕ್ ಖಾತೆಗೆ ಠೇವಣಿ ಅಥವಾ ವಿನಿಮಯ ಮಾಡಿಕೊಳ್ಳುವಂತೆ ಆದೇಶ ನೀಡಿತ್ತು. ಅದರಂತೆ ಜನರು ತಮ್ಮ ಬಳಿ ಇದ್ದ 2000 ಹಣವನ್ನು ವಿನಿಮಯ ಮಾಡಿಕೊಂಡಿದ್ದಾರೆ. ಅಂತೆಯೇ ಈಗ 2000 ಸಾವಿರ ನೋಟಿನ ಚಲಾವಣೆ ರದ್ದಾಗಿದೆ.

1000 ಸಾವಿರ ನೋಟುಗಳ ಮರು ವಿತರಣೆ
2000 ಸಾವಿರ ನೋಟು ರದ್ದಾಗುತ್ತಿದೆ ಎಂಬ ವಿಚಾರ ಹೊರಬಿದ್ದಂತೆ 1000 ಸಾವಿರ ರೂಪಾಯಿ ನೋಟು ಚಲಾವಣೆಗೆ ಬರುತ್ತದೆ ಎಂಬ ಮಾಹಿತಿ ಹೊರಬಿದ್ದಿದೆ. ಆದರೆ ಈ ವಿಷಯವಾಗಿ RBI ಯಾವುದೇ ನಿರ್ದಿಷ್ಟ ಮಾಹಿತಿ ನೀಡಿಲ್ಲ ಎನ್ನಲಾಗಿದೆ.
ಇನ್ನು ಕೆಲವು ಮಾಹಿತಿ ಪ್ರಕಾರ 1000 ರೂಪಾಯಿ ನೋಟು ಮತ್ತೆ ಮರು ವಿತರಣೆ ಅಸಾಧ್ಯ ಎಂಬುವುದಾಗಿದೆ. ಈ ಹಿಂದೆ ಇದ್ದ 1000 ರೂಪಾಯಿ ನೋಟನ್ನು ರದ್ದು ಮಾಡಿ 2000 ರೂಪಾಯಿ ನೋಟನ್ನು ಬಿಡುಗಡೆ ಮಾಡಿದ್ದೂ, ಈಗ ಮತ್ತೆ ಅದೇ ನೋಟು ಜಾರಿಗೆ ಬರುವುದರ ಕುರಿತು ಅನುಮಾನವಿದೆ ಎನ್ನಲಾಗುತ್ತಿದೆ. ಸದ್ಯ ಭಾರತದಲ್ಲಿ ಇರುವ 500 ರೂ ನೋಟುಗಳೇ ಅತೀ ದೊಡ್ಡ ನೋಟುಗಳಾಗಿದ್ದು ಮತ್ತೆ 1000 ರೂ ನೋಟುಗಳನ್ನ ಜಾರಿಗೆ ತರುವ ಯಾವುದೇ ಆಲೋಚನೆ ಇಲ್ಲ ಎಂದು RBI ತಿಳಿಸಿದೆ.