7th Pay: ಬಾಡಿಗೆ ಮನೆಯಲ್ಲಿ ಇರುವ ಸರ್ಕಾರೀ ನೌಕರರಿಗೆ ಬರುತ್ತಾ ಗುಡ್ ನ್ಯೂಸ್, ಕೇಂದ್ರದ ನಿರ್ಧಾರ ಅಂತಿಮ.
ಸರ್ಕಾರೀ ನೌಕರರ ಮನೆ ಬಾಡಿಗೆ ಭತ್ಯೆ ಮತ್ತು ಇತರೆ ಬೇಡಿಕೆ ಈಡೇರುತ್ತಾ.
7th Pay Commission Latest Update: ಕರ್ನಾಟಕ ಸರ್ಕಾರಕ್ಕೆ ನವೆಂಬರ್ ತಿಂಗಳಲ್ಲಿ 7ನೇ ರಾಜ್ಯ ವೇತನ ಆಯೋಗ ವರದಿ ನೀಡುವ ನಿರೀಕ್ಷೆ ಇದ್ದು. ಸರ್ಕಾರಿ ನೌಕರರು, ಆಯೋಗವು ಯಾವ ಭತ್ಯೆಯನ್ನು, ಎಷ್ಟು ಹೆಚ್ಚಳ ಮಾಡಬಹುದು ಎಂದು ಕಾಯುತ್ತಿದ್ದಾರೆ.
ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗಕ್ಕೆ ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ ವರದಿಯನ್ನು ಸಲ್ಲಿಕೆ ಮಾಡಿದೆ. ಈ ವರದಿಯಲ್ಲಿ ವಿವಿಧ ಭತ್ಯೆಗಳನ್ನು ಕಾಲಕ್ಕೆ ತಕ್ಕಂತೆ ಪರಿಷ್ಕರಣೆ ಮಾಡಬೇಕು ಎಂದು ಬೇಡಿಕೆ ಇಡಲಾಗಿದೆ. ಮನೆ ಬಾಡಿಗೆ ಸೇರಿ ಇತರ ಭತ್ಯೆಗಳ ಹೆಚ್ಚಳಕ್ಕೆ ಸಂಘ ಮುಂದಿಟ್ಟಿರುವ ಬೇಡಿಕೆಗಳ ವಿವರ ಇಲ್ಲಿದೆ.

ಗೃಹ ಪರಿಚಾರಕ ಭತ್ಯೆ ನೀಡುವಂತೆ ಬೇಡಿಕೆ
ಗೃಹ ಪರಿಚಾರಕ ಭತ್ಯೆ ಬಹಳ ಪ್ರಮುಖವಾಗಿದೆ ಎನ್ನಲಾಗಿದೆ. ಉಪ ಕಾರ್ಯದರ್ಶಿ ಮೇಲ್ಪಟ್ಟ ವೃಂದದ ಅಧಿಕಾರಿಗಳಿಗೆ ಗೃಹ ಪರಿಚಾರಕ ಭತ್ಯೆಯನ್ನು ಕನಿಷ್ಠ ರೂ. 11,000ಗಳಿಗೆ ನಿಗದಿಪಡಿಸುವುದು ಎಂದು ಮನವಿ ಮಾಡಲಾಗಿದೆ. ಗೃಹ ಪರಿಚಾರಕ ಭತ್ಯೆಯನ್ನು cs ಹುದ್ದೆಗೆ 20,000. acs ಹುದ್ದೆಗೆ 20,000. Pr.S ಹುದ್ದೆಗೆ 16,000. Sec ಹುದ್ದೆಗೆ 14,000. Spl. Sec/As/ JS/DS ಹುದ್ದೆಗೆ 12,000 ರೂ. ನಿಗದಿಪಡಿಸಬೇಕು ಎಂದು ಮನವಿ ಮಾಡಲಾಗಿದೆ.
