Darshan And Dhruva: ಒಂದೇ ವೇದಿಕೆಯಲ್ಲಿ ಇದ್ದರೂ ದರ್ಶನ್ ಮತ್ತು ಧ್ರುವ ಯಾಕೆ ಮಾತನಾಡಲಿಲ್ಲ…? ಅಷ್ಟಕ್ಕೂ ಆಗಿದ್ದೇನು.

ದರ್ಶನ್ ಮತ್ತು ಧ್ರುವ ಸರ್ಜಾ ನಡುವೆ ಬಿನ್ನಾಭಿಪ್ರಾಯ, ಅಭಿಮಾನಿಗಳಿಗೆ ಬೇಸರ.

Actor Darshan And Actor Dhruva Sarja: ಸೆಪ್ಟೆಂಬರ್‌ 29 ರಂದು ತಮಿಳು ನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಬಂದ್‌ಗೆ ವಿವಿಧ ಸಂಘಟನೆಗಳು ಕರೆ ನೀಡಿದ್ದವು. ಕಾವೇರಿಗಾಗಿ ಕರುನಾಡು ಸ್ತಬ್ಧವಾಗಿತ್ತು. ಅಲ್ಲದೆ, ಈ ಹೋರಾಟಕ್ಕೆ ಸ್ಯಾಂಡಲ್‌ವುಡ್‌ ಕಲಾವಿದರು ಒಂದಾಗಿ ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ನಟ ದರ್ಶನ್‌ (Dharshan) ಹಾಗು ಧ್ರುವ ಸರ್ಜಾ (Dhruva Sarja) ಒಂದೇ ವೇದಿಕೆ ಮೇಲಿದ್ದರೂ ಸಹ ಒಬ್ಬರನೊಬ್ಬರು ಮಾತನಾಡಿಸುವುದಿರಲಿ, ನೋಡಿಯೂ ಇಲ್ಲ ಆದರಿಂದ ಇವರ ಮಧ್ಯ ಎಲ್ಲವೂ ಸರಿಯಾಗಿಲ್ಲ ಎನ್ನುವ ಊಹಾಪೋಹಗಳು ಹರಿದಾಡುತ್ತಿದೆ.

Darshan And Dhruva Latest News
Image Credit: Timesofindia.indiatimes

ನಟ ನಟಿಯರು ಒಂದೇ ವೇದಿಕೆಯಲ್ಲಿ ಸರ್ಕಾರದ ವಿರುದ್ಧ ಪ್ರತಿಭಟಿಸಿದರು

ಸೆಪ್ಟೆಂಬರ್‌ 29 ರಂದು, ಬೆಳ್ಳಗ್ಗೆ 9 ಗಂಟೆಗೆ ಪ್ರಾರಂಭವಾದ ಸ್ಯಾಂಡಲ್‌ವುಡ್‌ ಕಾವೇರಿ ಪ್ರತಿಭಟನೆಯಲ್ಲಿ ಮೊದಲು ಶ್ರೀನಾಥ್‌, ಉಮಾಶ್ರೀ, ಲೂಸ್‌ ಮಾದ ಯೋಗಿ, ಪೂಜಾ ಗಾಂಧಿ, ನವೀನ್‌ ಕೃಷ್ಣ, ಅನು ಪ್ರಭಾಕರ್‌, ಸುಂದರ್‌ ರಾಜ್‌ ಸೇರಿದಂತೆ ಮುಂತಾದ ಕಾಲಾವಿದರು ಉಪಸ್ಥಿತರಿದ್ದರು.

ತದನಂತರ 11 ಗಂಟೆಯ ವೇಳೆ ಶಿವಣ್ಣ, ಧ್ರುವ ಸರ್ಜಾ, ವಸಿಷ್ಠ ಸಿಂಹ, ದುನಿಯಾ ವಿಜಯ್‌ ಪ್ರತಿಭಟನೆಯಲ್ಲಿ ಭಾಗಿಯಾದರು. ನಟ ದರ್ಶನ್‌ ಸ್ವಲ್ಪ ತಡವಾಗಿ ಬಂದರು. ವೇದಿಕೆ ಮೇಲೆ ಏಂಟ್ರಿ ಕೊಟುತ್ತಿದ್ದಂತೆ ಶಿವರಾಜ್‌ಕುಮಾರ್‌ ಅವರ ಕಾಲಿಗೆ ಬಿದ್ದು ನಮಸ್ಕರಿಸಿದರು, ಹಾಗೆ ಪಕ್ಕದಲ್ಲಿ ಇದ್ದ ವಸಿಷ್ಠ ದಚ್ಚುಗೆ ಜಾಗ ಮಾಡಿಕೊಟ್ಟರು. ಉಮಾಶ್ರೀ ಸಹ ಎದ್ದು ನಿಂತು ಚಾಲೆಂಜಿಂಗ್ ಸ್ಟಾರ್‌ನನ್ನು ಬರಮಾಡಿಕೊಂಡರು.

