Abhishek And Aishwarya: ಐಶ್ವರ್ಯ ಮತ್ತು ಅಭಿಷೇಕ್ ಡೈವೋರ್ಸ್, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಸುದ್ದಿ.

ಅಭಿಷೇಕ್ ಬಚ್ಚನ್ ಹಾಗು ಐಶ್ವರ್ಯ ರೈ ನಡುವೆ ಮತ್ತೆ ಬಿರುಕು, ಇವರ ಮನಸ್ತಾಪಗಳು ವಿಚ್ಛೇದನ ತನಕ ಹೋಗಿದ್ಯಾ?

Abhishek Bachchan And Aishwarya Rai Divorce: ಬಾಲಿವುಡ್ ಸಿನಿಮಾ ರಂಗದಲ್ಲಿ ಸಿಕ್ಕಾಪಟ್ಟೆ ಕ್ಯೂಟ್ ಜೋಡಿ ಅಂದರೆ ಅದೇ ಅಭಿಷೇಕ್ ಬಚ್ಚನ್ (Abhishek Bachchan) ಹಾಗು ಐಶ್ವರ್ಯ ರೈ (Aishwarya Rai) ಜೋಡಿ. ಇವರಿಬ್ಬರು ಒಬ್ಬರನೊಬ್ಬರು ಪ್ರೀತಿಸಿ ಮದುವೆ ಆದವರಾಗಿದ್ದು, ಇವರಿಗೆ ಆರಾಧ್ಯ ಎಂಬ ಹೆಣ್ಣು ಮಗಳಿದ್ದಾಳೆ.

ಇವರು ವೈವಾಹಿಕ ಜೀವನಕ್ಕೆ ಕಾಲಿಟ್ಟು 16 ವರ್ಷಗಳೇ ಕಳೆದಿದೆ. ಇದರ ಮಧ್ಯೆ ಒಮ್ಮೆ ಈ ಜೋಡಿ ಬೇರೆಯಾಗುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿದ್ದು, ಇದಕ್ಕೆ ಬಚ್ಚನ್ ಕುಟುಂಬ ಸ್ಪಷ್ಟನೆ ಸಹ ನೀಡಿತ್ತು. ಇಲ್ಲಿಯ ತನಕ ತುಂಬಾನೇ ಸಂತೋಷವಾಗಿದ್ದ ಈ ಜೋಡಿ ಮಧ್ಯೆ ಬಿರುಕು ಮೂಡಿದೆ ಎಂಬ ಸುದ್ದಿ ಹರಿದಾಡುತ್ತಿದ್ದು. ಈ ಸುದ್ದಿ ಹರಿದಾಡಲು ಕೆಲವು ಪ್ರಮುಖ ಘಟನೆಗಳು ಕೂಡ ಕಾರಣ ಅನ್ನಬಹುದು.

Abhishek Bachchan And Aishwarya Rai
Image Credit: Timesofindia

ಐಶ್ವರ್ಯ ರೈ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಷೇಕ್ ಬಚ್ಚನ್ ಗೈರು

ಅಭಿಷೇಕ್ ಬಚ್ಚನ್ ಹಾಗು ಐಶ್ವರ್ಯ ರೈ ಯಾವುದೇ ಪಾರ್ಟಿಗೆ ಹೋಗಲಿ, ಯಾವುದೇ ಸಿನಿಮಾ ಪ್ರದರ್ಶನವಾಗಲಿ, ಏನೇ ಆಗಲಿ ಇಬ್ಬರೂ ಒಟ್ಟಿಗೆ ಹೋಗುತ್ತಾರೆ. ಅಷ್ಟೇ ಅಲ್ಲ, ಇವರಿಬ್ಬರು ಯಾವತ್ತೂ ಒಂಟಿಯಾಗಿ ಕಾಣಿಸಿಕೊಂಡಿಲ್ಲ. ಐಶ್ವರ್ಯ ರೈ ಸಿಯಾನ್ ಜಿಎಸ್‌ಬಿ ಸೇವಾ ಮಂಡಲದ ಕ್ಯಾನ್ಸರ್ ರೋಗಿಗಳ ನಡುವೆ ಇತ್ತೀಚೆಗಷ್ಟೇ 50ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.

