Aadhar Card: 10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಇರುವವರಿಗೆ ಹೊಸ ನಿಯಮ, ಕೇಂದ್ರದ ಘೋಷಣೆ.
ಹಳೆಯ ಆಧಾರ್ ಕಾರ್ಡ್ ಇರುವವರಿಗೆ ಹೊಸ ನಿಯಮ.
Aadhar Card Update: Aadhar Card ಬಗ್ಗೆ ಭಾರತದ ಪ್ರತಿ ಪ್ರಜೆಗೂ ತಿಳಿದಿರುತ್ತದೆ. ಭಾರತ ಸರ್ಕಾರ ತನ್ನ ಪ್ರಜೆಗಳಿಗೆ ನೀಡಿದ ಗುರುತಿನ ಚೀಟಿ ಇದಾಗಿದೆ. ಇತ್ತೀಚಿನ ದಿನಗಳಲ್ಲಿ ಹುಟ್ಟಿದ ಚಿಕ್ಕ ಮಗುವಿನಿಂದ ಹಿಡಿದು ದೊಡ್ಡವರ ವರೆಗೂ Aadhar Card ಅತ್ಯಗತ್ಯ ದಾಖಲೆಯಾಗಿದೆ.
ಆಧಾರ್ ಕಾರ್ಡ್ ನಲ್ಲಿ ವ್ಯಕ್ತಿಯ ಎಲ್ಲಾ ಮಾಹಿತಿಗಳು ಇದ್ದು, ಸರಕಾರಿ ಅಥವಾ ಸರ್ಕಾರೇತರ ಕೆಲಸ ಮಾಡಲು ಹೋದರೆ ಆಧಾರ ಕಾರ್ಡ್ಅತ್ಯಗತ್ಯವಾಗಿರುತ್ತದೆ. ಯಾವುದೇ ಕಚೇರಿಗೆ ಆಧಾರ್ ಕಾರ್ಡ್ ಇಲ್ಲದೆ ಹೋದರೆ ಯಾವ ಕೆಲಸವೂ ಕೊಡ ಆಗುವುದಿಲ್ಲ. ಹಾಗಾಗಿ ಆಧಾರ್ ಕಾರ್ಡ್ ಪ್ರತಿ ನಾಗರಿಕನಿಗೂ ಬಹಳ ಮುಖ್ಯವಾಗಿದೆ.

Aadhar Card Update last Date
ಸರ್ಕಾರದ ಎಲ್ಲಾ ಯೋಜನೆಗಳಿಗೆ ಅರ್ಜಿ ಹಾಕಲು ಆಧಾರ್ ಕಾರ್ಡ್ ಬಹಳ ಮುಖ್ಯವಾಗಿದ್ದು ಇದೇ ವೇಳೆ ಆಧಾರ್‌ಗೆ ಸಂಬಂಧಿಸಿದ ಹೊಸ ಅಪ್‌ಡೇಟ್ ಹೊರಬಿದ್ದಿದೆ. Aadhar Card ಅನ್ನು ಉಚಿತವಾಗಿ ನವೀಕರಿಸಲಾಗುತ್ತಿದೆ. ಇದಕ್ಕಾಗಿ UIDAI ಆಧಾರ್ ಪೋರ್ಟಲ್‌ನಲ್ಲಿ ಉಚಿತ ಸೌಲಭ್ಯವನ್ನು ಒದಗಿಸಲಾಗಿದೆ. ಈ ಹಿಂದೆ ಆಧಾರ್ ಕಾರ್ಡ್ ಅಪ್‌ಡೇಟ್‌ಗೆ ಕೊನೆಯ ದಿನಾಂಕ ಜೂನ್ 14 2023 ಎನ್ನಲಾಗಿತ್ತು, ಆದರೆ ಈ ದಿನಾಂಕವನ್ನು ಸೆಪ್ಟೆಂಬರ್ 14 ರವರೆಗೆ ವಿಸ್ತರಿಸಲಾಗಿದೆ.
ಸರ್ಕಾರಿ ಯೋಜನೆಗಳಿಂದ ವಂಚಿತರಾಗುವ ಸಾಧ್ಯತೆ
ಆಧಾರ್ ಕಾರ್ಡ್ ಮಾಡಿ 10 ವರ್ಷ ಕಳೆದಿದ್ದರೆ UIDAI ನೀಡಿರುವ ಈ ಮಾಹಿತಿ ತಿಳಿದುಕೊಳ್ಳುವುದು ಅತ್ಯವಶ್ಯಕ ಎಂದು ಹೇಳಬಹುದು. 10 ವರ್ಷ ಹಳೆಯದಾದ ಮತ್ತು ನವೀಕರಿಸದಿರುವ ಆಧಾರ್ ಅನ್ನು ಸಾಧ್ಯವಾದಷ್ಟು ಬೇಗ Update ಮಾಡಬೇಕು ಇಲ್ಲವಾದಲ್ಲಿ ಸರ್ಕಾರದಿಂದ ಸಿಗುವ ಯೋಜನೆಗಳನ್ನು ಪಡೆಯಲು ಹಾಗು ಯಾವುದೇ ಬ್ಯಾಂಕ್ ಕೆಲಸಗಳನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ ಎನ್ನಲಾಗಿದೆ.

Free Aadhaar Update Process
ಆಧಾರ್ ಕಾರ್ಡ್ ನವೀಕರಿಸಲು ಹಂತ ಹಂತವಾಗಿ ಪ್ರಕ್ರಿಯೆಗಳನ್ನು ಪಾಲಿಸಬೇಕಾಗುತ್ತದೆ. ಮೊದಲನೇದಾಗಿ https://myaadhaar.uidai.gov.in/ ನ ಅಧಿಕೃತ website ಅನ್ನು ತೆರೆಯಬೇಕು. ಇದರ ನಂತರ ನವೀಕರಿಸಲು ಮುಂದುವರೆಯಲು ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು, ನಂತರ ನಿಮಗೆ OTP ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆ ಅಗತ್ಯವಿರುತ್ತದೆ. ಎಲ್ಲಾ ದಾಖಲೆಗಳನ್ನು ನವೀಕರಿಸುವ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
ಆಧಾರ್ ಬಳಕೆದಾರರು ತಮ್ಮ ವಿವರಗಳನ್ನು ಪರಿಶೀಲಿಸಬೇಕು ಮತ್ತು ವಿವರಗಳು ಸರಿಯಾಗಿ ಕಂಡುಬಂದರೆ ಮುಂದೆ ಕ್ಲಿಕ್ ಮಾಡಬೇಕು. ಇದರ ನಂತರ ಗುರುತಿನ ಪ್ರಮಾಣಪತ್ರ ಮತ್ತು ವಿಳಾಸ ಪ್ರಮಾಣಪತ್ರ ಇತ್ಯಾದಿಗಳ ವಿವರಗಳನ್ನು ಭರ್ತಿ ಮಾಡಬೇಕು, ವಿಳಾಸದ ಅನುಮೋದನೆಗಾಗಿ ನಕಲನ್ನು ಅಪ್‌ಲೋಡ್ ಮಾಡಿ ಮತ್ತು ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಬೇಕು. ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಮ್ಮ ಆಧಾರ್ ಅನ್ನು 14 ದಿನಗಳಲ್ಲಿ ನವೀಕರಿಸಲಾಗುತ್ತದೆ. ಈ ರೀತಿಯಾಗಿ ಆಧಾರ್ ನವೀಕರಿಸಿಕೊಳ್ಳುವುದು ಅಗತ್ಯವಾಗಿದೆ.