ಮನೆ ಬಾಡಿಗೆ ಭತ್ಯೆ ಬೇಡಿಕೆ
ನಗರ ಪ್ರದೇಶದ ಬಾಡಿಗೆ ಮನೆಯಲ್ಲಿ ಅಧಿಕಾರಿಗಳು ವಾಸ ಮಾಡುವುದರಿಂದ ಮನೆ ಬಾಡಿಗೆ ಭತ್ಯೆ ನೀಡುವಂತೆ ಬೇಡಿಕೆ ಇಡಲಾಗಿದೆ. ತುಟ್ಟಿ ಭತ್ಯೆ ಶೇ.50% ಮೀರಿದ ನಂತರ ಸ್ವಯಂ ಚಾಲಿತವಾಗಿ ನಗರ ಶ್ರೇಣಿಗನುಸಾರ ಶೇ.3%, ಶೇ.2% ಹಾಗೂ ಶೇ.1% ಕೇಂದ್ರ ಸರ್ಕಾರಿ ನೌಕರರಿಗೂ ಹೆಚ್ಚಳವಾಗುವಂತೆ ಹಾಗೂ ಪ್ರಸ್ತುತ ದಿನಾಂಕ 01-07-2021 ರಿಂದಲೇ ಶೇ.27% (ಬೆಂಗಳೂರು ನಗರ) ಮನೆ ಬಾಡಿಗೆ ಭತ್ಯೆ ಪರಿಷ್ಕರಿಸಲು ಹಾಗೂ ಇತರ ರಾಜ್ಯ ನಗರ ಪ್ರದೇಶಳಿಗೂ ಪರಿಷ್ಕರಿಸಿ ನೀಡಬೇಕು.

ಪ್ರಯಾಣ ಭತ್ಯೆಗಳ ಕುರಿತು ಬೇಡಿಕೆ
ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಅಧಿಕಾರಿಗಳು, ನೌಕರರು ಬಹಳ ದೂರದ ಪ್ರಯಾಣ ಪ್ರತಿ ನಿತ್ಯ ಮಾಡಬೇಕಾಗುತ್ತದೆ. ಆ ನಿಟ್ಟಿನಲ್ಲಿ ಬಸ್ , ಮೆಟ್ರೋ, ರೈಲು ಹಾಗು ಇನ್ನಿತರ ವಾಹನಗಳಲ್ಲಿ ಕೇಂದ್ರ ಸ್ಥಾನದಲ್ಲಿರುವ ಸಚಿವಾಲಯದ ಕಚೇರಿಗಳಿಗೆ ಪ್ರಯಾಣಿಸುತ್ತಾರೆ. ಅದು ಅಲ್ಲದೆ ಪ್ರತಿ ನಿತ್ಯ ಪ್ರಯಾಣ ಮಾಡಲು ಅದಕ್ಕೆ ಬಹಳ ಹಣ ಖರ್ಚಾಗುತ್ತದೆ ಆದುದರಿಂದ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ನೀಡಲಾಗುತ್ತಿರುವ ಮಾದರಿಯಲ್ಲಿ ಪ್ರಯಾಣ ಭತ್ಯೆ ನೀಡಬೇಕೆಂದು ಬೇಡಿಕೆಯನ್ನು ಇಡಲಾಗಿದೆ
ಅಲ್ಪೋಪಹಾರ ಭತ್ಯೆ (Sumputuary Allowance) ಬೇಡಿಕೆ
ಅಲ್ಪೋಪಹಾರ ಭತ್ಯೆ (Sumputuary Allowance) ಉಪ ಕಾರ್ಯದರ್ಶಿ ವೃಂದಕ್ಕೆ ಪ್ರಸ್ತುತ ವಾರ್ಷಿಕ ರೂ. 10000 ಗಳಿದ್ದು, ಜಂಟಿ ಕಾರ್ಯದರ್ಶಿ ಮೇಲ್ಪಟ್ಟ ವೃಂದದ ಅಧಿಕಾರಿಗಳಿಗೆ ಪ್ರಸ್ತುತ ವಾರ್ಷಿಕ ರೂ. 12,500 ಗಳಿದ್ದು ಅದನ್ನು ಮಾಸಿಕ ರೂ. 3000 ಗಳಿಗೆ ನಿಗದಿಪಡಿಸುವಂತೆ ಕೋರಲಾಗಿದೆ. ಕರ್ನಾಟಕ ಆರೋಗ್ಯ ಜ್ಯೋತಿ ಸಂಜೀವಿನಿ ಯೋಜನೆಯನ್ನು (Cash less Treatment) ನೌಕರರ ಹಿತದೃಷ್ಟಿಯಿಂದ ಶೀಘ್ರವಾಗಿ ಜಾರಿಗೊಳಿಸಬೇಕು ಎಂದು ಬೇಡಿಕೆ ಸಲ್ಲಿಸಲಾಗಿದೆ.
ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ವಾಹನ ತೆರಿಗೆ ವಿನಾಯಿತಿ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ವಾಹನ ತೆರಿಗೆ ವಿನಾಯಿತಿ ನೀಡಬೇಕು. ಸಚಿವಾಲಯದ ಅಧಿಕಾರಿಗಳಿಗೆ ಈಗಾಗಲೇ ನೀಡಲಾಗುತ್ತಿರುವ ದೂರವಾಣಿ ವೆಚ್ಚ ಮರುಪಾವತಿಯನ್ನು ಗ್ರೂಪ್-ಸಿ ವೃಂದದ ನೌಕರರಿಗೂ ವಿಸ್ತರಿಸಬೇಕು.

ಕೇಂದ್ರ ನೌಕರರ ರಜೆ ಮಾದರಿಯಂತೆ ರಾಜ್ಯ ನೌಕರರಿಗೆ ರಜೆ ನೀಡಬೇಕು
ಕೇಂದ್ರ ಸರ್ಕಾರದ ಮಾದರಿಯಂತೆ, ರಾಜ್ಯ ಸರ್ಕಾರಿ ನೌಕರರಿಗೂ ನಿವೃತ್ತಿಯ ದಿನ ಅವರ ಹಕ್ಕಿನಲ್ಲಿರುವ (ಗಳಿಕೆ ರಜೆ ಹಾಗೂ ಅರ್ಧ ವೇತನ ರಜೆ) ಎರಡನ್ನೂ ಪರಿಗಣನೆಗೆ ತೆಗೆದುಕೊಂಡು, ಗರಿಷ್ಠ 300 ದಿನಗಳ ನಗದೀಕರಣ ಸೌಲಭ್ಯ ನೀಡುವುದು. ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೂ ಮೂಲ ವೇತನದ ಶೇಕಡವಾರು ದರದಲ್ಲಿ ನಗರ ಪರಿಹಾರ ಭತ್ಯೆಯನ್ನು ನೀಡುವುದು ಎಂದು ಮನವಿ ಮಾಡಲಾಗಿದೆ.
ಮಕ್ಕಳ ಶಿಕ್ಷಣ ಭತ್ಯೆ (Children’s Education Allowance )ಬೇಡಿಕೆ
ಕೇಂದ್ರ ಸರ್ಕಾರವು ನೌಕರರಿಗೆ ಮಕ್ಕಳ ಶಿಕ್ಷಣ ಭತ್ಯೆ ತಿಂಗಳಿಗೆ ರೂ.2,250 + ಹಾಸ್ಟೆಲ್ ಸಬ್ಸಿಡಿ ರೂ. 6,750 (ಎರಡು ಮಕ್ಕಳಿಗೆ) ನೀಡುತ್ತಿರುವ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ನೀಡುವುದು. ಕೇಂದ್ರ ಸರ್ಕಾರದ ಮಾದರಿಯಲ್ಲಿ Leave Travel Concession (ರಜೆ ಪ್ರಯಾಣ ರಿಯಾಯಿತಿ) ಯನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ರಾಜ್ಯ ಸರ್ಕಾರಿ ನೌಕರರಿಗೂ ನೀಡಬೇಕು ಎಂದು ವರದಿಯಲ್ಲಿ ಕೋರಲಾಗಿದೆ. ಕೇಂದ್ರ ಸರ್ಕಾರದ ಮಾದರಿಯಂತೆ Child Care Leave (ಮಕ್ಕಳ ಹಾರೈಕೆ ರಜೆಯನ್ನು ರಾಜ್ಯ ಸರ್ಕಾರದ ಮಹಿಳಾ ನೌಕರರಿಗೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಆರೈಕೆಗಾಗಿ 730 ದಿನಗಳ ರಜೆಯನ್ನು ಹೆಚ್ಚಿಸುವುದು.