Actor Darshan: ನಟ ದರ್ಶನ್ ಮನೆಯಲ್ಲಿ ಎಷ್ಟು ಹುಲಿ ಉಗುರುಗಳು ಇವೆ ಗೊತ್ತಾ…? ಅಷ್ಟಕ್ಕೂ ಅಸಲಿನ ನಕಲಿನಾ…?
ನಟ ದರ್ಶನ್ ಅವರ ಮನೆಯಲ್ಲಿ ಎಷ್ಟು ಹುಲಿ ಉಗುರುಗಳಿವೆ ನೋಡಿ.
Actor Darshan Tiger Nail Locket: ಬಿಗ್ ಬಾಸ್ (Bigg Boss) ಮನೆಯಿಂದ ಪ್ರಾರಂಭವಾದ ಹುಲಿ ಉಗುರಿನ ವಿಚಾರ ಈಗ ಸಿನಿಮಾ ನಟರ ಮನೆ ತನಕ ಬಂದಿದೆ. ಬಿಗ್ ಬಾಸ್ ಸ್ಪರ್ಧಿ ವರ್ತುರ್ ಸಂತೋಷ್ ಅವರು ಹುಲಿ ಉಗುರಿನ ಲಾಕೆಟ್ ಬಳಸುತ್ತಿದ್ದರಿಂದ ಬಿಗ್ ಬಾಸ್ ಮನೆಗೆ ಅರಣ್ಯಾಧಿಕಾರಿಗಳು ಬಂದು ಅವರನ್ನು ಅರೆಸ್ಟ್ ಮಾಡಿ ಕರೆದುಕೊಂಡು ಹೋಗಿದ್ದರು.
ತದನಂತರ ಈಗ ನಟರು ಹಳೆಯ ಫೋಟೋ ವಿಡಿಯೋಗಳ ಮೂಲಕ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ಈಗಾಗಲೇ ಹಲವು ನಟರ ಹೆಸರುಗಳಲ್ಲಿ ದೂರು ದಾಖಲಾಗಿದ್ದು, ವಿಚಾರಣೆ ಕೂಡ ನೆಡೆಯುತ್ತಿದೆ.

ಹಲವು ನಟರ ವಿರುದ್ಧ ದೂರು ದಾಖಲು
ಹುಲಿ ಉಗುರಿನ ಬಳಕೆಯ ಪ್ರಕರಣದಲ್ಲಿ ಅನೇಕ ನಟರು ಸಿಲುಕಿಕೊಂಡಿದ್ದು, ರೈತರಾದ ವರ್ತುರ್ ಸಂತೋಷ್ ಅವರಿಂದ ಪ್ರಾರಂಭವಾಗಿ, ನವರಸ ನಾಯಕ ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ, ರಾಕ್ ಲೈನ್ ವೆಂಕಟೇಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರು ಕೇಳಿಬರುತ್ತಿದೆ. ಇದರ ಬೆನ್ನಲ್ಲೆ ಅರಣ್ಯಾಧಿಕಾರಿಗಳೂ ಸಹ ತಂಡ ರಚಿಸಿ ಕಾರ್ಯಾಚಾರಣೆ ಪ್ರಾರಂಭಿಸಿದ್ದಾರೆ .ಅಷ್ಟೇ ಅಲ್ಲದೇ ಈಗಾಗಲೇ ದರ್ಶನ್ (Darshan) ಅವರ ಮನೆಯಲ್ಲಿ ಶೋಧ ವಿಚಾರಣೆ ನಡೆದಿದೆ.

ನಟ ದರ್ಶನ್ ಅವರ ಮನೆಯಲ್ಲಿ ಶೋಧಕಾರ್ಯಾಚರಣೆ
ಹುಲಿ ಉಗುರಿನ ತನಿಖೆಗಾಗಿ ದರ್ಶನ್ ಅವರ ಮನೆಗೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು , ಮನೆ ಬಾಗಿಲು ತೆಗೆದ ದರ್ಶನ್ ಅಧಿಕಾರಿಗಳನ್ನು ಮನೆ ಒಳಗೆ ಸ್ವಾಗತಿಸಿದ್ದರು, ಅಷ್ಟೇ ಅಲ್ಲದೆ ಅವರ ಶೋಧ ಕಾರ್ಯಕ್ಕೆ ಸಾಥ್ ನೀಡಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ದರ್ಶನ್ ಅವರ ಮನೆಯಲ್ಲಿ ಒಂದಲ್ಲ ಎರಡಲ್ಲ 8 ರಿಂದ 10 ಹುಲಿ ಉಗುರುಗಳು ಸಿಕ್ಕಿವೆ ಎಂದು ಹೇಳಲಾಗುತ್ತಿದೆ. ಉಗುರಿನ ಮಾದರಿಯ ಪೆಂಡೆಂಟ್ಗಳು ದೊರೆತಿವೆ. ಆದರೆ ಯಾವುದೂ ಅಸಲಿ ಅಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ. ಹಾಗಾಗಿ ನಟ ದರ್ಶನ ಸೇಫ್ ಆಗಿದ್ದಾರೆ ಎನ್ನಲಾಗಿದೆ.