Voter ID: ಇನ್ನುಮುಂದೆ ಈ ಕೆಲಸಕ್ಕೆ ಆಧಾರ್ ಕಾರ್ಡ್ ಕಡ್ಡಾಯವಲ್ಲ, ಕೇಂದ್ರ ಚುನಾವಣಾ ಆಯೋಗದ ಘೋಷಣೆ.

ಕೇಂದ್ರ ಚುನಾವಣಾ ಆಯೋಗದ ಹೊಸ ಘೋಷಣೆ, ಆಧಾರ್ ಕಾರ್ಡ್ ಕಡ್ಡಾಯವಲ್ಲ

Aadhar Number Not Mandatory Rules: ಆಧಾರ್ ಕಾರ್ಡ್ (Aadhaar Card) ಇತೀಚಿಗೆ ಎಲ್ಲಾ ಕೆಲಸಗಳಿಗೂ ಬಹಳ ಮುಖ್ಯವಾಗಿದೆ. ಆದ್ರೆ ಈಗ ಮತದಾರರ ಪಟ್ಟಿ (Voter List) ದೃಢೀಕರಣಕ್ಕಾಗಿ ಮತದಾರರ ಆಧಾರ್ ಸಂಖ್ಯೆಯ (Aadhaar Number) ವಿವರಗಳನ್ನು ಕೇಳುವ 6 ಹಾಗೂ 6ಬಿ ನಮೂನೆಗಳಲ್ಲಿ (ಇ-ರೋಲ್‌ನಲ್ಲಿ ನೋಂದಣಿಗಾಗಿ) ಸೂಕ್ತವಾದ ಸ್ಪಷ್ಟ ಬದಲಾವಣೆಗಳನ್ನು ಮಾಡುವುದಾಗಿ ಭಾರತದ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ (Supreme Court) ತಿಳಿಸಿದೆ.

ಮತದಾರರ ನೋಂದಣಿ ನಿಯಮ 26-ಬಿ 2022ರ ಅಡಿಯಲ್ಲಿ ಆಧಾರ್ ಸಂಖ್ಯೆಯನ್ನು ಸಲ್ಲಿಸುವುದು ಕಡ್ಡಾಯವಲ್ಲ ಎಂದು ತಿಳಿಸಲಾಗಿದೆ. ಸದ್ಯ ವೋಟರ್ ಕಾರ್ಡ್ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೊಂದು ಹೊಸ ನಿಯಮವನ್ನ ಈಗ ಕೇಂದ್ರ ಚುನಾವಣಾ ಆಯೋಗ (Election Cimmission) ಜಾರಿಗೆ ತಂದಿದ್ದು ಇನ್ನುಮುಂದೆ ಈ ಕೆಲಸಗಳಿಗೆ ಆಧಾರ್ ಕಾರ್ಡ್ ಅಗತ್ಯ ಇಲ್ಲ ಎಂದು ತಿಳಿಸಿದೆ. 

Aadhar Number Not Mandatory For Voter ID
Image Credit: Krishijagran

ಆಧಾರ್ ಕಾರ್ಡ್ ಕಡ್ಡಾಯವಲ್ಲ

ಚುನಾವಣಾ ಆಯೋಗದ ಪರವಾಗಿ ಹಾಜರಾದ ಹಿರಿಯ ವಕೀಲ ಸುಕುಮಾರ್ ಪಟ್ಟಜೋಶಿ, ವಕೀಲ ಅಮಿತ್ ಶರ್ಮಾ, ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಈಗಾಗಲೇ ಸುಮಾರು 66,23,00,000 ಆಧಾರ್ ಸಂಖ್ಯೆಗಳನ್ನು ಅಪ್‌ಲೋಡ್ ಮಾಡಲಾಗಿದೆ ಎಂದು ತಿಳಿಸಿದರು.

ಮತದಾರರ ನೋಂದಣಿ (ತಿದ್ದುಪಡಿ) ನಿಯಮಗಳು 2022ರ ನಿಯಮ 26-ಬಿ ಅಡಿಯಲ್ಲಿ ಆಧಾರ್ ಸಂಖ್ಯೆಯನ್ನು ಸಲ್ಲಿಸುವುದು ಕಡ್ಡಾಯವಲ್ಲ. ಹೀಗಾಗಿ ಚುನಾವಣಾ ಆಯೋಗವು ಪರಿಚಯಿಸಲಾದ ನಮೂನೆಗಳಲ್ಲಿ ಸೂಕ್ತ ಸ್ಪಷ್ಟೀಕರಣ ಬದಲಾವಣೆಗಳನ್ನು ನೀಡಲು ಪರಿಶೀಲಿಸುತ್ತಿದೆ ಎಂದು ಹೇಳಿದ್ದಾರೆ.

Aadhar Card Latest Update
Image Credit: India

ಮತದಾರರ ನೋಂದಣಿ (ತಿದ್ದುಪಡಿ) ನಿಯಮಗಳ ಅನ್ವಯ

ಮತದಾರರ ನೋಂದಣಿ (ತಿದ್ದುಪಡಿ) ನಿಯಮಗಳು 2022 ಅನ್ನು ಕೇಂದ್ರ ಸರ್ಕಾರ ಜೂನ್ 2022 ರಲ್ಲಿ ಚುನಾವಣಾ ಗುರುತಿನ ಚೀಟಿಗಳೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ಒದಗಿಸುವಂತೆ ಸೂಚಿಸಿದೆ. ನಮೂನೆ 6ಬಿ ಎನ್ನುವುದು ಮತದಾರರ ಪಟ್ಟಿ ದೃಢೀಕರಣದ ಉದ್ದೇಶಕ್ಕಾಗಿ ಮತದಾರರು ಆಧಾರ್ ಸಂಖ್ಯೆಯನ್ನು ತಿಳಿಸುವ ಅರ್ಜಿ ನಮೂನೆಯಾಗಿದೆ. ಆದರೆ ಈಗ ಮತದಾರರ ನೋಂದಣಿ (ತಿದ್ದುಪಡಿ) ನಿಯಮಗಳ ಅಡಿಯಲ್ಲಿ ಆಧಾರ್ ಸಂಖ್ಯೆಯನ್ನು ಸಲ್ಲಿಸುವುದು ಕಡ್ಡಾಯವಲ್ಲ ಎನ್ನಲಾಗಿದೆ.

Leave A Reply

Your email address will not be published.