ದರ್ಶನ್‌ ಹಾಗು ದ್ರುವ ಸರ್ಜಾ ನಡುವೆ ಬಿನ್ನಾಭಿಪ್ರಾಯ

ದರ್ಶನ ವೇದಿಕೆ ಮೇಲೆ ಬಂದು ಎಲ್ಲರನ್ನು ಮಾತನಾಡಿಸಿದರು ಕೂಡ ಧ್ರುವ ಮಾತ್ರ ದರ್ಶನ್‌ ಅವರನ್ನು ನೋಡಿದರೂ ನೋಡದಂತೆ ನಿಂತಿದ್ದರು. ಅಲ್ಲದೆ, ದರ್ಶನ್‌ ಶಿವಣ್ಣನನ್ನು ಮಾತನಾಡಿಸುವಾಗ ಕಾಟಾಚಾರಾಕ್ಕೆ ಎದ್ದು ನಿಂತರು. ನಂತರ ದರ್ಶನ್‌ ಮೈಕ್‌ ಮುಂದೆ ನಿಂತು ಮಾತನಾಡುವಾಗ ಆಕ್ಷನ್‌ ಪ್ರೀನ್ಸ್‌ ವೇದಿಕೆಯಿಂದ ಕೆಳಗೆ ಇಳಿದು ಹೊರಟರು. ಈ ಎಲ್ಲಾ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಇಬ್ಬರ ನಡುವೆ ಏನಾಗಿದೆ ಎಂದು ಯೋಚಿಸುವಂತೆ ಮಾಡಿವೆ.

Actor Darshan And Actor Dhruva Sarja
Image Credit: Indiaglitz

ದರ್ಶನ್‌ ಹಾಗು ಸರ್ಜಾ ಕುಟುಂಬದ ಮಧ್ಯೆ ಒಳ್ಳೆಯ ಒಡನಾಟವಿದೆ

ದರ್ಶನ್‌ ಹಾಗು ದ್ರುವ ಸರ್ಜಾ ಇಬ್ಬರ ನಡುವೆ ಅಂತಹುದು ಏನೂ ಆಗಿಲ್ಲ, ಎಲ್ಲವೂ ಸರಿಯಾಗಿದೆ. ಏನೇನೋ ಕಲ್ಪಿಸೋದು ಸರಿಯಲ್ಲ.‌ ಚಿತ್ರರಂಗದವರು ಎಲ್ಲಾರು ಒಟ್ಟಾಗಿ ಚೆನ್ನಾಗೆಯೇ ಇದ್ದಾರೆ. ಅರ್ಜುನ್‌ ಸರ್ಜಾ ನಿರ್ದೇಶನದ ʼಪ್ರೇಮ ಬರಹʼ ಸಿನಿಮಾದ ಹಾಡಿನಲ್ಲಿ ದರ್ಶನ್‌ ಕಾಣಿಸಿಕೊಂಡಿದ್ದರು. ʼಜೈ ಹನುಮಾನʼ ಹಾಡಿನಲ್ಲಿ ಅರ್ಜುನ್‌ ಸರ್ಜಾ, ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ಜೊತೆ ದರ್ಶನ್‌ ಹೆಜ್ಜೆ ಹಾಕಿದ್ದರು. ದರ್ಶನ್‌ ಹಾಗು ಸರ್ಜಾ ಕುಟುಂಬದ ಮಧ್ಯೆ ಒಳ್ಳೆಯ ಒಡನಾಟವಿದೆ.

ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವು ಒಳ್ಳೆಯದಲ್ಲ ಅಂತ ದಚ್ಚು ಹಾಗೂ ಧ್ರುವ ಅಭಿಮಾನಿಗಳು ವಾದಿಸುತ್ತಿದ್ದಾರೆ. ಆದರೂ ಒಂದೇ ವೇದಿಕೆ ಮೇಲಿದ್ರೂ ಸಹ ಕನಿಷ್ಠ ಪಕ್ಷ ನೋಡಿ ಮಾತನಾಡುವುದು ಇರಲಿ ಒಂದು ಸ್ಮೈಲ್‌ ಕೂಡ ಮಾಡಿಲ್ಲ ಅಂದ್ರೆ ಇಬ್ಬರ ನಡುವೆ ಏನೋ ನಡೆದಿದೆ ಎಂದು ಟ್ರೋಲರ್ಸ್‌ ವಿಷಯವನ್ನು ಮತ್ತಷ್ಟು ಗಂಭೀರವಾಗಿ ಚರ್ಚಿಸುತ್ತಿದ್ದಾರೆ. ಒಟ್ಟಾರೆಯಾಗಿ ಈ ಕುರಿತು ದರ್ಶನ ಮತ್ತು ದ್ರುವ ಸರ್ಜಾ ಸ್ಪಷ್ಟಪಡಿಸುವುದು ಉತ್ತಮ.

Leave A Reply

Your email address will not be published.