Next PM: ಮೋದಿ ನಂತರ ದೇಶದ ಪ್ರಧಾನಿ ಯಾರಾಗಲಿದ್ದಾರೆ…? ಸಮೀಕ್ಷೆಯಿಂದ ಹೇಳುವುದೇನು ಗೊತ್ತಾ.
ಸಮೀಕ್ಷೆಯ ಪ್ರಕಾರ 2024 ರ ಪ್ರಧಾನಿಯ ಬಗ್ಗೆ ಮಾಹಿತಿ ಲಭಿಸಿದೆ.
Indian next Prime Minister: ನರೇಂದ್ರ ಮೋದಿ (Narendra Modi) ಅವರು ಭಾರತದ ಪ್ರಸ್ತುತ ಪ್ರಧಾನಿ ಆಗಿದ್ದಾರೆ. ಭಾರತದ 14 ನೇ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಆಯ್ಕೆಯಾಗಿದ್ದರು. ಇನ್ನು 2024 ಕ್ಕೆ ಪ್ರದಾನಿ ಮೋದಿ ಅವರು ಪ್ರಧಾನಿಯಾಗಿ ಬರೋಬ್ಬರಿ 10 ವರ್ಷ ಪೂರೈಸಲಿದ್ದಾರೆ.
ಪ್ರಧಾನಿ ಮೋದಿ ಅವರು ಭಾರತದ ಪ್ರಧಾನಿಯಾಗಿ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಇನ್ನು ಹಿರಿಯ ನಾಗರೀಕರಿಗೆ, ಮಹಿಳೆಯರಿಗೆ, ಮಕ್ಕಳಿಗೆ ವಿವಿಧ ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಾ ಜನಸಾಮಾನ್ಯರಿಗೆ ಆರ್ಥಿಕವಾಗಿ ನೆರವಾಗಿದ್ದಾರೆ.
ಮೋದಿ ನಂತರ ಯಾರಾಗಲಿದ್ದಾರೆ ದೇಶದ ಪ್ರಧಾನಿ
ಇನ್ನು 2024 ಕ್ಕೆ ಪ್ರಧಾನಿ ಆಯ್ಕೆ ಆಗಬೇಕಿದೆ. ಸಮೀಕ್ಷೆಯ ಪ್ರಕಾರ 2024 ರ ಪ್ರಧಾನಿಯ ಬಗ್ಗೆ ಮಾಹಿತಿ ಲಭಿಸಿದೆ. ಇನ್ನು ರಾಹುಲ್ ಗಾಂಧಿ ಅವರು ಪ್ರಧಾನಿ ಆಗುವ ಆಕಾಂಕ್ಷಿಯಾಗಿದ್ದಾರೆ. ರಾಹುಲ್ ಗಾಂಧಿ ಅವರು ಪ್ರಧಾನಿ ಆಗುವ ಸಾಧ್ಯತೆ ಇದೆ ಎನ್ನುವ ಸುದ್ದಿ ಕೂಡ ಕೇಳಿಬರುತ್ತಿದೆ. ಭಾರತ್ ಜೋಡೋ ಯಾತ್ರೆ ಮೂಲಕ ರಾಹುಲ್ ಅವರು ಜನರನ್ನು ಸೆಳೆಯಲು ಪ್ರಯತ್ನಿಸಿದ್ದರು.
ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿಯವರೇ ಸಾಮಾನ್ಯ ಜನರ ಅತಿದೊಡ್ಡ ಆಯ್ಕೆ ಎಂದು ಹೇಳಲಾಗಿತ್ತು. ಸತತ ಮೂರನೇ ಬಾರಿಯೂ ಮೋದಿಯೇ ಪ್ರಧಾನಿ ಆಗಲಿ ಎಂದು ಶೇ. 43 ರಷ್ಟು ಜನರು ಬಯಸುತ್ತಿದ್ದಾರೆ. ಆದರೆ ಇದೀಗ 2024 ರ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದ ಕಾರಣ ಮುಂದಿನ ಪ್ರಧಾನಿಯ ಬಗ್ಗೆ ಮ್ಯಾಟೊಮೆ ಸಮೀಕ್ಷೆ ನಡೆದಿದೆ. ಸಮೀಕ್ಷೆಯಲ್ಲಿ ಮೋದಿ ಅವರ ನಂತ್ರ ಉತ್ತರಾಧಿಕಾರಿಯಾಗಲು ಯಾವ ಬಿಜೆಪಿ ನಾಯಕ ಸೂಕ್ತ ಎನ್ನುವ ಬಗ್ಗೆ ಸಮೀಕ್ಷೆಯಲ್ಲಿ ಸಾಕಷ್ಟು ಚರ್ಚೆ ನಡೆದಿದೆ.
2024 ರ ಪ್ರಧಾನಿ ಸ್ಥಾನ ಯಾರದ್ದಾಗಲಿದೆ…?
ಇಂಡಿಯಾ ಟುಡೇ -ಸಿ ವೋಟರ್ ನ ಮೂಡ್ ಆಫ್ ದಿ ನೇಷನ್ ಪೋಲ್ ಸಮೀಕ್ಷೆಯಲ್ಲಿ ಮೋದಿ ನಂತರ ಆಗುವ ಪ್ರಧಾನಿಯ ಬಗ್ಗೆ ಚರ್ಚೆ ನಡೆದಿದೆ. ಸಮೀಕ್ಷೆಯಲ್ಲಿ ಜನರು ಅಮಿತ್ ಶಾ, ಯೋಗಿ ಆದಿತ್ಯನಾಥ್ ಮತ್ತು ನಿತಿನ್ ಗಡ್ಕರಿ ಅವರಿಗೆ ಮತ ಹಾಕಲಾಗಿದೆ.
ಸಮೀಕ್ಷೆಯಲ್ಲಿ ಅಮಿತ್ ಶಾ ಅವರಿಗೆ ಶೇ. 29 ರಷ್ಟು, ಯೋಗಿ ಆದಿತ್ಯನಾಥ್ ಅವರಿಗೆ ಶೇ. 26 ರಷ್ಟು ಹಾಗೂ ಶೇ. 15 ರಷ್ಟು ನಿತಿನ್ ಗಡ್ಕರಿಯವರಿಗೆ ಪ್ರಧಾನಿ ಸ್ಥಾನಕ್ಕಾಗಿ ಮತ ಹಾಕಲಾಗಿದೆ. ಅಮಿತ್ ಶಾ, ಯೋಗಿ ಆದಿತ್ಯನಾಥ್ ಮತ್ತು ನಿತಿನ್ ಗಡ್ಕರಿ ಆವರಲ್ಲಿ ಯಾರು ದೇಶದ ಪ್ರಧಾನಿ ಆಗಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.