Old Vehicles: ಇಂತಹ ವಾಹನಗಳನ್ನ ಗುಜರಿಗೆ ಹಾಕಲು ಕೇಂದ್ರ ಸರ್ಕಾರದ ಆದೇಶ, ಇದರಲ್ಲಿ ನಿಮ್ಮ ವಾಹನ ಕೂಡ ಇದೆ.
ಹಲವು ವರ್ಷಗಳ ವಾಹನಗಳಿಗೆ ಸಾರಿಗೆ ಇಲಾಖೆಯಿಂದ ಮುಕ್ತಿ.
15 Years Old Government Vehicles Ban: ರಾಜ್ಯದಲ್ಲಿ ಹಳೆಯ ವಾಹನ ನಾಶಪಡಿಸಲು ನೋಂದಾಯಿತ ವಾಹನಗಳ ಸ್ಕ್ರಾಪಿಂಗ್ ಪಾಲಿಸಿ 2022ರ ಅಡಿಯಲ್ಲಿ 15 ವರ್ಷ ಪೂರ್ಣಗೊಂಡ ಸರ್ಕಾರಿ ಸ್ವಾಮ್ಯದ ವಾಹನಗಳನ್ನು ಆದ್ಯತೆ ಮತ್ತು ಉಪಯೋಗದ ಆಧಾರದ ಮೇಲೆ ಹಂತ ಹಂತವಾಗಿ ನಾಶಪಡಿಸಲು ಸಾರಿಗೆ ಇಲಾಖೆ ವತಿಯಿಂದ ಅನುಮೋದನೆ ನೀಡಿ ಆದೇಶಿಸಲಾಗಿದೆ.
ಅತಿ ಹೆಚ್ಚು ವರ್ಷಗಳನ್ನು ಪೂರ್ಣಗೊಳಿಸಿದ ವಾಹನಗಳನ್ನು ಮೊದಲು ನಾಶ ಮಾಡಲು ಆದ್ಯತೆ ನೀಡಬೇಕು ಎಂದು ತಿಳಿಸಲಾಗಿದೆ. 15 ವರ್ಷ ಪೂರ್ಣಗೊಂಡ 5000 ಸರ್ಕಾರಿ ವಾಹನಗಳ ಗುಜರಿಗೆ ಹಾಕಲು ಸಾರಿಗೆ ಇಲಾಖೆ ಅನುಮೋದನೆ ನೀಡಿ ಆದೇಶಿಸಿದೆ.
ಸಾರಿಗೆ ಸಂಸ್ಥೆಯಲ್ಲಿನ ಕೆಲವು ವಾಹನಗಳ ನಾಶಕ್ಕೆ ಆದೇಶಿಸಲಾಗಿದೆ
ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು, ನಿಗಮ, ಮಂಡಳಿ, ಸ್ಥಳೀಯ ಸಂಸ್ಥೆಗಳಲ್ಲಿನ 15 ವರ್ಷ ಪೂರ್ಣಗೊಂಡ 5000 ವಾಹನಗಳನ್ನು ನಾಶಪಡಿಸಲು ಸರ್ಕಾರದಿಂದ ಅನುಮತಿ ನೀಡಲಾಗಿದೆ.
ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ನಾಶಪಡಿಸಲು ಉದ್ದೇಶಿಸಿದ ವಾಹನದ ಮೇಲಿನ ಕೊನೆಯ ಒಂದು ವರ್ಷದಲ್ಲಿ ಸಾರಿಗೆ ಇಲಾಖೆಯ ಶಾಸನದ ಕ್ರಮದ ಅಡಿಯಲ್ಲಿ ದಾಖಲಾದ ಪ್ರಕರಣದ ದಂಡಗಳು ಮತ್ತು ಪೊಲೀಸ್ ಇಲಾಖೆಯ ಸಂಚಾರ ನಿಯಮ ಉಲ್ಲಂಘನೆ ಅಡಿ ದಾಖಲಾದ ಪ್ರಕರಣಗಳಿಗೆ ಸೀಮಿತಗೊಳಿಸಿ ದಂಡಗಳ ವಸೂಲಾತಿಯಿಂದ ವಿನಾಯಿತಿ ನೀಡಲಾಗಿದೆ. 15 ವರ್ಷ ಪೂರ್ಣಗೊಂಡ ಸರ್ಕಾರಿ ವಾಹನಗಳ ನಾಶಕ್ಕೆ ಅನುಮತಿ ನೀಡಿ ಆದೇಶಿಸಲಾಗಿದೆ.
ಹಲವು ವಾಹನಗಳ ಚಲಾವಣೆ ಸ್ಥಗಿತ
ಸಾರಿಗೆ ಇಲಾಖೆಯ 15 ವರ್ಷ ಪೂರ್ಣಗೊಂಡ ಸರ್ಕಾರಿ ವಾಹನಗಳು ಹಾಗು ಅನೇಕ ರಿಪೇರಿ ವಾಹನಗಳ ಚಲಾವಣೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇಂಥಹ ವಾಹನಗಳು ಚಲಾವಣೆಗೆ ಸುರಕ್ಷಿತವಲ್ಲ ಎನ್ನುವ ಕಾರಣದಿಂದ ಈ ನಿಯಮವನ್ನು ಜಾರಿಗೊಳಿಸಲಾಗಿದೆ.