Actor Jaggesh: ಸ್ಕ್ಯಾನಿಂಗ್ ಮಾಡುವಾಗ ಎಡವಟ್ಟು ಮಾಡಿಕೊಂಡ ಜಗ್ಗೇಶ್, ಟ್ರೊಲ್ ಮಾಡಿದ ನೆಟ್ಟಿಗರು.
ಸ್ಕ್ಯಾನಿಂಗ್ ವಿಚಾರದಲ್ಲಿ ಟ್ರೋಲ್, ಏನಿದು ಜಗ್ಗೇಶ್ ಎಡವಟ್ಟು ಮಾಡಿಕೊಂಡ್ರಾ...?
Actor Jaggesh Latest News: ಸೆಪ್ಟೆಂಬರ್ 29ರಂದು ಕಾವೇರಿ ವಿವಾದದ ಕುರಿತು ಕರ್ನಾಟಕ ಬಂದ್ ಮಾಡಲಾಗಿತ್ತು.ಚಿತ್ರರಂಗದವರು ಕೂಡ ಈ ಬಂದ್ ಗೆ ಸಾಥ್ ಕೊಟ್ಟಿದ್ದು. ಈ ವೇಳೆಯಲ್ಲಿ ಜಗ್ಗೇಶ್ ಪ್ರತಿಭಟನಾ ಸಭೆಗೆ ಗೈರಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ನಟ ಜಗ್ಗೇಶ್ ಕ್ಷಮೆ ಕೇಳಿದ್ದಾರೆ. ಅನಾರೋಗ್ಯದ ನಡುವೆಯೂ ನಟ ಜಗ್ಗೇಶ್ (Jaggesh) ದಿಢೀರ್ ಸುದ್ದಿಗೋಷ್ಠಿ ಕರೆದಿದ್ರು. ನಟ ಜಗ್ಗೇಶ್ ಕೇದರನಾಥ ದೇಗುಲಕ್ಕೆ ತೆರಳಿದ್ರು.
ಈ ವೇಳೆ ಜಗ್ಗೇಶ್ ಅವರಿಗೆ ಬೆಟ್ಟ ಇಳಿಯುವಾಗ ಬೆನ್ನು ನೋವು ಕಾಣಿಸಿಕೊಂಡಿದೆ. ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದ ಜಗ್ಗೇಶ್ ದೆಹಲಿಯಲ್ಲಿ ಚಿಕಿತ್ಸೆಗೆ ಒಳಗಾಗಿದ್ರು. ವೈದ್ಯರು ಎರಡು ವಾರ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ತಡರಾತ್ರಿ ಬೆಂಗಳೂರಿಗೆ ಆಗಮಿಸಿದ ನವರಸನಾಯಕ ಜಗ್ಗೇಶ್, ಸುದ್ದಿಗೋಷ್ಠಿ ನಡೆಸಿ ಪ್ರತಿಭಟನಾ ಸಭೆಗೆ ಬಾರದೇ ಇರೋದಕ್ಕೆ ಕ್ಷಮೆ ಇರಲಿ ಎಂದಿದ್ದಾರೆ.
ಕಾವೇರಿ ಇತಿಹಾಸ ಬಿಚ್ಚಿಟ್ಟ ನಟ ಜಗ್ಗೇಶ್
ಕಾವೇರಿ ವಿಚಾರದಲ್ಲಿ ಹೋರಾಟಕ್ಕೆ ಬಂದಿಲ್ಲ ಅಂದ್ರೆ ಸ್ವಾಭಿಮಾನಿ ಅಲ್ಲ ಅಂತಲ್ಲ. ಮೊದಲು ಅದರ ಇತಿಹಾಸ ಎಲ್ಲರೂ ಅರಿಯಬೇಕು. ಮಹಾರಾಜರು ಆಗ ನದಿಗೆ ಅಡ್ಡಲಾಗಿ ಚೆಕ್ ಪಾಯಿಂಟ್ಸ್ ಕಟ್ಟಿದ್ರು. ಕೊನೆಗೆ ಡ್ಯಾಮ್ ಕಟ್ಟಲು ಬಂದಾಗ ಸ್ಟಾಪ್ ಮಾಡಲು ಬಂದಿದ್ರು. ಮೆಟ್ಟೂರು ಡ್ಯಾಂನ 6 ವರ್ಷದಲ್ಲಿ ಕಟ್ಟಿಕೊಂಡರು. ನಮಗೆ 20 ವರ್ಷ ಬೇಕಾಯಿತು. ಕಾವೇರಿ ಹುಟ್ಟೋದು ಕರ್ನಾಟಕದಲ್ಲಿ, ಹರಿಯೋದು ಕರ್ನಾಟಕದಲ್ಲಿ, ಬಳಕೆ ಮಾತ್ರ ಅವರದ್ದು ಎಂದು ಜಗ್ಗೇಶ್ ಕಿಡಿಕಾರಿದ್ರು.
ಅನ್ನ ಇಲ್ಲ ಅಂದ್ರೂ ಭಿಕ್ಷೆ ಎತ್ತಿ ಅವರಿಗೆ ನೀಡುವ ಪರಿಸ್ಥಿತಿ
ಇದೇ ವೇಳೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಆಡಿದ ಮಾತು ನೆನಪಿಸಿಕೊಂಡ ನಟ ಜಗ್ಗೇಶ್, ದೇವೇಗೌಡರು ಒಂದೊಳ್ಳೆ ಮಾತು ಹೇಳಿದ್ರು ನೀರೇ ಇಲ್ಲ ಅಂದಾಗ ಬಿಡೋಕೆ ಆಗಲ್ಲ ಅನ್ನೋದಲ್ಲ ಮೊದಲು ಕಾನೂನಿನಲ್ಲಿ ಮಾಡಿಸಬೇಕು. ಇದು ಹೋರಾಟದಿಂದ ಬಗೆಹರಿಯೋದಿಲ್ಲ. ನಮಗೆ ಅನ್ನ ಇಲ್ಲ ಅಂದ್ರೂ ಭಿಕ್ಷೆ ಎತ್ತಿ ಅವರಿಗೆ ನೀಡುವ ಪರಿಸ್ಥಿತಿ ಬಂದಿದೆ. 1991 ರಿಂದ ಈ ಸಮಸ್ಯೆ ಶುರುವಾಗಿದೆ.
ಸಂತೆಯಲ್ಲಿ ಮಾತಾಡೋ ವಿಚಾರಗಳಿಗೆ ನಾನು ಕಿವಿಕೊಡಲ್ಲ
MRI ಸ್ಕ್ಯಾನ್ ಮಾಡಿಸುವಾಗ ಉಂಗುರ, ಕಿವಿಯೋಲೆ ಬಿಚ್ಚದೆ ಸ್ಕ್ಯಾನ್ ಮಾಡಿಸಿರೋ ನಟ ಜಗ್ಗೇಶ್ ಫೋಟೋಗಳು ಸಖತ್ ಟ್ರೋಲ್ ಆಗಿತ್ತು ಇದಕ್ಕೆ ಉತ್ತರಿಸಿದ ಜಗ್ಗೇಶ್, ಚಪ್ಪಲಿ ಇಲ್ಲದೆ ಬೆಟ್ಟ ಹತ್ತೋದು ಕಷ್ಟವಾಗಿತ್ತು. ನಾನು ಬೇಕಾದ ತಯಾರಿ ಮಾಡಿಕೊಂಡಿರಲಿಲ್ಲ ಅದಕ್ಕೆ ಚಿಕಿತ್ಸೆ ಪಡೆದುಕೊಳ್ತಿದ್ದೀನಿ. ನಾನು ನಿರ್ಮಾಪಕರಿಗೋಸ್ಕರ ಬಂದಿರೋದು. ಸಂತೆಯಲ್ಲಿ ಮಾತಾಡೋ ವಿಚಾರಗಳಿಗೆ ನಾನು ಕಿವಿಕೊಡಲ್ಲ ಎಂದು ಒಂದೇ ಮಾತಲ್ಲಿ ಟ್ರೋಲಿಗರಿಗೆ ಉತ್ತರ ಕೊಟ್ರು.