Bank Loan Rules: ಜನರು ವಿವಿಧ ರೀತಿಯ ಸಾಲಗಳನ್ನು ಬ್ಯಾಂಕ್ ಗಳಲ್ಲಿ ಪಡೆಯುತ್ತಾರೆ. ಆದರೆ ಒಂದು ಬ್ಯಾಂಕ್ ನಲ್ಲಿ ಸಾಲ ಪಡೆಯುವ ಮುಂಚೆ ಬ್ಯಾಂಕ್ ನಲ್ಲಿ ಬಡ್ಡಿ ಹೇಗಿದೆ. ಇಎಂಐ ಎಷ್ಟು ಇದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಇಲ್ಲದೇ ಹೋದರೆ ಮುಂದೆ ನಷ್ಟ ಅನುಭವಿಸಬೇಕಾಗುತ್ತದೆ.ಕೆಲವು ಬ್ಯಾಂಕ್ ಗಳು ಗ್ರಾಹಕರಿಗೆ ಯಾವುದೇ ಮಾಹಿತಿ ನೀಡದೆ ಬಡ್ಡಿ ಅಂದರೆ ಇಎಂಐ ಹೆಚ್ಚಿಸಿಬಿಡುತ್ತದೆ.
ಆರ್ಬಿಐ(RBI) ರೆಪೋ ದರ ಹೆಚ್ಚು ಮಾಡಿದ್ರೆ ಕೆಲ ಬ್ಯಾಂಕ್ಗಳಲ್ಲಿ ಬಡ್ಡಿ ದರ ಹೆಚ್ಚಳ ಮಾಡುತ್ತದೆ.ಆದ್ರೆ ಈಗ ರೆಪೋ ದರ ಹೆಚ್ಚಳವಾಗಿಲ್ಲ. ಆದರೂ ಕೂಡಾ ಕೆಲವು ಬ್ಯಾಂಕ್ ಗಳು ಬಡ್ಡಿ ದರ ಹೆಚ್ಚಳ ಮಾಡಿದೆ.

ಆಗಸ್ಟ್ 8 ರಿಂದ 10 ರಂದು ನಡೆದ ಆರ್ಬಿಐನ ಹಣಕಾಸು ನೀತಿ ಸಭೆಯಲ್ಲಿ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಇರಿಸಲು ನಿರ್ಧರಿಸಲಾಯಿತು, ನಂತರ ಕೆಲವು ಬ್ಯಾಂಕ್ಗಳು ಸಾಲದ ಬಡ್ಡಿ ದರವನ್ನು ಹೆಚ್ಚಿಸಿವೆ.ಎಚ್ಡಿಎಫ್ಸಿ(HDFC) ಬ್ಯಾಂಕ್ನಿಂದ ಸಾಲ
ಎಚ್ಡಿಎಫ್ಸಿ ಬ್ಯಾಂಕ್ ನಿಧಿ ಆಧಾರಿತ ಸಾಲದ ದರಗಳ ಬೆಂಚ್ಮಾರ್ಕ್ ಮಾರ್ಜಿನಲ್ ಕಾಸ್ಟ್ ಅನ್ನು 15 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದೆ. ಕೆಲವು ಆಯ್ದ ಅವಧಿಗಳಿಗೆ ಈ ಹೆಚ್ಚಳ ಮಾಡಲಾಗಿದೆ. ಹೊಸ ದರವು 7 ಆಗಸ್ಟ್ 2023 ರಿಂದ ಜಾರಿಗೆ ಬರಲಿದೆ. ಈಗ ಬಡ್ಡಿಯನ್ನು ರಾತ್ರೋರಾತ್ರಿ ಶೇ.8.35ಕ್ಕೆ ಮತ್ತು ಮೂರು ವರ್ಷಕ್ಕೆ ಶೇ.9.20ಕ್ಕೆ ಇಳಿಸಲಾಗಿದೆ.
