Prabhas And Anushka: ಪ್ರಭಾಸ್ ಜೊತೆ ಅನುಷ್ಕಾ ಇನ್ನೂ ಮದುವೆ ಆಗದಿರಲು ಇದೇ ಕಾರಣ !
ಪ್ರಭಾಸ್ ಹಾಗು ಅನುಷ್ಕಾ ಪ್ರೀತಿಗೆ ಈ ಒಂದು ವಿಚಾರ ಅಡ್ಡ ಬಂದಿದೆ, ಇನ್ನು ಇವರಿಬ್ಬರು ಮದುವೆ ಆಗದೆ ಇರಲು ಇಲ್ಲಿದೆ ಕಾರಣ
Actor Prabhas And Anushka Shetty Marriage: ನಾವು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಕೇಳಿಸಿಕೊಳ್ಳುವ ವಿಷಯ ವೇನೆಂದರೆ ಪ್ರಭಾಸ್ (Prabhas) ಮತ್ತು ಅನುಷ್ಕಾ ಶೆಟ್ಟಿ (Anushka Shetty) ಮದುವೆ ವಿಚಾರ. ಅಭಿಮಾನಿಗಳಿಗೆ ಸಿನಿಮಾದಲ್ಲಿ ಒಂದು ಜೋಡಿ ಇಷ್ಟ ಆದರೆ ಸಾಕು,ಅವರು ನಿಜ ಜೀವನದಲ್ಲೂ ಜೋಡಿ ಆಗಬೇಕು ಎಂದು ಆಸೆ ಪಡುತ್ತಾರೆ, ಅಂತಹ ಜೋಡಿಯಲ್ಲಿ ಪ್ರಭಾಸ್ ಮತ್ತು ಅನುಷ್ಕಾ ಜೋಡಿ ಕೂಡ ಒಂದಾಗಿದೆ.
ಬಹಳ ವರ್ಷದಿಂದ ಈ ವಿಚಾರವಾಗಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸದ್ದಿ ಹರಿದಾಡುತ್ತಿದ್ದು, ಮೊನ್ನೆ ಮೊನ್ನೆಯಷ್ಟೇ ಈ ಇಬ್ಬರು ಜೋಡಿಯ ಫೋಟೋ ಜೊತೆಗೆ ಮಗುವಿನ ಫೋಟೋಗಳನೆಲ್ಲ ಸೇರಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಇದೀಗ ಜನಪ್ರಿಯ ಆಂಗ್ಲ ವೆಬ್‌ಸೈಟ್ ಪ್ರಭಾಸ್ ಮದುವೆಯ ಬಗ್ಗೆ ಆಸಕ್ತಿದಾಯಕ ಲೇಖನವೊಂದನ್ನು ಬರೆದಿದೆ. ಮದುವೆಗೆ ಅಡ್ಡಿಯಾಗುತ್ತಿರುವ ಸಮಸ್ಯೆ ಏನೆಂದು ಬಹಿರಂಗಪಡಿಸಿದೆ.

ಜೋಡಿ ಹಕ್ಕಿಗಳಾಗಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ
ಚಿತ್ರರಂಗದ ಬಹಳ ಸುಂದರ ಜೋಡಿಯೆಂದರೆ ಪ್ರಭಾಸ್ ಮತ್ತು ಅನುಷ್ಕಾ. ಇವರಿಬ್ಬರ ಬಾಂಧವ್ಯ ನೋಡಿದ ಅಭಿಮಾನಿಗಳು ಇಬ್ಬರೂ ಪ್ರೀತಿಯಲ್ಲಿ ಮುಳುಗಿದ್ದಾರೆ ಎಂದಿದ್ದಾರೆ. ಆದರೆ ತಮ್ಮ ನಡುವೆ ಸ್ನೇಹ ಬಿಟ್ಟರೆ ಬೇರೇನೂ ಇಲ್ಲ ಎಂದು ಹಲವು ಸಂದರ್ಭಗಳಲ್ಲಿ ಹೇಳಿದ್ದಾರೆ. ಕೆಲವೊಮ್ಮೆ ನಕ್ಕು ಸುಮ್ಮನಾಗಿದ್ದಾರೆ. ಆದರೆ, ಅವರಿಬ್ಬರೂ 10 ವರ್ಷಗಳಿಂದ ಪ್ರೀತಿಸುತ್ತಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿದೆ.
ಮುಂದಿನ ದಸರಾಕ್ಕೆ ಪ್ರಭಾಸ್ ಮದುವೆ
ದಸರಾ ಹಬ್ಬದ ಸಂದರ್ಭದಲ್ಲಿ ವಿಜಯವಾಡಕ್ಕೆ ಆಗಮಿಸಿ, ದುರ್ಗಮ್ಮನ ದರ್ಶನ ಪಡೆದ ಪ್ರಭಾಸ್ ಅಜ್ಜಿ ಕೃಷ್ಣಂರಾಜ್ ಪತ್ನಿ ಶ್ಯಾಮಲಾದೇವಿ ಅವರು ಪ್ರಭಾಸ್ ಮದುವೆ ಬಗ್ಗೆ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ. ಮುಂದಿನ ದಸರಾ ಮುನ್ನವೇ ಪ್ರಭಾಸ್ ಮದುವೆ ಶುಭ ಕಾರ್ಯ ನಡೆಯಲಿದೆ ಎಂದಿದ್ದಾರೆ. ಇದು ನಿಜವೇ ಇಲ್ಲವೇ ಎಂದು ಪ್ರಭಾಸ್ ಬಾಯಿಬಿಟ್ಟು ಹೇಳಿದರೆ ತಿಳಿಯುವುದು.

ಪ್ರಭಾಸ್ ಹಾಗು ಅನುಷ್ಕಾ ಪ್ರೀತಿಗೆ ಅಡ್ಡ ಬಂದ ಜಾತಕ
ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿಗೆ ಜಾತಕ ಅಡ್ಡ ಬಂದಿದೆ ಎಂದು ಕೆಲವು ವರದಿಗಳು ಹೇಳುತ್ತದೆ. ಇಂಗ್ಲಿಷ್ ವೆಬ್‌ಸೈಟ್‌ನ ಪ್ರಕಾರ, ಪ್ರಭಾಸ್ ಮತ್ತು ಅನುಷ್ಕಾ ಮದುವೆಯಾಗಲು ಬಯಸಿದ್ದಾರೆ ಎನ್ನಲಾಗಿದೆ. ಅದು ಸಾಧ್ಯವಾಗದಿದ್ದರೆ, ಅವರು ತಮ್ಮ ಜೀವನದುದ್ದಕ್ಕೂ ಏಕಾಂಗಿಯಾಗಿರಲು ಬಯಸುತ್ತಾರೆ ಎನ್ನಲಾಗಿದೆ.
ಅಲ್ಲದೆ, ಜಾತಕ ಹೊಂದಾಣಿಕೆಯಾಗದ ಕಾರಣ ಪ್ರಭಾಸ್ ಕುಟುಂಬಸ್ಥರು ಮದುವೆಗೆ ಒಪ್ಪಿಗೆ ಸೂಚಿಸಿಲ್ಲ ಎನ್ನಲಾಗಿದೆ. ಪ್ರಭಾಸ್ ಅವರ ತಾಯಿ ಹೆಚ್ಚಾಗಿ ಜಾತಕ ಮತ್ತು ದೇವರನ್ನು ನಂಬುತ್ತಾರಂತೆ. ಅವರಿಂದಲೇ ಪ್ರಭಾಸ್ ಮದುವೆಯಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.