Kishore Kumar: ಸನಾತನ ಧರ್ಮದ ಬಗ್ಗೆ ವ್ಯಂಗ್ಯ ಪ್ರಶ್ನೆ ಕೇಳಿದ ನಟ ಕಿಶೋರ್, ವೈರಲ್ ಆಗಿದೆ ಕಿಶೋರ್ ಪೋಸ್ಟ್.
ಇದಾವುದು ಹೊಸ ಧರ್ಮ? ಸನಾತನ? ಎಂದು ವಿವಾದ ಸ್ರಷ್ಟಿಸಿದ ನಟ ಕಿಶೋರ್ ಕುಮಾರ್.
Actor Kishore Kumar About Sanatana Dharma: ಸನಾತನ ಧರ್ಮದ (Sanatana Dharma) ವಿಚಾರವಾಗಿ ಸ್ವಲ್ಪ ದಿನಗಳಿಂದ ಬಹಳ ಚರ್ಚೆ ಆಗುತ್ತಿರುವುದು ಕಾಣುತ್ತೇವೆ. ಸನಾತನ ಧರ್ಮದ ವಿಚಾರವಾಗಿ ಅನೇಕರು ಅನೇಕ ರೀತಿಯ ಹೇಳಿಕೆಯನ್ನು ವ್ಯಕ್ತ ಪಡಿಸುತ್ತಿರುವುದನ್ನು ನೋಡುತ್ತಿದ್ದೇವೆ. ಈಗಾಗಲೇ ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡಿದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ತಲೆ ಕಡಿಯಬೇಕು ಎಂದು ಅಯೋಧ್ಯೆ ಸ್ವಾಮಿ ಹೇಳಿಕೆ ನೀಡಿದ್ದಾರೆ . ಈ ಹೇಳಿಕೆಯ ವಿರುದ್ಧ Actor Kishore Kumar ಕಿಡಿ ಕಾರಿದ್ದಾರೆ.

ಇದಾವುದು ಹೊಸ ಧರ್ಮ? ಸನಾತನ? ಎಂದ ನಟ ಕಿಶೋರ್ ಕುಮಾರ್ :
ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ತಲೆ ಕಡಿಯಬೇಕು ಎಂದು ಅಯೋಧ್ಯೆ ಸ್ವಾಮಿ ಹೇಳಿಕೆ ಕುರಿತು ನಟ ಕಿಶೋರ್ ಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. .ಮನುಷ್ಯರನ್ನು ಮನುಷ್ಯರಾಗಿ, ಕಾಣುವ ಮನುಷ್ಯ ಧರ್ಮದವರಾಗೋಣ. ವಿಶ್ವಮಾನವರಾಗೋಣ ಎಂದು ಕಿಶೋರ್ ಕುಮಾರ್ ಅವರು ಹೇಳಿದ್ದಾರೆ. ಹಾಗಾದರೆ ನಾವು ಹಿಂದೂಗಳಲ್ಲವೇ ಎಂದು ಕೇಳಿರುವ ಅವರು, ಇದಾವುದು ಹೊಸ ಧರ್ಮ? ಸನಾತನ? ಎಂದು ಪ್ರಶ್ನಿಸಿದ್ದಾರೆ.
ರಾಜಕೀಯದ ದೃಷ್ಟಿಯಿಂದ ಉದಯನಿಧಿಯವರ ಭಾಷಾ ಪ್ರಯೋಗದ ತೀಕ್ಷ್ಣತೆ ಸ್ವಲ್ಪ ಕಡಿಮೆಯಾಗಬಹುದಿತ್ತೆನಿಸಿದರೂ, ಅವರು ಖಂಡಿಸಿದ್ದು ಇವರ ದ್ವೇಷದ ಜಾತಿವಾದದ, ಅಸ್ಪೃಷ್ಯತೆಯ, ಅಸಮಾನತೆಯ ವೈದಿಕ ರಾಜಕೀಯವು ಕಿಡ್ನಾಪ್ ಮಾಡಿದ ಸನಾತನವನ್ನು, ಆದಿ ಅಂತ್ಯವಿಲ್ಲದ ಸನಾತನ ಪದವನ್ನಲ್ಲವೆಂಬುದು ಸ್ಪಷ್ಟಎಂದು ನುಡಿದಿದ್ದಾರೆ.
ಅದನ್ನು ಸನಾತನಿಗಳ ಮಾರಣಹೋಮಕ್ಕೆ ಹೋಲಿಸಿದ ಇವರ ದ್ವೇಷದ ವಕ್ತಾರನಿಗೆ ಇವರ ಪಕ್ಷದ ಪ್ರಧಾನಿ ಊರಲ್ಲೆಲ್ಲ ಕಾಂಗ್ರೆಸ್ ಮುಕ್ತವೆಂದು ಕೂಗಾಡುತ್ತಾ ತಿರುಗಿದಾಗ ಕಾಂಗ್ರೆಸಿಗರ ಮಾರಣಹೋಮಕ್ಕೆ ಕರೆ ನೀಡಿದ್ದರೇ ಕೇಳಬೇಕಲ್ಲ ಎಂದು ಪ್ರಶ್ನಿಸಿದ್ದಾರೆ.

ಧರ್ಮವೆನ್ನುವುದು ಅಧರ್ಮದ ವಿರುದ್ಧ ಪದವಾದರೆ, ಅಧರ್ಮವೆನ್ನುವುದು ಕೆಟ್ಟ ಕೆಲಸವೆಂದಾದರೆ, ಒಳ್ಳೆಯ ಕೆಲಸ ಮಾಡುವುದಷ್ಟೇ ಧರ್ಮವೇ ಹೊರತು ಹಲವು ನಂಬಿಕೆಯ ಮೂಟೆಗಳಲ್ಲ. ಈ ದಾರಿ ತಪ್ಪಿಸುವ ಧರ್ಮಾಂಧ ರಾಜಕೀಯದಲ್ಲಿ ನಮ್ಮ ಜ್ವಲಂತ ಸಮಸ್ಯೆಗಳೂ, ಜಾತಿವಾದದ, ರಾಜಕೀಯ, ಆರ್ಥಿಕ, ಸಾಮಾಜಿಕ ಕ್ರೌರ್ಯದ, ಅಸಮಾನತೆಯ ಸಮಸ್ಯೆಗಳೆಲ್ಲ ಕೊಚ್ಚಿ ಹೋಗುವ ಮುನ್ನ ಎಚ್ಚರಗೊಳ್ಳುವ. ಮನುಷ್ಯರನ್ನು ಮನುಷ್ಯರಾಗಿ, ಕಾಣುವ ಮನುಷ್ಯ ಧರ್ಮದವರಾಗುವ. ವಿಶ್ವಮಾನವರಾಗುವ ಎಂದು ನಟ ಕಿಶೋರ್ ಕುಮಾರ್ ಹೇಳಿದ್ದಾರೆ.