Aadhar: ಸೆಪ್ಟೆಂಬರ್ 14 ರಿಂದ ಆಧಾರ್ ಕಾರ್ಡ್ ಇರುವವರು ಈ ಕೆಲಸಕ್ಕೆ ಕಟ್ಟಬೇಕು ಶುಲ್ಕ, ಕೇಂದ್ರದ ಆದೇಶ.
ಆಧಾರ್ ಕಾರ್ಡ್ ಅಪ್ಡೇಟ್ ಮಾಡುವವರಿಗೆ ಅಗತ್ಯ ಮಾಹಿತಿ.
Aadhar Card Update Last Date: ಭಾರತದಲ್ಲಿ ಆಧಾರ್ ಕಾರ್ಡ್ (Aadhar Card)ಅತಿ ಮುಖ್ಯವಾದ ದಾಖಲೆಯಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸದವರ ತನಕ ಎಲ್ಲರೂ ಕೂಡ ಆಧಾರ್ ಕಾರ್ಡ್ ಅನ್ನು ಹೊಂದಿರಲೇಬೇಕು. ಸರ್ಕಾರ ಹಾಗೂ ಸರ್ಕಾರೇತರ ಸೇವೆಗಳನ್ನು ಪಡೆಯಲು, ಸಬ್ಸಿಡಿ, ಪೆನ್ಷನ್, ಸ್ಕಾಲರ್ಶಿಪ್, ಬ್ಯಾಂಕಿಂಗ್, ವಿಮಾ, ಆರೋಗ್ಯ, ಉದ್ಯೋಗ , ಶಿಕ್ಷಣ, ಇತ್ಯಾದಿ ಸೇವೆಗಳನ್ನು ಪಡೆಯುವಾಗ ಆಧಾರ್ ಕಾರ್ಡ್ ಅತಿ ಅಗತ್ಯವಾಗಿದೆ.
ಆಧಾರ್ ಕಾರ್ಡ್ ಅಪ್ಡೇಟ್ ಮಾಡುವವರಿಗೆ ಅಗತ್ಯ ಮಾಹಿತಿ
10 ವರ್ಷದ ಹಿಂದೆ ಆಧಾರ್ ಕಾರ್ಡ್ ಮಾಡಿ, ಅದನ್ನು ಇನ್ನು ಅಪ್ಡೇಟ್ ಮಾಡದೇ ಇರುವವರು ಆದಷ್ಟು ಬೇಗ ಅವರ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಬೇಕು. ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು 50 ರೂಪಾಯಿ ಖರ್ಚು ಇರುತ್ತದೆ. ಆದರೆ ಇದೀಗ ಉಚಿತವಾಗಿ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಬಹುದಾಗಿದೆ. ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಸೆಪ್ಟೆಂಬರ್ 14 ಕೊನೆಯ ದಿನವಾಗಿದೆ ಹಾಗಾಗಿ ಆದಷ್ಟು ಬೇಗ ನಿಮ್ಮ ಆಧಾರ್ ಅನ್ನು ಅಪ್ಡೇಟ್ ಮಾಡಿಕೊಳ್ಳುದು ಉತ್ತಮ.
ಆನ್ಲೈನ್ ನಲ್ಲಿ ಆಧಾರ್ ಕಾರ್ಡ್ ಅಪ್ಡೇಟ್
ಇದೀಗ ಆನ್ಲೈನ್ ಮೂಲಕ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ಬಗ್ಗೆ ಮಾಹಿತಿ ತಿಳಿದುಕೊಳ್ಳಿ. ಮೊದಲು UIDAI ಗೆ ಹೋಗಿ myaadhaar.uidai.gov.in ವೆಬ್ ಸೈಟ್ ಗೆ ಭೇಟಿನೀಡಬೇಕು. ನಂತರ ಆಧಾರ್ ಸಂಖ್ಯೆ ಬಳಸಿ ಲಾಗಿನ್ ಆಗಬೇಕು. ನೋಂದಾಯಿತಾ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಅದನ್ನು ನೀಡುವ ಮೂಲಕ ಲಾಗಿನ್ ಪ್ರಕ್ರಿಯನ್ನು ಪೂರ್ಣಗೊಳಿಸಬೇಕು. ತದ ನಂತರ ಅದಕ್ಕೆ ಅಗತ್ಯವಾದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
ದಾಖಲೆಗಳನ್ನು ಸ್ಕ್ಯಾನ್ ಮಾಡಿದ ನಂತರ ಯುಆರ್ ಎನ್ ಸಂಖ್ಯೆ ಬರುತ್ತದೇ. ಅದನ್ನು ನೀವು ನೆನಪಿಟ್ಟುಕೊಳ್ಳಬೇಕಾಗುತ್ತದೇ, ಏಕೆಂದರೆ ಆಧಾರ್ ಅಪ್ಡೇಟ್ ಆಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಆ ಸಂಖ್ಯೆ ಅಗತ್ಯವಾಗಿರುತ್ತದೆ. ಇನ್ನು ಅಫ್ ಲೈನ್ ಅಲ್ಲಿ ಕೂಡ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಬಹುದಾಗಿದೆ. ಅಂದರೆ ಮನೆಯ ಸಮೀಪದ ಆಧಾರ್ ಅಪ್ಡೇಟ್ ಕೇಂದ್ರಗಳಿಗೆ ತೆರಳಿ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಬಹುದು.