Actor Prabhas: ನಟ ಪ್ರಭಾಸ್ ಕೆನ್ನೆಗೆ ಹೊಡೆದ ಯುವತಿ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್.
ಯುವತಿಯಿಂದ ನಟ ಪ್ರಭಾಸ್ ಕೆನ್ನೆಗೆ ಹೊಡೆತ, ಸುದ್ದಿ ಬಾರಿ ವೈರಲ್.
Actor Prabhas Latest News: ‘ಬಾಹುಬಲಿ’ ಸರಣಿಯ ಮೂಲಕ ವಿಶ್ವ ಮಟ್ಟದಲ್ಲಿ ಫ್ಯಾನ್ಸ್ ಫಾಲೋಯಿಂಗ್ ಪಡೆದ ಪ್ಯಾನ್ ಇಂಡಿಯಾ ಸ್ಟಾರ್ ನಟ ಪ್ರಭಾಸ್ ಗೆ (Prabhas) ನಮ್ಮ ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಸಾಕಷ್ಟು ಅಭಿಮಾನಿಗಳಿದ್ದಾರೆ.
ಅದರಲ್ಲೂ ಜಪಾನ್‌ನಲ್ಲಿ ‘ಬಾಹುಬಲಿ’ ಸಿನಿಮಾ ಸಖತ್ ಕ್ರೇಜ್ ಪಡೆದುಕೊಂಡಿತ್ತು. ಸಧ್ಯ ಪ್ರಭಾಸ್‌ಗೆ ಯುವತಿಯೊಬ್ಬಳು ಕೆನ್ನೆಗೆ ಹೊಡೆದಿರುವ ವಿಡಿಯೋವೊಂದು ಇಂಟರ್‌ನೆಟ್‌ನಲ್ಲಿ ಬಾರಿ ಸದ್ದು ಮಾಡುತ್ತಿದೆ.
ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ನಟ ಪ್ರಭಾಸ್
ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಈ ನಟ, ತಮ್ಮ ಅಭಿಮಾನಿಗಳನ್ನಕೂಡ ಡಾರ್ಲಿಂಗ್ಸ್ ಅಂತ ಪ್ರೀತಿಯಿಂದ ಕರಿತಾರೆ. ಪ್ರಭಾಸ್ ಮತ್ತು ಅವರ ಅಭಿಮಾನಿಗಳ ಮಧ್ಯ ಅಪಾರ ಪ್ರೀತಿ ಇದೆ, ಅಷ್ಟೆ ಅಲ್ಲದೆ , ಕಷ್ಟ ಅಂತ ಬಂದವರಿಗೆ ಸಹಾಯ ಮಾಡುತ್ತಾರೆ. ಇತ್ತೀಚಿಗೆ ಪ್ಯಾನ್ಸ್ ಜೊತೆ ಪ್ರಭಾಸ್ ಫೋಟೋಗೆ ಪೋಸ್ ನೀಡುತ್ತಿದ್ದಾಗ ತಮಾಷೆಯ ಘಟನೆ ನಡೆದಿದೆ.
ವಿಮಾನ ನಿಲ್ದಾಣದಲ್ಲಿ ಪ್ರಭಾಸ್ ನೋಡಿ ಹುಚ್ಚೆದ್ದು ಕುಣಿದ ಯುವತಿ ಅವರ ಜೊತೆ ಫೋಟೊ ತೆಗೆಸಿಕೊಳ್ಳುತ್ತಾಳೆ. ಇದರಿಂದ ಫುಲ್ ಖುಷಿಯಾಗಿ ಡಾರ್ಲಿಂಗ್ ಕೆನ್ನೆ ಮುಟ್ಟಿ ಕುಣಿದಾಡುತ್ತಾಳೆ. ಈ ಕುರಿತ ವಿಡಿಯೋವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದ್ದಾರೆ. ಯುವತಿಯ ಪ್ರೀತಿ ನೋಡಿ ಪ್ರಭಾಸ್ ನಕ್ಕಿರುವುದು ಅವರ ಫ್ಯಾನ್ಸ್‌ಗೆ ತುಂಬಾ ಇಷ್ಟವಾಗಿದೆ.
ಸಿನಿಮಾ ಕೆಲಸದಲ್ಲಿ ಬ್ಯುಸಿ ಇರುವ ನಟ
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಸದ್ಯ ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮೊದಲನೆಯದು ಸಲಾರ್.. ಈ ವರ್ಷ ಡಿಸೆಂಬರ್ 22 ರಂದು ಬಿಡುಗಡೆಗೆ ಸಿದ್ಧವಾಗಿದೆ. ನಿರ್ದೇಶಕ ನಾಗ್ ಅಶ್ವಿನ್ ಜೊತೆಯಲ್ಲಿ ತಯಾರಾಗುತ್ತಿರುವ ‘ಕಲ್ಕಿ’ ಸಿನಿಮಾದ ಶೂಟಿಂಗ್ ಅಂತಿಮ ಹಂತದಲ್ಲಿದೆ. ಈ ಸಿನಿಮಾ ಮುಂದಿನ ವರ್ಷ ಅಂದರೆ 2024ಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಇನ್ನೊಂದೆಡೆ ಸಂದೀಪ್ ರೆಡ್ಡಿ ವಂಗ ನಿರ್ದೇಶನದಲ್ಲಿ ‘ಸ್ಪಿರಿಟ್’ ಸಿನಿಮಾ ಕೂಡ ತಯಾರಾಗಲಿದೆ. ಸಾಲು ಸಾಲಾಗಿ ಮೂರೂ ಸಿನಿಮಾಗಳ ಕೆಲಸದಲ್ಲಿ ಪ್ರಭಾಸ್ ಬ್ಯುಸಿ ಆಗಿದ್ದಾರೆ ಎನ್ನಲಾಗಿದೆ.