Pan Card Delete: ರಾತ್ರೋರಾತ್ರಿ ರದ್ದಾಗಿದೆ ಇಂತಹ ಜನರ ಪಾನ್ ಕಾರ್ಡ್, ಕೇಂದ್ರ ಸರ್ಕಾರದ ಅಧಿಕೃತ ಘೋಷಣೆ.
ರಾತ್ರೋರಾತ್ರಿ ಇಂತಹ ಜನರ ಪಾನ್ ಕಾರ್ಡ್ ರದ್ದು ಮಾಡಿದ ಕೇಂದ್ರ ಸರ್ಕಾರ.
Aadhar Card And pan Card Link Latest Update: ಈಗಾಗಲೇ ನಮ್ಮೆಲ್ಲರಿಗೂ ತಿಳಿದಿದೆ ಆಧಾರ್ ಕಾರ್ಡ್ (Aadhar Card) ಮತ್ತು ಪಾನ್ ಕಾರ್ಡ್ (Pan Card) ಕಡ್ಡಾಯವಾಗಿ ಲಿಂಕ್ ಆಗತಕ್ಕದೆಂದು. ಕೇಂದ್ರ ಸರ್ಕಾರ ಈ ಹಿಂದೆ ಎರೆಡೆರಡು ಸಲ ಆಧಾರ್ ಹಾಗು ಪಾನ್ ಲಿಂಕ್ ಮಾಡಿಸಿಕೊಳ್ಳಲು ಸಮಯಾವಕಾಶ ನೀಡಿದ್ದು, ಇನ್ನು ಸಹ ಕೆಲವರು ಆಧಾರ್ ಕಾರ್ಡ್ ಅನ್ನು ಪಾನ್ ಕಾರ್ಡ್ ಗೆ ಲಿಂಕ್ ಮಾಡಿಕೊಂಡಿಲ್ಲ.
ಇದರ ಪರಿಣಾಮವಾಗಿ ಪಾನ್ ಕಾರ್ಡ್ ಅನ್ನು ಸರ್ಕಾರ ರದ್ದು ಮಾಡಿದ್ದೂ, ಇನ್ನು ಮುಂದಿನ ಹಂತದಲ್ಲಿ ಆಧಾರ್ ಅನ್ನು ಪಾನ್ ನೊಂದಿಗೆ ಲಿಂಕ್ ಮಾಡಲು ಅಧಿಕ ಶುಲ್ಕ ಅನ್ನು ಪಾವತಿಸುವುದು ಕಡ್ಡಾಯ ಆಗಿದೆ. ಈ ಹಿಂದೆ ಉಚಿತವಾಗಿ ಮಾಡಿಕೊಳ್ಳಬೇಕಿದ್ದ ಕೆಲಸವನ್ನು ಈಗ ಹಣ ನೀಡಿ ಮಾಡಿಕೊಳ್ಳತಕ್ಕದಾಗಿದೆ.

ನಿಗದಿತ ಸಮಯ ಕಳೆದರು ಇನ್ನು ಪಾನ್ ಗೆ ಆಧಾರ್ ಲಿಂಕ್ ಮಾಡಿಸಿಕೊಂಡಿಲ್ಲ
ಪಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿಸಿಕೊಳ್ಳಲು ಜೂನ್ 30 ರ ತನಕ ನಿಗದಿತ ಅವಧಿಯನ್ನು ಮೀಸಲಿಡಲಾಗಿತ್ತು. ಈ ಅವಧಿ ಮುಗಿದು ಹಲವು ತಿಂಗಳುಗಳೇ ಕಳೆದಿದೆ. ಮಧ್ಯಪ್ರದೇಶದ ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ್ ಗೌರ್ ಅವರು ಆರ್ ಟಿಐ ಅರ್ಜಿಯನ್ನು ಸಲ್ಲಿಸಿದ್ದರು. ಅವರ ಅರ್ಜಿಗೆ ಮಾಹಿತಿ ನೀಡಿರುವಂತ ಸಿಬಿಡಿಟಿಯು, ಪಾನ್ ಕಾರ್ಡ್ ಹಾಗು ಆಧಾರ್ ಕಾರ್ಡ್ ಲಿಂಕ್ ಅನ್ನು ನಿಗದಿತ ದಿನಾಂಕದಂದು ಅಥವಾ ಅದಕ್ಕೂ ಮೊದಲು ಮಾಡಬೇಕಾಗಿತ್ತು, ಇಲ್ಲದಿದ್ದರೆ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ ಎಂದು ತಿಳಿಸಲಾಗಿದೆ.
