Post Office: ಬಂದ್ ಆಗಲಿದೆ ಇಂತವರ ಪೋಸ್ಟ್ ಆಫೀಸ್ ಖಾತೆ, ಕೇಂದ್ರ ಸರ್ಕಾರದ ಅಧಿಕೃತ ಆದೇಶ ಪ್ರಕಟ.
ಈ ಕೆಲಸ ಮಾಡದಿದ್ದರೆ ನಿಮ್ಮ ಪೋಸ್ಟ್ ಆಫೀಸ್ ಖಾತೆ ಸ್ಥಗಿತ.
Aadhar Card Link To Post Office Saving Account: ಕೇಂದ್ರ ಸರ್ಕಾರದಿಂದ (Central Government) ಒಂದು ಪ್ರಕಟ ಜಾರಿಗೆ ಬಂದಿದೆ , ಈ ಪ್ರಕಟ ಅಂಚೆ ಕಚೇರಿಯಲ್ಲಿ ಖಾತೆ ಇರುವವರಿಗೆ ಸಂಭಂದಿಸಿದಾಗಿದೆ. ಹೆಚ್ಚಿನವರು ಅಂಚೆ ಇಲಾಖೆಯಲ್ಲಿ ಖಾತೆ ಹೊಂದಿರುವವರು ಇರುತ್ತೀರಿ ಅಂತವರು ಈ ನಿಯಮ ಪಾಲಿಸಲೇಬೇಕು, ಅದೇನಂದರೆ ಅಂಚೆ ಕಚೇರಿ ಉಳಿತಾಯ ಯೋಜನೆಗಳು ಎಂದಿಗೂ ಕೂಡ ಕಡಿಮೆ ಹೂಡಿಕೆಯ ಆಯ್ಕೆಗಳನ್ನು ಹೂಡಿಕೆದಾರರಿಗೆ ನೀಡುತ್ತದೆ.
ಈ ಯೋಜನೆಗಳು ಸರ್ಕಾರದಿಂದ ಬೆಂಬಲಿತವಾಗಿದೆ. Post Office ಖಾತೆದಾರರಿಗೆ ಉತ್ತಮ ಬಡ್ಡಿದರಗಳನ್ನು ಒದಗಿಸಲಾಗುತ್ತದೆ. ಹಾಗು ಇನ್ನಿತರ ಸೌಲಭ್ಯಗಳು ಖಾತೆ ಇರುವವರಿಗೆ ಇರುತ್ತದೆ.
ಅಂಚೆ ಕಚೇರಿಯಲ್ಲಿ ಖಾತೆಯನ್ನು ತೆರೆಯುವ ಬಗ್ಗೆ ಮಾಹಿತಿ ಮುಖ್ಯ
Post Office Account ತೆರೆಯುವ ಮೊದಲು, ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಅಂಶಗಳಿವೆ. ಉಳಿತಾಯ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು, Aadhar Card Link ಅಂಚೆ ಕಚೇರಿಯ ಖಾತೆಗೆ ಆಗಿರಲೇಬೇಕು. ಸಣ್ಣ ಉಳಿತಾಯ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡಲು ಸೆಪ್ಟೆಂಬರ್ 30 ,2023 ಕೊನೆಯ ದಿನಾಂಕವಾಗಿದೆ. ಈ ಗಡುವಿಗೂ ಮುನ್ನ ತಮ್ಮ ಅಂಚೆ ಕಚೇರಿ ಖಾತೆಗೆ Aadhar Card ಲಿಂಕ್ ಮಾಡಲು ವಿಫಲವಾದರೆ, Post Office ಖಾತೆಯು ನಿಷ್ಕ್ರೀಯವಾಗುತ್ತದೆ.
ಅಂಚೆ ಕಚೇರಿ ಖಾತೆಗೆ ಆಧಾರ್ ಕಾರ್ಡ್ ಹಾಗು ಪಾನ್ ಕಾರ್ಡ್ ಲಿಂಕ್ ಕಡ್ಡಾಯ
ಇತ್ತೀಚಿನ ಅಧಿಸೂಚನೆಯಲ್ಲಿ, ಹೊಸ ಹೂಡಿಕೆದಾರರು ತಮ್ಮ Aadhar Card ಮತ್ತು Pan Card ಅನ್ನು ತಮ್ಮ ಸಣ್ಣ ಉಳಿತಾಯ ಯೋಜನೆಯ ಖಾತೆಗಳೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ ಎಂದು ಸರ್ಕಾರ ಘೋಷಿಸಿದೆ. ಅಸ್ತಿತ್ವದಲ್ಲಿರುವ ಹೂಡಿಕೆದಾರರಿಗೂ ಈ ನಿಮಯ ಅನ್ವಯವಾಗುತ್ತದೆ. ಒಂದು ಹಣಕಾಸು ವರ್ಷಕ್ಕೆ ಖಾತೆಯಲ್ಲಿನ ಎಲ್ಲಾ ಕ್ರೆಡಿಟ್ಗಳ ಒಟ್ಟು ಮೊತ್ತವು 1 ಲಕ್ಷ ರೂಪಾಯಿಗಿಂತ ಹೆಚ್ಚಿದ್ದರೆ, ಪಾನ್ ಕಾರ್ಡ್ ಲಿಂಕ್ ಕಡ್ಡಾಯವಾಗಿದೆ.
ನಿಮ್ಮ ಅಂಚೆ ಕಚೇರಿ ಉಳಿತಾಯ ಖಾತೆಯನ್ನು ಸ್ಥಗಿತಗೊಳಿಸಿದರೆ ನೀವು ಡೆಪಾಸಿಟ್ ಮಾಡಲು ಸಾಧ್ಯವಾಗುವುದಿಲ್ಲ. ಹೂಡಿಕೆಯ ಮೆಚ್ಯೂರಿಟಿ ಪ್ರಯೋಜನಗಳನ್ನು ಪಡೆಯಲು ಯಾವುದೇ ಅವಕಾಶ ಇರುವುದಿಲ್ಲ. ನಿಮ್ಮ ಖಾತೆಗೆ ಯಾವುದೇ ಬಡ್ಡಿಯನ್ನು ಜಮೆ ಮಾಡಲಾಗುವುದಿಲ್ಲ. ಹಾಗಾಗಿ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯವಾಗಿ ಮಾಡಲೇ ಬೇಕಾಗಿದೆ.
ಅಂಚೆ ಕಚೇರಿ ಖಾತೆಗೆ ಆಧಾರ್ ಲಿಂಕ್ ಮಾಡುವ ವಿಧಾನ
ಅಂಚೆ ಕಚೇರಿ ಉಳಿತಾಯ ಯೋಜನೆಗಳೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಲು ಹಲವಾರು ಮಾರ್ಗಗಳಿವೆ. ಆಧಾರ್ ಕಾರ್ಡ್ ಮತ್ತು ಪಾಸ್ವರ್ಡ್ನೊಂದಿಗೆ ಹತ್ತಿರದ ಅಂಚೆ ಕಚೇರಿ ಅಥವಾ ಬ್ಯಾಂಕ್ ಶಾಖೆಗೆ ಭೇಟಿ ನೀಡಬಹುದು. ಅದರ ಹೊರತಾಗಿ, ನೀವು ನಿಮ್ಮ ಬ್ಯಾಂಕ್ ಖಾತೆಗೆ ಲಾಗ್ ಇನ್ ಆಗಿ, ಉಳಿತಾಯ ಯೋಜನೆಯನ್ನು ಲಿಂಕ್ ಮಾಡಲು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬಹುದು.