Actor Jaggesh : ಕೋಪ ಬಿಟ್ಟು ಡ್ರೋನ್ ಪ್ರತಾಪ್ ಪರವಾಗಿ ಮಾತನಾಡಿದ ಜಗ್ಗೇಶ್, ವೈರಲ್ ಆಯಿತು ಪೋಸ್ಟ್.

ಡ್ರೋನ್ ಪ್ರತಾಪ್ ಕುರಿತು ಹಾಕಿದ ಪೋಸ್ಟ್ ಬಗ್ಗೆ ಸ್ಪಷ್ಟನೆ ನೀಡಿದ ನಟ ಜಗ್ಗೇಶ್, ನಟ ಹೇಳಿದ್ದೇನು?

Actor Jaggesh About Drone Pratap: ಇತೀಚಿನ ದಿನಗಳಲ್ಲಿ ಎಲ್ಲಾರ ಬಾಯಲ್ಲೂ ಡ್ರೋನ್ ಪ್ರತಾಪ್ (Drone Prathap) ಅವರ ಸುದ್ದಿಯೇ ಹರಿದಾಡುತ್ತಿದೆ. ಹಲವು ವರ್ಷಗಳ ಹಿಂದೆ ಇಡೀ ರಾಜ್ಯಕ್ಕೆ ಮೋಸ ಮಾಡಿದ ಲಿಸ್ಟ್ ನಲ್ಲಿದ್ದ ಡ್ರೋನ್ ಪ್ರತಾಪ್ ಈಗ ಬಿಗ್ ಬಾಸ್ (Bigg Boss) ಸ್ಪರ್ಧಿ ಆಗಿ ಕಾಣಿಸಿಕೊಂಡಿದ್ದಾರೆ.

ಡ್ರೋನ್ ವಿಷಯವಾಗಿ ರಾಜ್ಯಕ್ಕೆ ಹಾಗು ಜನರಿಗೆ ಮೋಸ ಮಾಡಿದ್ದೂ, ಅಷ್ಟೇ ಅಲ್ಲದೆ ಇನ್ನಿತರ ಹಣ ವಂಚನೆ ವಿಷಯವಾಗಿ ಡ್ರೋನ್ ಪ್ರತಾಪ್ ವಿರುದ್ಧ ಪೊಲೀಸ್ ಕೇಸ್ ದಾಖಲಾಗಿತ್ತು. ಹಲವು ಆರೋಪಗಳಿಂದ, ಎಲ್ಲರಿಂದ ದೂರ ಉಳಿದಿದ್ದ ಡ್ರೋನ್ ಪ್ರತಾಪ್ ಈಗ ಬಿಗ್ ಮನೆಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. 

Actor Jaggesh About Drone Pratap
Image Credit: Vistaranews

ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಪ್ರತಾಪ್ ಆರಂಭದಲ್ಲಿ ಹಲವು ಟೀಕೆಗಳನ್ನು, ಅವಮಾನಗಳನ್ನು ಎದುರಿಸಬೇಕಾಯಿತು. ದಿನ ಕಳೆದಂತೆ ಆಟವನ್ನು ಅರ್ಥ ಮಾಡಿಕೊಂಡು ಆಟ ಶುರು ಮಾಡಿದ ಡ್ರೋನ್ ಪ್ರತಾಪ್ ಗೆ ಹಲವು ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಹಲವು ಜನರು ಪ್ರತಾಪ್ ಗೆ ಸಪ್ಪೋರ್ಟ್ ಮಾಡಿದರೆ, ಇನ್ನು ಕೆಲವರು ಡ್ರೋನ್ ಪ್ರತಾಪ್ ಅವರನ್ನು ಟೀಕಿಸಿ , ಅವರನ್ನು ನಂಬಲು ಆಗಲ್ಲ ಎನ್ನುತ್ತಿದ್ದಾರೆ.

