Kichcha Sudeep: ದುಬಾರಿ ಬೆಲೆಯ ಪೋರ್ಷೆ ಸೂಪರ್ ಕಾರು ಖರೀದಿಸಿದ ಕಿಚ್ಚ ಸುದೀಪ್, ಬೆಲೆ ಎಷ್ಟು ಗೊತ್ತಾ…?
ದುಬಾರಿ ಬೆಲೆಯ ಪೋರ್ಷೆ ಸೂಪರ್ ಕಾರು ಖರೀದಿಸಿದ ಕಿಚ್ಚ ಸುದೀಪ್.
Kichcha Sudeep Expensive Car: ನಟ, ನಿರ್ದೇಶಕ, ನಿರೂಪಕ, ಹಾಡುಗಾರ ಹಾಗು ಬಹುಭಾಷಾ ನಟನಾಗಿರುವ ಕಿಚ್ಚ ಸುದೀಪ್ (Kichcha Sudeep) ಅವರು ಹಲವು ಸಿನಿಮಾ ಹಾಗು ರಿಯಾಲಿಟಿ ಶೋ (Reality Show) ಅಲ್ಲಿ ಕಾಣಿಸಿಕೊಳ್ಳುತ್ತಾರೆ.
ಹುಚ್ಚ ಸಿನಿಮಾದ ಮೂಲಕ ಜನರ ನೆಚ್ಚಿನ ನಟನಾಗಿ ಹೊರಹೊಮ್ಮಿದ್ದು ಈ ನಟ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಕಿಚ್ಚ ಸುದೀಪ್ ಅವರು ಶಿವಮೊಗ್ಗದಲ್ಲಿ ಜನಿಸಿದ್ದು, ಬೆಂಗಳೂರಿನ ದಯಾನಂದ್ ಸಾಗರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಮಾಡಿದ್ದಾರೆ. ನಂತರ ನಟನೆಯ ಫೀಲ್ಡ್ ಗೆ ಬಂದ ಸುದೀಪ್ ಅನೇಕ ಭಾಷೆಗಳಲ್ಲಿ ನಟಿಸಿದ್ದಾರೆ.

ಕಾರು ಕ್ರೇಜ್ ಹೊಂದಿದ ನಟ ಸುದೀಪ್
ಇತೀಚಿನ ದಿನಗಳಲ್ಲಿ ಕಾರು, ಬೈಕ್ ಗಳಲ್ಲಿ ಆಸಕ್ತಿ ಇರುವುದು ಸಹಜ. ಹಾಗೆಯೆ ಕಿಚ್ಚ ಸುದೀಪ್ ಅವರಿಗೆ ಕಾರುಗಳ ಮೇಲೆ ಕ್ರೇಜ್ ಹೆಚ್ಚಾಗೇ ಇದೆ. ಇವರಿಗೆ ಕ್ರೇಜ್ಇದ್ದರೂ ಸಹ ಮಾರುಕಟ್ಟೆಗೆ ಬಂದ ಕಾರ್ ಗಳನ್ನೆಲ್ಲಾ ಖರೀದಿ ಮಾಡುವುದಿಲ್ಲ. ಇಷ್ಟವಾದ ಹಾಗೂ ವಿಶೇಷ ಎನಿಸುವಂತಹ ಕಾರ್ ಗಳನ್ನು ಖರೀದಿಸುತ್ತಾರೆ. ಇದೀಗ ಕಿಚ್ಚ ಸುದೀಪ್ ಐಷಾರಾಮಿ ಪೋರ್ಷೆ ಪನಾಮೆರಾ GTS (Porsche Panamera GTS) ಕಾರನ್ನು ಖರೀದಿಸಿದ್ದಾರೆ.
ಪೋರ್ಷೆ ಪನಾಮೆರಾ GTS ಕಾರಿನ ವೈಶಿಷ್ಟತೆಗಳು
ಪೋರ್ಷೆ ಹೊಸ ಪನಾಮೆರಾ ಕಾರಿನಲ್ಲಿ 20- ಅಥವಾ 21-ಇಂಚಿನ ಟೈರ್‌ಗಳ ಆಯ್ಕೆಯನ್ನು ನೀಡುತ್ತದೆ. ಈ ಸೂಪರ್ ಕಾರಿನಲ್ಲಿ ವಿಶೇಷ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ ಹಾಗು ಆರಾಮದಾಯಕ ಹಿಂಬದಿಯ ಸೀಟ್ ಗಳೊಂದಿಗೆ ಸ್ವಲ್ಪ ಹೆಚ್ಚು ಪ್ರಾಯೋಗಿಕ ಪೋರ್ಷೆ ಎಂದು ಪರಿಗಣಿಸಲಾಗಿದೆ, ಅದು ಮಾಲೀಕರಿಗೆ ವೇಗವಾಗಿ ಮತ್ತು ಅನುಕೂಲಕರವಾಗಿದೆ.
ಪೋರ್ಷೆ ಪನಾಮೆರಾ GTS ಕಂಪನಿಯ ಎಲ್ಲಾ ಕೂಪ್ ಗಳಿಗೆ ಸಾಮಾನ್ಯವಾದ ಸಾಂಪ್ರದಾಯಿಕ ಶೈಲಿಯನ್ನು ಉಳಿಸಿಕೊಂಡಿದೆ ಆದರೆ ಎರಡು ಹೆಚ್ಚುವರಿ ಡೋರುಗಳನ್ನು ಹೊಂದಿದೆ. ಉದ್ದನೆಯ ವೀಲ್‌ಬೇಸ್ ಕ್ಯಾಬಿನ್‌ನಲ್ಲಿ ಸಾಕಷ್ಟು ಸ್ಥಳವನ್ನು ಬಿಡುಗಡೆ ಮಾಡುವಾಗ ಪ್ರೊಫೈಲ್ ಅದರ ಹಿಮ್ಮೆಟ್ಟುವ ರೂಫ್ ಅನ್ನು ತೋರಿಸುತ್ತದೆ.

ಪೋರ್ಷೆ ಪನಾಮೆರಾ GTS ಕಾರಿನ ಎಂಜಿನ್ ಸಾಮರ್ಥ್ಯ
ಪೋರ್ಷೆ ಪನಾಮೆರಾ GTS ಕಾರಿನಲ್ಲಿ 4.0-ಲೀಟರ್ ಟ್ವಿನ್-ಟರ್ಬೊ V8 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 473 bhp ಮತ್ತು 620 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ನಾಲ್ಕು-ಡೋರಿನ ಸ್ಪೋರ್ಟ್ ಕ್ರೊನೊ ಪ್ಯಾಕೇಜ್‌ನ ಪೋರ್ಷೆ ಪನಾಮೆರಾ GTS ಕಾರಿನಲ್ಲಿ 3.9 ಸೆಕೆಂಡ್‌ಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆಯುತ್ತದೆ. ಈ ಸೂಪರ್ ಕಾರು 300 ಕಿ.ಮೀ ಟಾಪ್ ಸ್ಫೀಡ್ ಅನ್ನು ಹೊಂದಿದೆ.
ಪೋರ್ಷೆ ಪನಾಮೆರಾ GTS ಕಾರಿನ ಬೆಲೆ
ಈ ಹೊಸ ಪೋರ್ಷೆ ಪನಾಮೆರಾ GTS ಕಾರಿನ ಬೆಲೆಯು ರೂ.2.03 ಕೋಟಿಯಾಗಿದೆ. ಈ ಬೆಲೆಯು ಎಕ್ಸ್ ಶೋರೂಂ ಪ್ರಕಾರವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.