ಈ ಸಮಾರಂಭದಲ್ಲಿ ಐಶ್ವರ್ಯಾ ತಾಯಿ ಬೃಂದಾ ರೈ ಮತ್ತು ಮಗಳು ಆರಾಧ್ಯ ಮಾತ್ರ ಕಾಣಿಸಿಕೊಂಡಿದ್ದರು. ಸಂಭ್ರಮಾಚರಣೆ ವೇಳೆ ಅಭಿಷೇಕ್ ಕಾಣಿಸಿಕೊಂಡಿರಲಿಲ್ಲ, ಅಭಿಷೇಕ್ ಗೈರುಹಾಜರಾಗಿರುವುದು. ಅಷ್ಟೇ ಅಲ್ಲದೆ ಐಶ್ವರ್ಯಾ ರೈ ಗೆ ತುಂಬಾ ತಡವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದರು. ಇದನ್ನೆಲ್ಲಾ ಗಮನಿಸಿದ ಅಭಿಮಾನಿಗಳು ಇವರ ನಡುವೆ ಏನೋ ನಡೆಯುತ್ತಿದೆ ಎನ್ನುತ್ತಿದ್ದಾರೆ.

Abhishek Bachchan And Aishwarya Rai Divorce
Image Credit: abhishek-bachchan

ಒಂಟಿಯಾಗಿ ಕಾಣಿಸಿಕೊಂಡ ಐಶ್ವರ್ಯ ರೈ

ಇತ್ತೀಚಿಗೆ ಹೋದಲ್ಲೆಲ್ಲಾ ಜೋಡಿಯಾಗಿ ಕಾಣಿಸಿಕೊಳ್ಳುವ ಈ ಇಬ್ಬರು ಒಟ್ಟಿಗೆ ಕಾಣುತ್ತಿಲ್ಲ. ಮನೀಶ್ ಮಲ್ಹೋತ್ರಾ ನೀಡಿದ ದೀಪಾವಳಿ ಪಾರ್ಟಿಯಲ್ಲಿ ಐಶ್ವರ್ಯಾ ಮಿಂಚಿದ್ದರು. ವಿಷಯ ಏನೆಂದರೆ ಈ ಪಾರ್ಟಿಯಲ್ಲಿ ಅಭಿಷೇಕ್ ಬಚ್ಚನ್ ಮತ್ತು ಆರಾಧ್ಯ ಬಚ್ಚನ್ ಕಾಣಿಸಿಕೊಂಡಿರಲಿಲ್ಲ. ಐಶ್ವರ್ಯಾ ಸೋಲೋ ಎಂಟ್ರಿಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪಾರ್ಟಿಗೆ ಅಭಿಷೇಕ್ ಬಚ್ಚನ್ ಗೈರುಹಾಜರಾಗಿದ್ದಕ್ಕೆ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಅಷ್ಟೇ ಅಲ್ಲದೆ ಈ ಹಿಂದೆ ಒಮ್ಮೆ ಮುಂಬೈನ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್‌ನ ಗ್ರ್ಯಾಂಡ್ ಲಾಂಚ್ ಕಾರ್ಯಕ್ರಮಕ್ಕೆ ಐಶ್ವರ್ಯಾ ತನ್ನ ಮಗಳು ಆರಾಧ್ಯ ಅವರೊಂದಿಗೆ ಬಂದಾಗ ಇದೇ ರೀತಿಯ ಘಟನೆ ಸಂಭವಿಸಿತ್ತು. ಇಷ್ಟು ದೊಡ್ಡ ಫಂಕ್ಷನ್ ಗೆ ಅಭಿಷೇಕ್ ಬಂದಿರಲಿಲ್ಲ. ಆ ಸಮಯದಲ್ಲಿ ಇವರಿಬ್ಬರೂ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇತ್ತೀಚೆಗೆ ಮತ್ತೆ ಆ ಸೀನ್ ರಿಪೀಟ್ ಆಗಿದೆ. ಹಾಗಾಗಿ ಇವರಿಬ್ಬರು ಬಾಯಿಬಿಟ್ಟು ಹೇಳಿದರೆ ಮಾತ್ರ ಈ ಗೊಂದಲಗಳೆಲ್ಲ ಬಗೆಹರಿಯುತ್ತದೆ ಎನ್ನಲಾಗಿದೆ.

Leave A Reply

Your email address will not be published.