ಐಸಿಐಸಿಐ ಬ್ಯಾಂಕ್
ಐಸಿಐಸಿಐ ಬ್ಯಾಂಕ್(ICICI Bank) ಎಲ್ಲಾ ಅವಧಿಗಳಿಗೆ ಎಂಸಿಎಲ್ಆರ್ ಅನ್ನು 5 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದೆ. ಐಸಿಐಸಿಐ ಬ್ಯಾಂಕ್ನ ವೆಬ್ಸೈಟ್ ಪ್ರಕಾರ, ರಾತ್ರಿಯ ಮತ್ತು ಒಂದು ತಿಂಗಳ ಎಂಸಿಎಲ್ಆರ್ ಶೇಕಡಾ 8.35 ರಿಂದ ಶೇಕಡಾ 8.40 ಕ್ಕೆ ಏರಿದೆ. ಮೂರು ತಿಂಗಳು ಮತ್ತು ಆರು ತಿಂಗಳ ಎಂಸಿಎಲ್ಆರ್ ಶೇಕಡಾ 8.45 ಮತ್ತು ಶೇಕಡಾ 8.80 ಆಗಿದೆ. ಅದೇ ರೀತಿ ಒಂದು ವರ್ಷದ ಎಂಸಿಎಲ್ಆರ್ ಶೇ.8.90 ಆಗಿದೆ.
ಬ್ಯಾಂಕ್ ಆಫ್ ಇಂಡಿಯಾ
ಈ ಬ್ಯಾಂಕ್ ಕೆಲವೇ ಅವಧಿಗಳಿಗೆ ಎಂಸಿಎಲ್ಆರ್ ಅನ್ನು ಹೆಚ್ಚಿಸಿದೆ. ಬ್ಯಾಂಕ್ನ ವೆಬ್ಸೈಟ್ ಪ್ರಕಾರ, ಬಡ್ಡಿ ದರವು ಶೇಕಡಾ 7.95 ಆಗಿದೆ, ಒಂದು ವರ್ಷದ ಎಂಸಿಎಲ್ಆರ್ ಶೇಕಡಾ 8.15 ಆಗಿದೆ. ಮೂರು ತಿಂಗಳಿಗೆ ಶೇ.8.30 ಮತ್ತು ಆರು ತಿಂಗಳಿಗೆ ಶೇ.8.50. ಒಂದು ವರ್ಷದ ಎಂಸಿಎಲ್ಆರ್ ಶೇ 8.70ರಷ್ಟಿದೆ.

ಕೆನರಾ ಬ್ಯಾಂಕ್
ಕೆನರಾ ಬ್ಯಾಂಕ್ ಎಂಸಿಎಲ್ಆರ್ ಅನ್ನು ಐದು ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದೆ ಎಂದು ಬ್ಯಾಂಕ್ ತನ್ನ ಫೈಲಿಂಗ್ನಲ್ಲಿ ತಿಳಿಸಿದೆ. ಈ ಹೊಸ ದರವು 12 ಆಗಸ್ಟ್ 2023 ರಿಂದ ಅನ್ವಯವಾಗುತ್ತದೆ. ಇಲ್ಲಿ ನಿಗಿದತ ಅವಧಿಗೆ ಎಂಸಿಎಲ್ಆರ್ ದರವು 7.95 ಪ್ರತಿಶತ, ಆರು ತಿಂಗಳ ಎಂಸಿಎಲ್ಆರ್ ಶೇಕಡಾ 8.5 ಮತ್ತು ಒಂದು ವರ್ಷದ ಎಂಸಿಎಲ್ಆರ್ ಶೇಕಡಾ 8.7 ಆಗಿದೆ.
ಆರ್ಬಿಐ ರೆಪೋ ದರ ಬದಲಿಸದಿದ್ರೂ ಕೂಡಾ ಕೆಲ ಬ್ಯಾಂಕ್ಗಳಲ್ಲಿ ಬಡ್ಡಿ ದರ ಹೆಚ್ಚಳ ಮಾಡಿದ್ದು, ಗ್ರಾಹಕರ ಮೇಲಿನ ಹೊರಡ ಹೆಚ್ಚಳವಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರಗಳ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದ್ರೂ ಸಹ ಆಗಸ್ಟ್ನಲ್ಲಿ ದೊಡ್ಡ ಖಾಸಗಿ ಬ್ಯಾಂಕ್ಗಳು ಸಾಲಗಾರರಿಗೆ ದೊಡ್ಡ ಹೊಡೆತ ನೀಡಿವೆ. ಈ ಬ್ಯಾಂಕುಗಳು ಫಂಡ್ ಆಧಾರಿತ ಸಾಲದ ದರಗಳ ಕನಿಷ್ಠ ವೆಚ್ಚವನ್ನು ಹೆಚ್ಚಿಸಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರದ ನಿರ್ಧಾರಕ್ಕೂ ಮುನ್ನವೇ ಕೆಲವು ಬ್ಯಾಂಕ್ಗಳು ಸಾಲ ಹೆಚ್ಚಳವನ್ನು ಘೋಷಿಸಿದ್ದವು.