ನಟ ಜಗ್ಗೇಶ್ (Actor Jaggesh) ಪೋಸ್ಟ್ ವೈರಲ್

ಬಿಗ್ ಬಾಸ್ ಮನೆಗೆ ಸ್ಪರ್ಧಿ ಆಗಿ ಬಂದ ಡ್ರೋನ್ ಪ್ರತಾಪ್ ಅವರನ್ನು ಹಲವು ಜನರು ಮೋಸಗಾರ, ಅಂತೆಲ್ಲ ಟೀಕಿಸಿದರು. ಅದರಂತೆ ನಟ ಜಗ್ಗೇಶ್ (Actor Jaggesh) ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ನಟ ಜಗ್ಗೇಶ್​ ಕೂಡ ಈ ಹಿಂದೆ ಡ್ರೋನ್​ ಪ್ರತಾಪ್​ ತಮಗೆ ಹೇಗೆ ಮೋಸ ಮಾಡಿದ್ದ ಎನ್ನುವುದನ್ನು ಹೇಳಿಕೊಂಡಿದ್ದರು ಕೆಲವರು ಇನ್ನೂ ಆತನನ್ನು ಟ್ರೋಲ್​ ಮಾಡುತ್ತಲೇ ಇದ್ದಾರೆ. ಜಗ್ಗೇಶ್​ ಅವರು ಈ ಹಿಂದೆ ಪ್ರತಾಪ್​ ಬಗ್ಗೆ ಬರೆದಿದ್ದ ಮಾತುಗಳನ್ನೇ ಈಗ ಮತ್ತೊಮ್ಮೆ ಬರೆದಂತೆ ಸೃಷ್ಟಿಸಿ, ಅದಕ್ಕೆ ಕೆಲ ಕೆಟ್ಟ ಶಬ್ದಗಳನ್ನು ಬಳಸಿ ಶೇರ್​ ಮಾಡುತ್ತಿದ್ದಾರೆ. ಇದು ಜಗ್ಗೇಶ್ ಗಮನಕ್ಕೂ ಬಂದಿದೆ.

ಟ್ರೋಲ್ ಗೆ ಸ್ಪಷ್ಟನೆ ನೀಡಿದ ನಟ ಜಗ್ಗೇಶ್
ಈ ಹಿಂದಿನ ಟ್ರೋಲ್ ಅನ್ನು ಮತ್ತೆ ಬಳಸಿ ಅವಾಚ್ಯ ಶಬ್ದಗಳನ್ನು ಉಪಯೋಗಿಸುತ್ತಿದ್ದಾರೆ. ನಟ ಜಗ್ಗೇಶ್​ ತಮ್ಮ ಇನ್​ಸ್ಟಾಗ್ರಾಮ್​ ನಲ್ಲಿ ಡ್ರೋನ್​ ಪ್ರತಾಪ್​ ಹೆಸರು ಹೇಳದೇ ಪೋಸ್ಟ್​ ಒಂದನ್ನು ಶೇರ್​ ಮಾಡಿದ್ದಾರೆ. ಮಿತ್ರರೆ ನನ್ನ ಇನ್ಸ್ಟಗ್ರಾಮ್ ಹಿಂದಿನ ಮುಖಪುಟ photoshot ಬಳಸಿ ಯಾರೋ ಒಬ್ಬ ವ್ಯೆಕ್ತಿಯ ಬಗ್ಗೆ ನಾನು negative post ಹಾಕಿದಂತೆ ಮಾಡಿದ್ದಾರೆ.

ಕ್ಷಣಿಕ ಖುಷಿ ಅವರಿಗೆ ಸಿಗಬಹುದು ನೆನಪಿಡಿ ಸಿಕ್ಕಿಬಿದ್ದರೆ ನಿಮ್ಮ ಜನ್ಮ ಸಾಕು ಎನ್ನುವಂತೆ ಮಾಡುತ್ತದೆ ಇಂದಿನ ಕಾನೂನು, ಸ್ನೇಹಿತರೆ ನನ್ನ ಬದುಕಲ್ಲಿ ನಾನು ಯಾರನ್ನು ನೋಯಿಸುವಂತ ಗುಣವಿಲ್ಲಾ! ನನ್ನ ದ್ವೇಷಿಸುವವರನ್ನು ಗೌರವಿಸುವೆ ಒಂದುವೇಳೆ ಇಷ್ಟವಾಗದಿದ್ದರೆ ಅವರಿಂದ ದೂರ ಉಳಿಯುವೆ! ನನಗೀಗ 61 ನಾನ್ಯಾಕೆ ನನ್ನ ಮಕ್ಕಳ ವಯಸ್ಸಿನವರೊಂದಿಗೆ ತರ್ಕ ಮಾಡುವೆ! ನನ್ನ ಮೇಲೆ ನಂಬಿಕೆಯಿರಲಿ ಅಂತ post ಗಳು ಬಂದರೆ share ಮಾಡಿ I will handle thankyou ಎಂದು ಬರೆದಿದ್ದಾರೆ. ಈ ರೀತಿಯಾಗಿ ನಟ ಜಗ್ಗೇಶ್ ಅವರು ತನ್ನ ಇನ್ಸ್ಟಗ್ರಾಮ್ ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.

Leave A Reply

Your email address will not be published.