Aadhaar Lock: ಆಧಾರ್ ಕಾರ್ಡ್ ಕಳೆದುಕೊಂಡರೆ ನಂಬರ್ ಲಾಕ್ ಮಾಡುವುದು ಹೇಗೆ…? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

ಆಧಾರ್ ಕಾರ್ಡ್ ಅನ್ನು ಕಳೆದುಕೊಂಡರೆ ಇನ್ನು ಚಿಂತಿಸುವ ಅವಶ್ಯಕತೆ ಇಲ್ಲ, ಈ ರೀತಿ ಆಧಾರ್ ನಂಬರ್ ಲಾಕ್ ಮಾಡಿ.

Aadhaar Card Number Lock: ಆಧಾರ್ ಕಾರ್ಡ್ (Aadhaar Card) ಪ್ರತಿ ವ್ಯಕ್ತಿಯ ಗುರುತಿನ ಚೀಟಿ. ಈ ಆಧಾರ್ ಕಾರ್ಡ್ ಇಲ್ಲದೆ ಇದ್ದರೆ ಯಾವುದೇ ಕೆಲಸಗಳನ್ನು ನೆಡೆಸಲು ಸಾಧ್ಯವಿಲ್ಲ. ಸರಕಾರದ ಪ್ರತಿ ಯೋಜನೆಗಳಿಗೆ, ಸೌಲತ್ತು ಪಡೆಯಲು, ಬ್ಯಾಂಕ್ ಉದ್ದೇಶಗಳಿಗಾಗಿ ಹೀಗೆ ಪ್ರತಿಯೊಂದು ಕೆಲಸಕ್ಕೂ ಆಧಾರ್ ಕಾರ್ಡ್ ಬಹಳ ಮುಖ್ಯವಾಗಿದೆ.

ಈ ಮುಖ್ಯ ದಾಖಲೆ ಕಳೆದು ಹೋದರೆ ಏನು ಮಾಡಬೇಕು ಎಂಬ ವಿಷಯ ತಿಳಿದುಕೊಳ್ಳುವುದು ಕೂಡ ಅವಶ್ಯಕ ಆಗಿದೆ. ಸದ್ಯ ಆಧಾರ್ ಕಾರ್ಡ್ ಇಲ್ಲದೇ ಇದ್ದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ಆಧಾರ್ ಕಾರ್ಡ್ ಅನ್ನು ಕಳೆದುಕೊಂಡಾಗ ಬೇರೆಯವರು ಅದನ್ನು ಬಳಸದೆ ಇರುವ ಹಾಗೆ ಮಾಡಲು ಒಂದು ಮಾರ್ಗವಿದೆ ಅದೇನೆಂದು ತಿಳಿಯೋಣ .

Aadhaar Card Latest Update
Image Credit: Dnaindia

ಆಧಾರ್ ಕಾರ್ಡ್ ಸಂಖ್ಯೆಯನ್ನು ಲಾಕ್ ಮಾಡುವ ಅವಕಾಶವಿದೆ

ನಿಮ್ಮ ಆಧಾರ್ ಕಾರ್ಡ್ ಕಳೆದು ಹೋದಾಗ ಬೇರೆಯವರು ಅದನ್ನು ದುರುಪಯೋಗ ಪಡಿಸದಂತೆ ಈ ಉಪಾಯ ಮಾಡಬಹುದು.ಇದಕ್ಕಾಗಿ ಮೊದಲು ನೀವು My Aadhaar ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಈ ಆ್ಯಪ್ ಡೌನ್‌ಲೋಡ್ ಮಾಡಿದ ನಂತರ, ಆಧಾರ್ ಸಂಖ್ಯೆಯನ್ನು ಲಾಕ್ ಮಾಡುವ ಕೆಲಸವನ್ನು ಬಹಳ ಸುಲಭವಾಗಿ ಮಾಡಬಹುದು.

ಇಷ್ಟೇ ಅಲ್ಲ, ಇದರ ನಂತರ ನೀವು ಸುಲಭವಾಗಿ ಆಧಾರ್ ಕಾರ್ಡ್ ಅನ್ನು ಅನ್ಲಾಕ್ ಮಾಡಬಹುದು. ಆಧಾರ್ ಸಂಖ್ಯೆಯನ್ನು ಅನ್‌ಲಾಕ್ ಮಾಡಲು ಯೋಚಿಸುತ್ತಿದ್ದರೆ UIDAI ವೆಬ್‌ಸೈಟ್ ಅಥವಾ My Aadhaar ಅಪ್ಲಿಕೇಶನ್ ಮೂಲಕ ಹೊಸ VID ಅನ್ನು ಬಳಸಿಕೊಂಡು ಅನ್ಲಾಕ್ ಸರಳ ರೀತಿಯಲ್ಲಿ ಮಾಡಬಹುದು. ನಿಮ್ಮ ಆಧಾರ್ ಅನ್ನು ಅನ್‌ಲಾಕ್ ಮಾಡಿದ ನಂತರ ಅದನ್ನು ಯುಐಡಿ ಟೋಕನ್ ಮತ್ತು ವಿಐಡಿ ಬಳಸಿ ದೃಢೀಕರಿಸಬಹುದು.

Aadhaar Card Lost
Image Credit: Goodreturns

ಆಧಾರ್ ಕಾರ್ಡ್ ಸಂಖ್ಯೆಯನ್ನು ಲಾಕ್ ಮಾಡುವ ವಿಧಾನ

ಆಧಾರ್ ಕಾರ್ಡ್ ನ ಸಂಖ್ಯೆಯನ್ನು ಲಾಕ್ ಮಾಡುವ ವಿಧಾನ ಸರಳವಾಗಿದೆ. ಆಧಾರ್ ಲಾಕ್ ಮಾಡಲು, 16 ಅಂಕಿಯ VID ಸಂಖ್ಯೆಯನ್ನು ಹೊಂದಿರುವುದು ಬಹಳ ಮುಖ್ಯ. ಇದರಲ್ಲಿ, ಮೊದಲನೆಯದಾಗಿ, SMS ಸೇವೆಯನ್ನು ಬಳಸಿಕೊಂಡು, ನಿಮ್ಮ ಆಧಾರ್ ಅನ್ನು ಲಾಕ್ ಮಾಡಲು ನೀವು 1947 ಗೆ SMS ಕಳುಹಿಸಬಹುದು.

ಇದರ ನಂತರ ನೀವು UIDAI ವೆಬ್‌ಸೈಟ್ (https://resident.uidai.gov.in/aadhaar-lockunlock) ಅನ್ನು ಕ್ಲಿಕ್ ಮಾಡಬೇಕಾಗುತ್ತದೆ. ನಂತರ ನೀವು ನನ್ನ ಆಧಾರ್ ಟ್ಯಾಬ್ ಅಡಿಯಲ್ಲಿ ಆಧಾರ್ ಲಾಕ್ ಅನ್ನು ಕ್ಲಿಕ್ ಮಾಡಬಹುದು.ಈ ವಿಧಾನವಾಗಿ ಆಧಾರ್ ಲಾಕ್ ಮಾಡಿದರೆ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗುವುದಿಲ್ಲ.

Leave A Reply

Your email address will not be published.