ಕೋಟ್ಯಾಂತರ ಪಾನ್ ಕಾರ್ಡ್ ನಿಷ್ಕ್ರಿಯಗೊಂಡಿದೆ
ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಮಾಹಿತಿ ಹಕ್ಕು (ಆರ್ಟಿಐ) ನೀಡಿದ ಮಾಹಿತಿಯಂತೆ ಜೂನ್ 30 ರ ಗಡುವಿನೊಳಗೆ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲು ವಿಫಲವಾದ ಕಾರಣ ಒಟ್ಟು 11.5 ಕೋಟಿ ಪ್ಯಾನ್ ಕಾರ್ಡ್ ಗಳನ್ನೂ ನಿಷ್ಕ್ರಿಯಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಭಾರತದಲ್ಲಿ 70.24 ಕೋಟಿ ಪಾನ್ ಕಾರ್ಡ್ ದಾರರಿದ್ದು, ಈ ಪೈಕಿ 57.25 ಕೋಟಿ ಜನರು ತಮ್ಮ ಪಾನ್ ಕಾರ್ಡ್ ಗಳನ್ನು ಆಧಾರ್ ನೊಂದಿಗೆ ಯಶಸ್ವಿಯಾಗಿ ಲಿಂಕ್ ಮಾಡಿದ್ದಾರೆ. 12 ಕೋಟಿಗೂ ಹೆಚ್ಚು ಪಾನ್ ಕಾರ್ಡ್ ಗಳು ಲಿಂಕ್ ಆಗದೆ ಉಳಿದಿವೆ. 11.5 ಕೋಟಿ ಕಾರ್ಡ್ಗಳು ಅನುಸರಣೆ ಮಾಡದ ಕಾರಣ ನಿಷ್ಕ್ರಿಯಗೊಳ್ಳುತ್ತಿವೆ ಎಂದು ಕಳೆದ ವಾರ ವರದಿಗಳು ತಿಳಿಸಿವೆ.

ನಿಮ್ಮ ಪಾನ್ ಕಾರ್ಡ್ ಅನ್ನು ಸಕ್ರಿಯಗೊಳಿಸುವ ವಿಧಾನ
ನಿಮ್ಮ ಪಾನ್ ಅನ್ನು ಸಕ್ರಿಯಗೊಳಿಸಲು ನೀವು ಆದಾಯ ತೆರಿಗೆ ಇಲಾಖೆಯಲ್ಲಿ ನಿಮ್ಮ ನ್ಯಾಯವ್ಯಾಪ್ತಿಯ ಎಒಗೆ ಪತ್ರ ಬರೆಯಬೇಕು ಹಾಗು ಪ್ಯಾನ್ ಸಕ್ರಿಯಗೊಳಿಸಲು ಆದಾಯ ತೆರಿಗೆ ಇಲಾಖೆಯ ಪರವಾಗಿ ನಷ್ಟ ಪರಿಹಾರ ಬಾಂಡ್. ಪ್ಯಾನ್ ಹೊಂದಿರುವವರು ನಿಯಮಿತವಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುತ್ತಿರುವ ಪಾನ್ ನಕಲು. ಪಾನ್ ಮೇಲೆ ಸಲ್ಲಿಸಿದ ಕಳೆದ ಮೂರು ವರ್ಷಗಳ ಆದಾಯ ತೆರಿಗೆ ರಿಟರ್ನ್ಸ್ ಪ್ರತಿಯನ್ನು ಸಲ್ಲಿಸತಕ್ಕದ್ದು. ಆದಾಯ ತೆರಿಗೆ ಇಲಾಖೆಗೆ ಪತ್ರವನ್ನು ಸಲ್ಲಿಸಿದ ನಂತರ ಆದಾಯ ತೆರಿಗೆ ಇಲಾಖೆ ಪ್ಯಾನ್ ಅನ್ನು ಮತ್ತೆ ಸಕ್ರಿಯಗೊಳಿಸಲು ಕನಿಷ್ಠ 10-15 ದಿನಗಳನ್ನು ತೆಗೆದುಕೊಳ್ಳುತ್ತದೆ.
ನಿಷ್ಕ್ರಿಯ ಪಾನ್ ಕಾರ್ಡ್ ಅನ್ನು ಸಕ್ರಿಯಗೊಳಿಸಲು ದಂಡವನ್ನು ಕಟ್ಟತಕ್ಕದ್ದು
ನಿಷ್ಕ್ರಿಯ ಪಾನ್ ಕಾರ್ಡ್ ಅನ್ನು ಮತ್ತೆ ಸಕ್ರಿಯಗೊಳಿಸಲು, ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) 1,000 ರೂ.ಗಳ ದಂಡವನ್ನು ವಿಧಿಸಿದೆ. ನೀವು ಆಧಾರ್ ಲಿಂಕ್ ಗಡುವನ್ನು ತಪ್ಪಿಸಿಕೊಂಡಿದ್ದರೆ ಮತ್ತು ನಿಮ್ಮ ಪ್ಯಾನ್ ನಿಷ್ಕ್ರಿಯವಾಗಿದ್ದರೆ, ಆದಾಯ ತೆರಿಗೆ ಇಲಾಖೆಗೆ ಆಧಾರ್ ವಿವರಗಳನ್ನು ಒದಗಿಸುವ ಮೂಲಕ ನಿಮ್ಮ ಪಾನ್ ಅನ್ನು ಮತ್ತೆ ಸಕ್ರಿಯಗೊಳಿಸಬಹುದು. ನಿಗದಿತ ದಿನಾಂಕದೊಳಗೆ ಪ್ಯಾನ್-ಆಧಾರ್ ಲಿಂಕ್ ಮಾಡಲು ವಿಫಲವಾದರೆ, ಸೆಕ್ಷನ್ 234 ಎಚ್ ಅಡಿಯಲ್ಲಿ ಗರಿಷ್ಠ 1,000 ರೂ.ಗಳ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.