Prabhas And Anushka: ಫಿಕ್ಸ್ ಆಯಿತು ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಮದುವೆ, ಮದುವೆಯ ದಿನಾಂಕ ಯಾವಾಗ ಗೊತ್ತಾ…?

ನಟ ಪ್ರಭಾಸ್ ಹಾಗು ನಟಿ ಅನುಷ್ಕಾ ಶೆಟ್ಟಿ ಮದುವೆಗೆ ಮನೆಯವರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ, ಮದುವೆ ದಿನಾಂಕ ಫಿಕ್ಸ್ ಆಗೋದು ಬಾಕಿ.

Actor Prabhas And Actress Anushka Shetty Marriage: ನಟ ಪ್ರಭಾಸ್ ಹಾಗು ನಟಿ ಅನುಷ್ಕಾ ಶೆಟ್ಟಿ ಮದುವೆ ಕಥೆ ಮುಗಿಯುವಂಥದಲ್ಲ. ಯಾವಾಗಲು ಈ ಜೋಡಿಗಳ ಮದುವೆ ಸುದ್ದಿಯೇ ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿರುತ್ತವೆ. ಇತೀಚೆಗಷ್ಟೇ Prabhas And Anushka ಮದುವೆ ಆಗಿ ಮಕ್ಕಳೊಂದಿಗೆ ಇರುವ ಫೋಟೋವನ್ನು ಎಡಿಟ್ (Edit) ಮಾಡಿ ಅಭಿಮಾನಿಗಳು ತಮಗೆ ಹೇಗೆ ಬೇಕೋ ಹಾಗೆ ಪೋಸ್ಟ್ ಮಾಡಿಕೊಂಡಿದ್ದರು.

ಅಷ್ಟೇ ಅಲ್ಲದೆ ಇವರಿಬ್ಬರ ಮದುವೆ ಕುರಿತು ಅಭಿಮಾನಿಗಳೇ ಪೋಸ್ಟ್ (Post) ಮಾಡುತ್ತಿರುತ್ತಾರೆ. ಈ ಜೋಡಿ ಅಭಿಮಾನಿಗಳ ನೆಚ್ಚಿನ ಜೋಡಿ ಆಗಿದ್ದು, ಅವರಿಬ್ಬರೂ ಮದುವೆ ಮಾಡಿಸದೇ ಇವರು ಬಿಡುವಂತಿಲ್ಲ ಅನ್ನಬಹುದು. 

Actor prabhas and Actress anushka shetty
Image Credit: India

ನಟ ಪ್ರಭಾಸ್ ಹಾಗು ನಟಿ ಅನುಷ್ಕಾ ಶೆಟ್ಟಿ ಮದುವೆಗೆ ಕುಟುಂಬದ ಸಮ್ಮತಿ

ಬಾಹುಬಲಿ ಸಿನಿಮಾದ ನಂತರ ಇವರಿಬ್ಬರ ಜೋಡಿ ಇನ್ನಷ್ಟು ಜನಪ್ರಿಯತೆಯನ್ನು ಗಳಿಸಿತು. ಬಾಹುಬಲಿ ಸಿನಿಮಾದ ಶೂಟಿಂಗ್ ಸಮಯದಲ್ಲೇ ಇವರಿಬ್ಬರ ಪ್ರೀತಿಯ ಕುರಿತು ಗುಸುಗುಸು ಪ್ರಾರಂಭ ಆಗಿತ್ತು. ತದನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯದ ಬಗ್ಗೆ ಕೇಳಿದ್ದರೆ, ಈ ಜೋಡಿ ನಾವಿಬ್ಬರು ಬೆಸ್ಟ್ ಫ್ರೆಂಡ್ ಪ್ರೀತಿ ಮಾಡುತ್ತಿಲ್ಲ ಎಂದು ಹೇಳಿದ್ದರು.

