Pension Account: ಪ್ರತಿ ತಿಂಗಳು ಪಿಂಚಣಿ ಹಣ ಪಡೆಯುವವರಿಗೆ ಹೊಸ ರೂಲ್ಸ್, ತಕ್ಷಣ ಈ ಕೆಲಸ ಮಾಡದಿದ್ದರೆ ಹಣ ಬಂಧ್.
ಪ್ರತಿ ತಿಂಗಳು ಪಿಂಚಣಿ ಹಣ ಪಡೆಯುವವರು ತಕ್ಷಣ ಈ ಕೆಲಸ ಮಾಡಿ.
Aadhaar Number Link To Pension Account: ಆಧಾರ್ ಕಾರ್ಡ್ (Aadhaar Card) ಲಿಂಕ್ ಗೆ ಸಂಬಂಧಿಸಿದಂತೆ ನಾವು ದಿನ ದಿನವೂ ಮಾಹಿತಿ ಪಡೆಯುತ್ತಾ ಇರುತ್ತೇವೆ. ಇತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ನ ಮಹತ್ವ ಎಲ್ಲರಿಗೂ ತಿಳಿದಿದೆ. ಎಲ್ಲಾ ಕೆಲಸದಲ್ಲೂ ಆಧಾರ್ ಕಾರ್ಡ್ ಬಹಳ ಮುಖ್ಯ ಆಗಿದೆ.
ಆಧಾರ್ ಇಲ್ಲದೆ ವ್ಯಕ್ತಿ ಇರಲು ಸಾಧ್ಯವೇ ಇಲ್ಲ. ಸರಕಾರದಿಂದ ಸಿಗುವ ಸೌಲತ್ತು, ಸಹಾಯಧನ ಪಡೆಯಲು, ಮಕ್ಕಳನ್ನು ಶಾಲೆಗೆ ಪ್ರವೇಶ ಮಾಡಿಸಲು, ಪಾಸ್ ಪೋರ್ಟ್ ಪಡೆಯಲು ಅಷ್ಟೇ ಅಲ್ಲದೆ ಇನ್ನು ಹಲವಾರು ಕೆಲಸಗಳಲ್ಲಿ ಆಧಾರ್ ಕಾರ್ಡ್ ಬಹಳ ಮುಖ್ಯ ಆಗಿರುತ್ತದೆ ಹಾಗಾಗಿ ಆಧಾರ್ ಬಗ್ಗೆ ಬರುವ ಎಲ್ಲಾ ಮಾಹಿತಿಗಳನ್ನು ನಾವು ತಿಳಿಯುವುದು ಸಹ ಅಷ್ಟೇ ಮುಖ್ಯ ಆಗಿದೆ.

ಬ್ಯಾಂಕ್ ಖಾತೆ ಹಾಗು ಅಂಚೆ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ
ಈಗಾಗಲೇ ಹಲವು ಯೋಜನೆಗಳ ವಿಚಾರವಾಗಿ ಆಧಾರ್ ಕಾರ್ಡ್ ಹಾಗು ಬ್ಯಾಂಕ್ ಪಾಸ್ ಬುಕ್ ಕಡ್ಡಾಯವಾಗಿ ಲಿಂಕ್ ಆಗಬೇಕೆಂದು ಮಾಹಿತಿಯನ್ನು ನೋಡುತ್ತಾ ಇರುತ್ತೇವೆ.
ಹಾಗೆಯೆ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಾದ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಗಳಾದ ವೃದ್ಯಾಪ್ಯ ವೇತನ, ಸಂಧ್ಯಾ ಸುರಕ್ಷಾ ವೇತನ, ವಿಧವಾ ವೇತನ, ಅಂಗವಿಕಲ ವೇತನ, ಮನಸ್ವಿನಿ ಮತ್ತು ಮೈತ್ರಿ ಯೋಜನೆಗಳನ್ನು ಪಡೆಯುತ್ತಿರುವ ಅರ್ಹ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆ ಮತ್ತು ಅಂಚೆ ಖಾತೆಗಳಿಗೆ ಕಡ್ಡಾಯವಾಗಿ ಆಧಾರ್ ಜೋಡಣೆ ಮಾಡಬೇಕಾಗಿದೆ.

ಆಧಾರ್ ಕಾರ್ಡ್ ಲಿಂಕ್ ಮಾಡದೇ ಇದ್ದಲ್ಲಿ ನಷ್ಟ ಖಚಿತ
ಬ್ಯಾಂಕ್ ಖಾತೆ ಹಾಗು ಅಂಚೆ ಖಾತೆಗೆ ಆಧಾರ್ ಕಾರ್ಡ್ ಜೋಡಣೆ ಆಗದೆ ಇದ್ದ ಪಕ್ಷದಲ್ಲಿ ಸರ್ಕಾರದಿಂದ ಪಾವತಿಸುವ ವೇತನವು ನವೆಂಬರ್ ನಲ್ಲಿ ಸ್ಥಗಿತಗೊಳ್ಳಲಿದೆ ಎಂದು ಸರಕಾರ ಪ್ರಕಟಿಸಿದೆ. ಹಾಗಾಗಿ ಖಂಡಿತವಾಗಿ ಪ್ರತಿಯೊಬ್ಬರು ಆಧಾರ್ ಕಾರ್ಡ್ ನೊಂದಿಗೆ ನಿಮ್ಮ ಬ್ಯಾಂಕ್ ಖಾತೆ ಹಾಗು ಅಂಚೆ ಖಾತೆ ಅನ್ನು ಲಿಂಕ್ ಮಾಡಿಸಿಕೊಳ್ಳುವುದು ಕಡ್ಡಾಯ ಆಗಿದೆ.