ಆದರೆ ಈಗ ಸಾಮಾಜಿಕ ಜಾಲತಾಣದಲ್ಲಿ ಇವರ ಮದುವೆ ವಿಚಾರ ಕೇಳಿ ಕೇಳಿ ಇವರಿಬ್ಬರ ಕುಟುಂಬದವರು Prabhas And Anushka ಮದುವೆ ಮಾಡಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ವರದಿಗಳ ಪ್ರಕಾರ, ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಅವರ ಕುಟುಂಬಗಳು ತಮ್ಮ ಮಕ್ಕಳ ಮದುವೆಗೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

Actor Prabhas And Actress Anushka Shetty Marriage
Image Credit: Cinejosh

ಮದುವೆ ಬಗ್ಗೆ ಯಾವುದೇ ಸ್ಪಷ್ಟನೆ ನೀಡದ ಪ್ರಭಾಸ್ ಹಾಗು ಅನುಷ್ಕಾ

ಪ್ರಭಾಸ್ ಇತ್ತೀಚೆಗಷ್ಟೇ ಆದಿಪುರುಷ ಸಹನಟಿ ಕೃತಿ ಸನೋನ್ ಅವರೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ನಂತರ ನಟಿ ಅದನ್ನು ನಿರಾಕರಿಸಿದರು. ಇದು ಆಧಾರರಹಿತ ಊಹಾಪೋಹ ಎಂದು ಕರೆದರು. ಅನುಷ್ಕಾ ಮತ್ತು ಪ್ರಭಾಸ್ ಮದುವೆಯ ಕನಸನ್ನು ಅವರ ಅಭಿಮಾನಿಗಳು ಸಹ ಕಾಣುತ್ತಿದ್ದಾರೆ. ಅದೊಂದು ವೇಳೆ ಎಲ್ಲವೂ ಅಂದುಕೊಂಡಂತಾದರೆ, ಪ್ರಭಾಸ್‌ ಅಜ್ಜಿ ಹೇಳಿದಂತೆ ಮುಂದಿನ ದಸರಾ ಹಬ್ಬದೊಳಗೆ ಅನುಷ್ಕಾ ಜೊತೆ ಸಪ್ತಪದಿ ತುಳಿಯುವರಾ ಕಾದುನೋಡಬೇಕಿದೆ.

ಆದರೆ ಅನುಷ್ಕಾ ಮತ್ತು ಪ್ರಭಾಸ್ ಇಬ್ಬರೂ ಸದ್ಯ ಮದುವೆ ಸಿದ್ಧವಿಲ್ಲ ಎನ್ನಲಾಗಿದೆ. ಅವರು ಕೇವಲ ಸ್ನೇಹಿತರಾಗಿ ಸಂತೋಷವಾಗಿದ್ದಾರೆ ಎಂದು ಮತ್ತೆ ಕೆಲವು ವರದಗಳು ಹೇಳುತ್ತಿವೆ. ಪ್ರಸ್ತುತ ಪ್ರಭಾಸ್ ಅವರು ಅನುಷ್ಕಾ ಜೊತೆ ಡೇಟಿಂಗ್ ಮಾಡುತ್ತಿಲ್ಲ. ಅವರು ತುಂಬಾ ಆತ್ಮೀಯ ಸ್ನೇಹಿತರು ಮತ್ತು ಅವರ ಕುಟುಂಬ ಸದಸ್ಯರು ಅದನ್ನು ಮುಂದಕ್ಕೆ ಕೊಂಡೊಯ್ಯಲು ಬಯಸುತ್ತಿದ್ದಾರೆ. ಆದರೆ ಅವರು ಸದ್ಯಕ್ಕೆ ಮದುವೆಗೆ ಸಿದ್ಧರಿಲ್ಲ. ಅದಕ್ಕಾಗಿ ಅವರು ಈ ಕ್ಷಣದಲ್ಲಿ ಆಪ್ತ ಸ್ನೇಹಿತರಾಗಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.